Sunday, June 21, 2020

आषाढस्य प्रथम दिवसे

आषाढस्य प्रथम दिवसे मेघमाश्र्लिष्टस्नुं
वप्रक्रिडा-परिणत-गज प्रेक्षणीयं ददर्श  ||


ವಿನಾ ವೇದಂ ವಿನಾ ಜಿತಾಂ  ವಿನಾ ರಾಮಾಯಣೀ ಕಥಾಂ ।
ವಿನಾ ಕವಿಂ ಕಾಲಿದಾಸಾಂ ಕಾದೃಶೀ ಭಾರತೀಯತಾ ॥

Thursday, June 18, 2020

ದಶಕಂ ಧರ್ಮಲಕ್ಷಣಂ


ಧೃತಿ ಕ್ಷಮಾ ದಮೋsಸ್ತೇಯಮ್ ಶೌಚಮಿನ್ದ್ರಿಯನಿಗ್ರಹಮ್ |
ಧೀಃ ವಿದ್ಯಾ ಸತ್ಯಮಕ್ರೋಧಂ ದಶಕಂ ಧರ್ಮಲಕ್ಷಣಂ||

ಧೃಡನಿರ್ಧಾರಕ್ಷಮೆ, ದಮ, ಕಳವು ಮಾಡದಿರುವಿಕೆ, ಶುಚಿತ್ವ, ಇನ್ದ್ರಿಯ ನಿಗ್ರಹ, ಬುಧಿಶಕ್ತಿ, ವಿದ್ಯಾ, ಸತ್ಯವಚನ, ಕೋಪಗೊಳ್ಳದಿರುವಿಕೆ, ಹತ್ತು ಧರ್ಮದ  ಆಚರಣೆಯ ಲಕ್ಷಣಗಳು.


ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
 ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||

ಯಾಗ-ಯಜ್ಞ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದುಕ್ಷಮಾಗುಣಲೋಭವಿಲ್ಲದಿರುವುದು  ಇವು ಎಂಟು  ಧರ್ಮಾಚರಣೆಯ  ಉಪಾಯಗಳು.



#Dharma; 

Tuesday, June 16, 2020

ರಸಸಿದ್ದಾಃ


ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

_ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಆ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು-ಸಾವುಗಳಿಂದಾಗುವ ಭಯವು ಇರುವುದಿಲ್ಲ._

ಭರ್ತೃಹರಿಯ ನೀತಿಶತಕದ "ವಿದ್ವತ್ಪದ್ಧತಿ" ಎನ್ನುವ ವಿಭಾಗದಲ್ಲಿ ವಿದ್ವಾಂಸರ ಸರ್ವೋತ್ತಮತ್ವವನ್ನು ತಿಳಿಸುತ್ತಾ ಈ ಶ್ಲೋಕದೊಂದಿಗೆ ಅಧ್ಯಾಯವನ್ನು ಮುಗಿಸುತ್ತಾರೆ. 

Wednesday, June 03, 2020

ಸತ್ಯಂ ಶಿವಂ ಸುಂದರಂ.

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ |
 ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ ||

ಸ್ವಭಾವತಃ ಸುಂದರವಾದುದು ಮತ್ತು ಸುಂದರವಲ್ಲದುದ್(ಕುರೋಪವಾಗಿರುವುದು) ಎಂದು ಏನಾದರೂ ಇದೆಯೇನು ? ಯಾರಿಗೆ ಯಾವುದು ಇಷ್ಟವಾಗುತ್ತದೆಯೋ ಅವರವರಿಗೆ ಅದು ಸುಂದರ.