Tuesday, June 16, 2020

ರಸಸಿದ್ದಾಃ


ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

_ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಆ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು-ಸಾವುಗಳಿಂದಾಗುವ ಭಯವು ಇರುವುದಿಲ್ಲ._

ಭರ್ತೃಹರಿಯ ನೀತಿಶತಕದ "ವಿದ್ವತ್ಪದ್ಧತಿ" ಎನ್ನುವ ವಿಭಾಗದಲ್ಲಿ ವಿದ್ವಾಂಸರ ಸರ್ವೋತ್ತಮತ್ವವನ್ನು ತಿಳಿಸುತ್ತಾ ಈ ಶ್ಲೋಕದೊಂದಿಗೆ ಅಧ್ಯಾಯವನ್ನು ಮುಗಿಸುತ್ತಾರೆ. 

No comments: