Wednesday, December 31, 2014

ಪತಂಜಲಿ

ಯೋಗೇನ ಚಿತ್ತಸ್ಯ ಪದೇನ ವಾಚಂ ಮಲಂ ಶರೀರಸ್ಯ ಚ ವೈದಿಕೇನ ।
ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿರಾನತೋಸ್ಮಿ ।।

ಯೋಗದಿಂದ  ಚಿತ್ತ ಶುದ್ಧಿಯನ್ನು, ವ್ಯಾಕರಣದಿಂದ ಭಾಷೆಯನ್ನು ಹಾಗು ಆಯುರ್ವೇದದಿಂದ ಶರೀರದ ಕಷ್ಮಲವನ್ನು ನಿವಾರಿಸುವ ಪತಂಜಲಿ ಮಹರ್ಷಿಗಳಿಗೆ ನನ್ನ ಪ್ರಾಂಜಲ ವಂದನೆಗಳು.

Sunday, December 28, 2014

ಗೋಮಯದಲ್ಲಿ ಲಕ್ಷ್ಮೀ



ಲಕ್ಷ್ಮೀಶ್ಚ ಗೋಮಯೇ ನಿತ್ಯಂ ಪವಿತ್ರಾ ಸರ್ವಮಂಗಲಾ|
ಗೋಮಯಾಲೇಪನಂ ತಸ್ಮಾತ್ಕರ್ತವ್ಯಂ ಪಾಂಡುನಂದನ ||

ಪವಿತ್ರಳೂ, ಸರ್ವಮಂಗಳಪ್ರದಳೂ ಆದ ಲಕ್ಷ್ಮಿಯು ಗೋಮಯದಲ್ಲಿ ಯಾವಾಗಲೂ ನೆಲೆಸಿರುವಳು. ಆದರಿಂದ ಎಲೈ ಪಾಂಡುಪುತ್ರನೇ, ಗೋಮಯದಿಂದ ಆಲೇಪವನ್ನು ಅಂದರೆ ಸಾರಣೆಯನ್ನು ಮಾಡಬೇಕು.

Saturday, November 29, 2014

ಸಂಸ್ಕೃತ ಗ್ರಾಮ


ಭಾರತದ ಐದು ಹಳ್ಳಿಗಳಲ್ಲಿ ಸಂಸ್ಕೃತವನ್ನು ನಿತ್ಯ ವ್ಯವಹಾರದಲ್ಲಿ ಬಳಸಲಾಗುತ್ತಿದೆ.
ಕರ್ನಾಟಕದ ಮತ್ತೂರು ಮತ್ತು  ಹೊಸಹಳ್ಳಿ  ಹಾಗು  ಮಧ್ಯಪ್ರದೇಶದ ಝಿರೀ , ಮೊಹದ್ ಮತ್ತು  ಬಘುವಾರ್ .

Sunday, October 26, 2014

ಗಾವೋ ವಿಶ್ವಸ್ಯ ಮಾತರಃ

ಭುಕ್ತ್ವಾ  ತೃಣಾನಿ ಶುಷ್ಕಾನಿ ಪೀತ್ವಾ ತೋಯಂ ಜಲಾಶಯಾತ್ |
ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||

ಗಾವೋ ಮಮಾಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||

ಸುರಭಿಸ್ತ್ವಂ ಜಗನ್ಮಾತಃ ನಿತ್ಯಂ ವಿಷ್ಣುಪದೇ ಸ್ಥಿತಾ |
ಮಾತರ್ಮಯಾಭಿಲಷಿತಂ ಸಫಲಂ ಕುರು ನಂದಿನಿ ||

ಗೋಗ್ರಾಸ ಕೊಡುವಾಗ
ಸುರಭಿರ್ವೈಷ್ಣವೀಮಾತಃ ಸುರಲೋಕೇ ಮಹೀಯಸೇ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಮ್ ||

ಪಂಚಗವ್ಯ ಸ್ವೀಕರಿಸುವಾಗಿನ ಮಂತ್ರ
ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರ‍ಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||

*** ಸೂರ್ಯ ಕೇತು ನಾಡಿ ***

ಭಾರತೀಯ ಗೋವಿನ ಬೆನ್ನು ಹುರಿಯಲ್ಲಿ  "ಸೂರ್ಯ ಕೇತು ನಾಡಿ" ಎಂಬ ದೈವೀಕ ನಾಡಿಯಿದೆ. ಈ ಸೂರ್ಯ ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ  ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವಾಗಿಸುತ್ತದೆ.  ಆದ್ದರಿಂದಲೇ ಭಾರತೀಯ ಗೋವಿನ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪಗಳಲ್ಲಿ ಬಂಗಾರದ ಕಣಗಳಿದ್ದು ಕಿಂಚಿತ್ ಹಳದೀ ಬಣ್ಣದಲ್ಲಿ ಕಂಗೊಳಿಸುತ್ತವೆ. 

Monday, September 29, 2014

ಅಮೃತವಚನ




ಪಂಡಿತ್ ಜಿ ಹೇಳಿದ ಅಮೃತವಚನ

ಜಗತ್ತು ಸಂಘರ್ಷಾತ್ಮಕವಲ್ಲ, ಸ್ರುಜನಾತ್ಮಕ. ಬೀಜವು ವೃಕ್ಷ ರೂಪದಲ್ಲಿ ಹೊರಬರುವುದು ಸಂಘರ್ಷದ ಉದ್ದೇಶದಿಂದಲ್ಲ, ತನ್ನ ಸ್ವಂತದ ವಿಕಾಸಕ್ಕಾಗಿ, ಸಾಕ್ಷಾತ್ಕಾರಕ್ಕಾಗಿ. ಅದರ ಜೀವನೋದ್ದೇಶವು ಇನ್ನಾವುದರ ವಿನಾಶವೂ ಅಲ್ಲ. ಆದರೆ, ಇನ್ನೊಂದಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವುದೇ ಆಗಿದೆ. ಸಂಪೂರ್ಣ ಸೃಷ್ಟಿಯ ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತದೆ. ಆದರ ಆಧಾರವು ಸಂಘರ್ಷವಲ್ಲ. ಸಹಯೋಗ. ಪಂಚ ಮಹಾಭೂತಗಳು ಜೊತೆಗೂಡುವುದು ಇನ್ನಾವುದರೊಂದಿಗೆ ಸಂಘರ್ಷ ಮಾಡಲೆಂದಲ್ಲ. ಆದರೆ ತಮ್ಮ ಪ್ರಕೃತಿಗೆ ತಕ್ಕಂತೆ ನಡೆದುಕೊಂಡು ಆ ಮೂಲಕ ಸೃಷ್ಟಿಯ ಸಾರ್ಥಕತೆಯ ಇಚ್ಚೇಯನ್ನು ಪೂರ್ಣ ಮಾಡಲೆಂದು!

Sunday, July 27, 2014

ಮುಖ ನೋಡಿ ಮಣೆ ಹಾಕು





ಇತ್ತೀಚೆಗೆ  ಮುದ್ರಣ ತಂತಜ್ಞಾನ ಪ್ರಗತಿ ಹೊಂದಿದಂತೆಲ್ಲಾ ಪುಸ್ತಕಗಳ ಮುಖಪುಟ ವಿನ್ಯಾಸ ಅದೆಷ್ಟು ಅಂದವಾಗಿರುತ್ತದೆಂದರೆ ಮುಖ ಪುಟ ನೋಡುತ್ತಲೇ ಪುಸ್ತಕ ಕೊಳ್ಳಬೇಕೆಂಬ ಮೋಹ ಹುಟ್ಟುತ್ತದೆ. ಕೊಂಡ ಪುಸ್ತಕ ಓದುತ್ತೇವೋ ಇಲ್ಲವೋ ಆ ಸುಂದರ ವಸ್ತುವನ್ನು ನಮ್ಮದಾಗಿಸಿ ಕೊಳ್ಳಬೇಕೆಂಬ ಮಹಾದಾಸೆ ಪುಸ್ತಕವನ್ನು ಕೊಳ್ಳುವಂತೆ ಮಾಡುತ್ತದೆ. ಇದು ಒಂದು ರೀತಿ ಸಾತ್ವಿಕ ಮೋಹ.

ಆಸ್ಟ್ರೇಲಿಯಾದ ಸಿಡ್ನಿ ಡೌನ್ ಟೌನ್ ನ (Downtown) ಪಿಟ್ಟ್ ಸ್ಟ್ರೀಟ್ ನಲ್ಲಿ (Pitt St.) ಎಲಿಜಬೆತ್ ಪುಸ್ತಕದ ಅಂಗಡಿ  ಇದೆ.  "ಪುಸ್ತಕವನ್ನು ಮುಖಪುಟದಿಂದ ಅಳಿಯಬೇಡಿ"  (Do not judge a book by its cover) - ಎಂಬ ಶೀರ್ಷಿಕೆಯ ಬೋರ್ಡ್ ನೊಂದಿಗೆ ಒಂದು ವಿನೂತನ ಪ್ರಯೋಗವನ್ನು ಅಲ್ಲಿ ಕಂಡೆ.  ಒಂದು ಪುಸ್ತಕವನ್ನು ಅಂದವಾಗಿ  wrap ಮಾಡಿ, cover ನ ಮೇಲೆ ಪುಸ್ತಕವನ್ನು ವಿವರಿಸುವ ಕೆಲವು ಪದಗಳನ್ನು ಬರೆಯಲಾಗಿತ್ತು. ಉದಾಹರಣೆಗೆ -- "ಇತಿಹಾಸ", " ಎರಡನೇ ವಿಶ್ವ ಯುದ್ಧ", "ತಂತ್ರಜ್ಞಾನ", "ಕಾಂಗರೂ" ಇತ್ಯಾದಿ. ಪುಸ್ತಕದ ಹೆಸರಾಗಲಿ, ಲೇಖಕನ ಹೆಸರಾಗಲೀ, ಮುಖಪುಟವಾಗಲಿ ತೋರಿಕೊಳ್ಳುವುದಿಲ್ಲ. ಪುಸ್ತಕದ ಒಳಗಿನ ವಿಷಯದ ಆಧಾರದ ಮೇಲೆ ಖರೀದಿ ನಡೆಯ ಬೇಕು. ಈ ರೀತಿ ಮಾಡುವುದರಿಂದ ಕೊಂಡ ಪುಸ್ತಕ ಯಾವುದಿರ ಬಹುದು ಎಂಬ ಕುತೂಹಲ ಮೂಡುತ್ತದೆ. ಪುಸ್ತಕ ಕೊಳ್ಳುವ ಪ್ರಕ್ರಿಯೆಯಲ್ಲಿ ಅತಿಶಯ ಸಂತೋಷವು ಆಗಿ ಬರುತ್ತದೆ. 

Thursday, June 26, 2014

ಏಕಾತ್ಮಮಾನವತೆ

ಸೃಷ್ಟಿಯಲ್ಲಿ ಸಂಘರ್ಷ  ಸ್ಪರ್ಧೆಗಳು ಇರುವಂತೆ ಸಹಕಾರ ಸಹಯೋಗಗಳೂ ಇವೆ. ಜಗತ್ತಿನ ವಿವಿಧ ಅಂಗಗಳ ಪರಸ್ಪರ ಪೂರಕತೆಯನ್ನು ಮನಗಂಡವರು ಭಾರತೀಯ ದಾರ್ಶನಿಕರು. ವ್ಯಕ್ತಿಯೂ ಸಮಾಜವೂ ವಿವಿಧ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಸರಿಸುವ ಕ್ರಮಗಳು ಘರ್ಷಣೆಗೆ ಎಡೆಗೊಡದಂತೆ ನೋಡಿಕೊಳ್ಳುವ ಸೂತ್ರವೇ ಧರ್ಮ. ವ್ಯಕ್ತಿ ಸ್ವಾರ್ಥಕ್ಕೆ ಪ್ರತಿಯಾದ ಸಮಷ್ಟಿ ದೃಷ್ಟಿಯೇ ಧರ್ಮ -- ಏಕಾತ್ಮಮಾನವತೆ

Wednesday, April 30, 2014

ಸಂಗೀತ ಜ್ಞಾನ

ತ್ರಿವರ್ಗ ಫಲದಾಃ ಸರ್ವೇ ದಾನಯಜ್ಞ ಜಪಾದಯಃ ।
ಏಕಂ ಸಂಗೀತ ವಿಜ್ಞಾನಂ ಚತುರ್ವರ್ಗ ಫಲಪ್ರದಂ ।।

ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು 

Sunday, March 30, 2014

ಕಾಯೋ ಶ್ರೀ ಗೌರಿ ಕರುಣಾಲಹರಿ



ಕಾಯೋ ಶ್ರೀ ಗೌರಿ ಕರುಣಾಲಹರಿ
ತೊಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ ಕೊಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ .. ||||
ಶುಂಬಾದಿಮ ದಾಮ್ಬೋನಿಧಿ ಕುಮ್ಬಜ ನಿಭ ದೇವಿ
ಜಮ್ಭಾಹಿತ ಸಂಭಾವಿತೆ ಶಾಂಭವಿ ಶುಭವೀ ||||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ ||||

Thursday, January 30, 2014

ಶ್ರೀ ಕೃಷ್ಣ ಸ್ತುತಿ



ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ ದಶಾಶ್ವಮೇಧಾವ ಭ್ರುತೇನ ತುಲ್ಯಃ ।
ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣ  ಪ್ರಣಾಮಿ ನ ಪುನರ್ಭವಾಯ ।।

 ಶ್ರೀ ಕೃಷ್ಣನಿಗೆ ಮಾಡಿದಂತಹ ಒಂದು ಪ್ರನಾಮವು ಹತ್ತು ಅಶ್ವಮೇಧ ಯಾಗಗಳ ಅವಭೃತ ಸ್ನಾನಕ್ಕೆ ಸಮಾನವಾಗಿದೆ. ಆದರೆ  ಈ ಅಶ್ವಮೇಧ ಯಾಗದ ಪುಣ್ಯ ಭೊಗಿಸಿದ ನಂತರ ಮತ್ತೆ ಸಂಸಾರ ಬಂಧನಕ್ಕೆ  ಬರುತ್ತಾರೆ. ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದವರು ಮತ್ತೆ ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ.