Saturday, April 25, 2020

ನ ವೈದ್ಯಃ ಪ್ರಭುರಾಯುಷಃ

ವ್ಯಾಧೇಸ್ತತ್ತ್ವ ಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ |
ಏತದ್ವೈದ್ಯಸ್ಯ ವೈದ್ಯತ್ವಂ ನ ವೈದ್ಯಃ ಪ್ರಭುರಾಯುಷಃ ||

ಬ್ರಹ್ಮವೈವರ್ತ ಪುರಾಣದಲ್ಲಿ ಆಯುರ್ವೇದ ಶಾಸ್ತ್ರಗಳು ಭಾರತದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸುತ್ತ, ವೈದ್ಯನೆಂದರೆ ಯಾರು? ಅವನಿಗಿರಬೇಕಾದ ಲಕ್ಷಣಗಳೇನು? ಎಂಬುದನ್ನು ತಿಳಿಸುವುದು ಈ ಶ್ಲೋಕ.

ಮೊದಲನೆಯದಾಗಿ ವೈದ್ಯರಿಗೆ ವ್ಯಾಧಿಯ ತತ್ತ್ವ, ಸ್ವರೂಪದ ತಿಳಿವಳಿಕೆ ಇರಬೇಕು. ರೋಗಿಗೆ ವ್ಯಾಧಿಯಿಂದ ಉಂಟಾಗುತ್ತಿರುವ ನೋವನ್ನು ತಡೆಯುವುದು ತಿಳಿದಿರಬೇಕು. ಇವೆರಡೂ ವೈದ್ಯನಿಗೆ ತಿಳಿದಿರಬೇಕಾದ ವೈದ್ಯತತ್ತ್ವ. ಆದರೆ, ವೈದ್ಯನು ತಾನು ಆಯುಷ್ಯವನ್ನು ನಿರ್ಧರಿಸುವ ದೇವರಲ್ಲ ಎಂಬುದೂ ಪ್ರಧಾನವಾಗಿ ತಿಳಿದಿರಬೇಕು.

(ಸಂಗ್ರಹ )

ಶಾಪಾದಪಿ ಶರಾದಪಿ
श्री परशुराम स्तोत्रम् 

कराभ्यां परशुं चापं दधानं रेणुकात्मजं ।
जामदग्न्यं भजे रामं भार्गवं क्षत्रियान्तकं ॥१॥

नमामि भार्गवं रामं रेणुका चित्तनन्दनं ।
मोचितंबार्तिमुत्पातनाशनं क्षत्रनाशनम् ॥२॥

भयार्तस्वजनत्राणतत्परं धर्मतत्परम् ।
गतगर्वप्रियं शूरं जमदग्निसुतं मतम् ॥३॥

वशीकृतमहादेवं दृप्त भूप कुलान्तकम् ।
तेजस्विनं कार्तवीर्यनाशनं भवनाशनम् ॥४॥

परशुं दक्षिणे हस्ते वामे च दधतं धनुः ।
रम्यं भृगुकुलोत्तंसं घनश्यामं मनोहरम् ॥५॥

शुद्धं बुद्धं महाप्रज्ञापण्डितं रणपण्डितं ।
रामं श्रीदत्तकरुणाभाजनं विप्ररंजनम् ॥६॥

मार्गणाशोषिताभ्ध्यंशं पावनं चिरजीवनम् ।
य एतानि जपेन्द्रामनामानि स कृति भवेत् ॥७॥

इति श्री प. प. श्री वासुदेवानंदसरस्वतीविरचितं श्री परशुराम स्तोत्रं संपूर्णम्

#LORD_PARASHURAMA; #PARASHURAMA ; #PARASHURAMAJAYANTI


ಅಗ್ರತಶ್ಚತುರೋ ವೇದಾ: ಪೃಷ್ಠತ: ಸಶರಂ ಧನು: |
ಇದಂ ಬ್ರಾಹ್ಮಮಿದಂ ಕ್ಷಾತ್ತ್ರಂ ಶಾಪಾದಪಿ ಶರಾದಪಿ ||


Friday, April 24, 2020

ಗುರುವಾಯೂರಪ್ಪ ಕೃಷ್ಣ ಗುರುವಾಯೂರಪ್ಪ
ಗುರುವಾಯೂರಪ್ಪ ಕೃಷ್ಣ ಗುರುವಾಯೂರಪ್ಪ
ಕುಂಚಿತಪಾದ ಕುವಲಯ ನಯನ ಗುರುವಾಯೂರಪ್ಪ
ರಾಮ ಕೃಷ್ಣಾ ಗೋವಿಂದಾ ಹರಿ ಗುರುವಾಯೂರಪ್ಪ
ಕೃಷ್ಣಾ ರಾಮ ಗೋವಿಂದಾ ಹರಿ ಗುರುವಾಯೂರಪ್ಪ
ಅಚ್ಯುತ ಕೇಶವ ಹರಿ ನಾರಾಯಣ ಗುರುವಾಯೂರಪ್ಪ
ಮಾಧವ ಮುರಹರ ಮುರಳಿ ಮನೋಹರ ಗುರುವಾಯೂರಪ್ಪ
ಪಂಕಜ ನೇತ್ರ ಪರಮಪವಿತ್ರಾ ಗುರುವಾಯೂರಪ್ಪ
ಪಾಂಡುರಂಗ ಪಂಢರಿನಾಥಾ ಗುರುವಾಯೂರಪ್ಪ

Sunday, April 12, 2020

ಪ್ರಾರ್ಥನೆರಂತಿದೇವನ ಪ್ರಾರ್ಥನೆ

ನ ಕಾಮಯೇಽಹಂ ಗತಿಮೀಶ್ವರಾತ್ಪರಾ-
ಮಷ್ಟರ್ದ್ಧಿಯುಕ್ತಾಮಪುನರ್ಭವಂ ವಾ ।
ಆರ್ತಿಂ ಪ್ರಪದ್ಯೇಽಖಿಲದೇಹಭಾಜಾ-
ಮನ್ತಃಸ್ಥಿತೋ ಯೇನ ಭವನ್ತ್ಯದುಃಖಾಃ ॥

***

ಕುಲಶೇಖರ ಅಳ್ವಾರರ ಮುಕುಂದಮಾಳ ಸ್ತೋತ್ರದಲ್ಲಿನ ಪ್ರಾರ್ಥನೆ ಇಂತಿದೆ :

ನಾಸ್ಥಾ ಧರ್ಮೇ ನ ವಾಸುನಿಚಯೇ ನೈವಾಕಾಮೋಪಭೋಗೇ।
ಯದ್ಯದ್ಭವ್ಯಮ್ ಭವತು ಭಗವನ್ ಪೂರ್ವಕರ್ಮ ನಿರೂಪಣಂ।
ಏತತ್ ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ ।
ತ್ವತ್ಪಾದಾಂಭೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು ॥

ನನಗೆ ಧರ್ಮದ ಆಚರಣೆಯಿಂದ ದೊರಕುವ ಒಳ್ಳೆಯ ಜೀವನವಾಗಲಿ, ಧನಾಗಮವಾಗಲಿ, ಜೀವಿತದಲ್ಲಿನ ಭೋಗಗಳಾಗಲಿ ನಾನು ಬೇಡುವುದಿಲ್ಲ.  ಪೂರ್ವ ಕರ್ಮಗಳ ಅನುಸಾರ ನಾನು ಏನು ಪಡೆಯಬೇಕೋ ಅದು ಸಲ್ಲುತ್ತದೆ. ಆದರೇ, ಒಂದನ್ನು ಮಾತ್ರ ನಾನು ಆ ಪರಮಾತ್ಮನ ಪದ ಕಮಲಗಳಲ್ಲಿ ಬೇಡುವೆ. ಜನ್ಮ ಜನ್ಮಾಂತರ , ಯುಗ ಯುಗ ಪರ್ಯಂತ ಆ ಕ್ರಷ್ಣ ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿ ದೊರಕಲಿ ಎಂಬುದೊಂದೇ ಪ್ರಾರ್ಥನೆ. 

Saturday, April 11, 2020

ವಾಕ್ಯಕೋವಿದ ಹನುಮಂತ

ಮಹಾಕವಿ ವಾಲ್ಮೀಕಿ ಮಹರ್ಷಿಗಳ ಕಾವ್ಯರಚನಾ ನೈಪುಣ್ಯ ಸರ್ವವಿದಿತವೇ ಆಗಿದೆ.  ಮಹರ್ಷಿಗಳ ಋಷಿದರ್ಶನ ಹಾಗೂ ಕಾಣ್ಕೆಗಳು ಮಹಾಕಾವ್ಯದ ಉದ್ದಗಲಕ್ಕೂ ಶೋಭಿಸುತ್ತವೆ. ರಾಮಾಯಣದ ಪಾತ್ರಪ್ರಪಂಚವೂ ನಿತ್ಯನೂತನವಾಗಿವೆ. ಶ್ರೀಮದ್ರಾಮಾಯಣದಲ್ಲಿ ಪಾತ್ರ ಪರಿಚಯವನ್ನೇ ನೋಡೋಣ. ಸ್ವಾರಸ್ಯವೂ, ಔಚಿತ್ಯಪೂರ್ಣವೂ ಆಗಿರುವ ಪಾತ್ರಪರಿಚಯ ಕಾವ್ಯ ರೀತ್ಯ ಅನುಕರಣೀಯವಾಗಿದೆ. ಕಿಷ್ಕಿಂಧಾಕಾಂಡದಲ್ಲಿ ಆಂಜನೇಯ ಸ್ವಾಮಿಯ ಪರಿಚಯದ ಸನ್ನಿವೇಶವನ್ನೇ ಗಮನಿಸೋಣ.

ಕಿಷ್ಕಿಂಧಾಕಾಂಡದಲ್ಲಿ ಮೊದಲಿಗೆ ಆಂಜನೇಯ ಸ್ವಾಮಿಯ ಸಾಕ್ಷಾತ್ಕಾರ ವಾಲ್ಮೀಕಿ ರಾಮಾಯಣದಲ್ಲಾಗುತ್ತದೆ. ಶ್ರೀ ರಾಮ ಮತ್ತು ಲಕ್ಷ್ಮಣರು ಋಷ್ಯಮೂಕ ಪರ್ವತದ ಕಡೆಗೆ ಧಾವಿಸುತ್ತಿರುತ್ತಾರೆ. ಬೆಟ್ಟದ ಮೇಲಿನಿಂದ ನೋಡಿದ ಸುಗ್ರೀವ ಮುಂತಾದ ಕಪಿನಾಯಕರು ಅವರು ಯಾರೆಂಬುದು ಅರಿಯದೆ, ಮಹಾವೀರರಂತೆ ಕಾಣುವ ಈ ಇಬ್ಬರು ರಾಜಕುಮಾರರು ವಾಲಿಯ ಕಡೆಯ ಗೂಢಚಾರರೇನೋ ಎಂಬ ಭೀತಿಗೆ ಒಳಗಾಗುತ್ತಾರೆ. ಆಗ ಸುಗ್ರೀವನು ತನ್ನ ಸಚಿವನಾದ ಮಾರುತಿಯನ್ನು ಪರಿಚಯಿಸುತ್ತಾ ವಾಲ್ಮೀಕಿ ಮಹರ್ಷಿಗಳು ಹೀಗೆಂದಿದ್ದಾರೆ:  "ಉವಾಚ ಹನುಮಾನ್ ವಾಕ್ಯಂ ಸುಗ್ರೀವಂ ವಾಕ್ಯಕೋವಿದಃ" (4.2.13). ಮೊದಲಬಾರಿಗೆ ಹನುಮಂತನನ್ನು ವಾಲ್ಮೀಕಿ ಮಹರ್ಷಿಗಳು ಪರಿಚಯಿಸುವಾಗ 'ವಾಕ್ಯಕೋವಿದಃ' ಎಂದಿದ್ದಾರೆ. ಹೌದು, ಮಾರುತಿಯು ವಾಕ್ಯಕೋವಿದನೇ, ನವ ವ್ಯಾಕರಣ ಪಂಡಿತನೇ!

ವಾಲ್ಮೀಕಿ ರಾಮಾಯಣದಲ್ಲಿ ಹನುಮಂತನು ಮೊದಲ ಬಾರಿಗೆ ನುಡಿವ ವಚನವೂ ಸಹ ಸ್ವಾರಸ್ಯಪೂರ್ಣವಾಗಿದೆ. ಮಾರುತಿಯು ಸುಗ್ರೀವನನ್ನು ಉದ್ದೇಶಿಸಿ ಹೀಗೆನ್ನುತ್ತಾನೆ: "ಸಂಭ್ರಮಸ್ತ್ಯಜ್ಯತಾಂ" -- "ಈ ಭ್ರಮೆಯನ್ನು ತ್ಯಜಿಸು". ಈ ಅಭಯವಚನವನ್ನು ಭಕ್ತಾಭಯಪ್ರದಾಯಕನಾದ ಮಾರುತಿಯು ಮೊದಲಿಗೆ ನುಡಿಯುತ್ತಾನೆ: "ಈ ರಾಜಕುಮಾರರು ವಾಲಿಯ ಕಡೆಯವರು ಎಂಬ ಭ್ರಮೆಯನ್ನು ತ್ಯಜಿಸು, ವಾನರ ವೀರನೇ!" ಎಂಬುದು ಇದರ ತಾತ್ಪರ್ಯ. ನಾವು ಸೂಕ್ಷ್ಮವಾಗಿ ಗಮನಿಸಿದರೆ ಶ್ರೀಮದ್ಭಗವದ್ಗೀತೆಯಲ್ಲಿ ಯೋಗೇಶ್ವರ ಶ್ರೀ ಕೃಷ್ಣನು ಮೊದಲು ನುಡಿಯುವುದು  ಇದೇ ಮಾರ್ಮಿಕವಾದ ಮಾತನ್ನೇ -- "ಅಶೋಚ್ಯಾನ್ ಅನ್ವಶೋಚ್ಯಸ್ತ್ವಂ!"  ಗೀತೆಯಲ್ಲಿಯೂ ಸಹ ಭಗವಂತನ ಮೊದಲ ನುಡಿ ಭ್ರಮೆಯನ್ನು, ಮೋಹವನ್ನು ತ್ಯಜಿಸುವುದರ ಕುರಿತಾಗಿ. ಹೀಗೆ ಔಚಿತ್ಯಪ್ರಜ್ಞೆಯನ್ನು ಸದಾಕಾಲ ಮೆರೆಸುವ ಹನುಮಂತ ವಾಕ್ಯಕೋವಿದ. ಎಷ್ಟೇ ಆದರೂ, "ಬುದ್ಧಿಮತಾಂ ವರಿಷ್ಠಂ" ಅಲ್ಲವೇ!

ಮಾರುತಿಯ ವಾಕ್ಯಚಮತ್ಕಾರ ಇನ್ನೂ ಬಹಳಷ್ಟು ಸನ್ನಿವೇಶಗಳಲ್ಲಿ ಅಡಕವಾಗಿವೆ. ಲಂಕೆಯಲ್ಲಿ ಸೀತಾಮಾತೆಯನ್ನು ಕಂಡು ಮತ್ತೆ ಕಿಷ್ಕಿಂಧೆಗೆ ಹಿಂದಿರುಗಿ ಕುಶಲವಾರ್ತೆಯನ್ನು ತಿಳಿಸುವ ಸಂದರ್ಭ. ಆಂಜನೇಯನು "ದೃಷ್ಟಾ ಸೀತಾ" ಎಂದು ನುಡಿಯುತ್ತಾನೆ. ಅದೇ ನುಡಿಯನ್ನು "ಸೀತಾ ದೃಷ್ಟಾ" ಎಂದು ಸಹ ಹೇಳಬಹುದಿತ್ತು. ಆದರೆ ತನ್ನ ಸ್ವಾಮಿ ಶ್ರೀರಾಮನಿಗೆ "ದೃಷ್ಟಾ" - "ಕಂಡೆನು" ಎಂಬ ಮಾತು ಕೇಳಿದ ಕೂಡಲೇ ಶಾಂತಿ ಸಮಾಧಾನ ದೊರೆಯುವುದು ಎಂದು ತಿಳಿದು, ಒಂದು ಕ್ಷಣವೂ ವ್ಯಯಿಸದೆ ಮೊದಲು "ದೃಷ್ಟಾ" ಎಂದು ನುಡಿಯುತ್ತಾನೆ ವಾಕ್ಯಕೋವಿದ ಆಂಜನೇಯ. "ಸೀತಾ ದೃಷ್ಟಾ" ಎಂದಿದ್ದರೆ, ಶ್ರೀರಾಮನು "ಸೀತೆಯು ಕಂಡಳೋ, ಕಾಣಲಿಲ್ಲವೋ?" ಎಂಬ ತಲ್ಲಣಕ್ಕೆ ಕ್ಷಣಕಾಲ ತುತ್ತಾಗಬಾರದು ಎಂದು ಯೋಚಿಸಿ "ದೃಷ್ಟಾ ಸೀತಾ" ಎಂದು ಘೋಷಿಸುತ್ತಾನೆ ಈ ವಾಕ್ಯಕೋವಿದ, ಮಹಾ ರಾಮಭಕ್ತ ಹಾಗೂ ಸಮಯ ಸ್ಫೂರ್ತಿಯ ನಿಧಿ ಮಾರುತಿರಾಯ.

ಯುದ್ಧಕಾಂಡದಲ್ಲಿ ವಿಭೀಷಣನು ಶ್ರೀರಾಮನಲ್ಲಿ ಶರಣಾಗತಿಯನ್ನು ಕೋರಿ ಬಂದಾಗ ವಾನರವೀರರೆಲ್ಲ ಶ್ರೀರಾಮನೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಆಗ ವಾಲ್ಮೀಕಿ ಮಹರ್ಷಿಯು ಹನುಮಂತನನ್ನು ಕುರಿತು ನುಡಿಯುವ ಶ್ಲೋಕ ಮಾರುತಿಯ ಗುಣಕ್ಕೆ ಹಿಡಿದ ಕೈಗನ್ನಡಿ.

"ಅಥ ಸಂಸ್ಕಾರಂ ಸಂಪನ್ನೋ ಹನುಮಾನ್ ಸಚಿವೋತ್ತಮಃ ।
ಉವಾಚ ವಚನಂ ಸ ಲಕ್ಷಣಂ ಅರ್ಥವಾನ್ಮಧುರಂ ಲಘು" ।। (೬. ೧೭. ೫೦)

ಸಂಸ್ಕಾರಯುಕ್ತ ಸಚಿವೋತ್ತಮನಾದ ಹನುಮಂತನ ವಚನವು ಸದಾಕಾಲ ಅರ್ಥವತ್ತಾಗಿ, ಮಧುರವಾಗಿ ಹಾಗೂ ಲಘುವಾಗುರುತ್ತವೆ. ನಮ್ಮ ಪಾಲಿಗೆ ಇವೆಲ್ಲವೂ ಅನುಕರಣೀಯ ಗುಣಗಳೇ! ಮಾತುಗಳು ಸದಾಕಾಲ ಅರ್ಥಗರ್ಭಿತವೂ, ಲಘುವು, ಮಧುರವೂ ಆಗಿರಬೇಕು - ಶ್ರೀರಾಮದೂತ ಹನುಮಂತನ ಹಾಗೆ.

।। ಜೈ ಶ್ರೀರಾಮ ।। ।। ಜೈ ಬಜರಂಗ ಬಲಿ।।

#Ramayana ; #MotivationQuotes