Sunday, December 23, 2018

ಆಯುರ್ಘೃತಂ ಯಶಸ್ತ್ಯಾಗೋ

ಆಯುರ್ಘೃತಂ ಯಶಸ್ತ್ಯಾಗೋ
ಭಯಂ ಚೋರಃ ಸುಖಂ ಪ್ರಿಯಾ |
ವೈರಂ ದ್ಯೂತಂ ಗುರುರ್ಜ್ಞಾನಂ
ಶ್ರೇಯಃ ಸತ್ತೀರ್ಥಸೇವನಮ್ ||

ಆಯುಸ್ಸಿಗೆ ತುಪ್ಪ, ಕೀರ್ತಿಗೆ ತ್ಯಾಗ, ಭಯಕ್ಕೆ ಕಳ್ಳ, ಸುಖಕ್ಕೆ ಪ್ರಿಯೆ, ಹಗೆತನಕ್ಕೆ ಜೂಜು, ಜ್ಞಾನಕ್ಕೆ ಗುರು, ಶ್ರೇಯಸ್ಸಿಗೆ ಪಾವನ ತೀರ್ಥಗಳ ಸೇವನೆ ಪ್ರಬಲ ಕಾರಣಗಳು.

Thursday, December 13, 2018

ಭೂಷಣೈಃ ಕಿಂ ಪ್ರಯೋಜನಮ್


ಹಸ್ತಸ್ಯ ಭೂಷಣಂ ದಾನಂ
ಸತ್ಯಂ ಕಂಠಸ್ಯ ಭೂಷಣಮ್ |
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ
ಭೂಷಣೈಃ ಕಿಂ ಪ್ರಯೋಜನಮ್ ||

ಕೈಗಳಿಗೆ ದಾನ ಮಾಡುವುದೇ ಆಭರಣ.
ಸತ್ಯ ನುಡಿಯುವುದೇ ಕುತ್ತಿಗೆಯ ಅಲಂಕಾರ.
ಜ್ಞಾನದ ವಿಷಯ ಕೇಳುವುದೇ ಕಿವಿಗಳ ಆಭರಣ. ಇತರೆ ಆಭರಣಗಳಿಂದ ಏನು ಪ್ರಯೋಜನ?


Monday, December 03, 2018

ಕಃ ಪರಃ ಪ್ರಿಯವಾದಿನಾಮ್


ಕೋsತಿಭಾರಃ ಸಮರ್ಥಾನಾಂ
ಕಿಂ ದೂರಂ ವ್ಯವಸಾಯಿನಾಮ್ |
ಕೋ ವಿದೇಶಃ ಸವಿದ್ಯಾನಾಂ
ಕಃ ಪರಃ ಪ್ರಿಯವಾದಿನಾಮ್ ||

ಸಮರ್ಥರಾದವರಿಗೆ ಯಾವುದು ತಾನೇ ಹೆಚ್ಚು ಭಾರವಾಗುತ್ತದೆ? ಪ್ರಯತ್ನಶೀಲರಿಗೆ ದೂರವಾವುದು? ವಿದ್ಯೆಯುಳ್ಳವರಿಗೆ ಪರದೇಶವಾವುದು? ಪ್ರಿಯವಾದ ಮಾತುಗಳನ್ನಾಡುವವರಿಗೆ ಯಾರು ತಾನೇ ಶತ್ರುವಾಗುತ್ತಾರೆ?