ಧೃತಿ ಕ್ಷಮಾ ದಮೋsಸ್ತೇಯಮ್ ಶೌಚಮಿನ್ದ್ರಿಯನಿಗ್ರಹಮ್ |
ಧೀಃ ವಿದ್ಯಾ ಸತ್ಯಮಕ್ರೋಧಂ ದಶಕಂ ಧರ್ಮಲಕ್ಷಣಂ||
ಧೃಡನಿರ್ಧಾರ, ಕ್ಷಮೆ, ದಮ, ಕಳವು ಮಾಡದಿರುವಿಕೆ,
ಶುಚಿತ್ವ, ಇನ್ದ್ರಿಯ ನಿಗ್ರಹ, ಬುಧಿಶಕ್ತಿ, ವಿದ್ಯಾ, ಸತ್ಯವಚನ, ಕೋಪಗೊಳ್ಳದಿರುವಿಕೆ, ಈ ಹತ್ತು ಧರ್ಮದ ಆಚರಣೆಯ ಲಕ್ಷಣಗಳು.
ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||
ಯಾಗ-ಯಜ್ಞ ಮಾಡುವುದು, ಅಧ್ಯಯಯನ ನಿರತರಾಗಿರುವುದು,
ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದು, ಕ್ಷಮಾಗುಣ, ಲೋಭವಿಲ್ಲದಿರುವುದು
ಇವು ಎಂಟು ಧರ್ಮಾಚರಣೆಯ ಉಪಾಯಗಳು.
#Dharma;
No comments:
Post a Comment