Tuesday, January 16, 2007

ಸ್ತಭ್ದ

ಶಕ್ತ :

ನೀಲಿ ಭಾನು ನಿಂತ ಮೇಘ
ಜೀವ ಯಾನ ಸ್ತಭ್ದ ವೇಗ

ತುಂಬು ಪ್ರೀತಿ ನಿಂತ ರೀತಿ
ತಡೆಯಲಿಂತು ನನ್ನ ಗೆಳತಿ

ಮೋಡ ಬಿರಿದು ಮಳೆಯು ಸುರಿದು
ಜೀವ ಬಿಂದು ಧರಣಿ ಮಿಂದು

ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?

--

ಶಾಶ್ವತಿಯು ಶಕ್ತನ ಪ್ರೇಮವನ್ನು ಅಲ್ಲಗೆಳದಿರಲಿಲ್ಲ ... ಆದರೆ , ಶಕ್ತನಿಗೆ ಒಪ್ಪಿಗೆಯ ಸ್ಪಷ್ಟನುಡಿಯೂ ದೊರೆತಿರಲಿಲ್ಲ.ಒಪ್ಪಿಗೆಯ ಅಪ್ಪುಗೆ ಇನ್ನೂ ದೊರೆಯದ್ದಿದ್ದ ಪ್ರಿಯತಮನಿಗೆ ತನ್ನ ಪ್ರೇಮದ ಪಾವಿತ್ರ್ಯತೆಯ ಬಗ್ಗೆ ಸಂಪೂರ್ಣ ನಂಬಿಕೆ. ಪ್ರೇಮಾಭಿಸಾರಿಕೆಯ ಪ್ರಸಂಗದ ಮುಂಚಿತ ಕಳೆಯಬೇಕಿರುವ ನೀರವ ಸಮಯವನ್ನು ಶಕ್ತನು -- 'ಸ್ಥಭ್ದ' -- ಎಂದು ಬಣ್ಣಿಸುತ್ತಾನೆ. ತನ್ನ ಜೀವನವೆಂಬ ನೀಲಾಕಾಶದಲ್ಲಿ , ಸ್ಥಭ್ದವಾಗಿ ನಿಂತ ಮೇಘದ ರೀತಿ ತೋರುತ್ತಿತ್ತು ಆ ಸಮಯ. ಆದರೆ ತುಂಬು ಪ್ರೀತಿಯನ್ನು ಶಾಶ್ವತಿಯು ತಡೆಯಲಾರಳು. ಮೋಡ ಬಿರಿದು , ಪ್ರೇಮಾಮೃತವರ್ಶಿಣಿ ಭೋರ್ಗರೆದು , ವಸುಂಧರೆಯನ್ನು ತಣಿಸಿ, ಪ್ರಿಯತಮೆಯ ಹೃದಯದಿಂದ ಪ್ರೇಮದ ಹೊನಲು ಹರಿದು , ಸಾಗರ ಸಮಾನವಾದ ತನ್ನ ಪ್ರಣಯಾಂಬುಧಿಯನ್ನು ಸೇರುವುದು ಎಂದು ಶಕ್ತನು ಈ ಸ್ವಗತದಲ್ಲಿ ಹೇಳ ಬಯಸಿದ್ದಾನೆ.


^^ ಕಾಲ್ಪನಿಕ ಅಷ್ಟೆ :)

5 comments:

Shiv said...

ಶ್ರೀಕಾಂತ್,

ಸುಂದರ ಸಾಲುಗಳು !

ಎಲ್ಲಾ ಓಕೆ ಕೊನೆಯ ಸಾಲು 'ಕಾಲ್ಪನಿಕ' ಯಾಕೇ :)

Srikanth said...
This comment has been removed by a blog administrator.
Srikanth said...

ಶಿವು ಅವರೆ -

ನಿಮ್ಮ ಒಳ್ಳೆ ಮಾತುಗಳಿಗೆ ಧನ್ಯವಾದಗಳು.
ಕಾಲ್ಪನಿಕ ಅಂತ ಬರೆದೆ , ಹೌದು.
ಯಾಕೆ ಅಂದ್ರೆ ಇದು ನಿಜವಾಗಿಯೂ ಕಾಲ್ಪನಿಕ.

bhadra said...

ಸುಂದರ ಕಲ್ಪನೆ. ಚಂದದ ನಿರೂಪಣೆ. ಮೊದಲ ನಾಲ್ಕು ಸಾಲಿಗೂ ನಂತರದ ಸಾಲುಗಳಿಗೂ ವಿರೋಧಾಭಾಸ ಕಂಡಿತು. ಅದರ ಬಗ್ಗೆ ಹೆಚ್ಚಿನ ಯೋಚನ ಮಾಡುವ ಮೊದಲೇ ಟಿಪ್ಪಣಿಯಲ್ಲಿ ಪರಿಸ್ಥಿತಿಯನ್ನು ತಿಳಿಸಿದ್ದೀರಿ. ಇವು ನೈಜವಾದ ಮಾತುಗಳು, ಅತಿಶಯೋಕ್ತಿಯೇನಿಲ್ಲ.

ಕಾಯಕ ಇಂತೆಯೇ ಮುಂದುವರೆಯಲಿ.

Manjunatha Kollegala said...

ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?

ಸುಂದರ ಸಾಲುಗಳು. ಸಾಲಿನಿಂದ ಸಾಲಿಗೆ ಅರ್ಥ ಕುಣಿಯುತ್ತಾ ಪುಟಿಯುತ್ತಾ ಸಾಗುವ ರೀತಿ ಮುದ ನೀಡಿತು.