Showing posts with label ಹುಚ್ಚು - ಹರಟೆ. Show all posts
Showing posts with label ಹುಚ್ಚು - ಹರಟೆ. Show all posts
Monday, November 30, 2009
Friday, April 18, 2008
ವಸುಂಧರೆಗೆ ಚಂದ್ರಾನುಲೋಮ
ಧರಣಿ ದೇವಿ ಕುದಿಯುತ್ತಿದ್ದಾಳೆ. ಜಾಗತೀಕ ತಾಪಮಾನ ನಾಗಾಲೋಟದಿಂದ ಬೆಳೆಯುತ್ತಿದ್ದಂತೆಲ್ಲಾ ಪರಿಸರಪರ ಕಾಳಜಿಯುಳ್ಳ ನೇತಾರರು ಉಶ್ಣಾಂಶವನ್ನು ಹಿಡಿತದಲ್ಲಿ ಇಟ್ಟುಕೊಳ್ಳ ಬೇಕೆಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ.ಯಾರು ಎಷ್ಟು ಕೂಗಾಡಿದರೂ, ವಿಶಾನಲಗಳನ್ನು ಉಗುಳಿ ಬುಗಿಲಿಕ್ಕುವ ಹವಾನಿಯಂತ್ರಕಗಳು ಮನೆಗಳಲ್ಲಿ, ಕಚೇರಿಗಳ್ಲ್ಲಿ ನಿಂತಿಲ್ಲ. ಕಾರ್ಖಾನೆಗಳು ಎಂದಿಗಿಂತಲೂ ಹೆಚ್ಚು ಮಾಲಿನ್ಯದ ಮಹಾತಾಂಡವ ಮೂಡಿಸಿ, ಆರ್ಭಟದ ಅಟ್ಟಹಾಸ ಮೆರೆದಿವೆ. ಕಟುವೆನಿಸಿದರೂ ನಿಜವೇ ಆಗಿರುವ ಒಂದು ವಿಶಯ ನಿಮ್ಮ ಮುಂದಿಡುತ್ತಿದ್ದೇನೆ.ವಿನಾಶದ ಜಗತ್ಪ್ರಳಯದತ್ತ ಕರೆದೋಯ್ಯುತಿರುವ ಈ ಉಷ್ಣಾಂಶದ ಏರಿಕೆಯನು (Global Warming) ಸಕಾಲದಲ್ಲಿ -- ಅಂದರೆ ಉತ್ತರಧೃವದ ಹಿಮಪರ್ವತಗಳು ಕರಗಿ ಭೂದೇವಿಯ ಜಲಪ್ರಳಯವಾಗುವಷ್ಟರಲ್ಲಿ ಅಂತರಾಷ್ರೀಯಸಮುದಾಯಕ್ಕೆನಿಗ್ರ್ಹಿಹಿಸಲು ಸಾದ್ಯವಾಗುವುದಿಲ್ಲ. ಆರ್ಕ್ಟಿಕ್ ಮಹಾಸಾಗರ ( Arctic Ocean) ಕಳೆದ ಸಾಲು ದಾಖಲೆಯ ಕರಗುವಿಕೆ ಅನುಭವಿಸಿದೆ. ಹಿಂದಿನ ಸಂಶೋದಕರು ನೀಡಿದ ಅಂಕಿ ಅಂಶಗಳನ್ನು ಅಲ್ಲಗೊಳಿಸುವಷ್ಟು ವೇಗದಲ್ಲಿ ,ಅಂದರೆ -- ಸರಿ ಸುಮಾರು ೨೦೧೪ ಸಂವತ್ಸರದೊಳಗೆ ಉತ್ತರಧ್ರುವವು ಮಂಜು ರಹಿತವಾಗಬಹುದಂತೆ. ಊಹೆಗಿಂತ ದಶಕಗಳ ಮೊದಲೇ ಉತ್ತರಧ್ರುವ ತುಹಿನ ರಹಿತವಾಗುವ ಕರಾಳ ದೃಷ್ಯಗಳು ನಮ್ಮ ಮೂಗಿನ ಮುಂದೆಯೇ ಇದ್ದರೂ ಲೋಕವೆಲ್ಲವೂ ಲೋಕಾಭಿರಾಮವಾಗಿ ಕಾಲ್ಚಾಚಿ ಮೋಜಿನಿಂದಿದೆ.
ಸರಿ, ಇಂತಿರಲು ಜಗಜ್ಜನತೆಯು ಯವ-ತಿಲಗಳನ್ನು ಹಿಡಿದು ಭೂದೇವಿಗೆ ತರ್ಪಣವೀಯ್ಯಲು ಸಿದ್ಧರಾಗ ಬೇಕೆ? ಇಲ್ಲವೆನ್ನುತ್ತಾರೆ ಕೆಲ ಸಂಶೋದಕರು. ಭೂಮಿಯ ಮೈಜ್ವರವನ್ನು ತಡೆಯಲಾಗದ್ದಿದ್ದರೇನು, ಭೂಮಿಗೆ ಶೀತ ಹಿಡಿಸ ಹೊರಟ್ಟಿದ್ದಾರೆ ಈ ಮಹನೀಯರು. ಇವರ ವಾದ ತೀರ ಸಿಂಪಲ್ . ಏರುವ ದಗೆಯನ್ನು ತಡೆಯಾಲಾಗಲಿಲ್ಲ. ಹಾಗಾದರೆ ಭೂಗರ್ಭವನ್ನೇ ತಂಪು ಮಾಡಿಬಿಡೋಣ. ಭೂಮಿಗೆ ಶೀತ ಹಿಡಿಸುವುದು ಹೇಗೆ? ಉಪಾಯವಿದೆ. ಕಲವೊಮ್ಮೆ ಹಸ್ಯಾಸ್ಪದವೆಂದೂ, ಐಂದ್ರಜಾಲೀಯವೆಂದೂ ಅನಿಸಿದರೂ ವಾಸ್ತವವಾಗಿ ಮಾಡಿಯೂ ತೀರ ಬಹುದಾಗಿದೆ. ೨೦೦೬ ಸಾಲಿನ ನೋಬೆಲ್ ಸಂಶೋದಕ ಪಾಲ್ ಕೃಟ್ ಜೆನ್ (Paul Crutzen) ಅವರ ಲೇಖನಗಳಲ್ಲಿ ಭೂಗೋಳ ವಿಙ್ನಾನದ (Geo Engineering) ಪ್ರಾಮುಖ್ಯತೆಯನ್ನು ಪ್ರಚಲಿತ ಸಂಧರ್ಭದಲ್ಲಿ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮುದ್ರದ ತಳಕ್ಕೆ ಉಕ್ಕು - ಸುತುವಿನ ಲೇಪ ಸಿಂಪಡಿಸಿ ಇಂಗಾಲವನ್ನು ಹೀರುವಂತೆ ಮಾಡುವುದರಿಂದ ಹಿಡಿದು, ಅಂತರಿಕ್ಷದಲ್ಲಿ ಗಂಧಕದ ರಸಾನಲಗಳನ್ನು ಪ್ರೋಕ್ಷಿಸಿ, ರಾಸಾಯನಿಕ ವ್ಯೂಹ ನಿರ್ಮಿಸಿ ,ಸೂರ್ಯ ಕಿರಣಗಳು ಪ್ರಖರವಾಗಿ ಭುದೇವಿಯನ್ನು ಸೋಕದಂತೆ ನೋಡಿಕೊಳ್ಳುವುದರ ವರೆಗೂ ಭೂಮಿಗೆ ಸೀತ ಹಿಡಿಸಬಹುದು. ಮನೆಗಳ ಮೇಲ್ಚಾವಣಿಗೆ ಬಿಳಿ ಬಣ್ಣ ಪೈಂಟ್ ಮಾಡಿಸಿದರೂ ಭೂಮಿ ತಂಪಾಗುತ್ತದೆ. ಮತ್ತೊಂದು ಸೈನ್ಸ್ ಫಿಕ್ಷನ್ ಅನಿಸುವ ವಿಧಾನದಲ್ಲಿ, ನಕ್ಷತ್ರ ಮಂಡಲದಲ್ಲಿ (Orbitals) ಕನ್ನಡಿಗಳನ್ನು ವಿಶೇಷ ಕೋನಗಳಲ್ಲಿ ಅಳವಡಿಸಿದರೆ, ಕಿರಣಗಳು ಭೂಮಿಯ ಒಳಗೆ ಪವೇಶಿಸದೆ ತಣ್ಣಗಿಡಬಹುದಂತೆ. ಅಂತೂ ವರಾಹಾವತಾರದಲ್ಲಿ ಮಹಾವಿಷ್ಣುವು ಭೂದೇವಿಯನ್ನು ತನ್ನ ಕೋರೆದಾಡೆಗಳಿಂದ ಮೇಲ್ಹಿಡಿದು ರಕ್ಷಿಸಿದ ಹಾಗೆ ಅವತರಿಸಿ ಈ ದಿನವೂ ವಸುಂಧರೆಗೆ ಚಂದ್ರಾನುಲೋಮ ಮಾಡಿಸಬೇಕಿದೆ.

Picture Courtesy : http://www.lib.uchicago.edu/e/su/southasia/varaha.jpg
Related Article:
TIME Magazine; March 24, 2008; 10 Ideas that are changing the world.
Geo Engineering - Messing with nature caused Global Warming.Messing with it more might fix it.
Thursday, January 24, 2008
ಪರಕಾಯಪ್ರವೇಷ(ಶ)

ನೆನೆಸಿದೆಲ್ಲ ನನಸಾಗುತ್ತಿದ್ದರೆ ಏನೋ ಒಂದು ರೀತಿ ಮುಜುಗರ. ಅಸಹನೆ. ಆತಂಕ.ಇದು ನನ್ನ ಜೀವಿತವಲ್ಲವೇನೋ ಎಂಬ ಶಂಖೆ. ದುಃಖಕ್ಕೆ ಒಗ್ಗಿದ ಜೀವ, ಒಮ್ಮೆಲೆ ಹಿಗ್ಗಿದರೆ ಕುಗ್ಗುವುದಿಲ್ಲವೆ? ಎಂದಿನಂತೆ ಹತಾಷೆಯೇ ಲೇಸು.ಕನೀಸ ಸಹಜವೆನಿಸುತ್ತದೆ.ಹೌದು, ಇದು ನನ್ನದೇ ಬದುಕು ಅನಿಸುತ್ತದೆ.ಎಲ್ಲವೂ ಸುಗಮವಾಗಿ ಸಾಗಿದರೆ ನನ್ನ ದೇಹತ್ಯಜಿಸಿ ಯಾರದೋ ಪರಕಾಯಪ್ರವೇಶ ಮಾಡಿದಂತೆ ಭಾಸ.ಅಬ್ಬಾ .... !!! ಎಂಥಾ ಪರಕೀಯ ಭಾವ - ಈ ಸಂತಸ!
Miami Lakes,FL - Night of Jan 23 2008.
Monday, November 26, 2007
ಕಾಲಗರ್ಭ
ಕಾಲಗರ್ಭದಲ್ಲಿ ಬಿತ್ತಿದ ಭವಿಷ್ಯತ್ತಿನ ಸಸಿಗಳು ವರ್ತಮಾನದ ವ್ಯಾಪ್ತಿಯಲ್ಲಿ ಮೊಳೆತು ಸೂರ್ಯರಶ್ಮಿಯಾಗಿ ವ್ಯಕ್ತವಾಗುತ್ತವೆ. ವೈಷ್ವಾನರವಾಗಿ ಸಸ್ಯಧಮನಿಯಲಿ ಹರಿದು,ಜೀವಗಳ ಒಳಹೊಕ್ಕು ,ಅಂತ್ಯದಲ್ಲಿ ಮೂರ್ತರೂಪಾತೀತವಾಗಿ, ಮತ್ತೆ ಅದೇ ಅಮೂರ್ತತೆಯ ಮಡಿಲಿನಲಿ ಕಾಲ್ಮುದುರಿ ಮಲಗುತ್ತವೆ. ಕಾಲಾಂತರದಲ್ಲಿ ಅದೇ ಸೂರ್ಯರಶ್ಮಿಯು ಸ್ಫ್ಹುರಿಸಿ ಭುವನಾಂಕುರವಾಗುವುದು ಯಾವ ಮನ್ವಂತರದಲ್ಲೋ! ಆ ಘಳಿಗೆಯ ಆಧಿಪತ್ಯಕ್ಕೆ ಕಾಯುತ್ತ ಅನಂತತೆಯ ಕಾಲಶರಧಿಯಲಿ ಸ್ಥೂಲತೆಯ ಪೊರೆಕಳಚಿ, ಸೂಕ್ಷ್ಮದಲೇಪ ಮೆರೆದು ಸುಪ್ತಾವಸ್ತೆಯಲ್ಲಿ ಅವಿತು ಆಕಳಿಸುತಿದೆ ನೋಡಿ ಆ ಮರಿಕಿರಣ......
Subscribe to:
Posts (Atom)