Saturday, June 30, 2012

ಸಂಪ್ರತಿ ವಾರ್ತಾಃ ಶೄಯಂತಾಂ.ಆಕಾಶವಾಣಿ ಸುದ್ದಿ ವಿಭಾಗದಿಂದ ಪ್ರತಿ ಮುಂಜಾನೆ ೬:೫೫ ಗೆ ಬಿತ್ತರವಾಗುವ ಸಂಸ್ಕೃತ ವಾರ್ತಾ ಪ್ರಸಾರಕ್ಕಿಂದು ೩೮ ವರ್ಷದ ಸಂಭ್ರಮ. ೧೯೭೪ರಲ್ಲಿ ಇದೇ ಜೂನ್ ೩೦ ರಂದು ಬೆಳಗಿನ ಸಂಸ್ಕೃತ ವಾರ್ತಾ ಪ್ರಸಾರ ಮೊದಲುಗೊಂಡಿತು. "ಬಹುಜನಹಿತಾಯ, ಬಹುಜನಸುಖಾಯ" ಎಂಬ ಆಕಾಶವಾಣಿಯ ಘೋಶವಾಕ್ಯ ಈ ಸಂಸ್ಕೃತ ವಾರ್ತೆಗಳಿಗೆ ಅಕ್ಷರಶಃ ಸರಿಹೊಂದುತ್ತದೆ.

ಮುಂಜಾನೆ ಎದ್ದು ಎಂ.ಎಸ್. ಕಂಠಸಿರಿಯಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಆಲಿಸಿ , ಬಿಸಿ ತಾಜಾ ಫಿಲ್ಟರ್ ಕಾಫಿ ಹೀರುತ್ತ , ಆಕಾಶವಾಣಿಯಲ್ಲಿ " ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶೄಯಂತಾಂ , ಪ್ರವಾಚಕಃ ಬಲದೇವಾನಂದ ಸಾಗರಃ" -- ಈ ಉದ್ಘೋಶ ಕೇಳಿದರೆ ಸಾಕು ಆ ದಿನ ಮಂಗಳಮಯವಾಗಿ ಆರಂಭವಾಗುವ ಅನುಭೂತಿ.

ಸಂಸ್ಕೃತ ವಾರ್ತೆಗಳನ್ನು ಅಂತರ್ಜಾಲದಲ್ಲೂ ಕೇಳಬಹುದು. ಕೊಂಡಿ ಇಲ್ಲಿದೆ.

http://www.newsonair.com/NSD-Audio-Bulletins-News-Schedule.asp


ಕಳೆದ ೩೮ ವರ್ಷಗಳಿಂದ ಸಂಸ್ಕೃತ ಪ್ರವಾಚಕರಾಗಿರುವ ಡಾ|| ಬಲದೇವಾನಂದಸಾಗರ ಅವರು.