Saturday, May 30, 2020

ಸಪ್ತ ಹಿತ್ವಾ ಸುಖೀ ಭವ


ಏಕಯಾ ದ್ವೇ ವಿನಿಶ್ಚಿತ್ಯ
ತ್ರೀಂಶ್ಚತುರ್ಭಿರ್ವಶೇ ಕುರು |
ಪಂಚ ಜಿತ್ವಾ ವಿದಿತ್ವಾ ಷಟ್
ಸಪ್ತ ಹಿತ್ವಾ ಸುಖೀ ಭವ ||

ಒಂದರಿಂದ ಎರಡನ್ನು ನಿಶ್ಚಯಿಸಿ, ಮೂರನ್ನು ನಾಲ್ಕರಿಂದ ವಶಪಡಿಸಿಕೋ. ಐದನ್ನು ಜಯಿಸಿ ಆರನ್ನು ತಿಳಿ. ಏಳನ್ನು ಪರಿತ್ಯಾಗಮಾಡಿ ಸುಖಿಯಾಗು.

(ವಿದುರನು ಧೃತರಾಷ್ಟ್ರನಿಗೆ ಹೇಳುವುದು, ಉದ್ಯೋಗ ಪರ್ವ 33-44)

ಒಂದು = ಬುದ್ಧಿ
ಎರಡು = ವಿವೇಚನೆಗಳು - ಒಳ್ಳೆಯ ಕಾರ್ಯ, ಕೆಟ್ಟ ಕಾರ್ಯ
ಮೂರು = ಅನುಬಂಧಿಗಳು - ಶತ್ರು, ಮಿತ್ರ, ತಟಸ್ಥ
ನಾಲ್ಕು = ಚತುರೋಪಾಯಗಳು - ಸಾಮ, ದಾನ, ಭೇದ, ದಂಡ
ಐದು = ಪಂಚೇಂದ್ರಿಯಗಳು - ಚರ್ಮ, ಕಣ್ಣು, ಕಿವಿ, ನಾಲಗೆ, ಮೂಗು
ಆರು = ರಾಜನೀತಿಯ ಗುಣಗಳು - ಸಂಧಿ(ಕಪ್ಪ ಕೊಡುವುದು), ವಿಗ್ರಹ(ಪರಸ್ಪರ ಮಸೆಯುವುದು), ಯಾನ(ದಾಳಿಯ ಪಯಣ), ಆಸನ(ಎದುರಿಸಲು ಸಾಮರ್ಥ್ಯವಿಲ್ಲದೆ ನಿಲ್ಲು), ದ್ವೈಧೀಭಾವ(ದೌರ್ಬಲ್ಯದಿಂದ ಸಂಚಿನ ಸಂಧಾನ), ಸಮಾಶ್ರಯ(ಹತಾಶಭಾವದಿಂದ ಶತ್ರು ಆಶ್ರಯ)
ಏಳು = ಸಪ್ತ ವ್ಯಸನಗಳು - ಸ್ತ್ರೀ, ಜೂಜು, ಬೇಟೆ, ಮದ್ಯ, ಪರುಷವಾಕ್ಯ, ಅನ್ಯಾಯದಿಂದ ಧನಾರ್ಜನೆ ಮತ್ತು ಕಠಿನ ಶಿಕ್ಷೆ.

No comments: