Saturday, April 19, 2008

ಚಕಮಕಿ

ನೀ ಕೇಳಿದ್ದು ಪ್ರಶ್ನೆಗಳೆಂದು ತಿಳಿಯಲೇ ಇಲ್ಲವಯ್ಯ ನನ್ನೋಡೆಯ,
ಈಗ ಪರೀಕ್ಷೆಯು ಮುಗಿಯಿತೆಂದು ಹೇಳುವುದು ನಿನಗೆ ತರವೇ?
ಪರಕಿಸುವ ತೇದಿ ತಿಳಿದರೂ ನಾ
ತೇರ್ಗಡೆಯಾಗುವುದು ಅಷ್ಟಕ್ಕಷ್ಟೆ!
ಹೀಗಿರಲು ಹಟ್ಠಾತ್ತನೆ ಹೀಗೆ,
ತಿಳಿಯದೆಲೆ ನಾನು ತೂಕಡಿಸುತಿರುವಾಗ
ನನ್ನ ಬಲಾಬಲಗಳನು ತೂಗಿ,
ಮುಂದಿನ ತರಗತಿಗೆ ನನ್ನ ತಳ್ಳಿಯೂ ಹಾಕಿರಲು,
ಉತ್ತೀರ್ಣನಾದರೂ ನಾ ಹೇಗಾದರೂ ತಡೆದು ಕೊಳ್ಳಲಿ
ಈ ಚಕಮಕಿ.
ಇನ್ನು ಮುಂದೆ ಸಜ್ಜಾಗುವ ಗೋಜಿಗೆ ಹೋಗುವುದೇ ಇಲ್ಲ ಬಿಡು.
ಎಷ್ಟೆ ಆದರೂ ಇದ್ದೆ ಇದೆಯಲ್ಲ,
’ ಆದದ್ದೆಲ್ಲ ಒಳ್ಳೆಯದಕ್ಕೆ!’
- ಅನ್ನುವ ದಾಸರ ಸಮಜಾಯಿಷಿ, ಕುಂಟು
ನೆಪ, ಸಾಂತ್ವನ ಇತ್ಯಾದಿ ಇತ್ಯಾದಿ.
ಮತ್ತೆ,
ಇನ್ನೆಂದು ಹೂಡಿರುವೆ ತುರ್ತು ತಬ್ಬಿದ
ನಿನ್ನಯ ಧಿಡೀರ್ ಪರೀಕ್ಷೆ.......?


Friday, April 18, 2008

ವಸುಂಧರೆಗೆ ಚಂದ್ರಾನುಲೋಮಧರಣಿ ದೇವಿ ಕುದಿಯುತ್ತಿದ್ದಾಳೆ. ಜಾಗತೀಕ ತಾಪಮಾನ ನಾಗಾಲೋಟದಿಂದ ಬೆಳೆಯುತ್ತಿದ್ದಂತೆಲ್ಲಾ ಪರಿಸರಪರ ಕಾಳಜಿಯುಳ್ಳ ನೇತಾರರು ಉಶ್ಣಾಂಶವನ್ನು ಹಿಡಿತದಲ್ಲಿ ಇಟ್ಟುಕೊಳ್ಳ ಬೇಕೆಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ.ಯಾರು ಎಷ್ಟು ಕೂಗಾಡಿದರೂ, ವಿಶಾನಲಗಳನ್ನು ಉಗುಳಿ ಬುಗಿಲಿಕ್ಕುವ ಹವಾನಿಯಂತ್ರಕಗಳು ಮನೆಗಳಲ್ಲಿ, ಕಚೇರಿಗಳ್ಲ್ಲಿ ನಿಂತಿಲ್ಲ. ಕಾರ್ಖಾನೆಗಳು ಎಂದಿಗಿಂತಲೂ ಹೆಚ್ಚು ಮಾಲಿನ್ಯದ ಮಹಾತಾಂಡವ ಮೂಡಿಸಿ, ಆರ್ಭಟದ ಅಟ್ಟಹಾಸ ಮೆರೆದಿವೆ. ಕಟುವೆನಿಸಿದರೂ ನಿಜವೇ ಆಗಿರುವ ಒಂದು ವಿಶಯ ನಿಮ್ಮ ಮುಂದಿಡುತ್ತಿದ್ದೇನೆ.ವಿನಾಶದ ಜಗತ್ಪ್ರಳಯದತ್ತ ಕರೆದೋಯ್ಯುತಿರುವ ಈ ಉಷ್ಣಾಂಶದ ಏರಿಕೆಯನು (Global Warming) ಸಕಾಲದಲ್ಲಿ -- ಅಂದರೆ ಉತ್ತರಧೃವದ ಹಿಮಪರ್ವತಗಳು ಕರಗಿ ಭೂದೇವಿಯ ಜಲಪ್ರಳಯವಾಗುವಷ್ಟರಲ್ಲಿ ಅಂತರಾಷ್ರೀಯಸಮುದಾಯಕ್ಕೆನಿಗ್ರ್ಹಿಹಿಸಲು ಸಾದ್ಯವಾಗುವುದಿಲ್ಲ. ಆರ್ಕ್ಟಿಕ್ ಮಹಾಸಾಗರ ( Arctic Ocean) ಕಳೆದ ಸಾಲು ದಾಖಲೆಯ ಕರಗುವಿಕೆ ಅನುಭವಿಸಿದೆ. ಹಿಂದಿನ ಸಂಶೋದಕರು ನೀಡಿದ ಅಂಕಿ ಅಂಶಗಳನ್ನು ಅಲ್ಲಗೊಳಿಸುವಷ್ಟು ವೇಗದಲ್ಲಿ ,ಅಂದರೆ -- ಸರಿ ಸುಮಾರು ೨೦೧೪ ಸಂವತ್ಸರದೊಳಗೆ ಉತ್ತರಧ್ರುವವು ಮಂಜು ರಹಿತವಾಗಬಹುದಂತೆ. ಊಹೆಗಿಂತ ದಶಕಗಳ ಮೊದಲೇ ಉತ್ತರಧ್ರುವ ತುಹಿನ ರಹಿತವಾಗುವ ಕರಾಳ ದೃಷ್ಯಗಳು ನಮ್ಮ ಮೂಗಿನ ಮುಂದೆಯೇ ಇದ್ದರೂ ಲೋಕವೆಲ್ಲವೂ ಲೋಕಾಭಿರಾಮವಾಗಿ ಕಾಲ್ಚಾಚಿ ಮೋಜಿನಿಂದಿದೆ.

ಸರಿ, ಇಂತಿರಲು ಜಗಜ್ಜನತೆಯು ಯವ-ತಿಲಗಳನ್ನು ಹಿಡಿದು ಭೂದೇವಿಗೆ ತರ್ಪಣವೀಯ್ಯಲು ಸಿದ್ಧರಾಗ ಬೇಕೆ? ಇಲ್ಲವೆನ್ನುತ್ತಾರೆ ಕೆಲ ಸಂಶೋದಕರು. ಭೂಮಿಯ ಮೈಜ್ವರವನ್ನು ತಡೆಯಲಾಗದ್ದಿದ್ದರೇನು, ಭೂಮಿಗೆ ಶೀತ ಹಿಡಿಸ ಹೊರಟ್ಟಿದ್ದಾರೆ ಈ ಮಹನೀಯರು. ಇವರ ವಾದ ತೀರ ಸಿಂಪಲ್ . ಏರುವ ದಗೆಯನ್ನು ತಡೆಯಾಲಾಗಲಿಲ್ಲ. ಹಾಗಾದರೆ ಭೂಗರ್ಭವನ್ನೇ ತಂಪು ಮಾಡಿಬಿಡೋಣ. ಭೂಮಿಗೆ ಶೀತ ಹಿಡಿಸುವುದು ಹೇಗೆ? ಉಪಾಯವಿದೆ. ಕಲವೊಮ್ಮೆ ಹಸ್ಯಾಸ್ಪದವೆಂದೂ, ಐಂದ್ರಜಾಲೀಯವೆಂದೂ ಅನಿಸಿದರೂ ವಾಸ್ತವವಾಗಿ ಮಾಡಿಯೂ ತೀರ ಬಹುದಾಗಿದೆ. ೨೦೦೬ ಸಾಲಿನ ನೋಬೆಲ್ ಸಂಶೋದಕ ಪಾಲ್ ಕೃಟ್ ಜೆನ್ (Paul Crutzen) ಅವರ ಲೇಖನಗಳಲ್ಲಿ ಭೂಗೋಳ ವಿಙ್ನಾನದ (Geo Engineering) ಪ್ರಾಮುಖ್ಯತೆಯನ್ನು ಪ್ರಚಲಿತ ಸಂಧರ್ಭದಲ್ಲಿ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮುದ್ರದ ತಳಕ್ಕೆ ಉಕ್ಕು - ಸುತುವಿನ ಲೇಪ ಸಿಂಪಡಿಸಿ ಇಂಗಾಲವನ್ನು ಹೀರುವಂತೆ ಮಾಡುವುದರಿಂದ ಹಿಡಿದು, ಅಂತರಿಕ್ಷದಲ್ಲಿ ಗಂಧಕದ ರಸಾನಲಗಳನ್ನು ಪ್ರೋಕ್ಷಿಸಿ, ರಾಸಾಯನಿಕ ವ್ಯೂಹ ನಿರ್ಮಿಸಿ ,ಸೂರ್ಯ ಕಿರಣಗಳು ಪ್ರಖರವಾಗಿ ಭುದೇವಿಯನ್ನು ಸೋಕದಂತೆ ನೋಡಿಕೊಳ್ಳುವುದರ ವರೆಗೂ ಭೂಮಿಗೆ ಸೀತ ಹಿಡಿಸಬಹುದು. ಮನೆಗಳ ಮೇಲ್ಚಾವಣಿಗೆ ಬಿಳಿ ಬಣ್ಣ ಪೈಂಟ್ ಮಾಡಿಸಿದರೂ ಭೂಮಿ ತಂಪಾಗುತ್ತದೆ. ಮತ್ತೊಂದು ಸೈನ್ಸ್ ಫಿಕ್ಷನ್ ಅನಿಸುವ ವಿಧಾನದಲ್ಲಿ, ನಕ್ಷತ್ರ ಮಂಡಲದಲ್ಲಿ (Orbitals) ಕನ್ನಡಿಗಳನ್ನು ವಿಶೇಷ ಕೋನಗಳಲ್ಲಿ ಅಳವಡಿಸಿದರೆ, ಕಿರಣಗಳು ಭೂಮಿಯ ಒಳಗೆ ಪವೇಶಿಸದೆ ತಣ್ಣಗಿಡಬಹುದಂತೆ. ಅಂತೂ ವರಾಹಾವತಾರದಲ್ಲಿ ಮಹಾವಿಷ್ಣುವು ಭೂದೇವಿಯನ್ನು ತನ್ನ ಕೋರೆದಾಡೆಗಳಿಂದ ಮೇಲ್ಹಿಡಿದು ರಕ್ಷಿಸಿದ ಹಾಗೆ ಅವತರಿಸಿ ಈ ದಿನವೂ ವಸುಂಧರೆಗೆ ಚಂದ್ರಾನುಲೋಮ ಮಾಡಿಸಬೇಕಿದೆ.Picture Courtesy : http://www.lib.uchicago.edu/e/su/southasia/varaha.jpg

Related Article:
TIME Magazine; March 24, 2008; 10 Ideas that are changing the world.
Geo Engineering - Messing with nature caused Global Warming.Messing with it more might fix it.