Sunday, August 02, 2020

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದೈಸ್ಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾಃ |
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ವಿದುಸ್ಸುರಾಸುರಗಣಾಃ ದೇವಾಯ ತಸ್ಮೈ ನಮಃ ||

ಬ್ರಹ್ಮ, ಇಂದ್ರ, ವರುಣ, ರುದ್ರ, ಮರುತ್ಗಣಗಳು ಯಾರನ್ನು ದಿವ್ಯವಾದ ಸ್ತೋತ್ರಗಳಿಗಿಂತ ಹಾಡಿ ಹೊಗಳುವರೋ; ಸಾಮ, ವೇದಮಂತ್ರಗಳಿಂದ ಯಾರನ್ನು ಕುರಿತು ಋಷಿಗಳು ಅಂಗ, ಪದಕ್ರಮ, ಉಪನಿಷತ್ತುಗಳಿಂದ ಕೂಡಿದ ಕೀರ್ತನೆ ಮಾಡುತ್ತಾರೋ; ಯೋಗಿಗಳು ಸ್ಥಿರಮನಸ್ಸಿನಿಂದ ಧ್ಯಾನದಲ್ಲಿ ಮಗ್ನರಾಗಿ ಯಾರನ್ನು ಕಾಣುವರೋ; ಸುರರು ಅಸುರರೂ ಸಹ ಯಾರ ಅಂತ್ಯವನ್ನು ತಿಳಿಯಲಾರರೋ; ಅಂತಹ ಜಗದ್ರಕ್ಷಕ ಪರಮಾತ್ಮನಿಗೆ ಸಾಷ್ಟಾಂಗ ಪ್ರಣಾಮಗಳು. 

No comments: