Wednesday, May 18, 2022
ಅಷ್ಟ ದಿಕ್ಪಾಲಕ ಮಂತ್ರಗಳು.
Friday, April 15, 2022
ಧರ್ಮ ನಿರ್ವಚನ
Friday, April 08, 2022
ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ
Friday, March 18, 2022
ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ
ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ ।
ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।।
ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ
Monday, March 07, 2022
ಮೃತ್ತಿಕೇ ಹನಮೇ ಪಾಪಂ
ಮೃತ್ತಿಕೇ ಹನಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ ।
ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।
ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।
ಮೃತ್ತಿಕೇ ಪ್ರತಿಷ್ಠಿತೇ ಸರ್ವಂ ನಿರ್ಣುದ ಮೃತ್ತಿಕೆ ॥
ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥
ದೂರ್ವಾ ದೇವತೆ
ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।
(ಯಜುರ್ವೇದ ೧೩/೨೦)
ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.
Monday, February 07, 2022
ರಥಸಪ್ತಮಿ
::: ರಥಸಪ್ತಮಿ ಸೂರ್ಯ ಅರ್ಘ್ಯ ಮಂತ್ರಃ :::
ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಃ ।
ಪ್ರೇರಯೇತ್ ತಸ್ಯ ಯತ್ ಭರ್ಗಃ ತತ್ ವರೇಣ್ಯಂ ಉಪಾಸ್ಮಹೇ ॥
Wednesday, February 02, 2022
ಸಂಸಾರಂ ಕ್ಷಣಭಂಗುರಂ
ಮೃಗತೃಷ್ಣಾ ಸಮಂ ವೀಕ್ಷ್ಯ ಸಂಸಾರಂ ಕ್ಷಣಭಂಗುರಂ |
ಸಜ್ಜನೈಃ ಸಂಗತಿಂ ಕುರ್ಯಾತ್ ಧರ್ಮಾಯ ಚ ಸುಖಾಯ ಚ ||
ಕ್ಷಣಭಂಗುರವಾದ ಈ ಸಂಸಾರವನ್ನು ತಿಳಿದು, ಶಾಸ್ವತ ಸುಖಕ್ಕಾಗಿ ಸಜ್ಜರನ ಸಹವಾಸ ಮತ್ತು ಧರ್ಮ ಸಂಗ್ರಹವನ್ನು ನಂಬಿಕೋ. ನಿಜಕ್ಕೂ ಈ ಸಂಸಾರವು ಮರೀಚಿಕೆಯೇ ಸರಿ.
Saturday, January 15, 2022
ತಂ ನೃಸಿಂಹ ಗುರುಂ ಭಜೇ
ಪ್ರಹ್ಲಾದ ವರದೋ ದೇವೋ ಯೋ ನೃಸಿಂಹಃ ಪರೋ ಹರಿಃ ।
ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ ॥
ಶ್ರೀ ಶ್ರೀ ವೃದ್ಧನೃಸಿಂಹ ಭಾರತಿಗಳು ನಿದ್ರಾಹಾರಗಳನ್ನು ಗೆದ್ದ ಮಹನೀಯರು. ಈ ಸಾಧನೆಗಳನ್ನು ಅತ್ಯುನ್ನತ ಯೋಗ ಸಾಧಕರು ಮಾಡುತ್ತಾರೆ. ಪ್ರಾಣಾಯಾಮ ಇತ್ಯಾದಿ ಅಷ್ಟಾಂಗಯೋಗ ಅಂಗಗಳ ಸಮ್ಯಗ್ ವ್ಯವಸ್ಥೆ ಇಂದ ಇದನ್ನು ಸಾಧಿಸುವುದು. ಯತಿಗಳು ತಮ್ಮ ಬಾಲ್ಯಾವಸ್ಥೆಯಲ್ಲೆ ಕಾಲ್ನಡಿಗೆಯಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನ ಮಾಡಿದವರು.
Friday, December 17, 2021
ಶ್ರೀ ದತ್ತಾತ್ರೇಯ ಸ್ತೋತ್ರ
ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳೀ
ಓಂಶ್ರೀದತ್ತಾಯ ನಮಃ |
ಓಂ ದೇವದತ್ತಾಯ ನಮಃ |
ಓಂ ಬ್ರಹ್ಮದತ್ತಾಯ ನಮಃ |
ಓಂ ವಿಷ್ಣುದತ್ತಾಯ ನಮಃ |
ಓಂ ಶಿವದತ್ತಾಯ ನಮಃ |
ಓಂ ಅತ್ರಿದತ್ತಾಯ ನಮಃ |
ಓಂ ಆತ್ರೇಯಾಯ ನಮಃ |
ಓಂ ಅತ್ರಿವರದಾಯ ನಮಃ |
ಓಂ ಅನಸೂಯಾಯ ನಮಃ | ೯
ಓಂ ಅನಸೂಯಾಸೂನವೇ ನಮಃ |
ಓಂ ಅವಧೂತಾಯ ನಮಃ |
ಓಂ ಧರ್ಮಾಯ ನಮಃ |
ಓಂ ಧರ್ಮಪರಾಯಣಾಯ ನಮಃ |
ಓಂ ಧರ್ಮಪತಯೇ ನಮಃ |
ಓಂ ಸಿದ್ಧಾಯ ನಮಃ |
ಓಂ ಸಿದ್ಧಿದಾಯ ನಮಃ |
ಓಂ ಸಿದ್ಧಿಪತಯೇ ನಮಃ |
ಓಂ ಸಿದ್ಧಸೇವಿತಾಯ ನಮಃ | ೧೮
ಓಂ ಗುರವೇ ನಮಃ |
ಓಂ ಗುರುಗಮ್ಯಾಯ ನಮಃ |
ಓಂ ಗುರೋರ್ಗುರುತರಾಯ ನಮಃ |
ಓಂ ಗರಿಷ್ಠಾಯ ನಮಃ |
ಓಂ ವರಿಷ್ಠಾಯ ನಮಃ |
ಓಂ ಮಹಿಷ್ಠಾಯ ನಮಃ |
ಓಂ ಮಹಾತ್ಮನೇ ನಮಃ |
ಓಂ ಯೋಗಾಯ ನಮಃ |
ಓಂ ಯೋಗಗಮ್ಯಾಯ ನಮಃ | ೨೭
ಓಂ ಯೋಗಾದೇಶಕರಾಯ ನಮಃ |
ಓಂ ಯೋಗಪತಯೇ ನಮಃ |
ಓಂ ಯೋಗೀಶಾಯ ನಮಃ |
ಓಂ ಯೋಗಾಧೀಶಾಯ ನಮಃ |
ಓಂ ಯೋಗಪರಾಯಣಾಯ ನಮಃ |
ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ |
ಓಂ ದಿಗಂಬರಾಯ ನಮಃ |
ಓಂ ದಿವ್ಯಾಂಬರಾಯ ನಮಃ |
ಓಂ ಪೀತಾಂಬರಾಯ ನಮಃ | ೩೬
ಓಂ ಶ್ವೇತಾಂಬರಾಯ ನಮಃ |
ಓಂ ಚಿತ್ರಾಂಬರಾಯ ನಮಃ |
ಓಂ ಬಾಲಾಯ ನಮಃ |
ಓಂ ಬಾಲವೀರ್ಯಾಯ ನಮಃ |
ಓಂ ಕುಮಾರಾಯ ನಮಃ |
ಓಂ ಕಿಶೋರಾಯ ನಮಃ |
ಓಂ ಕಂದರ್ಪಮೋಹನಾಯ ನಮಃ |
ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ |
ಓಂ ಸುರಾಗಾಯ ನಮಃ | ೪೫
ಓಂ ವಿರಾಗಾಯ ನಮಃ |
ಓಂ ವೀತರಾಗಾಯ ನಮಃ |
ಓಂ ಅಮೃತವರ್ಷಿಣೇ ನಮಃ |
ಓಂ ಉಗ್ರಾಯ ನಮಃ |
ಓಂ ಅನುಗ್ರರೂಪಾಯ ನಮಃ |
ಓಂ ಸ್ಥವಿರಾಯ ನಮಃ |
ಓಂ ಸ್ಥವೀಯಸೇ ನಮಃ |
ಓಂ ಶಾಂತಾಯ ನಮಃ |
ಓಂ ಅಘೋರಾಯ ನಮಃ | ೫೪
ಓಂ ಗೂಢಾಯ ನಮಃ |
ಓಂ ಊರ್ಧ್ವರೇತಸೇ ನಮಃ |
ಓಂ ಏಕವಕ್ತ್ರಾಯ ನಮಃ |
ಓಂ ಅನೇಕವಕ್ತ್ರಾಯ ನಮಃ |
ಓಂ ದ್ವಿನೇತ್ರಾಯ ನಮಃ |
ಓಂ ತ್ರಿನೇತ್ರಾಯ ನಮಃ |
ಓಂ ದ್ವಿಭುಜಾಯ ನಮಃ |
ಓಂ ಷಡ್ಭುಜಾಯ ನಮಃ |
ಓಂ ಅಕ್ಷಮಾಲಿನೇ ನಮಃ | ೬೩
ಓಂ ಕಮಂಡಲಧಾರಿಣೇ ನಮಃ |
ಓಂ ಶೂಲಿನೇ ನಮಃ |
ಓಂ ಡಮರುಧಾರಿಣೇ ನಮಃ |
ಓಂ ಶಂಖಿನೇ ನಮಃ |
ಓಂ ಗದಿನೇ ನಮಃ |
ಓಂ ಮುನಯೇ ನಮಃ |
ಓಂ ಮೌನಿನೇ ನಮಃ |
ಓಂ ಶ್ರೀವಿರೂಪಾಯ ನಮಃ |
ಓಂ ಸರ್ವರೂಪಾಯ ನಮಃ | ೭೨
ಓಂ ಸಹಸ್ರಶಿರಸೇ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಬಾಹವೇ ನಮಃ |
ಓಂ ಸಹಸ್ರಾಯುಧಾಯ ನಮಃ |
ಓಂ ಸಹಸ್ರಪಾದಾಯ ನಮಃ |
ಓಂ ಸಹಸ್ರಪದ್ಮಾರ್ಚಿತಾಯ ನಮಃ |
ಓಂ ಪದ್ಮಹಸ್ತಾಯ ನಮಃ |
ಓಂ ಪದ್ಮಪಾದಾಯ ನಮಃ |
ಓಂ ಪದ್ಮನಾಭಾಯ ನಮಃ | ೮೧
ಓಂ ಪದ್ಮಮಾಲಿನೇ ನಮಃ |
ಓಂ ಪದ್ಮಗರ್ಭಾರುಣಾಕ್ಷಾಯ ನಮಃ |
ಓಂ ಪದ್ಮಕಿಂಜಲ್ಕವರ್ಚಸೇ ನಮಃ |
ಓಂ ಜ್ಞಾನಿನೇ ನಮಃ |
ಓಂ ಜ್ಞಾನಗಮ್ಯಾಯ ನಮಃ |
ಓಂ ಜ್ಞಾನವಿಜ್ಞಾನಮೂರ್ತಯೇ ನಮಃ |
ಓಂ ಧ್ಯಾನಿನೇ ನಮಃ |
ಓಂ ಧ್ಯಾನನಿಷ್ಠಾಯ ನಮಃ |
ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ | ೯೦
ಓಂ ಧೂಲಿಧೂಸರಿತಾಂಗಾಯ ನಮಃ |
ಓಂ ಚಂದನಲಿಪ್ತಮೂರ್ತಯೇ ನಮಃ |
ಓಂ ಭಸ್ಮೋದ್ಧೂಲಿತದೇಹಾಯ ನಮಃ |
ಓಂ ದಿವ್ಯಗಂಧಾನುಲೇಪಿನೇ ನಮಃ |
ಓಂ ಪ್ರಸನ್ನಾಯ ನಮಃ |
ಓಂ ಪ್ರಮತ್ತಾಯ ನಮಃ |
ಓಂ ಪ್ರಕೃಷ್ಟಾರ್ಥಪ್ರದಾಯ ನಮಃ |
ಓಂ ಅಷ್ಟೈಶ್ವರ್ಯಪ್ರದಾಯ ನಮಃ |
ಓಂ ವರದಾಯ ನಮಃ | ೯೯
ಓಂ ವರೀಯಸೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಬ್ರಹ್ಮರೂಪಾಯ ನಮಃ |
ಓಂ ವಿಷ್ಣವೇ ನಮಃ |
ಓಂ ವಿಶ್ವರೂಪಿಣೇ ನಮಃ |
ಓಂ ಶಂಕರಾಯ ನಮಃ |
ಓಂ ಆತ್ಮನೇ ನಮಃ |
ಓಂ ಅಂತರಾತ್ಮನೇ ನಮಃ |
ಓಂ ಪರಮಾತ್ಮನೇ ನಮಃ | ೧೦೮ ಶ್ರೀ ದತ್ತಾತ್ರೇಯ ಸ್ತೋತ್ರಂ
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||
ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ನಾರದಋಷಿಃ | ಅನುಷ್ಟುಪ್ ಛಂದಃ | ಶ್ರೀದತ್ತಃ ಪರಮಾತ್ಮಾ ದೇವತಾ | ಶ್ರೀದತ್ತಾತ್ರೇಯ ಪ್ರೀತ್ಯರ್ಥೇ ಜಪೇ ವಿನಿಯೋಗಃ ||
ನಾರದ ಉವಾಚ |
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತು ತೇ || ೧ ||
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರ ದಯಾಮೂರ್ತೇ ದತ್ತಾತ್ರೇಯ ನಮೋಽಸ್ತು ತೇ || ೨ ||
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೩ ||
ಹ್ರಸ್ವದೀರ್ಘಕೃಶಸ್ಥೂಲನಾಮಗೋತ್ರವಿವರ್ಜಿತ |
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತು ತೇ || ೪ ||
ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತು ತೇ || ೫ ||
ಆದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವಸ್ಸದಾಶಿವಃ |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೬ ||
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |
ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೭ ||
ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತು ತೇ || ೮ ||
ಜಂಬೂದ್ವೀಪೇ ಮಹಾಕ್ಷೇತ್ರೇ ಮಾತಾಪುರನಿವಾಸಿನೇ |
ಜಯಮಾನ ಸತಾಂ ದೇವ ದತ್ತಾತ್ರೇಯ ನಮೋಽಸ್ತು ತೇ || ೯ ||
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತು ತೇ || ೧೦ ||
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತು ತೇ || ೧೧ ||
ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ |
ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೨ ||
ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ |
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತು ತೇ || ೧೩ ||
ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಽಸ್ತು ತೇ || ೧೪ ||
ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತು ತೇ || ೧೫ ||
ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೬ ||
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತು ತೇ || ೧೭ ||
ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ || ೧೮ ||
ಇತಿ ಶ್ರೀನಾರದಪುರಾಣೇ ನಾರದವಿರಚಿತಂ ಶ್ರೀ ದತ್ತಾತ್ರೇಯ ಸ್ತೋತ್ರಮ್ |
Tuesday, December 07, 2021
ಮಮಕಾರಃ
ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ |
Thursday, November 11, 2021
ಚಮಕ ಪ್ರಶ್ನೆ
ವಿದ್ವಾನ್ ಶೇಷಾಚಲ ಶರ್ಮಾರವರ ಗ್ರಂಥದಲ್ಲಿ ಕಂಡುಬಂದುದು:
(ಚಮಕಾಧ್ಯಾಯದ ಕೊನೆಯಲ್ಲಿ ಪಠಿಸಬೇಕಾದ ಮಂತ್ರದ ಅರ್ಥ) :
ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ, ಬೃಹಸ್ಪತಿಯು ಶಸ್ತ್ರ-ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವೇದೇವರು ಸೂಕ್ತವಾಚಕರಾಗಿರುತ್ತಾರೆ. (ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ.) ಆದುದರಿಂದ ಓ ಪೃಥಿವಿಯೇ! ತಾಯಿಯೇ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ. ಚಿಂತಿಸುತ್ತೇನೆ. ಮಧುರವಾದುದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ (ದೇವತೆಗಳಿಗೆ) ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭಾದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ, ಪಿತೃದೇವತೆಗಳೂ ಕೂಡ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.
(ಬ್ರಹ್ಮವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ) :
ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ಯೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವೇದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ, ತಾಯಿಯೇ! ಪೃಥ್ವಿದೇವಿಯೇ! ನನ್ನನ್ನು ಹಿಂಸಿಸಬೇಡ. ನಾನು (ನಿಮ್ಮ) ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ (ನಿಮ್ಮ) ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ, ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ, ತ್ರಿವಿಧಶಾಂತಿಯು ಉಂಟಾಗಲಿ.
ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಕ್ತಿಯ, ಆಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು.
Tuesday, October 26, 2021
ಪಾಪಘ್ನೀ ತ್ವತ್ಸಮಾ ನ ಹಿ
ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ।
ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾ ಕುರು॥
Wednesday, September 29, 2021
ನ ಜಾತು ಕಾಮಃ
ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||
ಬೆಂಕಿಯು ತುಪ್ಪದಿಂದ ಹೆಚ್ಚು ಪ್ರಜ್ವಲಿಸುವಂತೆಯೇ ಕಾಮಾಭಿಲಾಷೆಯು ಭೋಗಾನುಭವದಿಂದ ಇನ್ನೂ ಅಧಿಕವಾಗಿ ಬೆಳೆಯುತ್ತದೆಯೇವಿನಃ ಶಮನವಾಗುವುದಿಲ್ಲ.
Monday, August 30, 2021
ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ
ಏಕಂ ಶಾಸ್ತ್ರಂ ದೇವಕೀಪುತ್ರ ಗೀತಮ್ ಏಕೋ ದೇವೋ ದೇವಕೀಪುತ್ರ ಏವ l
ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ll
ಶ್ರೀಕೃಷ್ಣಃ ಕಮಲಾನಾಥೋ ವಾಸುದೇವಃ ಸನಾತನಃ |
ವಾಸುದೇವಾತ್ಮಜಃ ಪುಣ್ಯೋ ಲೀಲಾಮಾನುಷವಿಗ್ರಹಃ || ೧ ||
ಶ್ರೀವತ್ಸಕೌಸ್ತುಭಧರೋ ಯಶೋದಾವತ್ಸಲೋ ಹರಿಃ |
ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯುದಾಯುಧಃ || ೨ ||
ದೇವಕೀನಂದನಃ ಶ್ರೀಶೋ ನಂದಗೋಪಪ್ರಿಯಾತ್ಮಜಃ |
ಯಮುನಾವೇಗಸಂಹಾರೀ ಬಲಭದ್ರಪ್ರಿಯಾನುಜಃ || ೩ ||
ಪೂತನಾಜೀವಿತಹರಃ ಶಕಟಾಸುರಭಂಜನಃ |
ನಂದವ್ರಜಜನಾನಂದಃ ಸಚ್ಚಿದಾನಂದವಿಗ್ರಹಃ || ೪ ||
ನವನೀತವಿಲಿಪ್ತಾಂಗೋ ನವನೀತನಟೋಽನಘಃ |
ನವನೀತನವಾಹಾರೋ ಮುಚುಕುಂದಪ್ರಸಾದಕೃತ್ || ೫ ||
ಷೋಡಶಸ್ತ್ರೀಸಹಸ್ರೇಶಸ್ತ್ರಿಭಂಗೀ ಮಧುರಾಕೃತಿಃ |
ಶುಕವಾಗಮೃತಾಬ್ಧೀಂದುರ್ಗೋವಿಂದೋ ಯೋಗಿನಾಂ ಪತಿಃ || ೬ ||
ವತ್ಸಪಾದಹರೋಽನಂತೋ ಧೇನುಕಾಸುರಭಂಜನಃ |
ತೃಣೀಕೃತತೃಣಾವರ್ತೋ ಯಮಳಾರ್ಜುನಭಂಜನಃ || ೭ ||
ಉತ್ತಾಲತಾಲಭೇತ್ತಾ ಚ ತಮಾಲಶ್ಯಾಮಲಲಾಕೃತಿಃ |
ಗೋಪಗೋಪೀಶ್ವರೋ ಯೋಗೀ ಸೂರ್ಯಕೋಟಿಸಮಪ್ರಭಃ || ೮ ||
ಇಳಾಪತಿಃ ಪರಂಜ್ಯೋತಿರ್ಯಾದವೇಂದ್ರೋ ಯದೂದ್ವಹಃ |
ವನಮಾಲೀ ಪೀತವಾಸಾಃ ಪಾರಿಜಾತಾಪಹಾರಕಃ || ೯ ||
ಗೋವರ್ಧನಾಚಲೋದ್ಧರ್ತಾ ಗೋಪಾಲಃ ಸರ್ವಪಾಲಕಃ |
ಅಜೋ ನಿರಂಜನಃ ಕಾಮಜನಕಃ ಕಂಜಲೋಚನಃ || ೧೦ ||
ಮಧುಹಾ ಮಥುರಾನಾಥೋ ದ್ವಾರಕಾನಾಯಕೋ ಬಲೀ |
ವೃಂದಾವನಾಂತಃ ಸಂಚಾರೀ ತುಲಸೀದಾಮಭೂಷಣಃ || ೧೧ ||
ಸ್ಯಮಂತಕಮಣೇರ್ಹರ್ತಾ ನರನಾರಾಯಣಾತ್ಮಕಃ |
ಕುಬ್ಜಾಗಂಧಾನುಲಿಪ್ತಾಂಗೋ ಮಾಯೀ ಪರಮಪೂರುಷಃ || ೧೨ ||
ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಃ |
ಸಂಸಾರವೈರೀ ಕಂಸಾರಿರ್ಮುರಾರಿರ್ನರಕಾಂತಕಃ || ೧೩ ||
ಅನಾದಿಬ್ರಹ್ಮಚಾರೀ ಚ ಕೃಷ್ಣಾವ್ಯಸನಕರ್ಷಕಃ |
ಶಿಶುಪಾಲಶಿರಶ್ಛೇತ್ತಾ ದುರ್ಯೋಧನಕುಲಾಂತಕಃ || ೧೪ ||
ವಿದುರಾಕ್ರೂರವರದೋ ವಿಶ್ವರೂಪಪ್ರದರ್ಶಕಃ |
ಸತ್ಯವಾಕ್ ಸತ್ಯಸಂಕಲ್ಪಃ ಸತ್ಯಭಾಮಾರತೋ ಜಯೀ || ೧೫ ||
ಸುಭದ್ರಾಪೂರ್ವಜೋ ವಿಷ್ಣುರ್ಭೀಷ್ಮಮುಕ್ತಿಪ್ರದಾಯಕಃ |
ಜಗದ್ಗುರುರ್ಜಗನ್ನಾಥೋ ವೇಣುನಾದವಿಶಾರದಃ || ೧೬ ||
ವೃಷಭಾಸುರವಿಧ್ವಂಸೀ ಬಾಣಾಸುರಕರಾಂತಕಃ |
ಯುಧಿಷ್ಠಿರಪ್ರತಿಷ್ಠಾತಾ ಬರ್ಹಿಬರ್ಹಾವತಂಸಕಃ || ೧೭ ||
ಪಾರ್ಥಸಾರಥಿರವ್ಯಕ್ತೋ ಗೀತಾಮೃತಮಹೋದಧಿಃ |
ಕಾಲೀಯಫಣಮಾಣಿಕ್ಯರಂಜಿತಶ್ರೀಪದಾಂಬುಜಃ || ೧೮ ||
ದಾಮೋದರೋ ಯಜ್ಞಭೋಕ್ತಾ ದಾನವೇಂದ್ರವಿನಾಶನಃ |
ನಾರಾಯಣಃ ಪರಂಬ್ರಹ್ಮ ಪನ್ನಗಾಶನವಾಹನಃ || ೧೯ ||
ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಃ |
ಪುಣ್ಯಶ್ಲೋಕಸ್ತೀರ್ಥಪಾದೋ ವೇದವೇದ್ಯೋ ದಯಾನಿಧಿಃ || ೨೦ ||
ಸರ್ವತೀರ್ಥಾತ್ಮಕಃ ಸರ್ವಗ್ರಹರೂಪೀ ಪರಾತ್ಪರಃ |
ಏವಂ ಶ್ರೀಕೃಷ್ಣದೇವಸ್ಯ ನಾಮ್ನಾಮಷ್ಟೋತ್ತರಂ ಶತಮ್ || ೨೧ ||
ಕೃಷ್ಣೇನ ಕೃಷ್ಣಭಕ್ತಾನಾಂ ಗೀತಂ ಗೀತಾಮೃತಂ ಪುರಾ |
ಸ್ತೋತ್ರಂ ಕೃಷ್ಣಪ್ರಿಯತಮಂ ಶ್ರುತಂ ತಸ್ಮಾನ್ಮಯಾ ಪರಮ್ || ೨೨ ||
ಕೃಷ್ಣನಾಮಾಮೃತಂ ನಾಮ ಪರಮಾನಂದಕಾರಣಮ್ |
ಈತಿಬಾಧಾದಿಧುಃಖಘ್ನಂ ಪರಮಾಯುಷ್ಯವರ್ಧನಮ್ || ೨೩ ||
ದಾನಂ ವ್ರತಂ ತಪಸ್ತೀರ್ಥಂ ಯತ್ಕೃತಂ ತ್ವಿಹ ಜನ್ಮನಿ |
ಜಪತಾಂ ಶ್ರೃಣ್ವತಾಮೇತತ್ ಕೋಟಿಕೋಟಿಗುಣಂ ಭವೇತ್ || ೨೪ ||
ಪುತ್ರಪ್ರದಮಪುತ್ರಾಣಾಮಗತೀನಾಂ ಗತಿಪ್ರದಮ್ |
ಧನಾವಹಂ ದರಿದ್ರಾಣಾಂ ಜಯೇಚ್ಛೂನಾಂ ಜಯಾವಹಮ್ || ೨೫ ||
ಶಿಶೂನಾಂ ಗೋಕುಲಾನಾಂ ಚ ಪುಷ್ಟಿದಂ ಪೂರ್ಣಪುಣ್ಯದಮ್ |
ಬಾಲರೋಗಗ್ರಹಾದೀನಾಂ ಶಮನಂ ಶಾಂತಿಮುಕ್ತಿದಮ್ || ೨೬ ||
ಸಮಸ್ತಕಾಮದಂ ಸದ್ಯಃ ಕೋಟಿಜನ್ಮಾಘನಾಶನಮ್ |
ಅಂತೇ ಕೃಷ್ಣಸ್ಮರಣದಂ ಭವತಾಪತ್ರಯಾಪಹಮ್ || ೨೭ ||
ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ |
ನಾಥಾಯ ರುಗ್ಮಿಣೀಶಾಯ ನಮೋ ವೇದಾಂತವೇದಿನೇ || ೨೮ ||
ಇಮಂ ಮಂತ್ರಂ ಜಪನ್ ನಿತ್ಯಂ ವ್ರಜಂಸ್ತಿಷ್ಠನ್ ದಿವಾ ನಿಶಿ |
ಸರ್ವಗ್ರಹಾನುಗ್ರಹಭಾಕ್ ಸರ್ವಪ್ರಿಯತಮೋ ನರಃ || ೨೯ ||
ಪುತ್ರಪೌತ್ರೈಃ ಪರಿವೃತಃ ಸರ್ವಸಿದ್ಧಿಸಮೃದ್ಧಿಮಾನ್ |
ನಿರ್ವಿಶ್ಯ ಭೋಗಾನಂತೇಽಪಿ ಕೃಷ್ಣಸಾಯುಜ್ಯಮಾಪ್ನುಯಾತ್ || ೩೦ ||
|| ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀಕೃಷ್ಣಾಷ್ಟೋತ್ತರಶತನಾಮಸ್ತೋತ್ರಮ್
Sunday, August 29, 2021
ಪವಿತ್ರಂ ಹನುಮನ್ನಾಮ
ಹನುಮಾನಂಜನಾಸೂನುರ್ವಾಯುಪುತ್ರೋ ಮಹಾಬಲಃ ।
ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋ ಅಮಿತ ವಿಕ್ರಮಃ ॥
ಉದಧಿಕ್ರಮಣಶ್ಚೈವ ಸೀತಾಶೋಕ ವಿನಾಶನಃ ।
ಲಕ್ಷ್ಮಣಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ॥
ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ ।
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ
ತಸ್ಯ ಮೃತ್ಯುಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ॥
ಪವಿತ್ರಂ ಹನುಮನ್ನಾಮ ದ್ವಾದಶಾವೃತಿಮಾತ್ರತಃ ।
ಯಸ್ಸ್ಮರಂತಿ ಜನಾಸ್ತೇಷಾಂ ಕಾರ್ಯಸಿದ್ಧಿರ್ಭವೇದ್ಧೃವಂ ॥
Monday, August 02, 2021
ಆಂಜನೇಯಂ ಮಹಾವೀರಂ
ಆಂಜನೇಯಂ ಮಹಾವೀರಂ ಬ್ರಹ್ಮ ವಿಷ್ಣು ಶಿವಾತ್ಮಕಂ
ರಾ ಶಬ್ದ ಉಚ್ಚಾರ ಮಾತ್ರೇಣ ಮುಖಾನ್ನಿರ್ಯಾಂತಿ ಪಾತಕಾಃ
ಪುನಃ ಪ್ರವೇಶ ಭೇತ್ಯಾ ಚ ಮಕಾರಸ್ತು ಕವಾಟವತ್ ॥
ಶ್ರೀರಾಮೇತಿ ಏಕದಾವುಕ್ತಂ ಮನೋಯಸ್ಯ ಪ್ರವರ್ತತೇ।
ವೈಕುಂಠವಾಸಿನಸ್ತಸ್ಯ ಕುಲಂ ಏಕೋತ್ತರಂ ಶತಂ ॥
ಶ್ರೀ ರುದ್ರದ್ವಾದಶ ಸ್ತೋತ್ರಂ
ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಂ ।। ೧ ।।
ಪಂಚಮಂ ಕೃತ್ತಿವಾಸಂ ಚ ಷಷ್ಠ೦ ಕಾಮಾಂಗನಾಶನಂ
ಸಪ್ತಮಂ ದೇವದೇವೇಶಂ ಶ್ರೀಕಂಠ೦ ಚಾಷ್ಟಮಂ ತಥಾ ।। ೨ ।।
ನವಮಂ ತು ಹರಂ ದೇವಂ ದಶಮಂ ಪಾರ್ವತೀಪತಿಂ
ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ ।। ೩ ।।
।। ಇತಿ ಶ್ರೀ ರುದ್ರದ್ವಾದಶ ಸ್ತೋತ್ರಂ ಸಮಾಪ್ತಂ ।।
Sunday, July 25, 2021
ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್
ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿಃ |
ಅಫಾಲಲೋಚನಃ ಶಂಭುಃ ಭಗವಾನ್ ಬಾದರಾಯಣಃ ||
ಭಗವಾನ ವೇದವ್ಯಾಸರು ನಾಲ್ಕು ಮುಖಗಳಿಲ್ಲದಿರುವಾಗಲೂ ಬ್ರಹ್ಮದೇವರ ಸ್ವರೂಪವಾಗಿದ್ದಾರೆ. ಎರಡು ಕೈಗಳನ್ನು ಹೊಂದಿದ್ದರೂ ಮತ್ತೊಬ್ಬ ಭಗವಾನ್ ವಿಷ್ಣುವಾಗಿದ್ದಾರೆ ಮತ್ತು ಹಣೆಯಲ್ಲಿ ಮೂರನೇ ಕಣ್ಣು ಇಲ್ಲದಿರುವಾಗಲೂ ಶಿವಸ್ವರೂಪರಾಗಿದ್ದಾರೆ.
***
ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ |
ಈ ಜಗತ್ತಿನ ಸರ್ವಗ್ರಂಥಗಳ ವಿಷಯವಸ್ತುಗಳೂ ವ್ಯಾಸರ ಉಚ್ಛಿಷ್ಟ /ಎಂಜಲು / ವ್ಯಾಸರು ತಿಂದು ಬಿಟ್ಟದ್ದೇ ಆಗಿದೆ. ಅರ್ಥಾತ್ — ವ್ಯಾಸರು ಹೇಳದ ವಿಷಯವಿಲ್ಲ.
***
ಮುನಿಂ ಸ್ನಿಗ್ಧಾಂಬುಜಾಭಾಸಂ ವೇದವ್ಯಾಸಮಕಲ್ಮಷಮ್ |
ವೇದವ್ಯಾಸಂ ಸರಸ್ವತ್ಯಾ-ವಾಸಂ ವ್ಯಾಸಂ ನಮಾಮ್ಯಹಮ್ ||
ಕಣ್ಣುಗಳನ್ನು ತಣಿಸುವ ಸುಂದರವಾದ ಕಮಲದ ರೀತಿಯಲ್ಲಿ ಕಳಂಕರಹಿತ ಸರಸ್ವತಿಯ ತವರುಮನೆಯಾಗಿರುವ ಭಗವಾನ್ ವೇದವ್ಯಾಸರಿಗೆ ನಾನು ನಮಸ್ಕರಿಸುತ್ತೇನೆ.
***
ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸಂಧಂ ಪರಾಯಣಂ ।
ಶಾಂತಂ ಜಿತೇಂದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಂ ॥
Friday, July 02, 2021
Tuesday, June 15, 2021
ಸನಾತನ ರೀತ್ಯ ಜನ್ಮದಿನ ಶುಭಾಷಯಗಳು
ನವೋನವೋ ಭವತಿ ಜಾಯಮಾನೋಹ್ನಾಂ ಕೇತುರುಷ ಸಾಮೇತ್ಯಗ್ರಂ |
ಭಾಗಂ ದೇವೇಭ್ಯೋ ವಿ ದಧಾತ್ಯಾನ್ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ ||
ಚಂದ್ರನು ಪ್ರತಿದಿನವೂ ಹುಟ್ಟುತ್ತಾ ಹೊಸತನದಿಂದ ಬೆಳೆಯುತ್ತಾ ಹೊಸಬನಾಗಿ ಕಾಣುತ್ತಾನೆ. ಪಾಡ್ಯ ಮುಂತಾದ ದಿನಗಳಲ್ಲಿ ಪ್ರಜ್ಞಾಪಕನಾದ ಚಂದ್ರನು ಉಷಸ್ಸುಗಳ ಮುಂಭಾಗದಲ್ಲಿ ಹೋಗುತ್ತಾನೆ. ತನ್ನ ದೈನಂದಿನ ಕ್ರಮದಲ್ಲಿ ಆವಿರ್ಭವಿಸುತ್ತಾ ದೇವತೆಗಳಿಗೆ ಯಜ್ಞವನ್ನು ನಿಯಮಿಸುತ್ತಾನೆ. #ದೀರ್ಘವಾದ_ಆಯುಸ್ಸನ್ನೂ ಕೊಡುತ್ತಾನೆ. ಹಾಗೆಯೇ ತಾವು ತಮ್ಮೆಲ್ಲಾ ಕುಟುಂಬದವರೂ #ಆಯುರಾರೋಗ್ಯ_ಐಶ್ವರ್ಯಾದಿಗಳನ್ನು ಪಡೆದುಕೊಳ್ಳುವಂತಾಗಲಿ.
Sunday, June 13, 2021
ಕಾಲಕಾಲ ನಮೋಸ್ತುತೇ
कालरूप:
कलयतां कालकालेश कारण।
कालादतीत कालस्थ कालकाल नमोस्तुते।।
ಕಾಲರೂಪಃ ಕಲಯತಾಂ ಕಾಲಕಾಲೇಶ ಕಾರಣ।
ಕಾಲಾದತೀತ ಕಾಲಸ್ಥ ಕಾಲಕಾಲ ನಮೋಸ್ತುತೇ ॥
सर्वतीर्थमयी
माता सर्वदेवमय: पिता।
मातरं
पितरं तस्मात् सर्वयत्नेन पूजयेत्।।
ಸರ್ವತೇರ್ಥಮಯೀ
ಮಾತಾ ಸರ್ವದೇವಮಯಃ ಪಿತಾ।
ಮಾತರಂ
ಪಿತರಂ ತಸ್ಮಾತ್ ಸರ್ವಯತ್ನೇನ ಪೂಜಯೇತ್ ॥
Wednesday, June 09, 2021
ಶ್ರೂಯತಾಂ ಧರ್ಮ ಸರ್ವಸ್ವಂ
ಶ್ರೂಯತಾಂ ಧರ್ಮ ಸರ್ವಸ್ವಂ ಶ್ರುತ್ವಾಚ ಅವಧಾರ್ಯತಾಮ್ |
ಆತ್ಮನಃ ಪ್ರತಿಕೂಲಾನಿ ನ ಪರೇಷಾಂ ಸಮಾಚರೇತ್ ||
ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, ಕೇಳಿದ್ದರೂ, ಅದನ್ನು ಅರ್ಥಮಾಡಿಕೊಂಡಿದ್ದರೂ, ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು.
Tuesday, June 08, 2021
ಕಾಳಿಕಾಂಬ
जयन्ती मङ्गला काली भद्रकाली कपालिनी ।
दुर्गा शिवा क्षमा धात्री स्वाहा स्वधा नमोऽस्तु ते॥
ಜಯಂತೀ ಮಂಗಳಾ ಕಾಳಿ ಭದ್ರಕಾಳಿ ಕಪಾಲಿನಿ ।
ದುರ್ಗಾ ಶಿವಾ ಕ್ಷಮಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ ॥
Tuesday, May 11, 2021
ಶಿವಂ ಪ್ರಪಧ್ಯೇ
ನಮಃ ಶಿವಾಯೇತಿ ಶಿವಂ ಪ್ರಪಧ್ಯೇ
ಶಿವ ಪ್ರಸೀದೇತಿ ಶಿವಂ ಪ್ರಪಧ್ಯೇ ।
ಶಿವಾತ್ಪರಂ ನೇತಿ ಶಿವಂ ಪ್ರಪಧ್ಯೇ
ಶಿವೋಹಂಮಸ್ಮೀತಿ ಶಿವಂ ಪ್ರಪಧ್ಯೇ ॥
नम: शिवायेति शिवं प्रपद्ये
शिव प्रसीदेति शिवं प्रपद्ये ।
शिवात्परं नेति शिवं प्रपद्ये
शिवोऽहमस्मीति शिवं प्रपद्ये ॥
Sunday, May 09, 2021
ಭಾಗವತ
न त्वहं कामये राज्यं न स्वर्गं नापुनर्भवम् ।
Tuesday, April 13, 2021
Saturday, March 27, 2021
ಅನಂತ ವಾಚಕ.
ಭಾರತದಲ್ಲಿ ಭೀಷ್ಮಾಚಾರ್ಯರು ಹೇಳುತ್ತಾರೆ -- "ವಿಶ್ವಂ ಶತಂ ಸಹಸ್ರಂ ಸರ್ವಂ ಅಕ್ಷಯ ವಾಚಕಂ" . ಅನಂತವನ್ನು, ಅಕ್ಷಯವನ್ನು ಸೂಚಿಸುವ ಪದಗಳು ವಿಶ್ವಂ, ಶತಂ, ಸಹಸ್ರಂ. ಇದು ಕೇವಲ ಸಂಖ್ಯಾ ಸೂಚಕವಲ್ಲ. ಅನಂತ ಸೂಚಕ.
Tuesday, March 23, 2021
ಚಾಣಕ್ಯನೀತಿ
ಅಸಂತುಷ್ಟಾ ದ್ವಿಜಾ ನಷ್ಟಾಃ ಸಂತುಷ್ಟಾಶ್ಚ ಮಹೀಭುಜಃ |
ಸಲಜ್ಜಾ ಗಣಿಕಾ ನಷ್ಟಾ ನಿರ್ಲಜ್ಜಾಶ್ಚ ಕುಲಸ್ತ್ರಿಯಃ ||
-- ಚಾಣಕ್ಯನೀತಿ.
Saturday, March 13, 2021
ಗ್ರಹಭಲ
ಸೂರ್ಯ: ಮಥೇಂದುರಿಂದ್ರ ಪದವೀಂ ಸನ್ಮಂಗಳಂ ಮಂಗಳ: ಸದ್ಬುದ್ಧಿಂಚ ಬುಧೋಗುರುಶ್ಚ ಗುರುತಾಂ ಶುಕ್ರ: ಶುಭಂ ಶಂ ಶನಿ: |
ರಾಹುರ್ಬಾಹುಬಲಂ ಕರೋತು ವಿಜಯಂ ಕೇತು: ಕುಲಸ್ಯೋನ್ನತಿಂ ನಿತ್ಯಂ ಪ್ರೀತಿಕರಾಭವಂತು ಸತತಂ ಸರ್ವೇನು ಕೂಲಾಗ್ರಹಾ: ||
Friday, February 12, 2021
ಶ್ರೀ ಲಲಿತಾ
ಭಜೇ ಶ್ರೀಚಕ್ರ ಮಧ್ಯಸ್ಥಾಂ ದಕ್ಷಿಣೋತ್ತರ ಯೋಸ್ಸದಾ ।
ಶ್ಯಾಮಾ ವಾರ್ತಾಳಿ ಸಂಸೇವ್ಯಾಂ ಭವಾನೀಂ ಲಲಿತಾಂಬಿಕಾಂ ॥
ಬಿಂದುತ್ರಿಕೋನ ವಸುಕೋನ ದಶಾರಯುಗ್ಮ
ಮನ್ವಸ್ತ್ರ ನಾಗದಲ ಶೋಡಷಪತ್ರಯುಕ್ತಂ |
ವೃತ್ತತ್ರಯಂ ಚ ಧರಣೀಸದನಂ ತ್ರಯಂ ಚ
ಶ್ರೀಚಕ್ರರಾಜ ಉದಿತಃ ಪರದೇವತಾಯಾಃ ||
Saturday, January 16, 2021
ಸಾರಮೇತತ್ ಚತುಷ್ಟಯಂ
ಅಸಾರೇ ಖಲು ಸಂಸಾರೇ ಸಾರಮೇತತ್ ಚತುಷ್ಟಯಂ |
ಕಾಶ್ಯಾಂ ವಾಸಃ ಸತಾಂ ಸಂಗಃ ಗಂಗಾಂಭಃ ಶಂಭುಸೇವನಂ ||
--ಧನಂಜಯವಿಜಯ.
#KASHI , #KASHIMAHATMYA , #VARANASI , #KASHIVISHWANATHThursday, December 24, 2020
ತಸ್ಮಾತ್ ಜಾಗ್ರತ ಜಾಗ್ರತ
ಕಾಮ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ ।
ಜ್ಞಾನ ರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ ॥
*****
#Jagrata , #Jagratha , #Warning
Monday, November 16, 2020
ಸಂಪದಃ
ವಿಪದೋ ನೈವ ವಿಪದಃ ಸಂಪದೋ ನೈವ ಸಂಪದಃ |
ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣಃ ಸ್ಮೃತಿಃ ||-- ಸುಭಾಷಿತಾವಳಿ.
ವಿಪತ್ತು ನಿಜವಾದ ವಿಪತ್ತಲ್ಲ; ಸಂಪತ್ತು ನಿಜವಾದ ಸಂಪತ್ತಲ್ಲ. ಪರಮಾತ್ಮನನ್ನು ಮರೆಯುವುದೇ ನಿಜವಾದ ವಿಪತ್ತು ಮತ್ತು ಪರಮಾತ್ಮನನು ಸ್ಮರಿಸುವುದೇ ನಿಜವಾದ ಸಂಪತ್ತು.
Monday, October 26, 2020
ಸೇವಾ ವೃತಿ.
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತ್ರತೀಯಾ ಗತಿರ್ಭವತಿ ||--ಪಂಚ ತಂತ್ರ.
ಸಂಪತ್ತಿಗೆ ದಾನ, ಭೋಗ, ಮತ್ತು ನಾಶ ಎಂಬ ಮೂರೇ ಗತಿಗಳು. ಯಾವನು ದಾನವನ್ನು(ಸತ್ಪಾತ್ರರಿಗೆ) ಮಾಡುವುದಿಲ್ಲವೋ, ತಾನೂ (ತನ್ನವರೊಂದಿಗೆ ಸಂಪತ್ತನ್ನು) ಭೋಗಿಸುವುದಿಲ್ಲವೋ ಆ ಅವನಲ್ಲಿರುವ ಸಂಪತ್ತು ಅದರ ಮೂರನೆಯ ಗತಿಯಾದ ನಾಶವನ್ನು ಹೊಂದುವುದು ನಿಶ್ಚಿತವೇ. (ರಾಜ (ಸರಕಾರ) , ಚೋರ (ವಂಚಕ) ಮತ್ತು ಅಗ್ನಿ – ಈ ಮೂರು ನಾಶದ ವಿಧಾನವಾಗಿವೆ.
Thursday, September 24, 2020
ಸಿದ್ಧಿ
ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ ಭೇಷಜೇ ಗುರೌ |ಯಾದೃಶೀ ಭಾವನಾಂ ಕುರ್ಯಾತ್ ಸಿದ್ಧಿರ್ಭವತಿ ತಾದೃಶೀ ||--ವಿಕ್ರಮಚರಿತಂ.
ಮಂತ್ರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ, ಬ್ರಾಹ್ಮಣರಲ್ಲಿ, ದೇವರಲ್ಲಿ, ದೈವಜ್ಞ(ಜ್ಯೋತಿಷಿ)ರಲ್ಲಿ, ಔಷಧಗಳಲ್ಲಿ, ಗುರುವಿನಲ್ಲಿ ಎಷ್ಟೆಷ್ಟು ವಿಶ್ವಾಸವಿಡುವೆವೋ ಅದೇ ಮಾನದಲ್ಲಿ ಫಲದೊರೆಯುವವು.
Thursday, September 17, 2020
ಸದಾತ್ಮಧ್ಯಾನ ನಿರತಂ
ಸಂಸಾರ ಸರ್ಪದಷ್ಟಾನಾಂ ಜಂತೂನಾಮವಿವೇಕಿನಾಮ್ | ಚಂದ್ರಶೇಖರ ಪಾದಾಬ್ಜಸ್ಮರಣಂ ಪರಮೌಷಧಮ್||
ಸದಾತ್ಮ ಧ್ಯಾನ ನಿರತಂ ವಿಷಯೇಭ್ಯಃ ಪರಾಙ್ಮುಖಮ್ | ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರ ಭಾರತೀಮ್ |
श्रीमच्चन्दिरशेखरभारत्यभिधानमाश्रये यमिनम् ।
निरवधिसंसृतिनीरधिमगन्जनोद्धरणबद्धदीक्षं तम् ॥
"i take refuge in Shri Chandrashekhara Bharati, one who has his senses under his control and who is ever ready to rescue people immersed in the unbounded ocean of samsara."
Sunday, August 02, 2020
ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ
Tuesday, July 21, 2020
ಮಹಾದೇವ ಮಹಾದೇವ ಮಹಾದೇವ ದಯಾನಿಧೇ
ಪಶ್ಚಿಮೇ ಚ ವೃಷಸ್ಕಂದೌ ದೇಶಕಾಲೌ ತಥೋತ್ತರೇ ||
ಗಂಗಾ ಚ ಯಮುನಾ ಚೈವ ಪಾರ್ಶ್ವೇ ಶಂಭೋರ್ವ್ಯವಸ್ಥಿತಾಃ |
ನಮೋವ್ಯಕ್ತಾಯ ಸೂಕ್ಷ್ಮಾಯ ನಮಸ್ತೇ ತ್ರಿಪುರಾಂತಕ |
ಪೂಜಾಂ ಗೃಹಾಣ ದೇವೇಶ ಯಥಾಶಕ್ತ್ಯುಪಪಾದಿತಂ ||
ಪೂರ್ವದಿಕ್ಕಿನಲ್ಲಿ ನಂದಿ ಮತ್ತು ಮಹಾಕಾಲರೂ, ದಕ್ಷಿಣದಿಕ್ಕಿನಲ್ಲಿ ಗಣಪತಿ ಮತ್ತು ಶೃಂಗಿಯೂ, ಪಶ್ಚಿಮದಿಕ್ಕಿನಲ್ಲಿ ಬಸವನೂ ಹಾಗೂ ಷಣ್ಮುಖನೂ, ಉತ್ತರದಿಕ್ಕಿನಲ್ಲಿ ದೇಶ ಮತ್ತು ಕಾಲರೂ ಮತ್ತು ಈಶ್ವರನ ಮಗ್ಗುಲಲ್ಲಿ ಗಂಗೆ ಯಮುನೆಯರೂ ಇರುವರು. ಇಂದ್ರಿಯ ಗೋಚರನಲ್ಲದವನೂ ಸೂಕ್ಷ್ಮನೂ ಆದ ತ್ರಿಪುರಾಂತಕನೇ ನಿನಗೆ ನಮಸ್ಕಾರವು. ನನಗೆ ಯೋಗ್ಯತೆಯಿದ್ದಷ್ಟು ಮಾಡಿದ ಪೂಜೆಯನ್ನು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು.
***
ವಂದೇ ಶಂಭು ಉಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ ವಂದೇ ಪಶೂನಂ ಪತಿಂ
ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಮುಕುಂದ ಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಂ ||
***
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।।
***
ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ |
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ||
***
ಮಹಾದೇವ ಮಹಾದೇವ ಮಹಾದೇವ ದಯಾನಿಧೇ ।
ಭವಾನೇವ ಭವಾನೇವ ಭವಾನೇವ ಗತಿರ್ಮಮ ।।
***
Sunday, June 21, 2020
Thursday, June 18, 2020
ದಶಕಂ ಧರ್ಮಲಕ್ಷಣಂ
#Dharma;
Tuesday, June 16, 2020
ರಸಸಿದ್ದಾಃ
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
_ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಆ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು-ಸಾವುಗಳಿಂದಾಗುವ ಭಯವು ಇರುವುದಿಲ್ಲ._
ಭರ್ತೃಹರಿಯ ನೀತಿಶತಕದ "ವಿದ್ವತ್ಪದ್ಧತಿ" ಎನ್ನುವ ವಿಭಾಗದಲ್ಲಿ ವಿದ್ವಾಂಸರ ಸರ್ವೋತ್ತಮತ್ವವನ್ನು ತಿಳಿಸುತ್ತಾ ಈ ಶ್ಲೋಕದೊಂದಿಗೆ ಅಧ್ಯಾಯವನ್ನು ಮುಗಿಸುತ್ತಾರೆ.
Wednesday, June 03, 2020
ಸತ್ಯಂ ಶಿವಂ ಸುಂದರಂ.
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ ||
ಸ್ವಭಾವತಃ ಸುಂದರವಾದುದು ಮತ್ತು ಸುಂದರವಲ್ಲದುದ್(ಕುರೋಪವಾಗಿರುವುದು) ಎಂದು ಏನಾದರೂ ಇದೆಯೇನು ? ಯಾರಿಗೆ ಯಾವುದು ಇಷ್ಟವಾಗುತ್ತದೆಯೋ ಅವರವರಿಗೆ ಅದು ಸುಂದರ.
Saturday, May 30, 2020
ಸಪ್ತ ಹಿತ್ವಾ ಸುಖೀ ಭವ
ಏಕಯಾ ದ್ವೇ ವಿನಿಶ್ಚಿತ್ಯ
ತ್ರೀಂಶ್ಚತುರ್ಭಿರ್ವಶೇ ಕುರು |
ಪಂಚ ಜಿತ್ವಾ ವಿದಿತ್ವಾ ಷಟ್
ಸಪ್ತ ಹಿತ್ವಾ ಸುಖೀ ಭವ ||
ಒಂದರಿಂದ ಎರಡನ್ನು ನಿಶ್ಚಯಿಸಿ, ಮೂರನ್ನು ನಾಲ್ಕರಿಂದ ವಶಪಡಿಸಿಕೋ. ಐದನ್ನು ಜಯಿಸಿ ಆರನ್ನು ತಿಳಿ. ಏಳನ್ನು ಪರಿತ್ಯಾಗಮಾಡಿ ಸುಖಿಯಾಗು.
(ವಿದುರನು ಧೃತರಾಷ್ಟ್ರನಿಗೆ ಹೇಳುವುದು, ಉದ್ಯೋಗ ಪರ್ವ 33-44)
ಒಂದು = ಬುದ್ಧಿ
ಎರಡು = ವಿವೇಚನೆಗಳು - ಒಳ್ಳೆಯ ಕಾರ್ಯ, ಕೆಟ್ಟ ಕಾರ್ಯ
ಮೂರು = ಅನುಬಂಧಿಗಳು - ಶತ್ರು, ಮಿತ್ರ, ತಟಸ್ಥ
ನಾಲ್ಕು = ಚತುರೋಪಾಯಗಳು - ಸಾಮ, ದಾನ, ಭೇದ, ದಂಡ
ಐದು = ಪಂಚೇಂದ್ರಿಯಗಳು - ಚರ್ಮ, ಕಣ್ಣು, ಕಿವಿ, ನಾಲಗೆ, ಮೂಗು
ಆರು = ರಾಜನೀತಿಯ ಗುಣಗಳು - ಸಂಧಿ(ಕಪ್ಪ ಕೊಡುವುದು), ವಿಗ್ರಹ(ಪರಸ್ಪರ ಮಸೆಯುವುದು), ಯಾನ(ದಾಳಿಯ ಪಯಣ), ಆಸನ(ಎದುರಿಸಲು ಸಾಮರ್ಥ್ಯವಿಲ್ಲದೆ ನಿಲ್ಲು), ದ್ವೈಧೀಭಾವ(ದೌರ್ಬಲ್ಯದಿಂದ ಸಂಚಿನ ಸಂಧಾನ), ಸಮಾಶ್ರಯ(ಹತಾಶಭಾವದಿಂದ ಶತ್ರು ಆಶ್ರಯ)
ಏಳು = ಸಪ್ತ ವ್ಯಸನಗಳು - ಸ್ತ್ರೀ, ಜೂಜು, ಬೇಟೆ, ಮದ್ಯ, ಪರುಷವಾಕ್ಯ, ಅನ್ಯಾಯದಿಂದ ಧನಾರ್ಜನೆ ಮತ್ತು ಕಠಿನ ಶಿಕ್ಷೆ.
Friday, May 15, 2020
Monday, May 11, 2020
ಆಸೆ ಎಂಬ ಬಿಸಿಲು ಕುದುರೆ
ಆಶಾ ಬಲವತೀ ರಾಜನ್ ಶಲ್ಯೊ ಜೇಷ್ಯತಿ ಪಾಂಡವಾನ್ ।।
(ವೇಣೀ ಸಂಹಾರಂ ೫.೨೩ )
ಸಂಜಯನು ಧೃತರಾಷ್ರ್ಟನಿಗೆ ಹೇಳುತ್ತಾನೆ: " ಹೇ! ರಾಜನ್ , ಭೀಷ್ಮಾಚಾರ್ಯರ ನಂತರ ದ್ರೋಣಾಚಾರ್ಯರು ಹತರಾದ ನಂತರವೂ , ಕರ್ಣನ ಅವಸಾನವಾದಾಗ್ಯೂ, ಶಲ್ಯನು ಪಾಂಡವರನ್ನು ಜಯಿಸುತ್ತಾನೆ ಎಂಬ ಹಂಬಲ ಮುಡಿಯುತಿದೆಯಲ್ಲಾ, ದಿಟವಾಗಿ ಆಸೆ ಎಂಬುದು ಬಲವಾದ ಪಾಶವೇ ಸರಿ.
Sunday, May 10, 2020
ಶ್ರೀ ರುದ್ರಾಧ್ಯಾಯ
ವಿದ್ಯಾಸು ಶ್ರುತಿರುತ್ಕ್ರುಷ್ಠಾ ರುದ್ರೈಕಾದಶಿನೀ ಶ್ರುತೌ ।
ತತ್ರ ಪಂಚಾಕ್ಷರೀ ತಸ್ಯಾಂ ಶಿವ ಇತ್ಯಕ್ಷರದ್ವಯಂ ॥
ವಿದ್ಯೆಗಳಲ್ಲಿ ಶ್ರೇಷ್ಟವಾದದ್ದು ವೇದವಿದ್ಯೇ, ವೇದಗಳಲ್ಲಿ ಶ್ರೀ ರುದ್ರಾಧ್ಯಾಯವು ಶ್ರೇಷ್ಠ. ಅದರಲ್ಲಿ ಪಂಚಾಕ್ಷರೀ ಮಂತ್ರ, ಪಂಚಾಕ್ಷರಿಯಲ್ಲಿ "ಶಿವ" ಎಂಬ ಅಕ್ಷರದ್ವಯ.
ಯದೇಕ ಮವ್ಯಯಂ ಸಾಕ್ಷಾತ್ ಬ್ರಹ್ಮಜ್ಯೋತಿ ಸನಾತನಂ ।
ಶಿವಾತ್ಮಕಂ ಪರಂ ರುದ್ರಾಧ್ಯಾಯೇ ಪ್ರತಿಷ್ಠಿತಂ ।।
ಇದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ನಾಶರಹಿತವೂ, ಅನಾದಿಯೂ, ಶಿವಸ್ವರೂಪವೂ ಆದ ಬ್ರಹ್ಮಜ್ಯೋತಿಯೇ ರುದ್ರಾಧ್ಯಾಯದಲ್ಲಿ ಪ್ರತಿಪಾದ್ಯವಾಗಿರುವುದು.
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।।
Saturday, April 25, 2020
ನ ವೈದ್ಯಃ ಪ್ರಭುರಾಯುಷಃ
ಏತದ್ವೈದ್ಯಸ್ಯ ವೈದ್ಯತ್ವಂ ನ ವೈದ್ಯಃ ಪ್ರಭುರಾಯುಷಃ ||
ಬ್ರಹ್ಮವೈವರ್ತ ಪುರಾಣದಲ್ಲಿ ಆಯುರ್ವೇದ ಶಾಸ್ತ್ರಗಳು ಭಾರತದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸುತ್ತ, ವೈದ್ಯನೆಂದರೆ ಯಾರು? ಅವನಿಗಿರಬೇಕಾದ ಲಕ್ಷಣಗಳೇನು? ಎಂಬುದನ್ನು ತಿಳಿಸುವುದು ಈ ಶ್ಲೋಕ.
ಮೊದಲನೆಯದಾಗಿ ವೈದ್ಯರಿಗೆ ವ್ಯಾಧಿಯ ತತ್ತ್ವ, ಸ್ವರೂಪದ ತಿಳಿವಳಿಕೆ ಇರಬೇಕು. ರೋಗಿಗೆ ವ್ಯಾಧಿಯಿಂದ ಉಂಟಾಗುತ್ತಿರುವ ನೋವನ್ನು ತಡೆಯುವುದು ತಿಳಿದಿರಬೇಕು. ಇವೆರಡೂ ವೈದ್ಯನಿಗೆ ತಿಳಿದಿರಬೇಕಾದ ವೈದ್ಯತತ್ತ್ವ. ಆದರೆ, ವೈದ್ಯನು ತಾನು ಆಯುಷ್ಯವನ್ನು ನಿರ್ಧರಿಸುವ ದೇವರಲ್ಲ ಎಂಬುದೂ ಪ್ರಧಾನವಾಗಿ ತಿಳಿದಿರಬೇಕು.
(ಸಂಗ್ರಹ )
ಶಾಪಾದಪಿ ಶರಾದಪಿ
श्री परशुराम स्तोत्रम्
कराभ्यां परशुं चापं दधानं रेणुकात्मजं ।
जामदग्न्यं भजे रामं भार्गवं क्षत्रियान्तकं ॥१॥
नमामि भार्गवं रामं रेणुका चित्तनन्दनं ।
मोचितंबार्तिमुत्पातनाशनं क्षत्रनाशनम् ॥२॥
भयार्तस्वजनत्राणतत्परं धर्मतत्परम् ।
गतगर्वप्रियं शूरं जमदग्निसुतं मतम् ॥३॥
वशीकृतमहादेवं दृप्त भूप कुलान्तकम् ।
तेजस्विनं कार्तवीर्यनाशनं भवनाशनम् ॥४॥
परशुं दक्षिणे हस्ते वामे च दधतं धनुः ।
रम्यं भृगुकुलोत्तंसं घनश्यामं मनोहरम् ॥५॥
शुद्धं बुद्धं महाप्रज्ञापण्डितं रणपण्डितं ।
रामं श्रीदत्तकरुणाभाजनं विप्ररंजनम् ॥६॥
मार्गणाशोषिताभ्ध्यंशं पावनं चिरजीवनम् ।
य एतानि जपेन्द्रामनामानि स कृति भवेत् ॥७॥
इति श्री प. प. श्री वासुदेवानंदसरस्वतीविरचितं श्री परशुराम स्तोत्रं संपूर्णम्
#LORD_PARASHURAMA; #PARASHURAMA ; #PARASHURAMAJAYANTI
ಅಗ್ರತಶ್ಚತುರೋ ವೇದಾ: ಪೃಷ್ಠತ: ಸಶರಂ ಧನು: |
ಇದಂ ಬ್ರಾಹ್ಮಮಿದಂ ಕ್ಷಾತ್ತ್ರಂ ಶಾಪಾದಪಿ ಶರಾದಪಿ ||
Friday, April 24, 2020
Sunday, April 12, 2020
ಪ್ರಾರ್ಥನೆ
ರಂತಿದೇವನ ಪ್ರಾರ್ಥನೆ
ನ ಕಾಮಯೇಽಹಂ ಗತಿಮೀಶ್ವರಾತ್ಪರಾ-
ಮಷ್ಟರ್ದ್ಧಿಯುಕ್ತಾಮಪುನರ್ಭವಂ ವಾ ।
ಆರ್ತಿಂ ಪ್ರಪದ್ಯೇಽಖಿಲದೇಹಭಾಜಾ-
ಮನ್ತಃಸ್ಥಿತೋ ಯೇನ ಭವನ್ತ್ಯದುಃಖಾಃ ॥
***
ಕುಲಶೇಖರ ಅಳ್ವಾರರ ಮುಕುಂದಮಾಳ ಸ್ತೋತ್ರದಲ್ಲಿನ ಪ್ರಾರ್ಥನೆ ಇಂತಿದೆ :
ನಾಸ್ಥಾ ಧರ್ಮೇ ನ ವಾಸುನಿಚಯೇ ನೈವಾಕಾಮೋಪಭೋಗೇ।
ಯದ್ಯದ್ಭವ್ಯಮ್ ಭವತು ಭಗವನ್ ಪೂರ್ವಕರ್ಮ ನಿರೂಪಣಂ।
ಏತತ್ ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ ।
ತ್ವತ್ಪಾದಾಂಭೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು ॥
ನನಗೆ ಧರ್ಮದ ಆಚರಣೆಯಿಂದ ದೊರಕುವ ಒಳ್ಳೆಯ ಜೀವನವಾಗಲಿ, ಧನಾಗಮವಾಗಲಿ, ಜೀವಿತದಲ್ಲಿನ ಭೋಗಗಳಾಗಲಿ ನಾನು ಬೇಡುವುದಿಲ್ಲ. ಪೂರ್ವ ಕರ್ಮಗಳ ಅನುಸಾರ ನಾನು ಏನು ಪಡೆಯಬೇಕೋ ಅದು ಸಲ್ಲುತ್ತದೆ. ಆದರೇ, ಒಂದನ್ನು ಮಾತ್ರ ನಾನು ಆ ಪರಮಾತ್ಮನ ಪದ ಕಮಲಗಳಲ್ಲಿ ಬೇಡುವೆ. ಜನ್ಮ ಜನ್ಮಾಂತರ , ಯುಗ ಯುಗ ಪರ್ಯಂತ ಆ ಕ್ರಷ್ಣ ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿ ದೊರಕಲಿ ಎಂಬುದೊಂದೇ ಪ್ರಾರ್ಥನೆ.
Saturday, April 11, 2020
ವಾಕ್ಯಕೋವಿದ ಹನುಮಂತ
ಕಿಷ್ಕಿಂಧಾಕಾಂಡದಲ್ಲಿ ಮೊದಲಿಗೆ ಆಂಜನೇಯ ಸ್ವಾಮಿಯ ಸಾಕ್ಷಾತ್ಕಾರ ವಾಲ್ಮೀಕಿ ರಾಮಾಯಣದಲ್ಲಾಗುತ್ತದೆ. ಶ್ರೀ ರಾಮ ಮತ್ತು ಲಕ್ಷ್ಮಣರು ಋಷ್ಯಮೂಕ ಪರ್ವತದ ಕಡೆಗೆ ಧಾವಿಸುತ್ತಿರುತ್ತಾರೆ. ಬೆಟ್ಟದ ಮೇಲಿನಿಂದ ನೋಡಿದ ಸುಗ್ರೀವ ಮುಂತಾದ ಕಪಿನಾಯಕರು ಅವರು ಯಾರೆಂಬುದು ಅರಿಯದೆ, ಮಹಾವೀರರಂತೆ ಕಾಣುವ ಈ ಇಬ್ಬರು ರಾಜಕುಮಾರರು ವಾಲಿಯ ಕಡೆಯ ಗೂಢಚಾರರೇನೋ ಎಂಬ ಭೀತಿಗೆ ಒಳಗಾಗುತ್ತಾರೆ. ಆಗ ಸುಗ್ರೀವನು ತನ್ನ ಸಚಿವನಾದ ಮಾರುತಿಯನ್ನು ಪರಿಚಯಿಸುತ್ತಾ ವಾಲ್ಮೀಕಿ ಮಹರ್ಷಿಗಳು ಹೀಗೆಂದಿದ್ದಾರೆ: "ಉವಾಚ ಹನುಮಾನ್ ವಾಕ್ಯಂ ಸುಗ್ರೀವಂ ವಾಕ್ಯಕೋವಿದಃ" (4.2.13). ಮೊದಲಬಾರಿಗೆ ಹನುಮಂತನನ್ನು ವಾಲ್ಮೀಕಿ ಮಹರ್ಷಿಗಳು ಪರಿಚಯಿಸುವಾಗ 'ವಾಕ್ಯಕೋವಿದಃ' ಎಂದಿದ್ದಾರೆ. ಹೌದು, ಮಾರುತಿಯು ವಾಕ್ಯಕೋವಿದನೇ, ನವ ವ್ಯಾಕರಣ ಪಂಡಿತನೇ!
ವಾಲ್ಮೀಕಿ ರಾಮಾಯಣದಲ್ಲಿ ಹನುಮಂತನು ಮೊದಲ ಬಾರಿಗೆ ನುಡಿವ ವಚನವೂ ಸಹ ಸ್ವಾರಸ್ಯಪೂರ್ಣವಾಗಿದೆ. ಮಾರುತಿಯು ಸುಗ್ರೀವನನ್ನು ಉದ್ದೇಶಿಸಿ ಹೀಗೆನ್ನುತ್ತಾನೆ: "ಸಂಭ್ರಮಸ್ತ್ಯಜ್ಯತಾಂ" -- "ಈ ಭ್ರಮೆಯನ್ನು ತ್ಯಜಿಸು". ಈ ಅಭಯವಚನವನ್ನು ಭಕ್ತಾಭಯಪ್ರದಾಯಕನಾದ ಮಾರುತಿಯು ಮೊದಲಿಗೆ ನುಡಿಯುತ್ತಾನೆ: "ಈ ರಾಜಕುಮಾರರು ವಾಲಿಯ ಕಡೆಯವರು ಎಂಬ ಭ್ರಮೆಯನ್ನು ತ್ಯಜಿಸು, ವಾನರ ವೀರನೇ!" ಎಂಬುದು ಇದರ ತಾತ್ಪರ್ಯ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಶ್ರೀಮದ್ಭಗವದ್ಗೀತೆಯಲ್ಲಿ ಯೋಗೇಶ್ವರ ಶ್ರೀ ಕೃಷ್ಣನು ಮೊದಲು ನುಡಿಯುವುದು ಇದೇ ಮಾರ್ಮಿಕವಾದ ಮಾತನ್ನೇ -- "ಅಶೋಚ್ಯಾನ್ ಅನ್ವಶೋಚ್ಯಸ್ತ್ವಂ!" ಗೀತೆಯಲ್ಲಿಯೂ ಸಹ ಭಗವಂತನ ಮೊದಲ ನುಡಿ ಭ್ರಮೆಯನ್ನು, ಮೋಹವನ್ನು ತ್ಯಜಿಸುವುದರ ಕುರಿತಾಗಿ. ಹೀಗೆ ಔಚಿತ್ಯಪ್ರಜ್ಞೆಯನ್ನು ಸದಾಕಾಲ ಮೆರೆಸುವ ಹನುಮಂತ ವಾಕ್ಯಕೋವಿದ. ಎಷ್ಟೇ ಆದರೂ, "ಬುದ್ಧಿಮತಾಂ ವರಿಷ್ಠಂ" ಅಲ್ಲವೇ!
ಮಾರುತಿಯ ವಾಕ್ಯಚಮತ್ಕಾರ ಇನ್ನೂ ಬಹಳಷ್ಟು ಸನ್ನಿವೇಶಗಳಲ್ಲಿ ಅಡಕವಾಗಿವೆ. ಲಂಕೆಯಲ್ಲಿ ಸೀತಾಮಾತೆಯನ್ನು ಕಂಡು ಮತ್ತೆ ಕಿಷ್ಕಿಂಧೆಗೆ ಹಿಂದಿರುಗಿ ಕುಶಲವಾರ್ತೆಯನ್ನು ತಿಳಿಸುವ ಸಂದರ್ಭ. ಆಂಜನೇಯನು "ದೃಷ್ಟಾ ಸೀತಾ" ಎಂದು ನುಡಿಯುತ್ತಾನೆ. ಅದೇ ನುಡಿಯನ್ನು "ಸೀತಾ ದೃಷ್ಟಾ" ಎಂದು ಸಹ ಹೇಳಬಹುದಿತ್ತು. ಆದರೆ ತನ್ನ ಸ್ವಾಮಿ ಶ್ರೀರಾಮನಿಗೆ "ದೃಷ್ಟಾ" - "ಕಂಡೆನು" ಎಂಬ ಮಾತು ಕೇಳಿದ ಕೂಡಲೇ ಶಾಂತಿ ಸಮಾಧಾನ ದೊರೆಯುವುದು ಎಂದು ತಿಳಿದು, ಒಂದು ಕ್ಷಣವೂ ವ್ಯಯಿಸದೆ ಮೊದಲು "ದೃಷ್ಟಾ" ಎಂದು ನುಡಿಯುತ್ತಾನೆ ವಾಕ್ಯಕೋವಿದ ಆಂಜನೇಯ. "ಸೀತಾ ದೃಷ್ಟಾ" ಎಂದಿದ್ದರೆ, ಶ್ರೀರಾಮನು "ಸೀತೆಯು ಕಂಡಳೋ, ಕಾಣಲಿಲ್ಲವೋ?" ಎಂಬ ತಲ್ಲಣಕ್ಕೆ ಕ್ಷಣಕಾಲ ತುತ್ತಾಗಬಾರದು ಎಂದು ಯೋಚಿಸಿ "ದೃಷ್ಟಾ ಸೀತಾ" ಎಂದು ಘೋಷಿಸುತ್ತಾನೆ ಈ ವಾಕ್ಯಕೋವಿದ, ಮಹಾ ರಾಮಭಕ್ತ ಹಾಗೂ ಸಮಯ ಸ್ಫೂರ್ತಿಯ ನಿಧಿ ಮಾರುತಿರಾಯ.
ಯುದ್ಧಕಾಂಡದಲ್ಲಿ ವಿಭೀಷಣನು ಶ್ರೀರಾಮನಲ್ಲಿ ಶರಣಾಗತಿಯನ್ನು ಕೋರಿ ಬಂದಾಗ ವಾನರವೀರರೆಲ್ಲ ಶ್ರೀರಾಮನೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಆಗ ವಾಲ್ಮೀಕಿ ಮಹರ್ಷಿಯು ಹನುಮಂತನನ್ನು ಕುರಿತು ನುಡಿಯುವ ಶ್ಲೋಕ ಮಾರುತಿಯ ಗುಣಕ್ಕೆ ಹಿಡಿದ ಕೈಗನ್ನಡಿ.
"ಅಥ ಸಂಸ್ಕಾರಂ ಸಂಪನ್ನೋ ಹನುಮಾನ್ ಸಚಿವೋತ್ತಮಃ ।
ಉವಾಚ ವಚನಂ ಸ ಲಕ್ಷಣಂ ಅರ್ಥವಾನ್ಮಧುರಂ ಲಘು" ।। (೬. ೧೭. ೫೦)
ಸಂಸ್ಕಾರಯುಕ್ತ ಸಚಿವೋತ್ತಮನಾದ ಹನುಮಂತನ ವಚನವು ಸದಾಕಾಲ ಅರ್ಥವತ್ತಾಗಿ, ಮಧುರವಾಗಿ ಹಾಗೂ ಲಘುವಾಗುರುತ್ತವೆ. ನಮ್ಮ ಪಾಲಿಗೆ ಇವೆಲ್ಲವೂ ಅನುಕರಣೀಯ ಗುಣಗಳೇ! ಮಾತುಗಳು ಸದಾಕಾಲ ಅರ್ಥಗರ್ಭಿತವೂ, ಲಘುವು, ಮಧುರವೂ ಆಗಿರಬೇಕು - ಶ್ರೀರಾಮದೂತ ಹನುಮಂತನ ಹಾಗೆ.
।। ಜೈ ಶ್ರೀರಾಮ ।। ।। ಜೈ ಬಜರಂಗ ಬಲಿ।।
#Ramayana ; #MotivationQuotes
Monday, March 23, 2020
ಕಿಮದ್ಯ ಸುಕೃತಂ ಕೃತಂ
ಆಯುಷಃ ಖಂಡಮಾದಾಯ ರವಿ ರಸ್ತಂಗಮಿಷ್ಯತಿ ।।
ಪ್ರಾಜ್ಞನಾದವನು ಪ್ರತಿದಿನವೂ ತಾನು ಏನು ಸುಕೃತವನ್ನು ಮಾಡಿದಾನೆಂಬುದನ್ನು ಪರಾಮರ್ಶಿಸಬೇಕು. ಪ್ರತಿದಿನವೂ ಸೂರ್ಯನು ಮುಳುಗವಾಗ ಆಯುಷ್ಯ ವ್ಯಯವಾಗುವುದನ್ನು ಮಾರ್ಮಿಕವಾಗಿ ಸೂಚಿಸುತ್ತಿದ್ದಾನೆ.
#Motivational_Subhashita; #Motivation
Friday, March 13, 2020
सङ्गीतरत्नाकरः
नादब्रह्म तदानन्दमद्वितीयमुपास्महे॥
नादोपासनया देवा ब्रह्मविष्णुमहेश्वराः।
भवन्त्युपासिता नूनं यस्मादेते तदात्मकाः॥
(सङ्गीतरत्नाकरः १.३.१–२)
Sunday, February 09, 2020
ಮೈನಾಕ ಇವ ಮಾರ್ದವಮ್
ಚಿರಂ ಜಲನಿಧೌ ಮಗ್ನಃ ಮೈನಾಕ ಇವ ಮಾರ್ದವಮ್ ||
ಮೈನಾಕ ಪರ್ವತವು ದೀರ್ಘಕಾಲ ಸಮುದ್ರದಲ್ಲಿ ಮುಳುಗಿದ್ದರೂ ಹೇಗೆ ಮೆತ್ತಗಾಗುವುದಿಲ್ಲವೋ,
ಹಾಗೆಯೇ,
ಜನ್ಮತಃ ಕೆಟ್ಟ ಸ್ವಭಾವದವನು ಅಕಸ್ಮಾತ್ ವೇದಾಂತ ಶಾಸ್ತ್ರಗಳಲ್ಲಿ ನಿಪುಣನಾದರೂ ಸಹ,
ಅವನಲ್ಲಿದ್ದ ಕೆಟ್ಟ ಗುಣ ದೂರಾಗಿ ಒಳ್ಳೆಯವನಾಗುವ ಸಂಭವ ಅತಿ ಕಡಿಮೆ.
#Vedanta
ಸಂತೋಷಂ ಜನಯೇತ್ ಪ್ರಾಜ್ಞಃ
ತದೇವ ಈಶ್ವರಪೂಜನಮ್|
ಪ್ರಾಜ್ಞರಾದವರು ಇತರರಿಗೆ ಸಂತೋಷವುಂಟಾಗುವಂತೆ ಮಾಡತಕ್ಕದ್ದು, ಅದೇ ಈಶ್ವರಪೂಜೆ.
ತಂಡುಲಾಸ್ತತ್ರ ಕಾರಣಮ್
ಅಕಾರಣಂ ತ್ರಯೋ ವೇದಾಃ ತಂಡುಲಾಸ್ತತ್ರ ಕಾರಣಮ್ ||
(ಜಗತ್ತಿನ ವ್ಯವಹಾರವು ನಡೆಯುವುದಕ್ಕೆ) ವ್ಯಾಕರಣ ಶಾಸ್ತ್ರವು ಕಾರಣವಲ್ಲ. ವೀಣೆಯ ನಾದವೂ ಕಾರಣವಲ್ಲ. ಮೂರು ವೇದಗಳೂ ಕಾರಣವಲ್ಲ. ಅದಕ್ಕೆ ಕಾರಣವಾದದ್ದು ಅಕ್ಕಿ(ಅನ್ನ)!
ಜಗತ್ತಿನ ವ್ಯವಹಾರವು ನಡೆಯುತ್ತಿರುವುದು ಹೊಟ್ಟೆಯ ದೆಸೆಯಿಂದ. ಹೊಟ್ಟಬಟ್ಟೆಗಳ ಕಾರಣದಿಂದಾಗಿ ಅದ್ಭುತವಾದ ಜಗದ್ಯಂತ್ರವು ನಡೆಯುತ್ತಿದೆ. ಶಾಸ್ತ್ರ, ಸಂಗೀತ, ಪರಮಾರ್ಥ ವಿಚಾರಗಳೆಲ್ಲವೂ ಹೊಟ್ಟೆ ತುಂಬಿದ ಮೇಲೆಯೇ!
Thursday, January 30, 2020
श्रीवेङ्कटेश सुप्रभातम्
॥ अथ श्रीवेङ्कटेशसुप्रभातम् ॥
कौसल्या सुप्रजा राम ! पूर्वा सन्ध्या प्रवर्तते ।
उत्तिष्ठ नरशार्दूल कर्तव्यम् दैवमाह्निकम् ॥ १ ॥
उत्तिष्ठोत्तिष्ठ गोविन्द उत्तिष्ठ गरुडध्वज ।
उत्तिष्ठ कमलाकान्त त्रैलोक्यम् मङ्गलम् कुरु ॥ २ ॥
मातस्समस्तजगताम् मधुकैटभारेः
वक्षोविहारिणि मनोहरदिव्यमूर्ते ।
श्रीस्वामिनि श्रितजन-प्रियदानशीले
श्रीवेङ्कटेशदयिते तव सुप्रभातम् ॥ ३ ॥
तव सुप्रभातमरविन्दलोचने
भवतु प्रसन्न-मुखचन्द्र-मण्डले ।
विधिशङ्करेन्द्र-वनिताभिरर्चिते
वृषशैलनाथदयिते दयानिधे ॥ ४ ॥
अत्र्यादिसप्तऋषयस्समुपास्य सन्ध्याम्
आकाशसिन्धुकमलानि मनोहराणि ।
आदाय पादयुगमर्चयितुम् प्रपन्नाः
शेषाद्रिशेखरविभो तव सुप्रभातम् ॥ ५ ॥
पञ्चाननाब्जभव-षण्मुखवासवाद्याः
त्रैविक्रमादिचरितम् विबुधाः स्तुवन्ति ।
भाषापतिः पठति वासरशुद्धिमारात्
शेषाद्रिशेखरविभो तव सुप्रभातम् ॥ ६ ॥
ईषत्प्रफुल्ल-सरसीरुह-नारिकेल
-पूगद्रुमादि-सुमनोहर-पालिकानाम् ।
आवाति मन्दमनिलः सह दिव्यगन्धैः
शेषाद्रिशेखरविभो तव सुप्रभातम् ॥ ७ ॥
उन्मील्य नेत्रयुगमुत्तम-पञ्जरस्थाः
पात्रावशिष्ट-कदलीफल-पायसानि ।
भुक्त्वा सलीलमथ केलिशुकाः पठन्ति
शेषाद्रिशेखरविभो तव सुप्रभातम् ॥ ८ ॥
तन्त्रीप्रकर्षमधुरस्वनया विपञ्च्या
गायत्यनन्तचरितम् तव नारदोऽपि ।
भाषासमग्रमसकृत्करचारुरम्यम्
शेषाद्रिशेखरविभो तव सुप्रभातम् ॥ ९ ॥
भृङ्गावली च मकरन्द-रसानुविद्ध
-झङ्कारगीत-निनदैः सह सेवनाय ।
निर्यात्युपान्त-सरसी-कमलोदरेभ्यः
शेषाद्रिशेखरविभो तव सुप्रभातम् ॥ १० ॥
योषागणेन वरदध्निविमथ्यमाने
घोषालयेषु दधिमन्थनतीव्रघोषाः ।
रोषात्कलिम् विदधते ककुभश्च कुम्भाः
शेषाद्रिशेखरविभो तव सुप्रभातम् ॥ ११ ॥
पद्मेशमित्रशतपत्र-गतालिवर्गाः हर्तुम्
श्रियम् कुवलयस्य निजाङ्गलक्ष्म्या ।
भेरीनिनादमिव बिभ्रति तीव्रनादम्
शेषाद्रिशेखरविभो तव सुप्रभातम् ॥ १२ ॥
श्रीमन्नभीष्ट-वरदाखिललोक-बन्धो
श्रीश्रीनिवास-जगदेकदयैकसिन्धो ।
श्रीदेवतागृहभुजान्तर-दिव्यमूर्ते
श्रीवेङ्कटाचलपते तव सुप्रभातम् ॥ १३ ॥
श्रीस्वामिपुष्करिणिकाप्लवनिर्मलाङ्गाः
श्रेयोऽर्थिनो हर-विरिञ्चि-सनन्दनाद्याः ।
द्वारे वसन्ति वरवेत्र-हतोत्तमाङ्गाः
श्रीवेङ्कटाचलपते तव सुप्रभातम् ॥ १४ ॥
श्रीशेषशैल-गरुडाचल-वेङ्कटाद्रि
-नारायणाद्रि-वृषभाद्रि-वृषाद्रि-मुख्याम् ।
आख्याम् त्वदीय वसतेरनिशम् वदन्ति
श्रीवेङ्कटाचलपते तव सुप्रभातम् ॥ १५ ॥
सेवापराः शिवसुरेश-कृशानुधर्म
-रक्षोम्बुनाथ-पवमान-धनादिनाथाः ।
बद्धाञ्जलि-प्रविलसन्निज-शीर्षदेशाः
श्रीवेङ्कटाचलपते तव सुप्रभातम् ॥ १६ ॥
धाटीषु ते विहगराज-मृगाधिराज
-नागाधिराज-गजराज-हयाधिराजाः ।
स्वस्वाधिकार-महिमाधिकमर्थयन्ते
श्रीवेङ्कटाचलपते तव सुप्रभातम् ॥ १७ ॥
सूर्येन्दुभौम-बुधवाक्पति-काव्यसौरि
-स्वर्भानुकेतुदिविषत्परिषत्प्रधानाः ।
त्वद्दासदासचरमावधि-दासदासाः
श्रीवेङ्कटाचलपते तव सुप्रभातम् ॥ १८ ॥
त्वत्पाद-धूलिभरित-स्फुरितोत्तमाङ्गाः
स्वर्गापवर्ग-निरपेक्ष-निजान्तरङ्गाः ।
कल्पागमाकलनयाकुलताम् लभन्ते
श्रीवेङ्कटाचलपते तव सुप्रभातम् ॥ १९ ॥
त्वद्गोपुराग्रशिखराणि निरीक्षमाणाः
स्वर्गापवर्गपदवीम् परमाम् श्रयन्तः ।
मर्त्या मनुष्यभुवने मतिमाश्रयन्ते
श्रीवेङ्कटाचलपते तव सुप्रभातम् ॥ २० ॥
श्रीभूमिनायक दयादिगुणामृताब्धे
देवाधिदेव जगदेकशरण्यमूर्ते ।
श्रीमन्ननन्त गरुडादिभिरर्चिताङ्घ्रे
श्रीवेङ्कटाचलपते तव सुप्रभातम् ॥ २१ ॥
श्रीपद्मनाभ पुरुषोत्तम वासुदेव
वैकुण्ठ माधव जनार्दन चक्रपाणे ।
श्रीवत्सचिह्न शरणागतपारिजात
श्रीवेङ्कटाचलपते तव सुप्रभातम् ॥ २२ ॥
कन्दर्पदर्प हरसुन्दर दिव्यमूर्ते
कान्ताकुचाम्बुरुह कुट्मल लोलदृष्टे ।
कल्याणनिर्मलगुणाकर दिव्यकीर्ते
श्रीवेङ्कटाचलपते तव सुप्रभातम् ॥ २३ ॥
मीनाकृते कमठ कोल नृसिंह वर्णिन्
स्वामिन् परश्वथतपोधन रामचन्द्र ।
शेषांशराम यदुनन्दन कल्किरूप
श्रीवेङ्कटाचलपते तव सुप्रभातम् ॥ २४ ॥
एला लवङ्ग घनसार सुगन्धि तीर्थम्
दिव्यम् वियत्सरिति हेमघटेषु पूर्णम् ।
धृत्वाऽऽद्य वैदिक शिखामणयः प्रहृष्टाः
तिष्ठन्ति वेङ्कटपते तव सुप्रभातम् ॥ २५ ॥
भास्वानुदेति विकचानि सरोरुहाणि
संपूरयन्ति निनदैः ककुभो विहङ्गाः ।
श्रीवैष्णवास्सततमर्थित मङ्गलास्ते
धामाऽऽश्रयन्ति तव वेङ्कट सुप्रभातम् ॥ २६ ॥
ब्रह्मादयः सुरवरास्समहर्षयस्ते
सन्तस्सनन्दन मुखास्त्वथ योगिवर्याः ।
धामान्तिके तव हि मङ्गलवस्तु हस्ताः
श्रीवेङ्कटाचलपते तव सुप्रभातम् ॥ २७ ॥
लक्ष्मीनिवास निरवद्यगुणैकसिन्धो
संसारसागर समुत्तरणैकसेतो ।
वेदान्तवेद्यनिजवैभव भक्तभोग्य
श्रीवेङ्कटाचलपते तव सुप्रभातम् ॥ २८ ॥
इत्थम् वृषाचलपतेरिह सुप्रभातम्
ये मानवाः प्रतिदिनम् पठितुम् प्रवृत्ताः ।
तेषाम् प्रभातसमये स्मृतिरङ्गभाजाम्
प्रज्ञाम् परार्थसुलभाम् परमाम् प्रसूते ॥ २९ ॥
॥ इति श्रीवेङ्कटेश सुप्रभातम् ॥
Monday, December 30, 2019
ದುರ್ಜನಃ ಸಜ್ಜನೋ ಭೂಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಸ್ತ್ವನ್ಯಾನ್ ವಿಮೋಚಯೇತ್ ।।
Sunday, December 29, 2019
Sunday, December 08, 2019
ಭಾವಗ್ರಾಹೀ ಜನಾರ್ದನ
ಉಭಯೋಸ್ಸದೃಶಂ ಪುಣ್ಯಂ ಭಾವಗ್ರಾಹೀ ಜನಾರ್ದನ ॥
Monday, November 18, 2019
ಸ್ವಸ್ತಿಕ
ಸ್ವಸ್ತಿಕದ ಗೆರೆಗಳು ಮಧ್ಯ ಬಿಂದುವಿಗೆ ಸೇರುವಂತೆ ರಚಿಸಬೇಕು. ಮಧ್ಯದ ಬಿಂದುವೆ ಬ್ರಹ್ಮ ತತ್ತ್ವ.
ಧರ್ಮ ― ಸರಿಯಾದ ನಡೆವಳಿಕೆ ಯಿಂದ ಕೂಡಿದ ಧಾರ್ಮಿಕ ಆಚರಣೆ.
ಅರ್ಥ ― ಸುವ್ಯವಸ್ಥೆ, ಆರ್ಥಿಕ ದೃಢತೆ.
ಕಾಮ ― ಸಣ್ಣ ಪುಟ್ಟ, ದೊಡ್ಡ ಸಂತೋಷ ಆನಂದಗಳು.
ಮೋಕ್ಷ – ಅಹಂಕಾರವನ್ನು ಮೀರಿದ ನನ್ನ ನಿಜ ಸ್ವರೂಪದ ಅರಿವು.
ಈ ಪುರುಷಾರ್ಥಗಳ ಪ್ರತೀಕವಾದ ಗೆರೆಗಳು.
ಸಾಲೋಕ್ಯ ― ಇಷ್ಟ ದೈವದ ಲೋಕ ಪ್ರಾಪ್ತಿ.
ಸಾರೂಪ್ಯ ― ಇಷ್ಟ ದೈವದ ರೂಪ.
ಸಾಮೀಪ್ಯ ― ಇಷ್ಟ ದೈವದ ಅತಿ ಸಮೀಪ ಸೇವೆ, ಸಂಪರ್ಕ.
ಸಾಯುಜ್ಯ ― ಇಷ್ಟ ದೈವದಲ್ಲಿಯೇ, ಉಪ್ಪು ನೀರಿನಲ್ಲಿ ಕರಗಿ ಬಿಡುವಂತೆ ಸೇರ್ಪಡೆ. ದೈವವು ಒಂದು ಶಕ್ತಿಯೂ ಆಗಿರುವುದರಿಂದ, ಆ ಶಕ್ತಿ ಬಿಟ್ಟರೆ ನನ್ನ ಅಸ್ತಿತ್ವ ಇಲ್ಲ. ಹಾಗಾಗಿ ಅತ್ಯುನ್ನತ ಭಕ್ತಿಯಿಂದ ಸಾಯುಜ್ಯ ಮುಕ್ತಿ ದೊರಕುತ್ತದೆ.
ಮನೋ ಬುದ್ಧಿ ಚಿತ್ತ ಅಹಂಕಾರ ಅನ್ನುವ ಗೆರೆಗಳು.
ಪ್ರೇಮ , ಶ್ರದ್ಧಾ , ವಿಶ್ವಾಸ , ಸಮರ್ಪಣೆ ಅನ್ನುವ ಬಿಂದುಗಳು.
ಎಲ್ಲವೂ ಸೇರಿದರೆ ಸ್ವಸ್ತಿಕ. ಸುಂದರ ವ್ಯಾಖ್ಯಾನ. ತಿಳಿಸಿಕೊಟ್ಟಿರುವ ಮಹಾ ತಾಯಿಗೆ ವಂದನೆಗಳು.
ಮಾ ಲಿಖ ಮಾ ಲಿಖ ಮಾ ಲಿಖ
ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ ||
Tuesday, November 12, 2019
Tuesday, October 29, 2019
Thursday, October 03, 2019
Monday, September 30, 2019
ಶ್ರೀ ಕೃಷ್ಣ ಬೋಧಾಮೃತಸಾರ
Monday, September 23, 2019
संस्कृतिम्
स्वदेशं ये च शंसन्ति धन्यं जीवन्ति ते नराः ।।
Monday, August 19, 2019
Friday, August 16, 2019
Wednesday, July 17, 2019
ಆತ್ಮ ವಿದ್ಯಾ ವಿಲಾಸ
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥
ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.