Saturday, May 30, 2020

ಸಪ್ತ ಹಿತ್ವಾ ಸುಖೀ ಭವ


ಏಕಯಾ ದ್ವೇ ವಿನಿಶ್ಚಿತ್ಯ
ತ್ರೀಂಶ್ಚತುರ್ಭಿರ್ವಶೇ ಕುರು |
ಪಂಚ ಜಿತ್ವಾ ವಿದಿತ್ವಾ ಷಟ್
ಸಪ್ತ ಹಿತ್ವಾ ಸುಖೀ ಭವ ||

ಒಂದರಿಂದ ಎರಡನ್ನು ನಿಶ್ಚಯಿಸಿ, ಮೂರನ್ನು ನಾಲ್ಕರಿಂದ ವಶಪಡಿಸಿಕೋ. ಐದನ್ನು ಜಯಿಸಿ ಆರನ್ನು ತಿಳಿ. ಏಳನ್ನು ಪರಿತ್ಯಾಗಮಾಡಿ ಸುಖಿಯಾಗು.

(ವಿದುರನು ಧೃತರಾಷ್ಟ್ರನಿಗೆ ಹೇಳುವುದು, ಉದ್ಯೋಗ ಪರ್ವ 33-44)

ಒಂದು = ಬುದ್ಧಿ
ಎರಡು = ವಿವೇಚನೆಗಳು - ಒಳ್ಳೆಯ ಕಾರ್ಯ, ಕೆಟ್ಟ ಕಾರ್ಯ
ಮೂರು = ಅನುಬಂಧಿಗಳು - ಶತ್ರು, ಮಿತ್ರ, ತಟಸ್ಥ
ನಾಲ್ಕು = ಚತುರೋಪಾಯಗಳು - ಸಾಮ, ದಾನ, ಭೇದ, ದಂಡ
ಐದು = ಪಂಚೇಂದ್ರಿಯಗಳು - ಚರ್ಮ, ಕಣ್ಣು, ಕಿವಿ, ನಾಲಗೆ, ಮೂಗು
ಆರು = ರಾಜನೀತಿಯ ಗುಣಗಳು - ಸಂಧಿ(ಕಪ್ಪ ಕೊಡುವುದು), ವಿಗ್ರಹ(ಪರಸ್ಪರ ಮಸೆಯುವುದು), ಯಾನ(ದಾಳಿಯ ಪಯಣ), ಆಸನ(ಎದುರಿಸಲು ಸಾಮರ್ಥ್ಯವಿಲ್ಲದೆ ನಿಲ್ಲು), ದ್ವೈಧೀಭಾವ(ದೌರ್ಬಲ್ಯದಿಂದ ಸಂಚಿನ ಸಂಧಾನ), ಸಮಾಶ್ರಯ(ಹತಾಶಭಾವದಿಂದ ಶತ್ರು ಆಶ್ರಯ)
ಏಳು = ಸಪ್ತ ವ್ಯಸನಗಳು - ಸ್ತ್ರೀ, ಜೂಜು, ಬೇಟೆ, ಮದ್ಯ, ಪರುಷವಾಕ್ಯ, ಅನ್ಯಾಯದಿಂದ ಧನಾರ್ಜನೆ ಮತ್ತು ಕಠಿನ ಶಿಕ್ಷೆ.

Friday, May 15, 2020

ಮೌಢ್ಯಂ ಹರತುನಃ ಶಿವಃ

ಮೌಲೌ ಮಂದಾಕಿನಿ ಯಸ್ಯ ಮಾಲತೀ ಮಲ್ಲಿಕಾನಿಭ|
ಮೌನಿಮಾನಸ ಹಂಸೋಯಂ ಮೌಢ್ಯಂ ಹರತುನಃ ಶಿವಃ||

ಮೌಳಿಯಲ್ಲಿ ಮಂದಾಕಿನಿ, ಮಾಲತೀ, ಮಲ್ಲಿಕಾ ಹೂವುಗಳಿಂದ ಪ್ರಶೋಭಿಸುತ್ತಿರುವ, ಋಷಿ-ಮುನಿಗಳ ಮಾನಸದಲ್ಲಿ ವಾಸ ಮಾಡುತ್ತಿರುವ ಹಂಸಾತ್ಮಕವಾದ ಶಿವನೇ ನಮ್ಮೆಲ್ಲರ ಮೌಢ್ಯವನ್ನ ಹರಿಸು.
-ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು

Monday, May 11, 2020

ಆಸೆ ಎಂಬ ಬಿಸಿಲು ಕುದುರೆ

ಗತೇ ಭೀಷ್ಮೆ ಹತೇ ದ್ರೋಣೆ ಕರ್ಣೇ ಚ ವಿನಿಪಾತಿತೇ ।
ಆಶಾ ಬಲವತೀ ರಾಜನ್ ಶಲ್ಯೊ ಜೇಷ್ಯತಿ ಪಾಂಡವಾನ್ ।।

(ವೇಣೀ ಸಂಹಾರಂ ೫.೨೩ )

ಸಂಜಯನು ಧೃತರಾಷ್ರ್ಟನಿಗೆ ಹೇಳುತ್ತಾನೆ: " ಹೇ! ರಾಜನ್ ,  ಭೀಷ್ಮಾಚಾರ್ಯರ ನಂತರ ದ್ರೋಣಾಚಾರ್ಯರು ಹತರಾದ ನಂತರವೂ , ಕರ್ಣನ ಅವಸಾನವಾದಾಗ್ಯೂ, ಶಲ್ಯನು ಪಾಂಡವರನ್ನು ಜಯಿಸುತ್ತಾನೆ ಎಂಬ ಹಂಬಲ ಮುಡಿಯುತಿದೆಯಲ್ಲಾ, ದಿಟವಾಗಿ ಆಸೆ ಎಂಬುದು ಬಲವಾದ ಪಾಶವೇ ಸರಿ.  

Sunday, May 10, 2020

ಶ್ರೀ ರುದ್ರಾಧ್ಯಾಯ

ವಿದ್ಯಾಸು ಶ್ರುತಿರುತ್ಕ್ರುಷ್ಠಾ  ರುದ್ರೈಕಾದಶಿನೀ ಶ್ರುತೌ ।
ತತ್ರ ಪಂಚಾಕ್ಷರೀ ತಸ್ಯಾಂ ಶಿವ ಇತ್ಯಕ್ಷರದ್ವಯಂ ॥ 

ವಿದ್ಯೆಗಳಲ್ಲಿ ಶ್ರೇಷ್ಟವಾದದ್ದು ವೇದವಿದ್ಯೇ, ವೇದಗಳಲ್ಲಿ ಶ್ರೀ ರುದ್ರಾಧ್ಯಾಯವು ಶ್ರೇಷ್ಠ. ಅದರಲ್ಲಿ ಪಂಚಾಕ್ಷರೀ ಮಂತ್ರ, ಪಂಚಾಕ್ಷರಿಯಲ್ಲಿ "ಶಿವ" ಎಂಬ ಅಕ್ಷರದ್ವಯ.


ಯದೇಕ ಮವ್ಯಯಂ ಸಾಕ್ಷಾತ್ ಬ್ರಹ್ಮಜ್ಯೋತಿ ಸನಾತನಂ ।
ಶಿವಾತ್ಮಕಂ ಪರಂ ರುದ್ರಾಧ್ಯಾಯೇ ಪ್ರತಿಷ್ಠಿತಂ ।।

ಇದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ನಾಶರಹಿತವೂ, ಅನಾದಿಯೂ, ಶಿವಸ್ವರೂಪವೂ ಆದ ಬ್ರಹ್ಮಜ್ಯೋತಿಯೇ ರುದ್ರಾಧ್ಯಾಯದಲ್ಲಿ ಪ್ರತಿಪಾದ್ಯವಾಗಿರುವುದು.

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ।
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ ।।