Wednesday, July 26, 2017

एकश्लोकी शंकर दिग्विजयम्

|| एकश्लोकी शंकर दिग्विजयम् ||

 
आर्यांबा जठरे जनीर द्विजसतीर् दारिद्र्य निर्मूलनं 
संयासाश्र्यणं गुरुपसदनं   श्री मण्डनादेर्जयः |
 शिष्यौगग्रहणं सुभाष्य रचनं सर्वज्ञ पीठाश्रयः
पीठानाम रचनेतिसङ्ग्रह मयी सैषा कथा शांकरी ||

 
ಆರ್ಯಾಂಬಾ ಗರ್ಭ ಸಂಜಾತನಾಗಿ, ಕನಕ ಧಾರಾ ಸ್ತೋತ್ರದಿಂದ ವಿಪ್ರಸತಿಯ ದಾರಿದ್ರ್ಯವನ್ನು ಹೋಗಲಾಡಿಸಿ, ಗುರುವಿಂದ ದೀಕ್ಷೆಪಡೆದು ಸಂನ್ಯಾಸಾಶ್ರಮವನ್ನು ಪ್ರವೇಶಿಸಿ, ಮಂಡನ ಮಿಶ್ರಾದಿಗಳನ್ನು ವಾದದಲ್ಲಿ ಗೆದ್ದು; ಹಸ್ತಾಮಲಕ,ಸುರೇಶ್ವರ,ತೋಟಕಾರ್ಯ,ಪದ್ಮಪಾದೇತ್ಯಾದಿ ಶಿಷ್ಯ ವೃಂದವನ್ನು ಅನುಗ್ರಹಿಸಿ, ಪ್ರಸ್ಥಾನ ತ್ರಯಗಳಿಗೆ ಸುಭಾಷ್ಯಗಳನ್ನು ರಚಿಸಿ, ಸರ್ವಜ್ಞ ಪೀಠವನ್ನು ಅಲಂಕರಿಸಿ, ಚತುರ್ ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು ಎಂಬಲ್ಲಿಗೆ ಸಂಗ್ರಹ ರೂಪದಲ್ಲಿ ಶಾಂಕರೀ ವೃತ್ತಾಂತವು ಬಣ್ಣಿಸಲ್ಪಟ್ಟಿದೆ.ಅವತಾರ ಪುರುಷುರಾದ ಶ್ರೀ ಶಂಕರ ಭಗವತ್ಪಾದರ ಮಾಹಾತ್ಮ್ಯ - ಜೀವನ ಚರಿತ್ರೆಯನ್ನು ನಾಲ್ಕು ಸಾಲುಗಳಲ್ಲಿ ಹೇಳುವುದು ದುಃಸಾಹಸವೇ ಸಾರಿಯಾದರೂ ಈ ಏಕಶ್ಲೋಕಿಯನ್ನು ಸ್ಥೂಲರೂಪದಲ್ಲಿ ಆಚಾರ್ಯರ ಮಹಿಮೆಯನ್ನು ಬಣ್ಣಿಸಲಾಗಿದೆ.  

No comments: