ಸ್ವಸ್ತಿಕದ ಗೆರೆಗಳು ಮಧ್ಯ ಬಿಂದುವಿಗೆ ಸೇರುವಂತೆ ರಚಿಸಬೇಕು. ಮಧ್ಯದ ಬಿಂದುವೆ ಬ್ರಹ್ಮ ತತ್ತ್ವ.
ಧರ್ಮ ― ಸರಿಯಾದ ನಡೆವಳಿಕೆ ಯಿಂದ ಕೂಡಿದ ಧಾರ್ಮಿಕ ಆಚರಣೆ.
ಅರ್ಥ ― ಸುವ್ಯವಸ್ಥೆ, ಆರ್ಥಿಕ ದೃಢತೆ.
ಕಾಮ ― ಸಣ್ಣ ಪುಟ್ಟ, ದೊಡ್ಡ ಸಂತೋಷ ಆನಂದಗಳು.
ಮೋಕ್ಷ – ಅಹಂಕಾರವನ್ನು ಮೀರಿದ ನನ್ನ ನಿಜ ಸ್ವರೂಪದ ಅರಿವು.
ಈ ಪುರುಷಾರ್ಥಗಳ ಪ್ರತೀಕವಾದ ಗೆರೆಗಳು.
ಸಾಲೋಕ್ಯ ― ಇಷ್ಟ ದೈವದ ಲೋಕ ಪ್ರಾಪ್ತಿ.
ಸಾರೂಪ್ಯ ― ಇಷ್ಟ ದೈವದ ರೂಪ.
ಸಾಮೀಪ್ಯ ― ಇಷ್ಟ ದೈವದ ಅತಿ ಸಮೀಪ ಸೇವೆ, ಸಂಪರ್ಕ.
ಸಾಯುಜ್ಯ ― ಇಷ್ಟ ದೈವದಲ್ಲಿಯೇ, ಉಪ್ಪು ನೀರಿನಲ್ಲಿ ಕರಗಿ ಬಿಡುವಂತೆ ಸೇರ್ಪಡೆ. ದೈವವು ಒಂದು ಶಕ್ತಿಯೂ ಆಗಿರುವುದರಿಂದ, ಆ ಶಕ್ತಿ ಬಿಟ್ಟರೆ ನನ್ನ ಅಸ್ತಿತ್ವ ಇಲ್ಲ. ಹಾಗಾಗಿ ಅತ್ಯುನ್ನತ ಭಕ್ತಿಯಿಂದ ಸಾಯುಜ್ಯ ಮುಕ್ತಿ ದೊರಕುತ್ತದೆ.
ಮನೋ ಬುದ್ಧಿ ಚಿತ್ತ ಅಹಂಕಾರ ಅನ್ನುವ ಗೆರೆಗಳು.
ಪ್ರೇಮ , ಶ್ರದ್ಧಾ , ವಿಶ್ವಾಸ , ಸಮರ್ಪಣೆ ಅನ್ನುವ ಬಿಂದುಗಳು.
ಎಲ್ಲವೂ ಸೇರಿದರೆ ಸ್ವಸ್ತಿಕ. ಸುಂದರ ವ್ಯಾಖ್ಯಾನ. ತಿಳಿಸಿಕೊಟ್ಟಿರುವ ಮಹಾ ತಾಯಿಗೆ ವಂದನೆಗಳು.
No comments:
Post a Comment