Friday, March 29, 2019

ರೀತಿ - ನೀತಿ

ವಯಸಃ ಕರ್ಮಣೋsರ್ಥಸ್ಯ ಶ್ರುತಸ್ಯಾಭಿಜನಸ್ಯ ಚ|
ವೇಷವಾಗ್ವೃತ್ತಿ ಸಾರೂಪ್ಯಂ ಆಚರನ್ವಿಚರೇದಿಹ||

ವಯಸ್ಸು, ಕೈಗೊಂಡ ವೃತ್ತಿ, ಪ್ರಸ್ತುತ ಧನಾನುಕೂಲ, ವಿದ್ಯೆ, ಕುಲ ಇವೆಲ್ಲವುಗಳಿಗೆ ತಕ್ಕುದಾದ ಉಡುಪು , ಮಾತು ಮತ್ತು ನಡತೆಯನ್ನು ಮೈಗೂಡಿಸಿಕೊಂಡು ಇಲ್ಲಿ(ಲೋಕದಲ್ಲಿ) ನಡೆಯಬೇಕು.

Friday, March 01, 2019

ಕರ್ಮ ಫಲ


ಅರ್ಧಂ ಹರತಿ ವೈ ಶ್ರೇಷ್ಠಃ
ಪಾದೋ ಭವತಿ ಕರ್ತೃಷು |
ಪಾದಶ್ಚೈವ ಸಭಾಸತ್ಸು
ಯೋ ನ ನಿಂದಂತಿ ನಿಂದಿತಮ್ ||

ಅಧರ್ಮಕೃತ್ಯ ನಡೆದಾಗ, ಸಭಾಸದರು ಅದನ್ನು ಖಂಡಿಸದೆ ಸುಮ್ಮನಿದ್ದರೆ, ಆ ಪಾಪದಲ್ಲಿ ಅರ್ಧಭಾಗ ಸಭಾಧ್ಯಕ್ಷನನ್ನು ತಾಗುತ್ತದೆ, ಕಾಲುಭಾಗ ಪಾಪಮಾಡಿದವನನ್ನು ಸೇರುವುದು. ಉಳಿದ ಕಾಲುಭಾಗ ಸಭಾಸದರನ್ನು ಸೇರುವುದು.
(ಭಾವ: ಅಧರ್ಮಕೃತ್ಯ ಖಂಡಿಸದ ಎಲ್ಲರೂ ಪಾಪದಲ್ಲಿ ಭಾಗಿಗಳು)