Friday, June 29, 2007

ಆನೆ ಬಂತೊಂದಾನೆ

ಕಾರ್ತೀಕ ಮಾಸದ ತದಿಗೆ.ಕಚೇರಿಯಲ್ಲಿ ಫೈಲ್ ತಿರುವು ಹಾಕುತ್ತಿದ್ದಾಗ, ಏಡಗೈ ಕಿರುಬೆರಳಿಗೆ ಏನೋ ಒತ್ತಿದ ಹಾಗೆ ಆಯಿತು.ಒಮ್ಮೆ ಕಣ್ಣು ಹಾಯಿಸಿ ಸುಮ್ಮನಾದೆ. ಮೂರು ದಿನಗಳ ನಂತರ ಚಹಾ ಹೀರುತ್ತಾ, ಮತ್ತೊಮ್ಮೆ ಆ ಹುಣ್ಣನ್ನು ಗಮನಿಸಿದೆ.ಗಾತ್ರದಲ್ಲಿ ಬೆಳೆದ್ದಿತ್ತಾದರೂ ; ಅದರ ಆಕಾರ, ಗಮ್ಮತ್ತು ಪೂರ್ಣವಾಗಿ ತಿಳಿಯದಾಗಲಿಲ್ಲ.ಸರಿ ಸುಮಾರು ನಾಲ್ಕು ದಿನಗಳ ನಂತರ ಬೂದುಗಾಜಿನಲ್ಲಿ ನೊಡಿದರೆ ಅಂಗೈ ಹುಣ್ಣು ಒಂದು ಸಣ್ಣ ಆನೆಯ ಆಕಾರವನ್ನು ಹೋಲುವ ರೀತಿ ಹೊರಗೆ ಜೋತು ಬೀಳುತ್ತಿತ್ತು.ಮರಿ ಆನೆಯ ಬಾಲ ನನ್ನ ಕಿರುಬೆರಳಿನ ತುದಿಗೆ ಅಂಟಿಕೊಂಡು ವಾಲಾಡುತ್ತಿದ್ದಿತು. ಪುಟ್ಟ ಕುಂಜರ ನನ್ನ ಕಿರುಬೆರಳಿನ ಬಂದಿ. ಅದು ಏಷ್ಟೆ ಜಿಗುದು, ನಲಿದು, ಅಲುಗಾಡಿದರೂ ನನ್ನ ಇಚ್ಚಾನುಸಾರವೇ ಕುಣಿಯ ಬೇಕು.ಸಾಂದರ್ಭಿಕವಾಗಿ ನನ್ನ ಸ್ನೇಹಿತರಿಗೆ ನನ್ನ ಕಿರುಬೆರಳಿನ ಹುಣ್ಣನ್ನು ತೊರಿಸಿದೆ. ವೈದ್ಯರಲ್ಲಿ ತಪಾಸಣೆ ಮಾಡಿಸುವಂತೆ ಎಲ್ಲರೂ ಸೂಚಿಸಿದರು. ನಾನು ವೈದ್ಯರಲ್ಲಿ ಹೊಗುವ ಗೋಜಿಗೆ ಹೊಗಲಿಲ್ಲ. ಈ ಆನೆಯ ಆಕಾರದ ವೃಣವು ನನ್ನನು ಸೂರೆಗೊಂಡಿತ್ತು. ಅದು ಬೆಳೆಯುತ್ತಿರುವ ವಿಧಾನ; ಅದು ನನ್ನ ಕಿರುಬೆರಳಿಗೆ ಬಂದಿಯಾಗಿದ್ದರೂ, ಚಲಿಸಲು ಮಾಡುವ ಪ್ರಯತ್ನ, ಎಲ್ಲವೂ ನನಗೆ ಅಚ್ಚುಮೆಚ್ಚು. ನಾನು ಒಬ್ಬ ಭಾವುಕ ಪ್ರಾಣಿ. ನನ್ನ ಪುಟ್ಟ ಅನೆಯ ಜೊತೆ ಸ್ನೇಹ ಬೆಳೆಸಿದೆ. ಅದೂ ಸಹ ನನ್ನ ಸ್ನೇಹಕ್ಕೆ ಸಹಸ್ಪಂದಿಸಿತು. ದಿನವಿಡಿ ಅದರ ಜೊತೆ 'ಆನೆ ಬಂತೊಂದಾನೆ,ಯಾವೂರಾನೆ, ಬೀಜಾಪುರದಾನೆ' ಆಡ್ತಾ ಇದ್ದೆ. ಮತ್ತೆ, ಹಾಂ.. ಅದಕ್ಕೆ ಹುಲ್ಲು, ಸೊಪ್ಪು, ಗೆಡ್ಡೆ ಗೆಣಸು, ಸಿಹಿಕಬ್ಬು ಅಂದರೆ ಪಂಚಪ್ರಾಣ. ದಿನಾಲು ಆಟವಾಡಿದ ತರುವಾಯ ಈ ಎಲ್ಲ ತಿನಿಸುಗಳನ್ನು ಅದಕ್ಕೆ ಪ್ರೀತಿಯಿಂದ ನೀಡಿದೆ. ಒಮ್ಮೆಮ್ಮೆ ನನ್ನ ಸ್ನೇಹಿತ ಕಬ್ಬಿನ ತುಂಡುಗಳನ್ನು ತನ್ನ ಸೊಂಡಲಿನಿಂದ ಹಿಡಿಯಲು ಹಾತೊರೆಯುತ್ತಿದ್ದ. ನನ್ನ ಮುಷ್ಟಿಯನ್ನು ನಾನು ಗಟ್ಟಿಗಾಗಿ ಹಿಡಿದರೆ, ಬಡಪಾಯಿ ಗಜರಾಜ ಆಹಾರವನ್ನು ಏಟುಕಿಸಿಕೊಳ್ಳಲ್ಲು ಕಷ್ಟಪಡುತ್ತಿದ್ದ. ದಿನಗಳು ಉರುಳಿದಂತೆ ಈ ಗಜರಾಜ ನನ್ನದೇ ಆದ ಒಂದು ಅಂಶ ಎಂದು ಗೊಚರವಾಯಿತು -- ನನ್ನ ಅತ್ಯಂತ ದುರ್ಬಲ ಅಂಶ ಅನ್ನೋಣವೇ? . ಹೊರಜಗತ್ತಿನ ಸಂಪರ್ಕವೇ ನನಗೆ ಬೇಡವೆನಿಸಿತು. ನಾನು ಮತ್ತು ನನ್ನ ಬೀಜಾಪುರದ ಆನೆ. ಇದೇ ನನ್ನ ಜೀವನ. ಕಾಲಕ್ರಮೇಣ ನನ್ನ ಗಜರಾಜ ಆಡಿನ ಗಾತ್ರದಷ್ಟು ಬೇಳದು ನಿಂತ. ವಾಮನ ತ್ರಿವಿಕ್ರಮನಾದಂತೆ.ಆಡಿನ ಗಾತ್ರದ ಗಜರಾಜನೊಡನೆ ಆಟವಾಡುತ್ತ ನಾನೂ ಸಹ ಆಡಿನ ಗಾತ್ರವಾಗಿರುವೆನು ಎಂಬ ಅರಿವು ನನಗೆ ಕೂಡಲೇ ಮೂಡಲೇ ಇಲ್ಲ. ದಿನೆ ದಿನೆ ನಾನು ಕ್ಷೀಣಿಸುತ್ತಾ ಬಂದೆ. 'ಆಡೂ ಆನೆಯಾ ನುಂಗಿ, ಗೋಡೆ ಸುಣ್ಣಾವಾ ನುಂಗಿ,' ಎಲ್ಲೊ ಕೇಳಿದಂತಿದೆ, ಅಲ್ಲವೆ? ಬೆಳೆದು ನಿಂತ ಈ ಭಾಗವನ್ನು ನಾನು ಕಡಿದು ಹಾಕಲಾರೆ. ದಿನಾಲು ನಾನು ಮಂಚದಮೇಲೆ ಅಂಗಾತ ಮಲಗಿದರೆ, ಗಜರಾಜ ನೆಲದ ಮೇಲೆ ನನ್ನ ಬದಿಯಲ್ಲಿ ಮಲಗುತಿದ್ದ. ನನ್ನ ಏಡಗೈಯನ್ನು ನಾನು ಮಂಚದಿಂದ ತುಸು ದೂರ ಚಾಚಿ, ಗಜರಾಜ ಆರಾಮವಾಗಿ ನೆಲೆದ ಮೇಲೆ ಮಲಗಲು ಅನುವಾಗುವಂತೆ (ನಾನು) ಮಲಗಲು ಆರಂಭಿಸಿದೆ. ಇಂದು ಮುಂಜಾನೆ ನನಗೆ ಎಚ್ಚರವಾದಾಗ,ನಾನು ನನ್ನ ಬೀಜಾಪುರದ ಆನೆಯ ಮೇಲೆ ಜಂಬೂ ಸವಾರಿ ಮಾಡುತ್ತಿದ್ದೇನೆ. ಅಬ್ಬಾ, ಏನಾಶ್ಚರ್ಯ!!! ಅಂತು ಕಿರಿದಾದ ವೃಣವು ಬೆಳೆದು ನಿಂತು ಗಜಗಾತ್ರವಾಗಿ, ನನ್ನನ್ನು ತೃಣವೆನಿಸಿದೆ. ಈ ದಿನ ನಾನು ಅದರ ಬೆನ್ನಿನ ಮೇಲೆ ಸವಾರಿ ಮಾಡುವ ಸಣ್ನ ಜಂತುವಾಗಿರುವೆನು. ಹಾಗೆ, ಅದರ ಬೆನ್ನಿನಿಂದ ಉರುಳಿ, ಅದರ ಬಾಲವನ್ನು ಹಿಡಿದು ಜೋತು ಬೀಳುತಿರುವೆ.ಒಂದಾನೊಂದು ಕಾಲದಲ್ಲಿ, ವೃಣ ನನ್ನ ಕಿರುಬೆರಳು-ಮುಷ್ಟಿಯ ಆದೀನವಾಗಿದ್ದಂತೆ, ಈ ದಿನ ನಾನು ಅದರ ಕೈವಶವಾಗಿರುವೆ. ವಿಧಿವಿಲಾಸದ ಈ ಘಳಿಗೆಯಲ್ಲಿ ನಾನು ಆಶಾವಾದಿಯಾಗಿರುವೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಗಜರಾಜನಿಗೆ ಈಯ್ಯುವ ಕಾಯಿ - ತಿನಿಸು ನನಗೂ ಎಟುಕುವಂತಿದೆ.ನನಗೂ ಅದರಲ್ಲಿ ಪಾಲು ಸಿಗುತ್ತಿದೆ.ಮಗ್ಧರು. ತಮ್ಮ ನೆಚ್ಚಿನ ದೇವಳದ ಐರಾವತ ಕ್ಷೀಣಿಸುತಿರುವುದು ಅವರಿಗೆ ತಿಳಿಯುತ್ತಿಲ್ಲ. ಪಾಪ, ಇವರಿಗೇನು ಗೊತ್ತು, ಈ ಗಜರಾಜ ನನ್ನ ಇರುವಿಕೆಯಲ್ಲಿ ಅಡಕವಾಗಿರುವ ಭವಿಷ್ಯತ್ತಿನ ಗುಣ(ವಿ)ಶೇಷ ಮಾತ್ರವೆಂದು! ಹೌದು,ಈಗ 'ಗಜೇಂದ್ರಮೋಕ್ಷ'ಕ್ಕೆ ಕಾಯುತಿರುವೆ.

*************************************************

Credits and Courtesy:Based on a short story, 'Essence and Attribute' by Argentine author, Fernando Sorrentino. Translated to English by: Clark M. Zlotchew. Translated and adapted to Kannada by : yours truly, Srikanth Venkatesh.The characters and certain scenarios have been indianised to induce contextual humour. The Plot and theme, however are based on the original work.

*************************************************

Thursday, June 14, 2007

ಅವನು

ಹೊರಗೆ ಧಾರಾಕಾರವಾಗಿ ಮಳೆ. ಗರ್ಭಗುಡಿಗೆ ಬೀಗ ಬಿಗಿದು, ದೇವರನ್ನು ಪೂಜಾರಪ್ಪ ಕೂಡಿಟ್ಟು ಹೋಗಿದ್ದಾಗಿತ್ತು.ಮಳೆಗಾಲ ನೋಡಿ; ಘಂಟೆ ಏಳು ಹೋಡೆಯುವಷ್ಟರಲ್ಲಿ ಶಾಸ್ತ್ರಿಗಳು ಬೇಚ್ಚಗೆ ಮನೆ ಸೇರುತಿದ್ದರು. ತದನಂತರ ಭಗವಂತನಿಗೆ ಏಕಾಂತ ಸೇವೆಯೇ ಗಟ್ಟಿ. ಈತ ನಡುಗುತ್ತ ಅಲ್ಲಿ ತಲುಪಿದಾಗ ಕಡುಗತ್ತಲೆ.ಹೋರಗೆ ಧಾರಕಾರವಾಗಿ ಮಳೆ. ಗರ್ಭಗುಡಿಯಲ್ಲಿ ಸಣ್ಣನೆಯ ನಂದಾದೀಪ. ತುಸು ಬೇಳಕು. ಲಿಂಗದ ಮೇಲೆ ನಿರ್ಮಾಲ್ಯದ ಹೂವು.ಜಟಾಶಂಕರನ ಜಟೆಯ ಮೇಲೆ ಓಣಗಿದ ತುಂಬೆಹಾರ. ಬಹಳಾ ಹೆದರಿದ್ದ ಪಾಪ. ಮುಂಜಾನೆಯಾಗುವಷ್ಟರಲ್ಲಿ ಏನಾದರು ಮಾಡಿ ಸಮಸ್ಯೆಗೆ ಪರಿಹಾರ ಹುಡುಕಲೇ ಬೇಕು. ಮುಂದಿನ ಊರು ಸೇರೋಣವೆಂದರೆ ಮಳೆ. ರಸ್ತೆ ಹದಗೇಟ್ಟಿದೆ. ಏತ್ತಿನ ಗಾಡಿಯ ಬಗ್ಗೆ ನೆನೆಯುವುದೂ ನಿರರ್ಥಕ. ನಿಸ್ಸಹಾಯನಾಗಿ ಸುಕನಾಸಿಯಿಂದ ಗರ್ಭಗುಡಿಯ ಬಳಿ ಬಂದು ಅಲ್ಲೆ ಕುಳಿತ. ನುಡುಗುತ್ತಿದ ಪಾಪ. ಮುಂಜಾನೆ ಇಂದ ಏನೂ ತಿಂದಿರಲಿಲ್ಲ. ಒಮ್ಮೆ ದೇವರನ್ನು ಹರಕೆ ಮಾಡಿ, ಬೇಡಿಕೊಂಡು ನಮಸ್ಕರಿಸುವ ಭಾವ ಮೂಡಿತು. ಕೈ ಜೋಡಿಸಿ ಮುಕ್ಕಣ್ಣನಿಗೆ ಮುಗಿಯುವಷ್ಟರಲ್ಲಿ ಅಡ್ಡ ಬಂದದ್ದು ಅಹಂಭಾವ. ಅಥವಾ.... ಅಹಂಭಾವವಿರಲಾರದು. ವ್ಯಕ್ತಿ ಒಳ್ಳೆಯವನು.ದುರಹಂಕಾರಿಯಲ್ಲ ಬಿಡಿ. ನಾಳೆ ಮುಂಜಾನೆ ವೇಳೆಗೆ ಏನಾದರೊಂದು ಆಗಲೇ ಬೇಕು. ಇತ್ಯರ್ಥವಾಗಲೇ ಬೇಕು. ಮತ್ತೋಮ್ಮೆ ಭಗವಂತನನ್ನು ಭಕ್ತಿಮಾಡಿ ಓಲಿಸಿಕೋಳ್ಳುವ ಪ್ರಯತ್ನ ನಡೆಯಿತು. ಈ ಗಂಡಾಂತರದಿಂದ ಶಿವಪ್ಪ ಪಾರು ಮಾಡಬಹುದು, ಆದರೆ ನಾನು ಚಿರಕಾಲ ಶಿವನ ಆಧೀನನಾಗ ಬೇಕೇನೊ ಏಂಬ ವಿರೋಧಾಭಾಸವಾದ ಭಾವ ಬಂದು ಕಾಡಿತು. ಸುಮ್ಮನಾದ. ನಾಳೆ ಸೋಲೋ - ಗೇಲುವೋ , ಏನಾದರೊಂದು ಆಗಲಿ. ಆದರೆ ನಾಳಿನ ಜಯದ ಸಲುವಾಗಿ ಮುಕ್ಕಣ್ಣನಿಗೆ ಮುಗಿದು, ಜೀವನ ಪರ್ಯಂತ ಶಿವನ ಬಂದಿ ಆಗಲಾರ. ನಾಳಿನ ಅಪಜಯವೇ ಮೇಲು; ಚಿರಕಾಲದ ಆಧೀನಕ್ಕಿಂತ. ದೇವರ ಮೇಹರುಬಾನಿ ನನಗೇನು ಬೇಡ. ನನ್ನ ನೋವು- ನಲಿವು ನನಗೆ ಇರಲಿ. ತಿರುಗಿ ಹೋರಗೆ ನಡೆಯಲಾರಂಭಿಸಿದ. ಹೋಗಲಾಗಲಿಲ್ಲ. ಲಿಂಗದ ಮುಂದೆ ನಿಂತು 'ದೇವರಿಲ್ಲದಿರಲಿ' ಎಂದು ದೇವರನ್ನೆ ಪ್ರಾರ್ಥಿಸಿ, ಮತ್ತೆ ಪ್ರಾಕಾರದ ಕಡೆಗೆ ನಡೆಯುವಷ್ಟರಲ್ಲಿ, ಗಾಳಿ ಬೀಸಿ ದೀಪ ಆರಿತು. ಕತ್ತಲ್ಲಲ್ಲಿ ಮುಕ್ಕಣ್ಣೇಷ್ವರ ತನ್ನೋಳಗೆ ತಾನೆ ನಕ್ಕನಂತೆ. ಸೋತ ತುಂಬೆಯ ಹಾರ ಕೇಳಗೆ ಬಿದ್ದಿತು.ಈತ ನಡುಗುತ್ತಿದ. ಮಳೆ ಇನ್ನು ಹೇಚ್ಚಾಗುತ್ತಿದೆ. ಮಿಂಚು. ಗುಡುಗು.ಸಮಯ ಮುಂಜಾನೆ ನಾಲ್ಕು ಘಂಟೆ.