Friday, March 18, 2022

ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ

 ಅಶ್ವಕ್ರಾಂತೇ  ರಥಕ್ರಾಂತೇ  ವಿಷ್ಣುಕ್ರಾಂತೇ  ವಸುಂಧರಾ ।

ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।। 


ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ  ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು  ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ 

Monday, March 07, 2022

ಮೃತ್ತಿಕೇ ಹನಮೇ ಪಾಪಂ


ಮೃತ್ತಿಕೇ ಹನಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ ।

ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।

ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।

ಮೃತ್ತಿಕೇ ಪ್ರತಿಷ್ಠಿತೇ ಸರ್ವಂ  ನಿರ್ಣುದ ಮೃತ್ತಿಕೆ ॥

ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥

ದೂರ್ವಾ ದೇವತೆ



ಕಾಂಡಾತ್ ಕಾಂಡಾತ್ ಪ್ರರೋಹಂತಿ ಪರುಷಃ ಪರುಷಃ ಪರಿ ।

ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।

(ಯಜುರ್ವೇದ ೧೩/೨೦)

ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.