Monday, February 27, 2017

::: ಶಿವಸ್ತುತಿ :::
ಕೃತಿ : ಗಂಗಾಧರ ತ್ರಿಪುರಹರ
ರಚನೆ: ಮೈಸೂರು ಸದಾಶಿವ ರಾಯರು
ರಾಗ/ತಾಳ : ಪೂರ್ವಿ ಕಲ್ಯಾಣಿ/ ರೂಪಕ

ಗಂಗಾಧರ ತ್ರಿಪುರಹರ ಶ್ರೀ ಸಾರಂಗಧಾರ ।।ಪ ।।
ಶೃಂಗಾರ ಶೇಖರ ಶಿವ ಶಂಕರ ಜಟಾಧಾರ
ಭೃಂಗೀ ನಟನ ವಿನೋದ ಭೃಂಗಾರಕ ವಂದಿತಪಾದ  ।।೧।।
ಅಹಿ ಭೂಷಣ ಅಮರಾವನ ಅಜ ಸನ್ನುತ ಬದರೀವನ
ತುಹಿನಾದ್ರಿ ತನಯಾ ಪ್ರಿಯ ದುಃಖ ದೂರ ಕಾಲಕಾಲ ।। ೨।।
ಸದಾಶಿವ ವಿನುತಾನಂದಾ ಸಂಭ್ರಮ ಚಿತ್ತಾಸುರ
ಮತಹಾರಣ ಮುನಿಪೋಷಣ ಮಹಾದೇವ ಶಂಭೋ ಹರ ।।೩।।