Sunday, February 09, 2020

ಮೈನಾಕ ಇವ ಮಾರ್ದವಮ್

ನಿಷ್ಣಾತೊsಪಿ ಚ ವೇದಾಂತೇ ಸಾಧುತ್ವಂ ನೈತಿ ದುರ್ಜನಃ |
ಚಿರಂ ಜಲನಿಧೌ ಮಗ್ನಃ  ಮೈನಾಕ ಇವ ಮಾರ್ದವಮ್ ||

ಮೈನಾಕ ಪರ್ವತವು ದೀರ್ಘಕಾಲ ಸಮುದ್ರದಲ್ಲಿ ಮುಳುಗಿದ್ದರೂ ಹೇಗೆ ಮೆತ್ತಗಾಗುವುದಿಲ್ಲವೋ,
ಹಾಗೆಯೇ,
ಜನ್ಮತಃ ಕೆಟ್ಟ ಸ್ವಭಾವದವನು ಅಕಸ್ಮಾತ್ ವೇದಾಂತ ಶಾಸ್ತ್ರಗಳಲ್ಲಿ ನಿಪುಣನಾದರೂ ಸಹ,
ಅವನಲ್ಲಿದ್ದ ಕೆಟ್ಟ ಗುಣ ದೂರಾಗಿ ಒಳ್ಳೆಯವನಾಗುವ ಸಂಭವ ಅತಿ ಕಡಿಮೆ.

#Vedanta 

ಸಂತೋಷಂ ಜನಯೇತ್ ಪ್ರಾಜ್ಞಃ

ಸಂತೋಷಂ ಜನಯೇತ್ ಪ್ರಾಜ್ಞಃ
ತದೇವ ಈಶ್ವರಪೂಜನಮ್|

ಪ್ರಾಜ್ಞರಾದವರು ಇತರರಿಗೆ ಸಂತೋಷವುಂಟಾಗುವಂತೆ ಮಾಡತಕ್ಕದ್ದು, ಅದೇ ಈಶ್ವರಪೂಜೆ.

ತಂಡುಲಾಸ್ತತ್ರ ಕಾರಣಮ್

ಅಕಾರಣಂ ವ್ಯಾಕರಣಂ ತಂತ್ರೀಶಬ್ದೋsಪ್ಯಕಾರಣಂ |
ಅಕಾರಣಂ ತ್ರಯೋ ವೇದಾಃ ತಂಡುಲಾಸ್ತತ್ರ ಕಾರಣಮ್ ||

(ಜಗತ್ತಿನ ವ್ಯವಹಾರವು ನಡೆಯುವುದಕ್ಕೆ) ವ್ಯಾಕರಣ ಶಾಸ್ತ್ರವು ಕಾರಣವಲ್ಲ. ವೀಣೆಯ ನಾದವೂ ಕಾರಣವಲ್ಲ. ಮೂರು ವೇದಗಳೂ ಕಾರಣವಲ್ಲ. ಅದಕ್ಕೆ ಕಾರಣವಾದದ್ದು ಅಕ್ಕಿ(ಅನ್ನ)!

ಜಗತ್ತಿನ ವ್ಯವಹಾರವು ನಡೆಯುತ್ತಿರುವುದು ಹೊಟ್ಟೆಯ ದೆಸೆಯಿಂದ. ಹೊಟ್ಟಬಟ್ಟೆಗಳ ಕಾರಣದಿಂದಾಗಿ ಅದ್ಭುತವಾದ ಜಗದ್‌ಯಂತ್ರವು ನಡೆಯುತ್ತಿದೆ. ಶಾಸ್ತ್ರ, ಸಂಗೀತ, ಪರಮಾರ್ಥ ವಿಚಾರಗಳೆಲ್ಲವೂ ಹೊಟ್ಟೆ ತುಂಬಿದ ಮೇಲೆಯೇ!