Sunday, September 27, 2015

ಸಿರಿಧಾನ್ಯಗಳು

ಈ ದಿನ ನಮ್ಮನ್ನು ಕಾಡಿ ತಿನ್ನುತ್ತಿರುವ ಬಹಳಷ್ಟು ಖಾಯಿಲೆಗಳಿಗೆ ನಾವು ತಿನ್ನುವ ರಾಸಾಯನಿಕ ಮಿಶ್ರಿತ ಆಹಾರವೇ ಮುಖ್ಯ ಕಾರಣ. ಮಧುಮೇಹ,ರಕ್ತದ ಒತ್ತಡ ಇತ್ಯಾದಿ ಸರ್ವೇ ಸಾಮಾನ್ಯವಾಗಿರುವ  ಖಾಯಿಲೆಗಳನ್ನು ತಡೆಗಟ್ಟಬೇಕಾದರೇ ನಾವು ಸೇವಿಸುವ ಆಹಾರದ ಕಡೆ ಹೆಚ್ಚು ಗಮನ ಹರಿಸ ಬೇಕು. ಪೌಷ್ಟಿಕ ಮತ್ತು ವೈವಿಧ್ಯಮಯ ಅಹಾರದ ಮೂಲ "ಸಿರಿಧಾನ್ಯಗಳು".  ಸಿರಿಧಾನ್ಯಗಳು ಎಂದರೆ ಪವಾಡ ಸದೃಶ ಧಾನ್ಯಗಳು. ಸಜ್ಜೆ, ನವಣೆ, ಸಾಮೆ, ಆರ್ಕ, ರಾಗಿ, ಊದಲು, ಬರಗು, ಜವೆ, ಕೊರಲೆ -- ಇವಗಳನ್ನು ಸಿರಿಧಾನ್ಯಗಳು ಎಂದು ಕರೆಯಲಾಗುತ್ತದೆ. ಇವುಗಳು ದೇಹಕ್ಕೆ ಬೇಕಾದ ನಾರು, ಪಿಷ್ಟ, ಪದಾರ್ಥ,ಕ್ಯಾಲ್ಸಿಯಂ ಮತ್ತು ಇತರ ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ. ಇಂತಹ ಶ್ರೇಷ್ಠ ಧಾನ್ಯಗಳು ಭಾರೆತೀಯ ವೈವಿಧ್ಯಮಯ ಆಹಾರ ಸಂಸ್ಕೃತಿಯ ಕೈಗನ್ನಡಿ. ಸಿರಿಧಾನ್ಯಗಳು ನಾರಿನ ಗಣಿಗಳು. ವಿವಿಧ ಸಿರಿಧಾನ್ಯಗಳಲ್ಲಿ ನಾರಿನ ಅಂಶ ಹೀಗಿವೆ: ಸಜ್ಜೆ - ೨.೭% ನಾರು, ಬಿಳಿ ಜೋಳ = ೧.೭%, ರಾಗಿ = ೩.೬%, ಆರ್ಕ = ೯%, ನವಣೆ = ೮%, ಸಾಮೆ = ೧೦%, ಕೋರಲೆ = ೧೩ ರಿಂದ ೧೪%.

ಮಧುಮೇಹ, ರಕ್ತದ ಒತ್ತಡ, ಅಪೌಷ್ಠಿಕತೆ ಇತ್ಯಾದಿಗಳಿಂದ ಪಾರಾಗಬೇಕಾದರೆ ಬಿಳಿ ಅಕ್ಕಿ ಮತ್ತು ಗೋಧಿ ಸೇವನೆಯನ್ನು ಸೀಮಿತ ಗೊಳಿಸಿ, ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಸೇವಿಸಬೇಕು. ಈ ಎಲ್ಲ  ಪೌಷ್ಟಿಕಾಂಶಗಳ ವಿಷಯಗಳನ್ನು "ತಿಳಿದು ತಿನ್ನಿರಿ"  ಮೂಲಕ ತಿಳಿಸಿ ಕೊಟ್ಟ ಡಾ || ಖಾದರ್ ಅವರಿಗೆ ಅನಂತ ಕೋಟಿ ನಮನಗಳು.

Tuesday, September 22, 2015

ಪ್ರಾರ್ಥನೆ

ಅನಿರ್ವೇದಮಸಿದ್ಧೇಷು ಸಾಧಿತೇಷ್ವನಹಂಕೃತಿಂ |
ಅನಾಲಸ್ಯಂ ಚ ಸಾಧ್ಯೇಷು ಕೃತ್ಯೇಷ್ವನುಗೃಹಾಣ ನಃ ||
                                                                        -- ಡಾ|| ರಾಳ್ಳಪಲ್ಲೀ ಅನಂತಕೃಷ್ಣಶರ್ಮಾ

ಸಾಧಿಸಲಾಗದುದಕ್ಕೆ ಬೇಸರ್ವಿರದಂತೆಯೂ, ಸಾಧಿಸಿರುವುದರ ಬಗ್ಗೆ ಅಹಂಕಾರವಿರದಂತೆಯೂ, ಹಾಗೂ ಸಾಧಿಸುತ್ತಿರುವುದರ ಕುರಿತು ಆಲಸ್ಯವಿರದಂತೆಯೂ ನಮ್ಮನು ಅನುಗ್ರಹಿಸು.