Friday, February 12, 2021

ಶ್ರೀ ಲಲಿತಾ

 ಭಜೇ ಶ್ರೀಚಕ್ರ ಮಧ್ಯಸ್ಥಾಂ ದಕ್ಷಿಣೋತ್ತರ ಯೋಸ್ಸದಾ ।

ಶ್ಯಾಮಾ ವಾರ್ತಾಳಿ ಸಂಸೇವ್ಯಾಂ ಭವಾನೀಂ ಲಲಿತಾಂಬಿಕಾಂ ॥


ಬಿಂದುತ್ರಿಕೋನ ವಸುಕೋನ ದಶಾರಯುಗ್ಮ

ಮನ್ವಸ್ತ್ರ ನಾಗದಲ ಶೋಡಷಪತ್ರಯುಕ್ತಂ |

ವೃತ್ತತ್ರಯಂ ಚ ಧರಣೀಸದನಂ ತ್ರಯಂ ಚ 

ಶ್ರೀಚಕ್ರರಾಜ ಉದಿತಃ ಪರದೇವತಾಯಾಃ ||

Saturday, January 16, 2021

ಸಾರಮೇತತ್ ಚತುಷ್ಟಯಂ

 ಅಸಾರೇ ಖಲು ಸಂಸಾರೇ ಸಾರಮೇತತ್ ಚತುಷ್ಟಯಂ |

ಕಾಶ್ಯಾಂ ವಾಸಃ ಸತಾಂ ಸಂಗಃ ಗಂಗಾಂಭಃ ಶಂಭುಸೇವನಂ ||

--ಧನಂಜಯವಿಜಯ.

#KASHI , #KASHIMAHATMYA , #VARANASI , #KASHIVISHWANATH

Thursday, December 24, 2020

ತಸ್ಮಾತ್ ಜಾಗ್ರತ ಜಾಗ್ರತ


 ಕಾಮ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।

ಜ್ಞಾನ ರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥ 

*****


ಮಾತಾ ನಾಸ್ತಿ ಪಿತಾ ನಾಸ್ತಿ ಬಂಧುಃ ಸಹೋದರಃ ।
ಅರ್ಥಂ ನಾಸ್ತಿ ಗೃಹಂ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ ॥1॥
ಜನ್ಮ ದುಃಖಂ ಜರಾ ದುಃಖಂ ಜಾಯಾ ದುಃಖಂ ಪುನಃ ಪುನಃ ।
ಸಂಸಾರ ಸಾಗರಂ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ ॥
ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।
ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥
ಆಶಯಾ ಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ ।
ಆಯುಃ ಕ್ಷೀಣಂ ನ ಜಾನಾತಿ ತಸ್ಮಾತ್ ಜಾಗ್ರತ ಜಾಗ್ರತ ॥
ಸಂಪದಃ ಸ್ವಪ್ನಸಂಕಾಶಾಃ ಯೌವನಂ ಕುಸುಮೋಪಮಮ್ ।
ವಿದ್ಯುಚ್ಚಂಚಲಮಾಯುಷ್ಯಂ ತಸ್ಮಾತ್ ಜಾಗ್ರತ ಜಾಗ್ರತ ॥
ಕ್ಷಣಂ ವಿತ್ತಂ ಕ್ಷಣಂ ಚಿತ್ತಂ ಕ್ಷಣಂ ಜೀವಿತಮೇವ ಚ ।
ಯಮಸ್ಯ ಕರುಣಾ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ ॥
ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಾಃ ।

ನಿತ್ಯಂ ಸನ್ನಿಹಿತೋ ಮೃತ್ಯು ತಸ್ಮಾತ್ ಜಾಗ್ರತ ಜಾಗ್ರತ

#Jagrata , #Jagratha , #Warning 


Monday, November 16, 2020

ಸಂಪದಃ

 



ವಿಪದೋ ನೈವ ವಿಪದಃ ಸಂಪದೋ ನೈವ   ಸಂಪದಃ |

ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣಃ ಸ್ಮೃತಿಃ ||-- ಸುಭಾಷಿತಾವಳಿ.

ವಿಪತ್ತು ನಿಜವಾದ ವಿಪತ್ತಲ್ಲ; ಸಂಪತ್ತು ನಿಜವಾದ ಸಂಪತ್ತಲ್ಲ.  ಪರಮಾತ್ಮನನ್ನು ಮರೆಯುವುದೇ  ನಿಜವಾದ ವಿಪತ್ತು ಮತ್ತು ಪರಮಾತ್ಮನನು ಸ್ಮರಿಸುವುದೇ ನಿಜವಾದ  ಸಂಪತ್ತು.

ಕಾಲಕಾಲ ನಮೋಸ್ತುತೇ

 कालरूप: कलयतां कालकालेश कारण।

कालादतीत कालस्थ कालकाल नमोस्तुते।।

        

Monday, October 26, 2020

ಸೇವಾ ವೃತಿ.

 ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |

ಯೋ ನ ದದಾತಿ ನ ಭುಂಕ್ತೇ  ತಸ್ಯ ತ್ರತೀಯಾ ಗತಿರ್ಭವತಿ ||--ಪಂಚ ತಂತ್ರ.

 ಸಂಪತ್ತಿಗೆ  ದಾನ, ಭೋಗ, ಮತ್ತು ನಾಶ ಎಂಬ ಮೂರೇ  ಗತಿಗಳು.  ಯಾವನು ದಾನವನ್ನು(ಸತ್ಪಾತ್ರರಿಗೆ)  ಮಾಡುವುದಿಲ್ಲವೋ, ತಾನೂ (ತನ್ನವರೊಂದಿಗೆ ಸಂಪತ್ತನ್ನು) ಭೋಗಿಸುವುದಿಲ್ಲವೋ  ಆ ಅವನಲ್ಲಿರುವ ಸಂಪತ್ತು ಅದರ ಮೂರನೆಯ ಗತಿಯಾದ    ನಾಶವನ್ನು ಹೊಂದುವುದು ನಿಶ್ಚಿತವೇ.  (ರಾಜ (ಸರಕಾರ) , ಚೋರ (ವಂಚಕ) ಮತ್ತು ಅಗ್ನಿ – ಈ ಮೂರು ನಾಶದ  ವಿಧಾನವಾಗಿವೆ.

ವಿಜಯದಶಮಿ

 ಶಮೀ ಶಮಯತೇ ಪಾಪಂ  ಶಮೀ ಶತ್ರು ವಿನಾಶನಿ|

ಅರ್ಜುನಸ್ಯ ಧನುರ್ಧಾರೀ  ರಾಮಸ್ಯ ಪ್ರಿಯದರ್ಶಿನಿ||

Thursday, September 24, 2020

ಸಿದ್ಧಿ

 ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ ಭೇಷಜೇ ಗುರೌ |ಯಾದೃಶೀ ಭಾವನಾಂ ಕುರ್ಯಾತ್ ಸಿದ್ಧಿರ್ಭವತಿ ತಾದೃಶೀ ||--ವಿಕ್ರಮಚರಿತಂ.

ಮಂತ್ರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ, ಬ್ರಾಹ್ಮಣರಲ್ಲಿ, ದೇವರಲ್ಲಿ, ದೈವಜ್ಞ(ಜ್ಯೋತಿಷಿ)ರಲ್ಲಿ, ಔಷಧಗಳಲ್ಲಿ, ಗುರುವಿನಲ್ಲಿ ಎಷ್ಟೆಷ್ಟು ವಿಶ್ವಾಸವಿಡುವೆವೋ ಅದೇ ಮಾನದಲ್ಲಿ ಫಲದೊರೆಯುವವು.

Thursday, September 17, 2020

ಸದಾತ್ಮಧ್ಯಾನ ನಿರತಂ



ಸಂಸಾರ ಸರ್ಪದಷ್ಟಾನಾಂ ಜಂತೂನಾಮವಿವೇಕಿನಾಮ್ | ಚಂದ್ರಶೇಖರ ಪಾದಾಬ್ಜಸ್ಮರಣಂ ಪರಮೌಷಧಮ್||

ಸದಾತ್ಮ ಧ್ಯಾನ ನಿರತಂ ವಿಷಯೇಭ್ಯಃ ಪರಾಙ್ಮುಖಮ್ | ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ |

श्रीमच्चन्दिरशेखरभारत्यभिधानमाश्रये यमिनम् ।

निरवधिसंसृतिनीरधिमगन्जनोद्धरणबद्धदीक्षं तम् ॥

"i take refuge in Shri Chandrashekhara Bharati, one who has his senses under his control and who is ever ready to rescue people immersed in the unbounded ocean of samsara."

Sunday, August 02, 2020

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಸ್ಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ವಿದುಸ್ಸುರಾಸುರಗಣಾಃ ದೇವಾಯ ತಸ್ಮೈ ನಮಃ ||

ಬ್ರಹ್ಮ, ಇಂದ್ರ, ವರುಣ, ರುದ್ರ, ಮರುತ್ಗಣಗಳು ಯಾರನ್ನು ದಿವ್ಯವಾದ ಸ್ತೋತ್ರಗಳಿಗಿಂತ ಹಾಡಿ ಹೊಗಳುವರೋ; ಸಾಮ, ವೇದಮಂತ್ರಗಳಿಂದ ಯಾರನ್ನು ಕುರಿತು ಋಷಿಗಳು ಅಂಗ, ಪದಕ್ರಮ, ಉಪನಿಷತ್ತುಗಳಿಂದ ಕೂಡಿದ ಕೀರ್ತನೆ ಮಾಡುತ್ತಾರೋ; ಯೋಗಿಗಳು ಸ್ಥಿರಮನಸ್ಸಿನಿಂದ ಧ್ಯಾನದಲ್ಲಿ ಮಗ್ನರಾಗಿ ಯಾರನ್ನು ಕಾಣುವರೋ; ಸುರರು ಅಸುರರೂ ಸಹ ಯಾರ ಅಂತ್ಯವನ್ನು ತಿಳಿಯಲಾರರೋ; ಅಂತಹ ಜಗದ್ರಕ್ಷಕ ಪರಮಾತ್ಮನಿಗೆ ಸಾಷ್ಟಾಂಗ ಪ್ರಣಾಮಗಳು. 

Tuesday, July 21, 2020

ಮಹಾದೇವ ಮಹಾದೇವ ಮಹಾದೇವ ದಯಾನಿಧೇ

ಪೂರ್ವೇ ನಂದೀ ಮಹಾಕಾಲೌ ಗಣಶೃಂಗೀ ಚ ದಕ್ಷಿಣೇ |
ಪಶ್ಚಿಮೇ ಚ ವೃಷಸ್ಕಂದೌ ದೇಶಕಾಲೌ ತಥೋತ್ತರೇ ||
ಗಂಗಾ ಚ ಯಮುನಾ ಚೈವ ಪಾರ್ಶ್ವೇ ಶಂಭೋರ್ವ್ಯವಸ್ಥಿತಾಃ |
ನಮೋವ್ಯಕ್ತಾಯ ಸೂಕ್ಷ್ಮಾಯ ನಮಸ್ತೇ ತ್ರಿಪುರಾಂತಕ |
ಪೂಜಾಂ ಗೃಹಾಣ ದೇವೇಶ ಯಥಾಶಕ್ತ್ಯುಪಪಾದಿತಂ ||

ಪೂರ್ವದಿಕ್ಕಿನಲ್ಲಿ ನಂದಿ ಮತ್ತು ಮಹಾಕಾಲರೂ, ದಕ್ಷಿಣದಿಕ್ಕಿನಲ್ಲಿ ಗಣಪತಿ ಮತ್ತು ಶೃಂಗಿಯೂ, ಪಶ್ಚಿಮದಿಕ್ಕಿನಲ್ಲಿ ಬಸವನೂ ಹಾಗೂ ಷಣ್ಮುಖನೂ, ಉತ್ತರದಿಕ್ಕಿನಲ್ಲಿ ದೇಶ ಮತ್ತು ಕಾಲರೂ ಮತ್ತು ಈಶ್ವರನ ಮಗ್ಗುಲಲ್ಲಿ ಗಂಗೆ ಯಮುನೆಯರೂ ಇರುವರು. ಇಂದ್ರಿಯ ಗೋಚರನಲ್ಲದವನೂ ಸೂಕ್ಷ್ಮನೂ ಆದ ತ್ರಿಪುರಾಂತಕನೇ ನಿನಗೆ ನಮಸ್ಕಾರವು. ನನಗೆ ಯೋಗ್ಯತೆಯಿದ್ದಷ್ಟು ಮಾಡಿದ ಪೂಜೆಯನ್ನು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು.

***
ವಂದೇ ಶಂಭು ಉಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ ವಂದೇ ಪಶೂನಂ ಪತಿಂ
ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಮುಕುಂದ ಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಂ ||
***
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।।                   
***
ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ |
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ||
***
ಮಹಾದೇವ ಮಹಾದೇವ ಮಹಾದೇವ ದಯಾನಿಧೇ ।
ಭವಾನೇವ ಭವಾನೇವ ಭವಾನೇವ ಗತಿರ್ಮಮ ।।
***

Sunday, June 21, 2020

आषाढस्य प्रथम दिवसे

आषाढस्य प्रथम दिवसे मेघमाश्र्लिष्टस्नुं
वप्रक्रिडा-परिणत-गज प्रेक्षणीयं ददर्श  ||


ವಿನಾ ವೇದಂ ವಿನಾ ಜಿತಾಂ  ವಿನಾ ರಾಮಾಯಣೀ ಕಥಾಂ ।
ವಿನಾ ಕವಿಂ ಕಾಲಿದಾಸಾಂ ಕಾದೃಶೀ ಭಾರತೀಯತಾ ॥

Thursday, June 18, 2020

ದಶಕಂ ಧರ್ಮಲಕ್ಷಣಂ


ಧೃತಿ ಕ್ಷಮಾ ದಮೋsಸ್ತೇಯಮ್ ಶೌಚಮಿನ್ದ್ರಿಯನಿಗ್ರಹಮ್ |
ಧೀಃ ವಿದ್ಯಾ ಸತ್ಯಮಕ್ರೋಧಂ ದಶಕಂ ಧರ್ಮಲಕ್ಷಣಂ||

ಧೃಡನಿರ್ಧಾರಕ್ಷಮೆ, ದಮ, ಕಳವು ಮಾಡದಿರುವಿಕೆ, ಶುಚಿತ್ವ, ಇನ್ದ್ರಿಯ ನಿಗ್ರಹ, ಬುಧಿಶಕ್ತಿ, ವಿದ್ಯಾ, ಸತ್ಯವಚನ, ಕೋಪಗೊಳ್ಳದಿರುವಿಕೆ, ಹತ್ತು ಧರ್ಮದ  ಆಚರಣೆಯ ಲಕ್ಷಣಗಳು.


ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
 ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||

ಯಾಗ-ಯಜ್ಞ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದುಕ್ಷಮಾಗುಣಲೋಭವಿಲ್ಲದಿರುವುದು  ಇವು ಎಂಟು  ಧರ್ಮಾಚರಣೆಯ  ಉಪಾಯಗಳು.



#Dharma; 

Tuesday, June 16, 2020

ರಸಸಿದ್ದಾಃ


ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

_ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಆ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು-ಸಾವುಗಳಿಂದಾಗುವ ಭಯವು ಇರುವುದಿಲ್ಲ._

ಭರ್ತೃಹರಿಯ ನೀತಿಶತಕದ "ವಿದ್ವತ್ಪದ್ಧತಿ" ಎನ್ನುವ ವಿಭಾಗದಲ್ಲಿ ವಿದ್ವಾಂಸರ ಸರ್ವೋತ್ತಮತ್ವವನ್ನು ತಿಳಿಸುತ್ತಾ ಈ ಶ್ಲೋಕದೊಂದಿಗೆ ಅಧ್ಯಾಯವನ್ನು ಮುಗಿಸುತ್ತಾರೆ. 

Wednesday, June 03, 2020

ಸತ್ಯಂ ಶಿವಂ ಸುಂದರಂ.

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ |
 ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ ||

ಸ್ವಭಾವತಃ ಸುಂದರವಾದುದು ಮತ್ತು ಸುಂದರವಲ್ಲದುದ್(ಕುರೋಪವಾಗಿರುವುದು) ಎಂದು ಏನಾದರೂ ಇದೆಯೇನು ? ಯಾರಿಗೆ ಯಾವುದು ಇಷ್ಟವಾಗುತ್ತದೆಯೋ ಅವರವರಿಗೆ ಅದು ಸುಂದರ.

Saturday, May 30, 2020

ಸಪ್ತ ಹಿತ್ವಾ ಸುಖೀ ಭವ


ಏಕಯಾ ದ್ವೇ ವಿನಿಶ್ಚಿತ್ಯ
ತ್ರೀಂಶ್ಚತುರ್ಭಿರ್ವಶೇ ಕುರು |
ಪಂಚ ಜಿತ್ವಾ ವಿದಿತ್ವಾ ಷಟ್
ಸಪ್ತ ಹಿತ್ವಾ ಸುಖೀ ಭವ ||

ಒಂದರಿಂದ ಎರಡನ್ನು ನಿಶ್ಚಯಿಸಿ, ಮೂರನ್ನು ನಾಲ್ಕರಿಂದ ವಶಪಡಿಸಿಕೋ. ಐದನ್ನು ಜಯಿಸಿ ಆರನ್ನು ತಿಳಿ. ಏಳನ್ನು ಪರಿತ್ಯಾಗಮಾಡಿ ಸುಖಿಯಾಗು.

(ವಿದುರನು ಧೃತರಾಷ್ಟ್ರನಿಗೆ ಹೇಳುವುದು, ಉದ್ಯೋಗ ಪರ್ವ 33-44)

ಒಂದು = ಬುದ್ಧಿ
ಎರಡು = ವಿವೇಚನೆಗಳು - ಒಳ್ಳೆಯ ಕಾರ್ಯ, ಕೆಟ್ಟ ಕಾರ್ಯ
ಮೂರು = ಅನುಬಂಧಿಗಳು - ಶತ್ರು, ಮಿತ್ರ, ತಟಸ್ಥ
ನಾಲ್ಕು = ಚತುರೋಪಾಯಗಳು - ಸಾಮ, ದಾನ, ಭೇದ, ದಂಡ
ಐದು = ಪಂಚೇಂದ್ರಿಯಗಳು - ಚರ್ಮ, ಕಣ್ಣು, ಕಿವಿ, ನಾಲಗೆ, ಮೂಗು
ಆರು = ರಾಜನೀತಿಯ ಗುಣಗಳು - ಸಂಧಿ(ಕಪ್ಪ ಕೊಡುವುದು), ವಿಗ್ರಹ(ಪರಸ್ಪರ ಮಸೆಯುವುದು), ಯಾನ(ದಾಳಿಯ ಪಯಣ), ಆಸನ(ಎದುರಿಸಲು ಸಾಮರ್ಥ್ಯವಿಲ್ಲದೆ ನಿಲ್ಲು), ದ್ವೈಧೀಭಾವ(ದೌರ್ಬಲ್ಯದಿಂದ ಸಂಚಿನ ಸಂಧಾನ), ಸಮಾಶ್ರಯ(ಹತಾಶಭಾವದಿಂದ ಶತ್ರು ಆಶ್ರಯ)
ಏಳು = ಸಪ್ತ ವ್ಯಸನಗಳು - ಸ್ತ್ರೀ, ಜೂಜು, ಬೇಟೆ, ಮದ್ಯ, ಪರುಷವಾಕ್ಯ, ಅನ್ಯಾಯದಿಂದ ಧನಾರ್ಜನೆ ಮತ್ತು ಕಠಿನ ಶಿಕ್ಷೆ.

Friday, May 15, 2020

ಮೌಢ್ಯಂ ಹರತುನಃ ಶಿವಃ

ಮೌಲೌ ಮಂದಾಕಿನಿ ಯಸ್ಯ ಮಾಲತೀ ಮಲ್ಲಿಕಾನಿಭ|
ಮೌನಿಮಾನಸ ಹಂಸೋಯಂ ಮೌಢ್ಯಂ ಹರತುನಃ ಶಿವಃ||

ಮೌಳಿಯಲ್ಲಿ ಮಂದಾಕಿನಿ, ಮಾಲತೀ, ಮಲ್ಲಿಕಾ ಹೂವುಗಳಿಂದ ಪ್ರಶೋಭಿಸುತ್ತಿರುವ, ಋಷಿ-ಮುನಿಗಳ ಮಾನಸದಲ್ಲಿ ವಾಸ ಮಾಡುತ್ತಿರುವ ಹಂಸಾತ್ಮಕವಾದ ಶಿವನೇ ನಮ್ಮೆಲ್ಲರ ಮೌಢ್ಯವನ್ನ ಹರಿಸು.
-ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು

Monday, May 11, 2020

ಆಸೆ ಎಂಬ ಬಿಸಿಲು ಕುದುರೆ

ಗತೇ ಭೀಷ್ಮೆ ಹತೇ ದ್ರೋಣೆ ಕರ್ಣೇ ಚ ವಿನಿಪಾತಿತೇ ।
ಆಶಾ ಬಲವತೀ ರಾಜನ್ ಶಲ್ಯೊ ಜೇಷ್ಯತಿ ಪಾಂಡವಾನ್ ।।

(ವೇಣೀ ಸಂಹಾರಂ ೫.೨೩ )

ಸಂಜಯನು ಧೃತರಾಷ್ರ್ಟನಿಗೆ ಹೇಳುತ್ತಾನೆ: " ಹೇ! ರಾಜನ್ ,  ಭೀಷ್ಮಾಚಾರ್ಯರ ನಂತರ ದ್ರೋಣಾಚಾರ್ಯರು ಹತರಾದ ನಂತರವೂ , ಕರ್ಣನ ಅವಸಾನವಾದಾಗ್ಯೂ, ಶಲ್ಯನು ಪಾಂಡವರನ್ನು ಜಯಿಸುತ್ತಾನೆ ಎಂಬ ಹಂಬಲ ಮುಡಿಯುತಿದೆಯಲ್ಲಾ, ದಿಟವಾಗಿ ಆಸೆ ಎಂಬುದು ಬಲವಾದ ಪಾಶವೇ ಸರಿ.  

Sunday, May 10, 2020

ಶ್ರೀ ರುದ್ರಾಧ್ಯಾಯ





ವಿದ್ಯಾಸು ಶ್ರುತಿರುತ್ಕ್ರುಷ್ಠಾ  ರುದ್ರೈಕಾದಶಿನೀ ಶ್ರುತೌ ।
ತತ್ರ ಪಂಚಾಕ್ಷರೀ ತಸ್ಯಾಂ ಶಿವ ಇತ್ಯಕ್ಷರದ್ವಯಂ ॥ 

ವಿದ್ಯೆಗಳಲ್ಲಿ ಶ್ರೇಷ್ಟವಾದದ್ದು ವೇದವಿದ್ಯೇ, ವೇದಗಳಲ್ಲಿ ಶ್ರೀ ರುದ್ರಾಧ್ಯಾಯವು ಶ್ರೇಷ್ಠ. ಅದರಲ್ಲಿ ಪಂಚಾಕ್ಷರೀ ಮಂತ್ರ, ಪಂಚಾಕ್ಷರಿಯಲ್ಲಿ "ಶಿವ" ಎಂಬ ಅಕ್ಷರದ್ವಯ.


ಯದೇಕ ಮವ್ಯಯಂ ಸಾಕ್ಷಾತ್ ಬ್ರಹ್ಮಜ್ಯೋತಿ ಸನಾತನಂ ।
ಶಿವಾತ್ಮಕಂ ಪರಂ ರುದ್ರಾಧ್ಯಾಯೇ ಪ್ರತಿಷ್ಠಿತಂ ।।

ಇದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ನಾಶರಹಿತವೂ, ಅನಾದಿಯೂ, ಶಿವಸ್ವರೂಪವೂ ಆದ ಬ್ರಹ್ಮಜ್ಯೋತಿಯೇ ರುದ್ರಾಧ್ಯಾಯದಲ್ಲಿ ಪ್ರತಿಪಾದ್ಯವಾಗಿರುವುದು.

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।। 

Saturday, April 25, 2020

ನ ವೈದ್ಯಃ ಪ್ರಭುರಾಯುಷಃ

ವ್ಯಾಧೇಸ್ತತ್ತ್ವ ಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ |
ಏತದ್ವೈದ್ಯಸ್ಯ ವೈದ್ಯತ್ವಂ ನ ವೈದ್ಯಃ ಪ್ರಭುರಾಯುಷಃ ||

ಬ್ರಹ್ಮವೈವರ್ತ ಪುರಾಣದಲ್ಲಿ ಆಯುರ್ವೇದ ಶಾಸ್ತ್ರಗಳು ಭಾರತದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸುತ್ತ, ವೈದ್ಯನೆಂದರೆ ಯಾರು? ಅವನಿಗಿರಬೇಕಾದ ಲಕ್ಷಣಗಳೇನು? ಎಂಬುದನ್ನು ತಿಳಿಸುವುದು ಈ ಶ್ಲೋಕ.

ಮೊದಲನೆಯದಾಗಿ ವೈದ್ಯರಿಗೆ ವ್ಯಾಧಿಯ ತತ್ತ್ವ, ಸ್ವರೂಪದ ತಿಳಿವಳಿಕೆ ಇರಬೇಕು. ರೋಗಿಗೆ ವ್ಯಾಧಿಯಿಂದ ಉಂಟಾಗುತ್ತಿರುವ ನೋವನ್ನು ತಡೆಯುವುದು ತಿಳಿದಿರಬೇಕು. ಇವೆರಡೂ ವೈದ್ಯನಿಗೆ ತಿಳಿದಿರಬೇಕಾದ ವೈದ್ಯತತ್ತ್ವ. ಆದರೆ, ವೈದ್ಯನು ತಾನು ಆಯುಷ್ಯವನ್ನು ನಿರ್ಧರಿಸುವ ದೇವರಲ್ಲ ಎಂಬುದೂ ಪ್ರಧಾನವಾಗಿ ತಿಳಿದಿರಬೇಕು.

(ಸಂಗ್ರಹ )