Sunday, January 14, 2007

ಜಗದಾನಂದಕಾರಕ

ಸದ್ಗುಗುರು ಶ್ರೀ ತ್ಯಾಗರಾಜಸ್ವಾಮಿ ವಿರಚಿತ ನಾಟ ರಾಗದ ಘನಪಂಚರತ್ನಕೃತಿ 'ಜಗದಾನಂದಕಾರಕ' ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರುಕೃತಿ. ನಾದೋಪಾಸನೆಯಿಂದ ಬ್ರಹ್ಮಸ್ವರೂಪದ ಸಾಕ್ಷಾತ್ಕಾರಕ್ಕೆ ಅಣುವಾಗುವಂತೆ ತ್ಯಾಗಬ್ರಹ್ಮರು ಕೃತಿರಚನೆ ಮಾಡಿ ಪಾಮರರಿಗೆ ಮೋಕ್ಷಪ್ರಧ ಸುಲಭಮಾರ್ಗ ತೋರಿಸಿಕೊಟ್ಟಿದ್ದಾರೆ. ಜಗದಾನಂದಕಾರಕದ ಬ್ರಹ್ಮಾನಂದದ ಸಾತ್ವಿಕಾಲೆಗಳಲ್ಲಿ ಸಾಕಷ್ಟು ಬಾರಿ ಮಿಂದರೂ ನನಗೆ ಇದರ ಸಗುಣಭಕ್ತಿ ಸ್ವರೂಪದ ಅರಿವಾಗಿರಲಿಲ್ಲ. ರಾಮ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಸಜ್ಜನರೊಬ್ಬರು ನನಗೆ ಇದರ ಅರಿವು ಮಾಡಿಕೊಟ್ಟರು. ಮೇಲ್ನೋಟಕ್ಕೆ ಕಾಣದ ಸ್ವಾರಸ್ಯಕರವಾದ ವಿಷಯ ಇಂತಿದೆ.

ಹತ್ತು ಚರಣಗಳುಳ್ಳ ಈ ಕೃತಿಯ ಪ್ರತಿ ಸಾಲನ್ನು ಬಿಡಿಸಿ , ಪದಪುಂಜಗಳನ್ನು ಜೋಡಿಸಿದರೆ ಆಷ್ಟ್ಟೋತ್ತರ ಶತನಾಮಾವಳಿಯು ಅಡಕವಾಗಿರುವುದು ಗೋಚರವಾಗುವುದು !!!

ಓಂ ಜಗದಾನಂದಕಾರಕಾಯ ನಮಃ
ಓಂ ಜಯ ಜಾನಕಿ ಪ್ರಾಣನಾಥಯ ನಮಃ
ಓಂ ಗಗನಾಧಿಪಸತ್ಕುಲಜಾಯ ನಮಃ .... ಇತ್ಯಾದಿ.

ಹೀಗೆ , ನಾದೋಪಾಸನ ಸಂಪ್ರದಾಯದ ನಿರ್ಗುಣಬ್ರಹ್ಮಾರಾಧನೆ ಒಂದು ಆಯಾಮವಾದರೆ , ಆಷ್ಟ್ಟೋತ್ತರ ನಾಮಸಂಕೀರ್ತನ ಒಳಗೊಂಡ ಸಗುಣಬ್ರಹ್ಮ ಸ್ವರೂಪದ ಬಣ್ಣನೆ ಇನ್ನೊಂದೆಡೆ. ಮಾಹತ್ಮರಾದ ತ್ಯಾಗಬ್ರಹ್ಮರ ಕ್ರಿತಿಗಳು ಹೀಗೆಯೆ; ಎಷ್ಟು ಬಾರಿ ಕೇಳಿದರೂ ಒಂದು ಹೊಸ ಆಯಾಮ ತಿಳಿದುಬರುತ್ತದೆ.

.

Get this widget | Track details | eSnips Social DNA

2 comments:

bhadra said...

ಮೊದಲಿಗೆ, ಮನವನ್ನು ತೇಲಿಬಿಡುವ ಅಮೋಘವಾದ ಗಾಯನ ಕರುಣಿಸಿದ್ದಕ್ಕೆ ವಂದನೆಗಳು. ನೀವು ತಿಳಿಸಿದಂತೆ, ಎಷ್ಟು ಬಾರಿ ಕೇಳಿದರೂ ಹೊಸ ಹೊಸ ವಿಷಯಗಳು ತಿಳಿಯುತ್ತಿವೆ. ಕೆಂಪು ತೋಟದಲ್ಲಿ ವಿವಿಧ ರುಚಿಯ ಪುಷ್ಟಗಳನ್ನು ಕೊಡುಗೆಯಾಗಿ ನೀಡುತ್ತಿರುವುದಕ್ಕೆ ಧನ್ಯವಾದಗಳು.

Manjunatha Kollegala said...

What a revelation... thanks for this line of thought... ಸಗುಣೋಪಾಸನೆ ಹಾಗೂ ನಿರ್ಗುಣೋಪಾಸನೆಗಳ ಸಮನ್ವಯ, ಸಗುಣದ ಸೋಪಾನದಿಂದ ನಿರ್ಗುಣದ ಪರಮಪದಕ್ಕೇರುವ ಪರಿ, ತ್ಯಾಗರಾಜರಿಗಲ್ಲದೆ ಮತ್ತಾರಿಗೆ...