ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತ್ರತೀಯಾ ಗತಿರ್ಭವತಿ ||--ಪಂಚ ತಂತ್ರ.
ಸಂಪತ್ತಿಗೆ ದಾನ, ಭೋಗ, ಮತ್ತು ನಾಶ ಎಂಬ ಮೂರೇ ಗತಿಗಳು. ಯಾವನು ದಾನವನ್ನು(ಸತ್ಪಾತ್ರರಿಗೆ) ಮಾಡುವುದಿಲ್ಲವೋ, ತಾನೂ (ತನ್ನವರೊಂದಿಗೆ ಸಂಪತ್ತನ್ನು) ಭೋಗಿಸುವುದಿಲ್ಲವೋ ಆ ಅವನಲ್ಲಿರುವ ಸಂಪತ್ತು ಅದರ ಮೂರನೆಯ ಗತಿಯಾದ ನಾಶವನ್ನು ಹೊಂದುವುದು ನಿಶ್ಚಿತವೇ. (ರಾಜ (ಸರಕಾರ) , ಚೋರ (ವಂಚಕ) ಮತ್ತು ಅಗ್ನಿ – ಈ ಮೂರು ನಾಶದ ವಿಧಾನವಾಗಿವೆ.
No comments:
Post a Comment