Tuesday, August 04, 2026

ಹರಪಾಣೇಶ್ವರೀಂ ವಂದೇ

 ವೇಧೋ ಹರೀಶ್ವರ ಸ್ತುತ್ಯಾಂ ವಿಹರ್ತ್ರೀಂ ವಿಂಧ್ಯಭೂಧರೇ ।

ಹರಪಾಣೇಶ್ವರೀಂ ವಂದೇ ಹಂತ್ರೀಂ ವಿಬುಧವಿದ್ವಿಷಾಮ್ ॥


ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಂದ ಸದಾ ಸ್ತುತಿಸಲ್ಪಡುವ, ವಿಂಧ್ಯ ಪರ್ವತದಲ್ಲಿ ಆನಂದದಿಂದ ವಿಹರಿಸುವ, ದೇವತೆಗಳ ಶತ್ರುಗಳಾದ ರಾಕ್ಷಸರನ್ನು ಸಂಹರಿಸುವ ಮತ್ತು ಆ ಶಿವನ ಪ್ರಾಣೇಶ್ವರಿಯಾದ ಜಗನ್ಮಾತೆಗೆ (ದುರ್ಗಾ ದೇವಿಗೆ) ನಾನು ಭಕ್ತಿಯಿಂದ ನಮಸ್ಕರಿಸುತ್ತೇನೆ.