Wednesday, January 24, 2007

ದಿಗ್ದಿಗಂತದ ಕಡೆಗೆ !!!

ಶಕ್ತನಿಗೆ ಶಾಶ್ವತಿಯು ಒಮ್ಮೆ ಶ್ಯಾಮಲೆಯಾಗಿ ತೋರಿದರೆ ಮಗದೊಮ್ಮೆ ಸಾಧನೆಯಾಗಿ ಅವತರಿಸುತ್ತಾಳೆ. ಸಾದನಾಕಾಂಕ್ಷಿಯಾದ ಶಕ್ತನು ತನ್ನ ಶಾಶ್ವತಿ ಜೊತೆಗಿದ್ದರೆ, ಸಾಧನೆಯ ದಿಗ್ದಿಗಂತದ ತನಕ ಪಯಣ ಬೆಳೆಸುವೆನು ಎಂದು ಘೊಷಿಸುತಾನೆ. ಬದಿಗೆ ಶ್ಯಾಮಲೆಯ ನಗು ಮೊಗವು ಒಂದಿದ್ದರೆ ಸಾಕು , ಶಕ್ತನು ದಣಿವೆನದೆ ದುಡಿದು ಬಾಳಹಾದಿಯನ್ನು ಹದವಾದ ಪುಷ್ಪಪಥವಾಗಿಸುತ್ತಾನಂತೆ.
ಇದೇ ಭಾವವನ್ನು ಶಕ್ತನು ಇಂತೆಂದು ಶಾಶ್ವತಿಯಲ್ಲಿ ತೋಡಿಕೊಳ್ಳುತಾನೆ

ಶಕ್ತ :

ನಡೆವ ಬಾ , ಕೈ ಹಿಡಿದು
ದಿಗ್ದಿಗಂತದ ಕಡೆಗೆ..
ಎಡೆಬಿಡದೆ ನಾ ನಡೆವೆ
ದಣಿವಿರದೆ, ಒಲವೇ!

ಮುದದ ನಗುಮೊಗವಿರಲು,
ಬದಿಗೆ ಸಖಿ ನೀನಿರಲು,
ಹಾದಿಯದು ಹದದ
ಸುಮಪಥವೆಂಬೆ , ಚೆಲುವೆ!

1 comment:

srinivas said...

ಶಕ್ತನು ತನ್ನ ಸ್ಫೂರ್ತಿಯ ಸೆಲೆಯನ್ನು ಬಹಳ ಚೆನ್ನಾಗಿ ಅರಿತಿದ್ದಾನೆ. ಉನ್ನತ ಸ್ಥಾನವೇರಿರುವುದರಲ್ಲಿ ಸಂಶಯವೇ ಇಲ್ಲ.

ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ವಂದನೆಗಳು