Monday, May 14, 2007

ನಿಸ್ತರಂಗ !

ಹೆದ್ದೆರೆಯ ಗದ್ದಲದಿ
ಹದ್ದುಮೀರಿದ ಸದ್ದು.
ಮಬ್ಬು ಹೊದ್ದುನಿಂದ
ಯೋಚನೆಯು
ಭುಗಿಲೆದ್ದು;
ಸುಲೋಚನೆಯ
ಕಂಗಳಿಂ ನುಡಿದ
ವಿವೇಚನೆಯ ಮದ್ದು
ಮುದದೆ ಮೂಡಿಸಿಹುದು:
ನಿಸ್ತರಂಗ ಶಾಂತತೇಜ!

ಭಾವಾರ್ಥ :
The tumultous noise of the roaring waves rising above the threshold ; And, the thoughts impersonating as imposters surfaced with volcanic overtones.Only to be subsided by the assuring glances of the doe eyed one. Ah, and now you see a rippleless ocean of tranquility - that of vibrant calm!

Saturday, May 05, 2007

ನೀನು

ನನ್ನ ನಲ್ಮೆಯ ಮಿತ್ರರಾದ ಕೆ.ಎಸ್. ಮಂಜುನಾಥ ಅವರ ಲಹರಿ. ಇದು ನನಗೆ ಬಹಳಾ ಹಿಡಿಸಿದ ಕವನವಾದ್ದರಿಂದ , ಅವರ ಸಮ್ಮತಿಯ ಮೇರೆಗೆ ಇಲ್ಲಿ ಇರಿಸಿರುವೆ.

---
ನೀನು
---
ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರದ ಗಾಂಧಾರ-
ದಾಚೆಯ ದಾರಿ
ಗಮನಶ್ರಮ.

ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಬಹುದು,
ಅಥವ
ಎನ್ನ ನೀನಿಲ್ಲಿಂದ ಉದ್ಧರಿಸಿಕೊಳಬಹುದು;
ಎರಡೂ ಪಾವನ.

ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?

---
ಅಬ್ಬಾ ಎಂಥ ಕವನ!

ಮಂಜುನಾಥ ಅವರ ನುಡಿಯಲ್ಲಿ ಈ ಕವನದ ಟಿಪ್ಪಣಿ :

" ಕನ್ನಡದಲ್ಲಿ ಸಂಗೀತ, ಆಧ್ಯಾತ್ಮಗಳ ಪ್ರತಿಮೆಯನ್ನು ಕಾವ್ಯಕ್ಕೆ ಬಳಸಿಕೊಳ್ಳುವ ಪ್ರಯೋಗವನ್ನು ಬೇಂದ್ರೆ, ಕುವೆಂಪು, ಅಡಿಗ ಹೀಗೆ ಸಾಕಷ್ಟು ಜನ ಮಾಡಿದ್ದಾರೆ, ಇದೊಂದು ಸಣ್ಣ ಪ್ರಯತ್ನ.

ಪ್ರಿಯ-ಪ್ರಿಯತಮೆ; ಜೀವಾತ್ಮ-ಪರಮಾತ್ಮ; ಅಥವ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ" ಯಾವುದೇ ಚೇತನದ ತಹತಹಿಕೆಯನ್ನು ಗ್ರಹಿಸುವುದು ಈ ಕವನದ ಉದ್ದೇಶ. ಪ್ರೇಮ, ಅದರ ಉತ್ಕಟಸ್ಥಿತಿಯಲ್ಲಿ ಆಧ್ಯಾತ್ಮ ತಾನೇ? ಮನಸ್ಸಿನಲ್ಲಿ ಹೀಗೇ ಕವನ ರೂಪುಗೊಳ್ಳುತ್ತಿದ್ದಾಗ ನಾನು ಕೇಳುತ್ತಿದ್ದ ರಾಗದ ಹೆಸರು (ಕಾಕತಾಳೀಯವಾಗಿ) "ಗಮನಶ್ರಮ" (ಪೂರ್ವಿ ಕಲ್ಯಾಣಿ ರಾಗದ ಮೇಳ ರಾಗ). ಸಂಗೀತದಲ್ಲಿ ಷಡ್ಜ-ಪಂಚಮಗಳು ಸಹಜವಾಗೇ ಒಂದು ಅಪೂರ್ವ ಸಾಮರಸ್ಯ ಹೊಂದಿದೆ (made for each other kind of hormoney ಅನ್ನೋಣ). ಆದರೆ ತಾರ ಷಡ್ಜ - ಮಂದ್ರ ಪಂಚಮಗಳ ಅಂತರ ಸಹಜವಾಗೇ ಈ ಸಮಾಗಮಕ್ಕೆ ಅಡ್ಡವಾಗಿದೆ, ಇದು ಯಾವುದೇ ಅಗಲಿಕೆಯ ಮನಸ್ಥಿತಿಯನ್ನು ಸೂಚಿಸುತ್ತದೆ. these two notes can not meet each other from such distance with discrete rendition. ಆದರೆ ಗಮಕ (glide movement)ಗಳ ಬಳಕೆಯಿಂದ ಈ ದೈವೀ ಸಮಾಗಮ ಸಾಧ್ಯ. ಆದ್ದರಿಂದ ಈ ಗಮಕವನ್ನು ದೇವಯಾನ ವಿಮಾನ ಎಂದಿದ್ದೇನೆ. ಮತ್ತೂ ಈ ಗಮಕಗಳು ಮೇಲಿನಿಂದ ಬಂದರೇ ಚೆನ್ನ, ಅಥವ, ಮೇಲಿನಿಂದ ಇಳಿದು, ತಗ್ಗಿನಿಂದ ಮತ್ತೆ ಮೇಲೇರಿದರೆ ಇನೂ ಸೊಗಸು. ಮತ್ತೆ, "ಪಂಚಮ" ಒಂದು ತಗ್ಗಿನ, ಅಸೃಷ್ಯ ಜಾತಿಯನ್ನು ಸಹ ಸೂಚಿಸುವುದರಿಂದ, ಮಂದ್ರ ಹಾಗೂ ಪಂಚಮ ಪದಗಳು ಪರಸ್ಪರ ಆ ದೈನ್ಯ ಸ್ಥಿತಿಯ ಅರ್ಥವನ್ನು ಗಾಢವಾಗಿಸುತ್ತದೆ. ಹಾಗೇ ತಾರೆಯು ನಿಲುಕದ ನಕ್ಷತ್ರವಾದರೂ ಸೈ. "

..


Get this widget | Track details | eSnips Social DNA