Tuesday, November 29, 2016

ವೇದಮಂತ್ರೋಚ್ಛಾರಣೆಯ ಆರು ದೋಷಗಳು

 ಗೀತೀ ಶೀಘ್ರೀ ಶಿರಃ ಕಂಪೀ ತಥಾ ಲಿಖಿತಪಾಠಕಃ ।
ಅನರ್ಥಜ್ಞ ಅಲ್ಪಕಂಠಶ್ಚ ಷಡೇತೇ ಪಾಠಕಾಧಮಾಹ  ।।

ಗೀತೀ : ರಾಗವಾಗಿ ಹೇಳುವವನು, ಶೀಘ್ರೀ : ಅತಿ ವೇಗದಿಂದ ಹೇಳುವವನು, ಶರಃ  ಕಂಪೀ : ತಲೆ ಅಲ್ಲಾಡಿಸುತ್ತಾ ಹೇಳುವವನು, ಲಿಖಿತಪಾಠಕಃ  = ಗುರುಮುಖೇನ ಕಲಿಯದೇ ಪುಸ್ತಕ ನೋಡಿ  ಓದುವವನು , ಅನರ್ಥಜ್ಞ : ಅರ್ಥವನ್ನು ತಿಳಿಯದಿರುವುದು, ಅಲ್ಪ ಕಂಠ : ಮೆಲು ದನಿಯಲ್ಲಿ ಹೇಳುವುದು.

ಈ ಆರು ವೇದ ಮಂತ್ರೋಚ್ಛಾರಣೆಯ ದೋಷಗಳು.