Saturday, January 20, 2007

ಕಾಯಾರೋಹಣೇಶಂ

ಭಕ್ತನ ತಪಸ್ಸಿಗೆ ಒಲಿದ ಮುಕ್ಕಣನು, ಆಲಿಂಗಿಸಿ ಅಭಯ ತೊರಿದ ಕಾರಣ ನಾಗಪಟ್ಟಣದ ಮಹೇಶ್ವರಸ್ವಾಮಿಗೆ ಕಾಯಾರೋಹಣೇಶ್ವರ ಎಂದು ಕರೆಯುವ ವಾಡಿಕೆ , ಐತಿಹ್ಯ.ಮುತ್ತುಸ್ವಾಮಿ ದೀಕ್ಷಿತರು ನಾಗಪಟ್ಟಣದ ಕ್ಷೇತ್ರಪುರಾಣ ವಿವರಿಸುತ್ತ ಕರ್ನಾಟಕ ದೇವಗಾಂಧಾರ ರಾಗದಲ್ಲಿ ಕಾಯಾರೋಹಣೇಶ್ವರನನ್ನು ಕೊಂಡಾಡಿದ್ದಾರೆ.

ಸತ್ಯೋಜಾತ,ಅಘೋರ,ತತ್ಪುರುಷ,ಈಶಾನಂ,ವಾಮದೇವಸಂಯುಕ್ತ ಪಂಚಾನನ ಸ್ವಾಮಿಯ ವರ್ಣನೆ ಭಕ್ತಿಪೂರ್ವಕವಾಗಿಯೂ,ಕಲಿ ಕಲ್ಮಷನಾಶೋಪಕಾರಿಯೂ ಆಗಿದೆ.ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'.

ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'

ರಚನೆ: ಗುರುವರ್ಯ ಶ್ರೀಮುತ್ತುಸ್ವಾಮಿ ದೀಕ್ಷಿತರು.
ರಾಗ: ಕರ್ನಾಟಕ ದೇವಗಾಂಧಾರ - ೨೨ ನೇ ಮೇಳಕರ್ತ ಖರಹರಪ್ರಿಯ ಜನ್ಯ.
ತಾಳ : ರೂಪಕ.

ಕಾಯಾರೋಹಣೇಶಂ ಭಜರೇ ಮಾನಸ
ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ |ಪ |

ಭಯಾಪಹಂ ದಿಕ್ಪಾಲಾಕಾಧಿ ವಿನುತ ಮಹೇಶ್ವರಂ
ಮಾಯಾಮಯ ಜಗದಾಧಾರಂ ಗುರುಗುಹೋಪಚಾರಂ |ಅನು|

ನೀಲಾಯತಾಕ್ಷಿ ಮನೊಲ್ಲಾಸ ಕಾರಣಂ
ನಿತ್ಯ ಶುದ್ಧ ಸತ್ವಗುಣಂ ಭುಕ್ತಿ ಮುಕ್ತಿ ಪ್ರಧ ನಿಪುಣಂ
ಪಾಲಿತ ಭಕ್ತಂ ಪಂಚಾನನಂ ಪ್ರಣತ ಗಜಾನನಂ
ಬಾಲಚಂದ್ರ ಶೇಖರ ಭಾವಪಾಷಮೊಚನಂ ತ್ರಿನಯನಂ |ಚ|

ಶ್ರೀ ಗುರುಗುಹಾರ್ಪಣಮಸ್ತು ||

.

2 comments:

bhadra said...

ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯವೈ ನಮೋ ನಮಃ - ಶ್ರೀರುದ್ರನಿಗೆ ಪಂಚಾಮೃತ ಅಭಿಷೇಕ ಮಾಡುವಾಗ ಈ ಐದೂ ನಾಮಾವಳಿಗಳನ್ನು ಉಪಯೋಗಿಸುವೆವು.

ಮುಕ್ಕಣ್ಣನು ನಾಗಪಟ್ಟಣದಲ್ಲಿ ದಯೆ ತೋರಿದ ಆ ಶ್ರೇಷ್ಠ ಭಕ್ತನ್ಯಾರು? ಬೇಡರ ಕಣ್ಣಪ್ಪನೇ? ಬಹಳ ಉತ್ತಮ ಕೃತಿಯನ್ನು ನೆನಪಿಗೆ ತಂದುದ್ದಕ್ಕೆ ವಂದನೆಗಳು.

ಈಗ ನಾಗಪಟ್ಟಣದ ಹೆಸರು ಬದಲಾಗಿ ಈ ಸ್ಥಳದ ಮಹಾತ್ಮೆ ಗೌಣವಾಗುತ್ತಿದೆಯೆನ್ನಿಸುತ್ತಿದೆ.

Srikanth said...

ಶ್ರೀನಿವಾಸ ರಾಯರು ಬ್ಲಾಗಾಯಣದ ಎಲ್ಲ ಪೋಸ್ಟುಗಳನ್ನು ಓದಿ , ಮಾರ್ಗದರ್ಶನ - ಪ್ರೋತ್ಸಾಹ ನೀಡುತ್ತಿರುವುದ್ದಕ್ಕೆ ಧನ್ಯವಾದಗಳು.

ಕಣ್ಣಪ್ಪನೇ ಇರಬೇಕು ಆ ಮಹಾಭಕ್ತ. ಅಮ್ತರ್ಜಾಲದಲ್ಲೆ ಎಲ್ಲೊ ಕಂಡ ವಿಷಯವನ್ನು ಇಲ್ಲಿ ಸೂಚಿಸಿದೆನೆ ವಿನಃ ನನಗೆ ಈ ಕ್ಷೇತ್ರ ಪುರಾಣದ ಬಗೆಗೆ ನನಗೆ ಅರಿವಿಲ್ಲ.