Friday, November 30, 2018

ಸೌಖ್ಯಂ ಪೃಚ್ಛಸ್ವ ಮಾ ಧನಮ್

ಗುಣಂ ಪೃಚ್ಛಸ್ವ ಮಾ ರೂಪಂ
ಶೀಲಂ ಪೃಚ್ಛಸ್ವ ಮಾ ಕುಲಮ್ |
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾಂ
ಸೌಖ್ಯಂ ಪೃಚ್ಛಸ್ವ ಮಾ ಧನಮ್ ||

ಗುಣವನ್ನು ಕೇಳು, ರೂಪವನ್ನಲ್ಲ; ಶೀಲವನ್ನು ವಿಚಾರಿಸು, ಕುಲವನ್ನಲ್ಲ; ಸಿದ್ಧಿ ಪಡೆದುದನ್ನು ಕೇಳು, ವಿದ್ಯೆಯನ್ನಲ್ಲ; 
ಸುಖವಿದೆಯೇ ಎಂದು ವಿಚಾರಿಸು, ಧನವನ್ನಲ್ಲ.