Thursday, May 29, 2008

ಮುಕ್ತಿ


ವಿರಕ್ತಿಯಲ್ಲಿಲ್ಲ ಎನಗೆ ವಿಮುಕ್ತಿ ಭಾವನ.
ನನ್ನನ್ನಪ್ಪಿದ
ಸಹಸ್ರ ಮಧುರ ಬಂಧಗಳಲಿ
ನಾ ಕಾಣುತಿರಲು
ಬಿಡುಗಡೆಯ ಆಲಿಂಗನ.

***

ರಬೀಂದ್ರನಾಥರ ಈ ಕೆಳಗಿನ ಉಕ್ತಿಯ ಭಾವಾನುವಾದ:

Deliverance is not for me in renunciation.I feel the embrace of freedom in a thousand bonds of delight.

- Rabindranath Tagore, Geetanjali 73.

Tuesday, May 27, 2008

ಬಯಲಾಟದಿಂದ ಬಾಲಿವುಡ್ ವರೆಗೆ

ಚೈತ್ರ ಶುದ್ಧ ಹುಣ್ಣಿಮೆಯಂದು ಹೊಸಕೋಟೆಯಲ್ಲಿ ಅದ್ಧೂರಿ ಕರಗ ಮಹೋತ್ಸವ ನಡೆಯಿತು. ಬೆಳಗಿನ ಸಮಯ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನೆರವೇರಿತು. ಸಾಂಪ್ರದಾಯಿಕವಾಗಿ ತೇರು ಎಳೆದು, ಸುತ್ತ ಹತ್ತು ಹಳ್ಳಿಗಳಿಂದ ಬಂದವರೆಲ್ಲ ಸೇರಿ ಭಕ್ತಿ ಉತ್ಸಾಹ ಮೆರೆದರು. ಮದ್ಯ ರಾತ್ರಿ ಕಳೆದ ಮೇಲೆ ಮುಖ್ಯ ಬೀದಿಗಳಲ್ಲಿ ಕರಗ ಬಂದಿದ್ದಾಗಲಿ, ಕರಗದ ಹಿಂದೆ ನಡೆದ ವೀರಗಾರರ ಪೌರುಷವನ್ನಾಗಲಿ, ಮುಂಜಾವಿನಲ್ಲಿ ತಂಡೋಪ ತಂಡವಾಗಿ ಮೆರವಣಿಗೆ ಬಂದ ಅಲಂಕೃತ ಹೂವಿನ ಪಲ್ಲಕ್ಕಿಗಳ ಬಗ್ಗೆ ಯಾಗಲಿ ನಾನು ಹೇಳ ಹೊರಟಿಲ್ಲ. ಇವೆಲ್ಲ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕರಗವಾದ ಮರುದಿನ ಪ್ರತಿ ವರ್ಷವೂ ಸಚಿತ್ರವಾಗಿ ಪ್ರಕಟವಾಗುತ್ತದೆ. ಆದರೆ ಈ ಬಾರಿ ನಾನು ಕಂಡ (ನನಗೆ) ಸೋಗಿಗವೆನಿದ ದೃಷ್ಯವನ್ನು ಹಂಚಿಕೊಳ್ಳುತ್ತೇನೆ. ಕರಗ ಮಹೋತ್ಸವವೆಂದರೆ ತಾಲ್ಲೂಕಿನಲ್ಲಿನ ಮುನ್ನೂರಕ್ಕು ಹೆಚ್ಚು ಹಳ್ಳಿಗಳಲ್ಲಿ ಸಂಭ್ರಮವಂತೆ. ಒಂದು ತಾಲ್ಲೂಕಿನಲ್ಲಿ ಸರಿ ಸುಮಾರು ಮುನ್ನೂರು ಹಳ್ಳಿಗಳ್ಳಿರುತ್ತವೆ -- ಎಂಬ ವಿಷಯವೂ ನನ್ನ ಊಹೆಗೆ ಮೀರಿದ್ದರಿಂದ ಅಲ್ಲಿ ನೆರೆದಿದ್ದ ಜನರ ಸಂಖ್ಯೆ ನನ್ನನ್ನ ಚಕಿತನನ್ನಗಿಸಿತ್ತು. ಜಾತ್ರೆಯಲ್ಲಿ ಎದ್ದಿದ್ದ ಸಾಲು ಮಳಿಗೆಗಳ ಮೇಲೆ ಕಣ್ಣು ಹಾಯಿಸಿದೆ. ಬೆಂಡು - ಬತ್ತಾಸು ಅಂಗಡಿಗಳು , ಹೆಂಗೆಳೆಯರಿಗೆ ಓಲೆ - ಝುಮುಕಿ ಸ್ಟಾಲ್ ಗಳು , ಗೃಹೋಪಯೋಗಿ ಬಳಕೆಯೆ ಪಾತ್ರೆ - ಚಂಬುಗಳ ಅಂಗಡಿಗಳು ಇತ್ಯಾದಿಗಳಿ ಸಾಲು ಸಾಲಾಗಿ ಇದ್ದವು. ಅಂಗಡಿ ಸಾಲುಗಳಲ್ಲಿ ಹೊಸತಾದ ಬಾಲಿವುಡ್ ಸಿನೇಮಾಗಳ ಡಿ.ವೀ.ಡಿ ಗಳ ಮಳಿಗೆಗಳು ನನ್ನ ಕಣ್ಣಿಗೆ ಬಿದ್ದವು. ಹಳ್ಳಿ ಜಾತ್ರೆಯಲ್ಲಿ ಯಾರು ಈ ಡಿ.ವಿ.ಡಿ ಗಳನ್ನು ಕೊಳ್ಳುವರು ಎಂದು ಕುತೂಹಲದಿಂದ ನಿಂದಿದ್ದ ನನ್ನ ಮುಂದೆ, ಗ್ರಾಮ್ಯನಂತೆ ಕಾಣುವ ಒಬ್ಬ ಮಧ್ಯ ವಯಸ್ಕ ಬಂದು ಖರೀದಿಸಿ ಹೋದ. ಅಂದು ರಾತ್ರಿ ಹತ್ತು ಘಂಟೆ ಕಳೆದ ಮೇಲೆ ಅಲ್ಲೆ ಬಯಲುನಾಟಕ ನೋಡಿದೆ. ಕೆಲ ಮೈಲಿಗಳ ದೂರದಲ್ಲಿ ಕಿವಿ ಕಿತ್ತು ಹೋಗುವಷ್ಟು ಜೋರಾಗಿ ಆರ್ಕೇಸ್ಟ್ರಾ ಸಾಗಿತ್ತು. ಈ ದಿನ ನಮ್ಮ ಮುಂದೆ ಇರುವ ಮನೋರಂಜನೆಯ ಮಧ್ಯಾಮಗಳು, ಚಾಯಿಸಸ್ ಬಗ್ಗೆ ಯೋಚನಾ ಲಹರಿ ಹರಿಯಿತು. ಹತ್ತು ಕಳೆದ ಮೇಲೆ ಬಯಲಾಟ ನೋಡುವವನೊಬ್ಬ ಬಾಲಿವುಡ್ ನ ಧೂಮ್ - ೨ ಡಿ.ವಿ.ಡಿ ಕೊಂಡ ನೆಂದರೆ, ಅವನ ಮನೆಯಲ್ಲಿ ಕನಿಷ್ಟ ಪಕ್ಷ ಒಂದು ಡಿ.ವಿ.ಡಿ. ಪ್ಲೈಯರ್ ಇರಲೇ ಬೇಕು. ಹಲವಾರು ಸೀ.ಡಿ ಗಳನ್ನು ಶೋಧಿಸಿ ಇದೇ ಸೀ.ಡಿ. ಖರೀದಿಸಿದನೆಂದರೆ ಅವನ ಬಾಲಿವುಡ್ ಬಗೆಗಿನ ಅವೇರ್ನೆಸ್ಸ್ ಬಗ್ಗೆ ನಾನು ಹೇಳಲೇ ಬೇಕಾಗಿಲ್ಲ. ಗ್ರಾಹಕ ವಿಙ್ನಾನ (Consumer Pshycology) ಬಲ್ಲವರು ಈ ಬಯಲಾಟದಿಂದ ಬಾಲಿವುಡ ವರೆಗಿನ ಪಯಣವನ್ನು ಅಧ್ಯಯನ ಮಾಡಲೇ ಬೇಕು ಅಲ್ಲವೇ? ಅವರೊಂದಿಗೆ ಬಹುಷಃ Music Piracy Industry ಬಗ್ಗೆ ಕಾಳಜಿ ಇರುವವರು ಸಹಾ ಅಧ್ಯಯನದಲ್ಲಿ ಶಾಮೀಲಾಗಬಹುದೇನೊ!