Friday, December 02, 2022

ಶ್ರೀ ಕುಮಾರ ಕವಚಂ

ಶ್ರೀ ಕುಮಾರ ಕವಚಂ
ಓಂ ನಮೋ ಭಗವತೇ ಭವಬಂಧಹರಣಾಯ, ಸದ್ಭಕ್ತಶರಣಾಯ, ಶರವಣಭವಾಯ, ಶಾಂಭವವಿಭವಾಯ, ಯೋಗನಾಯಕಾಯ, ಭೋಗದಾಯಕಾಯ, ಮಹಾದೇವಸೇನಾವೃತಾಯ, ಮಹಾಮಣಿಗಣಾಲಂಕೃತಾಯ, ದುಷ್ಟದೈತ್ಯ ಸಂಹಾರ ಕಾರಣಾಯ, ದುಷ್ಕ್ರೌಂಚವಿದಾರಣಾಯ, ಶಕ್ತಿ ಶೂಲ ಗದಾ ಖಡ್ಗ ಖೇಟಕ ಪಾಶಾಂಕುಶ ಮುಸಲ ಪ್ರಾಸ ತೋಮರ ವರದಾಭಯ ಕರಾಲಂಕೃತಾಯ, ಶರಣಾಗತ ರಕ್ಷಣ ದೀಕ್ಷಾ ಧುರಂಧರ ಚರಣಾರವಿಂದಾಯ, ಸರ್ವಲೋಕೈಕ ಹರ್ತ್ರೇ, ಸರ್ವನಿಗಮಗುಹ್ಯಾಯ, ಕುಕ್ಕುಟಧ್ವಜಾಯ, ಕುಕ್ಷಿಸ್ಥಾಖಿಲ ಬ್ರಹ್ಮಾಂಡ ಮಂಡಲಾಯ, ಆಖಂಡಲ ವಂದಿತಾಯ, ಹೃದೇಂದ್ರ ಅಂತರಂಗಾಬ್ಧಿ ಸೋಮಾಯ, ಸಂಪೂರ್ಣಕಾಮಾಯ, ನಿಷ್ಕಾಮಾಯ, ನಿರುಪಮಾಯ, ನಿರ್ದ್ವಂದ್ವಾಯ, ನಿತ್ಯಾಯ, ಸತ್ಯಾಯ, ಶುದ್ಧಾಯ, ಬುದ್ಧಾಯ, ಮುಕ್ತಾಯ, ಅವ್ಯಕ್ತಾಯ, ಅಬಾಧ್ಯಾಯ, ಅಭೇದ್ಯಾಯ, ಅಸಾಧ್ಯಾಯ, ಅವಿಚ್ಛೇದ್ಯಾಯ, ಆದ್ಯಂತ ಶೂನ್ಯಾಯ, ಅಜಾಯ, ಅಪ್ರಮೇಯಾಯ, ಅವಾಙ್ಮಾನಸಗೋಚರಾಯ, ಪರಮ ಶಾಂತಾಯ, ಪರಿಪೂರ್ಣಾಯ, ಪರಾತ್ಪರಾಯ, ಪ್ರಣವಸ್ವರೂಪಾಯ, ಪ್ರಣತಾರ್ತಿಭಂಜನಾಯ, ಸ್ವಾಶ್ರಿತ ಜನರಂಜನಾಯ, ಜಯ ಜಯ ರುದ್ರಕುಮಾರ, ಮಹಾಬಲ ಪರಾಕ್ರಮ, ತ್ರಯಸ್ತ್ರಿಂಶತ್ಕೋಟಿ ದೇವತಾನಂದಕಂದ, ಸ್ಕಂದ, ನಿರುಪಮಾನಂದ, ಮಮ ಋಣರೋಗ ಶತೃಪೀಡಾ ಪರಿಹಾರಂ ಕುರು ಕುರು, ದುಃಖಾತುರುಂ ಮಮಾನಂದಯ ಆನಂದಯ, ನರಕಭಯಾನ್ಮಾಮುದ್ಧರ ಉದ್ಧರ, ಸಂಸೃತಿಕ್ಲೇಶಸಿ ಹಿ ತಂ ಮಾಂ ಸಂಜೀವಯ ಸಂಜೀವಯ, ವರದೋಸಿ ತ್ವಂ, ಸದಯೋಸಿ ತ್ವಂ, ಶಕ್ತೋಸಿ ತ್ವಂ, ಮಹಾಭುಕ್ತಿಂ ಮುಕ್ತಿಂ ದತ್ವಾ ಮೇ ಶರಣಾಗತಂ, ಮಾಂ ಶತಾಯುಷಮವ, ಭೋ ದೀನಬಂಧೋ, ದಯಾಸಿಂಧೋ, ಕಾರ್ತಿಕೇಯ, ಪ್ರಭೋ, ಪ್ರಸೀದ ಪ್ರಸೀದ, ಸುಪ್ರಸನ್ನೋ ಭವ ವರದೋ ಭವ, ಸುಬ್ರಹ್ಮಣ್ಯ ಸ್ವಾಮಿನ್, ಓಂ ನಮಸ್ತೇ ನಮಸ್ತೇ ನಮಸ್ತೇ ನಮಃ ॥ ಇತಿ ಕುಮಾರ ಕವಚಮ್ ।

Friday, November 11, 2022

ವಾಜಶ್ಚಮೇ ಪ್ರಸವಶ್ಚಮೇ

ಸಾಯಣ ಭಾಷ್ಯದ ಪ್ರಕಾರ ಚೈತ್ರ,ವೈಶಾಖ ಇತ್ಯಾದಿ ೧೨ ತಿಂಗಳುಗಳ ದೇವತೆಗಳು: ವಾಜ,ಪ್ರಸವ,ಅಪಿಜ,ಕ್ರುತು,ಸುವ,ಮೂರ್ಧಾ,ವ್ಯಶ್ನಿಯ,ಅಂತ್ಯಾಯನ,ಅಂತ್ಯ,ಭೌವನ,ಭುವನ ಮತ್ತು ಅಧಿಪತಿ ಕೆಲವೊಂದು ಭಾಷ್ಯಗಳಲ್ಲಿ ಈ ಹನ್ನೆರಡು ದಿವ್ಯನಾಮಗಳನ್ನು ದ್ವಾದಶಾದಿತ್ಯರು ಎಂದು ಸೂಚಿಸಿದ್ದಾರೆ. ದ್ವಾದಶ ಆದಿತ್ಯರು : ಧಾತಾ, ಅರ್ಯಮ, ಮಿತ್ರಾ, ವರುಣ, ಇಂದ್ರ, ವಿವಸ್ವಾನ್, ತ್ವಷ್ಟ, ವಿಷ್ಣು, ಅಂಶುಮಾನ್, ಭಗ, ಪೂಷಾ, ಪರ್ಜನ್ಯ

Wednesday, October 26, 2022

ಬಲೀಂದ್ರ ಪೂಜಾ

ಕಾರ್ತ್ತಿಕ ಶುಕ್ಲ ಪ್ರತಿಪತ್ ತಿಥೌ ಮಮ ಸಕಲ ಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ ॥ ಧ್ಯಾನಂ ಧ್ಯಾಯೇತ್ ಬಲೀಂದ್ರಂ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಮ್ । ನಕ್ಷತ್ರನಾಥಾಭಮನರ್ಘ್ಯನೇಮಿಂ ಪ್ರಿಯಂ ಮುರಾರೇಃ ಕರವಾಲ ಹಸ್ತಮ್ ॥ ಅಥ ಬಲೀಂದ್ರಸ್ಯ ನವಶಕ್ತಿ ಪೂಜಾಂ ಕರಿಷ್ಯೇ - ಶ್ರಿಯೈ ನಮಃ । ಕ್ಷೋಣ್ಯೈನಮಃ । ದಯಾಯೈ ನಮಃ । ಧರ್ಮಾಯೈ ನಮಃ । ಭಗವತ್ಯೈ ನಮಃ । ಅನ್ನದೇವತಾಯೈ ನಮಃ । ಆನಂದಾಯೈ ನಮಃ । ರತ್ಯೈ ನಮಃ । ಶ್ರೇಷ್ಠಾಯೈ ನಮಃ । ಪ್ರಾರ್ಥನಾ ಶ್ರೀಭೂಮಿ ಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ । ನಮಾಮಿ ವಾಮನಂ ವಿಷ್ಣುಂ ಭುಕ್ತಿ ಮುಕ್ತಿ ಫಲ ಪ್ರದಮ್ ॥ ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ । ಇಂದ್ರಶತ್ರೋಮರಾರಾತೇ ಸಾನ್ನಿಧ್ಯಂ ಕುರು ಸರ್ವದಾ ॥ ಓಂ ನಮೋ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗ ಸಿಂಹಾಸನಸ್ಥಾಯ ನಮಃ ॥ ಬಲಿರಾಜ ನಮಸ್ತುಭ್ಯಂ ವೈರೋಚನಸುತಪ್ರಭೋ । ಭವಿಷ್ಯೇಂದ್ರ ಸುರಾರಾತೇ ದೀಪೋಽಯಂ ಪ್ರತಿಗೃಹ್ಯತಾಮ್ ॥

Sunday, October 16, 2022

ಭಾವಗ್ರಾಹಿ ಜನಾರ್ದನಃ

ಭಾವೇಷು ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ | ನ ಫಲಂ ಭಾವಹೀನಾನಾಂ ತಸ್ಮಾತ್ ಭಾವೋ ಹಿ ಕಾರಣಮ್ || ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ. ಮೂರ್ಖೋ ವದತಿ ವಿಷ್ಣಾಯ ಧೀರೋ ವದತಿ ವಿಷ್ಣವೇ | ಉಭಯೋಸ್ತು ಸಮಂ ಪುಣ್ಯಂ ಭಾವಗ್ರಾಹಿ ಜನಾರ್ದನಃ || – ಚೈತನ್ಯಭಾಗವತ, ೧೧. ೧೦೮ ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ. ಭವಾನಿ ಭಾವನಾಗಮ್ಯ

Thursday, September 29, 2022

ಸ್ಮರಣೀಯಂ ಚರಣಯುಗಳಂ ಜಗದಂಬಾಯ

ಆಪದಿ ಕಿಂ ಕರಣೀಯಂ ಸ್ಮರಣೀಯಂ ಚರಣಯುಗಳಂ ಜಗದಂಬಾಯಾಃ । ತತ್ಸ್ಮರಣಂ ಕಿಂ ಕುರುತೇ ಬ್ರಹ್ಮಾದೀನಾಮಪಿ ಚ ಕಿಂಕರೀ ಕುರುತೆ ॥ ದಾಕ್ಷಾಯಿಣೀ ಸ್ತೋತ್ರ

Sunday, September 25, 2022

ತರ್ಪಣ.

ಆದೌಪಿತಾ ತಥಾಮಾತಾ ಸಾಪತ್ನೀ ಜನನೀ ತಥಾ ಮಾತಾಮಹಾ ಸಪತ್ನೀಕಾಃ ಆತ್ಮಪತ್ನಿಸ್ಥಥೈವಚ ಸುತಃಭ್ರಾತೃ ಪಿತೃವ್ಯಾಶ್ಚ ಮಾತುಲ ಸ್ಸಹಭಾರ್ಯಕಾಃ ದುಹಿತಾ ಭಗಿನೀಚೈವ ದೌಹಿತ್ರೋ ಭಾಗಿನೇಯಕಃ ಪಿತೃಶ್ವಸ ಮಾತೃಶ್ವಸ ಜಾಮಾತಾ ಭಾವುಕಸ್ನುಶಾ ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ರಿಕ್ತ ಭಾಗಿನಃ ಆದೌಪಿತಾ = ತಂದೆ, ತಾತ, ಮುತ್ತಾತ. ತಥಾಮಾತಾ = ತಾಯಿ ಅವರತ್ತೆ, ಅವರತ್ತೆ. ಸಾಪತ್ನೀ ಜನನೀ = ತಂದೆಯ ಎರಡನೇ ಹೆಂಡತಿ, ತದನಂತರ ಪತ್ನಿ (ಎಷ್ಟುಜನ ಇದ್ದರೆ ಅಷ್ಟೂಜನ) ಮಾತಾಮಹಾ ಸಪತ್ನೀಕಾಃ = ತಾಯಿಯ ತಂದೆ, ಅವರ ತಂದೆ, ಅವರ ತಂದೆ. ಅವರವರ ಹೆಂಡತಿಯರು. ಆತ್ಮಪತ್ನಿ = ತನ್ನ ಹೆಂಡತಿ ಸುತಃ = ಮಗ ತತ್ಪತ್ನೀಂ = ಮಗನ ಹೆಂಡತಿ ಭ್ರಾತೃ = ಸಹೋದರರು. ತತ್ಪತ್ನೀಂ = ಅವರ ಹೆಂಡತಿಯರು ಪಿತೃವ್ಯಾಶ್ಚ = ಚಿಕ್ಕಪ್ಪ ದೊಡ್ಡಪ್ಪನವರು ತತ್ಪತ್ನೀಂ = ಅವರ ಹೆಂಡತಿಯರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತುಲ ಸಹಭಾರ್ಯಕಾಃ = ಸೋದರಮಾವ, ಅವರ ಹೆಂಡತಿ, ಅವರ ಗಂಡುಮಕ್ಕಳು. ದುಹಿತ = ಮಗಳು ಭಗಿನೀ = ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ದೌಹಿತ್ರೋ = ಮಗಳ ಮಗ ಭಾಗಿನೇಯಕಃ = ಸೋದರಳಿಯಂದಿರು. ಪಿತೃಶ್ವಸ = ಸೋದರತ್ತೆಂದಿರು ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತೃಶ್ವಸ = ತಾಯಿಯ ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಜಾಮಾತಾ = ಮಗಳ ಗಂಡ. ಭಾವುಕ = ಬಾವಮೈದುನರು. (ಮೊದಲೇ ಬಂದಿದೆ ) ಸ್ನುಶಾ = ಮಗನ ಹೆಂಡತಿ. (ಮೊದಲೇ ಬಂದಿದೆ ) ಶ್ವಶುರ = ಮಗಳನ್ನು ಕೊಟ್ಟ ಮಾವ ತತ್ ಪತ್ನೀ = ಮಗಳನ್ನು ಕೊಟ್ಟ ಅತ್ತೆ ಶ್ಶಾ ಲಕ = ಮಗಳನ್ನು ಕೊಟ್ಟ ಅತ್ತೆಮಾವನವರ ಗಂಡುಮಕ್ಕಳು. ಸ್ವಾಮಿನೋ ರಿಕ್ತ ಭಾಗಿನಃ = ಸ್ವಾಮಿ ಗುರು, ಆಚಾರ್ಯ, ಸಖ = ತಂದೆ ಮತ್ತು ಸೂಕ್ತವ್ಯಕ್ತಿಗಳು ಏಕೇಚ ಅಸ್ಮತ್ ಕುಲೇಜಾತ ಅಪುತ್ರಾ ಗೋತ್ರಿಣಾ ಮೃತಾಃ, ತೇಗೃಹ್ಣಂತು ಮಯಾದತ್ತಂ ಮಾತೃ ನಿಷ್ಪೀಡನೋದಕಂ ಉಳಿದಿರುವ ಅಲ್ಲ ಎಳ್ಳನ್ನು ಕೈಗೆ ಹಾಕಿಕೊಂಡು, ಎಲ್ಲ ನೀರನ್ನು ಬಿಟ್ಟು ಬಿಡುವುದು. ತಾಯಿ ಬದುಕಿದ್ದು ತಂದೆ ಮರಣಹೊಂದಿದ್ದವರು ಮಾತ್ರ ತರ್ಪಣ ಬಿಡಬೇಕು. ತಾಯಿ ತೀರಿಕೊಂಡು, ತಂದೆ ಬದುಕಿದ್ದ ಮಕ್ಕಳು ತರ್ಪಣ ಬಿಡುವ ಹಾಗಿಲ್ಲ. ಮರಣ ಹೊಂದಿ ಜೈಜೈ ರಘುವೀರ ಸಮರ್ಥ

Wednesday, September 14, 2022

ಚತ್ವಾರಿ ಶೃಂಗಾ

ಅಗ್ನಿಮುಖ ಪ್ರಯೋಗದಲ್ಲಿ ಅಗ್ನಿಮೂರ್ತಿಂ ಧ್ಯಾಯಾಮಿ ಎಂಬಲ್ಲಿ ವೇದೋಕ್ತ ಈ ಧ್ಯಾನವನ್ನು ಮಾಡಬೇಕು. ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಯೋ ಅಸ್ಯ । ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾ ಆವಿವೇಶ ।। ಚತ್ವಾರಿ ಶೃಂಗಾ = ಅಧ್ವರ್ಯು, ಹೋತೃ, ಉದ್ಗಾತೃ ಮತ್ತು ಬ್ರಹ್ಮ ಇವರೇ ನಾಲ್ಕು ಕೊಂಬುಗಳು ತ್ರಯೋ ಅಸ್ಯ ಪಾದಾ = ಪ್ರಾತಃಸವನ, ಮಾಧ್ಯಂದಿನಸವನ, ಸಾಯಂಸವನಗಳೇ ಮೂರು ಕಾಲುಗಳು. ದ್ವೇ ಶೀರ್ಷೇ = ಯಜಮಾನ ಮತ್ತು ಅವನ ಪತ್ನಿಯೇ ಎರಡು ಶಿರಸ್ಸುಗಳು ಸಪ್ತ ಹಸ್ತಯೋ ಅಸ್ಯ = ಏಳು ಛಂದಸ್ಸುಗಳೇ ಇವನ ಕೈಗಳು (ಗಾಯತ್ರೀ, ಉಷ್ಣೀಃ, ಅನುಷ್ಟುಪ್, ಬೃಹತೀ, ಪಂಕ್ತೀ, ತ್ರಿಷ್ಟುಪ್ ಮತ್ತು ಜಗತೀ) ತ್ರಿಧಾ ಬದ್ಧೋ = ಋಗ್ಯಜುಸ್ಸಾಮ ವೇದಗಳೇ ಮೂರು ಬಂಧಗಳು ವೃಷಭ = ಇಷ್ಟಾರ್ಥಗಳನ್ನು ಮಳೆಗರೆಯುವ ರೋರವೀತಿ = ಶ್ಲೋಕ ಅಸ್ತ್ರ ರೂಪದ ಮಂತ್ರಗಳನ್ನು ಸದಾ ಪಠಿಸುತ್ತಿರುವ ಮಹೋ ದೇವೋ = ಯಜ್ಞರೂಪ ದೇವತೆ ಮರ್ತ್ಯಾ ಆವಿವೇಶ = ಮನುಷ್ಯರನ್ನು ಪ್ರವೇಶಿಸಿತು, ಯಜ್ಞ ಮಾಡುವ ಅಧಿಕಾರ ಮನುಷ್ಯರಿಗೆ ಇದೆ.

Wednesday, August 31, 2022

ಗೃಹಸ್ಥಃ ಪಂಚ ಪೂಜಯೇತ್

आकाशस्याधिपो विष्णुरग्नेश्चैव महेश्वरी । वायो: सूर्य: क्षितेरीशो जीवनस्य गणाधिपः ॥ आदित्यमम्बिकां विष्णुं गणनाथं महेश्वरम् । पंचयज्ञपरो नित्यं गृहस्थः पंच पूजयेत् ॥ ಆಕಾಶಸ್ಯಾಧಿಪೋ ವಿಷ್ಣುಃ ಅಗ್ನೇಶ್ಚೈವ ಮಹೇಶ್ವರೀ । ವಾಯೋಃ ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ ॥ ಆದಿತ್ಯಮಂಬಿಕಾಂ ವಿಷ್ಣುಂ ಗಣನಾಥಂ ಮಹೇಶ್ವರಂ। ಪಂಚಯಜ್ಞಪರೋ ನಿತ್ಯಂ ಗೃಹಸ್ಥಃ ಪಂಚ ಪೂಜಯೇತ್ ॥

Wednesday, August 24, 2022

ಅರುಣಾಚಲೇಶ್ವರನ ಪ್ರತಿಜ್ಞೆ

ಅರುಣಾಚಲೇಶ್ವರನ ಪ್ರತಿಜ್ಞೆ ಯೋಜನ ತ್ರಯ ಮಾತ್ರೇಸ್ಮಿನ್ ಕ್ಷೇತ್ರ ನಿವಸತಾಂ ನೃಣಾಂ । ದೀಕ್ಷಾಧಿಕಂ ವಿನಾ ವ್ಯಸ್ತು ಮತ್ಸಾಯುಜ್ಯ ಮಯಜ್ಞಯಾ ॥ ಅರುಣಗಿರಿಯ ಪರಿಧಿಯಲ್ಲಿ ಮೂರು ಯೋಜನ ಪರ್ಯಂತ ನಿವಸಿಸುವ ಮಾನವರಿಗೆ ಯಾವುದೇ ರೀತಿಯ ದೀಕ್ಷೆ , ಸಾಧನೆ ಇಲ್ಲದಿದ್ದರೂ ನನ್ನ ಸಂಪೂರ್ಣ ಅನುಗ್ರಹದಿಂದ ನನ್ನ ( ಬ್ರಹ್ಮ) ಸಾಯುಜ್ಯವನ್ನು ಪಡೆಯುತ್ತಾರೆ. ಇದು ಅರುಣಾಚಲೇಶ್ವರನ ಪ್ರತಿಜ್ಞಾ - ಕ್ಷೇತ್ರ ಮಹಿಮಾ.

Sunday, August 14, 2022

ಯಥಾ ಕಾಷ್ಠಗತಾ ವಹ್ನಿಃ

यथा काष्ठगता वह्निः व्यज्यते मथनादिभिः । तथा मन्त्रप्रभावे भक्त्याभिव्यज्यते शिवः ।।

Friday, July 29, 2022

ಅಗ್ನಿಂ ದೂತಂ ವೃಣೀಮಹೇ

ಓಂ ಅಗ್ನಯೇ ನಮಃ || ಓಂ ಜಾತವೇದಸೇ ನಮಃ || ಓಂ ಸಹೋಜಸೇ ನಮಃ || ಓಂ ಅಜಿರಾಪ್ರಭವೇ ನಮಃ || ಓಂ ವೈಶ್ವಾನರಾಯ ನಮಃ || ಓಂ ನರ್ಯಾಪಸೇ ನಮಃ || ಓಂ ಪಂಕ್ತಿರಾಧಸೇ ನಮಃ || ಓಂ ವಿಸರ್ಪಿಣೇ ನಮಃ || ಮಧ್ಯೇ ಶ್ರೀ ಯಜ್ಞೇಶ್ವರಾಯ ನಮಃ || ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದಂ ಹುತಾಶನಂ ಸುವರ್ಣವರ್ಣಮನಲಂ ಸಮಿದ್ಧಂ ವಿಶ್ವತೋಮುಖಂ ||

Sunday, July 24, 2022

ಲಂಬೋದರ ಪದಾಂಬುಜಂ

ಯದಾಲಂಬೇ ದರಂ ಹಂತಿ ಸತಾಂ ಪ್ರತ್ಯೂಹ ಸಂಭವಂ । ತದಾಲಂಬೇ ದಯಾಲಂಬಂ ಲಂಬೋದರ ಪದಾಂಬುಜಂ ।।

Tuesday, June 07, 2022

ಶನ್ನೋ ದೇವೀ ರಭಿಷ್ಟಯ

ಶನ್ನೋ ದೇವೀ ರಭಿಷ್ಟಯ ಆಪೋಭವಂತು ಪೀತಯೇ । ಶಂಯೋ ರಭಿಸ್ರವಂತುನಃ ॥ ಪ್ರಕಾಶಮಾನರ್ರದ ಜಲಾಭಿಮಾನ ದೇವತೆಗಳೇ. ನೀವು ನಮಗೆ ಯ್ಗ್ನಾದಿ ಕರ್ಮಮಾಡುವ ಮತ್ತು ಅಮೃತ ಪಾನ ಮಾಡುವ ಸುಖವನ್ನುಂಟು ಮಾಡಿರಿ. ಅಲ್ಲದೇ ಸತ್ಕರ್ಮಾಚರಣೆಗೆ ಆರೋಗ್ಯಭಾಗ್ಯವನ್ನು ಕೊಡಿ.

Thursday, June 02, 2022

ಗಾಯತ್ರೀ ವೇದಜನನೀ

ಗಾಯತ್ರೀ ಪಾಪನಾಶಿನೀ । ನ ಗಾಯತ್ರ್ಯಾಃ ಪರಂಜಪ್ಯ ಮೇತದ್ ವಿಜ್ಞಾನಮುಚ್ಯತೇ ॥ ಗಾಯತ್ರೀ ದೇವಿಯು ವೇದಮಾತೆಯು. ಈ ದೇವಿಯು ಲೋಕವನು ಪಾವನಮಾಡುವಳು. ಗಾಯತ್ರಿಗಿಂತಲೂ ಶ್ರೇಷ್ಠವಾದ ಜಪ್ಯವಾದ ಮಂತ್ರವಿಲ್ಲ. ಇದೇ ಜ್ಞಾನಸ್ವರೂಪವೆಂದು ಕೂರ್ಮಪುರಾಣದ ವಚನವು. ಸರ್ವಾತ್ಮನಾಹಿ ಯಾದೇವೀ ಸರ್ವಭೂತೇಷು ಸಂಸ್ಥಿತಾ । ಗಾಯತ್ರೀ ಮೋಕ್ಷಹೇತುರ್ವೈ ಮೋಕ್ಷಸ್ಥಾನಕ ಲಕ್ಷಣಂ ॥ ಯಾವಗಾಯತ್ರೀ ದೇವಿಯು ಸರ್ವಭೂತಗಳಲ್ಲಿಯೂ ಅಂತರ್ಯಾಮಿಯಾಗಿರುವಳೋ ಆ ದೇವಿಯು ಮೋಕ್ಷಕಾರಣಳೂ, ಮೋಕ್ಷಸ್ವರೂಪಳೂ ಆಗಿರುವಳು ಎಂದು ಋಷ್ಯಶೃಂಗಮಹರ್ಷಿಗಳ ವಚನವು.

Wednesday, May 18, 2022

ಅಷ್ಟ ದಿಕ್ಪಾಲಕ ಮಂತ್ರಗಳು.

1) ಕುಬೇರ ಗಾಯತ್ರಿ ಮಂತ್ರ - ದಿಕ್ಕು : ಉತ್ತರ ಓಂ ಯಕ್ಷರಾಜಾಯ ವಿದ್ಮಹೇ ವೈಶ್ರಾವನಾಯ ಧೀಮಹೀ ತನ್ನೋ ಕುಬೇರ ಪ್ರಚೋದಯಾತ್ || 2) ಈಶಾನ್ಯ ಗಾಯತ್ರಿ ಮಂತ್ರ - ದಿಕ್ಕು : ಈಶಾನ್ಯ ಓಂ ಭೂತೇಶ್ವರಾಯ ವಿದ್ಮಹೇ ಶೂಲಹಸ್ತಾಯ ಧೀಮಹೀ ತನ್ನೋ ಈಶಃ ಪ್ರಚೋದಯಾತ್ || 3) ಇಂದ್ರ ಗಾಯತ್ರಿ ಮಂತ್ರ - ದಿಕ್ಕು : ಪೂರ್ವ ಓಂ ದೇವರಾಜಾಯ ವಿದ್ಮಹೇ ವಜ್ರ ಹಸ್ತಾಯ ಧೀಮಹೀ ತನ್ನೋ ಇಂದ್ರ ಪ್ರಚೋದಯಾತ್ || 4) ಅಗ್ನಿ ಗಾಯತ್ರಿ ಮಂತ್ರ - ದಿಕ್ಕು : ಆಜ್ಞೇಯ ಓಂ ವೈಶ್ವಾನರಾಯ ವಿದ್ಮಹೇ ಲಾಲೀಲಾಯ ಧೀಮಹೀ ತನ್ನೋ ಅಗ್ನಿ ಪ್ರಚೋದಯಾತ್ || 5) ಯಮ ಗಾಯತ್ರಿ ಮಂತ್ರ - ದಿಕ್ಕು : ದಕ್ಷಿಣ ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಕಾಲಾಯ ಧೀಮಹೀ ತನ್ನೋ ಯಮ ಪ್ರಚೋದಯಾತ್ || 6) ನಿರುಋತಿ ಗಾಯತ್ರಿ ಮಂತ್ರ - ದಿಕ್ಕು : ನೈಋತ್ಯ ನಿಶಾಚರಾಯ ವಿದ್ಮಹೇ ಖಡ್ಗಹಸ್ಥಾಯ ಧೀಮಹೀ। ತನ್ನೋ ನಿರುಋತತಿಃ ಪ್ರಚೋದಯಾತ್ || 7) ವರುಣ ಗಾಯತ್ರಿ ಮಂತ್ರ - ದಿಕ್ಕು : ಪಶ್ಚಿಮ ಓಂ ಮಕರಧ್ವಜಾಯ ವಿದ್ಮಹೇ ಪಾಶ ಹಸ್ತಾಯ ಧೀಮಹೀ ತನ್ನೋ ವರುಣಃ ಪ್ರಚೋದಯಾತ್ || 8) ವಾಯು ಗಾಯತ್ರಿ ಮಂತ್ರ - ದಿಕ್ಕು : ವಾಯುವ್ಯ ಓಂ ಜಗತ್ಪ್ರಾಣಾಯ ವಿದ್ಮಹೇ ಗಂಧವಾಹಾಯ ಧೀಮಹೀ ತನ್ನೋ ವಾಯುಃ ಪ್ರಚೋದಯಾತ್ ||

Friday, April 15, 2022

ಧರ್ಮ ನಿರ್ವಚನ

ಧರ್ಮಾದರ್ಥಃ ಪ್ರಭವತೇ ಧರ್ಮಾತ್ ಪ್ರಭವತೇ ಸುಖಮ್ । ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ।। (ರಾಮಾಯಣ) ಧರ್ಮದಿಂದಲೇ ಅರ್ಥ; ಧರ್ಮದಿಂದಲೇ ಸುಖ. ಸಕಲ ಅಭೀಷ್ಟವೂ ಧರ್ಮದಿಂದ ಕೈಗೂಡುತ್ತದೆ. ಈ ಜಗತ್ತು ಧರ್ಮದ ತಳಹದಿಯ ಮೇಲೆ ನಿಂತಿದೆ. #Dharma

Friday, April 08, 2022

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ ಯೋ ಹ್ಯೇಕಭಕ್ತಃ ಸ ನರೋ ಜಘನ್ಯಃ | ತಯೋಸ್ತು ದಾಕ್ಷ್ಯಂ ಪ್ರವದಂತಿ ಮಧ್ಯಂ ಸ ಉತ್ತಮೋ ಯೋಽಭಿರತಸ್ತ್ರಿವರ್ಗೇ || (ಮಹಾಭಾರತ) ಧರ್ಮ, ಅರ್ಥ, ಕಾಮ-ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಅವುಗಳಲ್ಲಿ ಒಂದಕ್ಕೆ ಮಾತ್ರ ಅಂಟಿಕೊಂಡವನು ಅಧಮನು; ಯಾವುದಾದರೂ ಎರಡರಲ್ಲಿ ಸಮರ್ಥನಾದವನು ಮಧ್ಯಮನು; ಯಾರು ಆ ಮೂರರಲ್ಲಿಯೂ ನಿರತನೋ ಅವನೇ ಉತ್ತಮನು.

Friday, March 18, 2022

ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ

 ಅಶ್ವಕ್ರಾಂತೇ  ರಥಕ್ರಾಂತೇ  ವಿಷ್ಣುಕ್ರಾಂತೇ  ವಸುಂಧರಾ ।

ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।। 


ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ  ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು  ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ 

Monday, March 07, 2022

ಮೃತ್ತಿಕೇ ಹನಮೇ ಪಾಪಂ


ಮೃತ್ತಿಕೇ ಹನಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ ।

ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।

ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।

ಮೃತ್ತಿಕೇ ಪ್ರತಿಷ್ಠಿತೇ ಸರ್ವಂ  ನಿರ್ಣುದ ಮೃತ್ತಿಕೆ ॥

ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥

ದೂರ್ವಾ ದೇವತೆ



ಕಾಂಡಾತ್ ಕಾಂಡಾತ್ ಪ್ರರೋಹಂತಿ ಪರುಷಃ ಪರುಷಃ ಪರಿ ।

ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।

(ಯಜುರ್ವೇದ ೧೩/೨೦)

ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.




Monday, February 07, 2022

ರಥಸಪ್ತಮಿ

 :::  ರಥಸಪ್ತಮಿ ಸೂರ್ಯ ಅರ್ಘ್ಯ ಮಂತ್ರಃ ::: 


ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಃ ।

ಪ್ರೇರಯೇತ್ ತಸ್ಯ ಯತ್ ಭರ್ಗಃ ತತ್ ವರೇಣ್ಯಂ ಉಪಾಸ್ಮಹೇ ॥

Wednesday, February 02, 2022

ಸಂಸಾರಂ ಕ್ಷಣಭಂಗುರಂ


 ಮೃಗತೃಷ್ಣಾ ಸಮಂ ವೀಕ್ಷ್ಯ ಸಂಸಾರಂ ಕ್ಷಣಭಂಗುರಂ |

ಸಜ್ಜನೈಃ ಸಂಗತಿಂ ಕುರ್ಯಾತ್ ಧರ್ಮಾಯ ಚ ಸುಖಾಯ ಚ ||


ಕ್ಷಣಭಂಗುರವಾದ ಈ ಸಂಸಾರವನ್ನು ತಿಳಿದು, ಶಾಸ್ವತ ಸುಖಕ್ಕಾಗಿ ಸಜ್ಜರನ ಸಹವಾಸ ಮತ್ತು ಧರ್ಮ ಸಂಗ್ರಹವನ್ನು ನಂಬಿಕೋ. ನಿಜಕ್ಕೂ ಈ ಸಂಸಾರವು ಮರೀಚಿಕೆಯೇ ಸರಿ. 

Saturday, January 15, 2022

ತಂ ನೃಸಿಂಹ ಗುರುಂ ಭಜೇ

 

ಪ್ರಹ್ಲಾದ ವರದೋ ದೇವೋ ಯೋ ನೃಸಿಂಹಃ  ಪರೋ ಹರಿಃ ।

ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ ॥ 

 ಶ್ರೀ ಶ್ರೀ ವೃದ್ಧನೃಸಿಂಹ ಭಾರತಿಗಳು ನಿದ್ರಾಹಾರಗಳನ್ನು ಗೆದ್ದ ಮಹನೀಯರು. ಈ ಸಾಧನೆಗಳನ್ನು ಅತ್ಯುನ್ನತ ಯೋಗ ಸಾಧಕರು ಮಾಡುತ್ತಾರೆ. ಪ್ರಾಣಾಯಾಮ ಇತ್ಯಾದಿ ಅಷ್ಟಾಂಗಯೋಗ ಅಂಗಗಳ ಸಮ್ಯಗ್ ವ್ಯವಸ್ಥೆ ಇಂದ ಇದನ್ನು ಸಾಧಿಸುವುದು.  ಯತಿಗಳು ತಮ್ಮ ಬಾಲ್ಯಾವಸ್ಥೆಯಲ್ಲೆ ಕಾಲ್ನಡಿಗೆಯಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನ ಮಾಡಿದವರು.