Wednesday, August 31, 2016

ಯೋಗಾಮೃತ

ಮಧುಮೇಹವನ್ನು ತಡೆಗಟ್ಟುಲು ಯೋಗಗುರುಗಳು ಕಲಿಸಿ ಕೊಟ್ಟ ಯೋಗಾಸನಗಳು 

ಅರ್ಧಮತ್ಸ್ಯೇಂದ್ರಾಸನ
ವಕ್ರಾಸನ
ಭಾರದ್ವಾಜಾಸನ 

Friday, July 29, 2016

ಸುಭಾಷಿತ ಸಂಗ್ರಹ

ತೃಣಪರ್ಣೋದಕಾಹಾರಾಃ ಸತತಂ ವನವಾಸಿನಃ |
ಜಂಬೂಕಾಖುಮೃಗಾದ್ಯಾಶ್ಚ ತಾಪಸಾಸ್ತೇ ಭವಂತಿ ಕಿಮ್ ||
ಯಾವಾಗಲೂ ಕಾಡಿನಲ್ಲಿರುತ್ತಾ ಹುಲ್ಲು, ಎಲೆ, ನೀರನ್ನು ಸೇವಿಸುತ್ತಾ ಇದ್ದ ಮಾತ್ರಕ್ಕೆ ತಪಸ್ವಿ ಎನ್ನಿಸುವುದಾದರೆ ನರಿ, ಇಲಿ, ಮೃಗ ಮೊದಲಾದುವುಗಳೂ ಸಹ ತಪಸ್ವಿಗಳೆನಿಸಬಹುದಲ್ಲ ?

ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್ |
ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಲಮ್ ||
ಪಂಚತಂತ್ರ, ಮಿತ್ರಭೇದ ೬೭
ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಬಂದು ಹೇಳಿದರೂ ಸಹ ಅವನ ಮಾತು ಸಹ ತಿರಸ್ಕಾರ ಮತ್ತು ಅಪಮಾನಕ್ಕೊಳಗಾಗುವುದು.

ಅಕ್ಷರಾಣಿ ಪರೀಕ್ಷ್ಯಂತಾಮ್ ಅಂಬರಾಡಂಬರೇಣ ಕಿಂ |
ಶಂಭುರಂಬರ ಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ ||
ಅಪ್ಪಯ್ಯ ದೀಕ್ಷಿತರು.
ಅಕ್ಷರಗಳನ್ನು(ವಿದ್ಯೆಯನ್ನು) ಪರೀಕ್ಷಿಸಿ ನೋಡಬೇಕು, ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ ? ಶಿವನು ಬಟ್ಟೆ ಇಲ್ಲದ ದಿಗಂಬರ ಎನಿಸಿದ್ದರೂ ಸಹ ಅವನು ಸರ್ವಜ್ಞನಲ್ಲವೆ.

ಯದಧ್ರುವಸ್ಯ ದೇಹಸ್ಯ ಸಾನುಬಂಧಸ್ಯ ದುರ್ಮತಿಃ |
ಧ್ರುವಾಣಿ ಮನ್ಯತೇ ಮೋಹಾದ್ ಗೃಹಕ್ಷೇತ್ರವಸೂನಿ ಚ ||
ಭಾಗವತ, ೩ : ೩೦ : ೩
ವಿವೇಕವಿಲ್ಲದ ಮನುಷ್ಯನು ಶಾಶ್ವತವಲ್ಲದ ಮತ್ತು ಅನೇಕ ಕಷ್ಟಗಳಿಂದ ಕೂಡಿದ ಈ ಶರೀರಕ್ಕೆ ಸಂಬಂಧಿಸಿದ ಮನೆ, ಭೂಮಿ, ಹಣ ಮುಂತಾದ ಸಂಪತ್ತುಗಳನ್ನು ಮೋಹದಿಂದ ಶಾಶ್ವತವೆಂದು ತಿಳಿಯುತ್ತಾನೆ.

Thursday, June 30, 2016

ಶಂಕರಾಚಾರ್ಯ

अज्ञानान्तर्गहनपतितान् आत्मविद्योपदेशैः
त्रातुम् लोकान् भवदवशिखातापपापच्यमानान् ।
मुक्त्वा मौनं वटविटपिनो मूलतो निष्पतन्ती
शंभोर्मूर्तिः चरति भुवने शंकराचार्यरूपा ॥

Saturday, May 28, 2016

ವಿನಾಯಕ ದಾಮೋದರ ಸಾವರ್ಕರ್

ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಅಪ್ರತಿಮ ದೇಶಭಕ್ತ, ಕವಿ, ವಾಗ್ಮಿ, ಚಿಂತಕ, ಹಿಂದು ಧರ್ಮ ಪೋಷಕ -- ವೀರ ಸಾವರ್ಕರ್.  ಸ್ಪೂರ್ತಿ ಮತ್ತು ಜೀವನ ಪ್ರೇಮ ತುಂಬುವ ಇವರ ಸಂತತಿ ಬೆಳೆಯಲಿ. 

Friday, April 15, 2016

ಶ್ರೀ ಶಂಕರರಾಮ ಸರ್ವಾಂಗ ರಕ್ಷಾ ಸ್ತುತಿ

|| ಶ್ರೀ ಶಂಕರರಾಮ ಸರ್ವಾಂಗ ರಕ್ಷಾ ಸ್ತುತಿ ||

ರಾಮಾ ಸತತ ನಿನ್ನ ನಾಮ ಕೊಂಡಾಡುವ ನೇಮವಿತ್ತು ಸಲಹೋ || ಪ ||
ಕಾಮಿತಾರ್ಥಗಳ ಕರುಣಿಸೋ ರಘುಪತಿ ಶ್ಯಾಮ ಮನೋಹರ ಹೃದಯದಿ ನೆಲೆಸೋ ||

ಶಿರವೆರಗಲಿ ತವ ಪದಾಂಬುರುಹಕೆ, ಕರಗಳರ್ಚಿಸಲಿ ತವ ಪಾದುಕೆಯಾ || ೧ ||
ಕರ್ಣಂಗಳು ನಿನ್ನ ಕೀರ್ತನೆ ಕೇಳಲಿ, ಜಿಹ್ವೆ ಪೇಳಲಿ ನಿನ್ನ ಭಜನೆಯ ರಾಘವ || ೨ ||
ಕಂಗಳು ಮಂಗಳ ಮೂರ್ತಿಯ ಕಾಣಲಿ, ಭಂಗವಾಗಲಿ ಎನ್ನ ಗರ್ವಾಂಧಕಾರ ||೩||
ಹಿಂಗದೆ ಕುಣಿಯಲಿ ಕಾಲ್ಗಳು ಯಾತ್ರೇಯೋಳ್, ಸಂಘವಿರಲಿ ನಿನ್ನ ದಾಸರಂದೆನೆಗೆ ||೪||
ಕರಗಳು ಬರೆಯಲಿ ರಾಮ ನಮವನು, ಶಿರಧರಿಸಲಿ ನಿನಗೆ ಮುಡಿದಿಹ ಹೂವ ||೫||
ಸುರಿಯಲಿ ಹರ್ಷಾಶೃ ಕಂಗಳೆರಡರಲಿ, ಮರೆಯಲಿ ದೇಹವು ತವ ಕೀರ್ತನೆಯೋಳ್ ||೬||
ನಾಸಿಕವಾಘ್ರಾಣಿಸಲಿ ತುಳಸಿಯನು,ಅಶಾಪಾಶಾಗಳು ಸುಟ್ಟು ಹೋಗಲಿ ||೭||
ಕೇಶವದಾಸನು ತನೆತವದಾಸರ ,ದಾಸನಾಗುವ ಭಾಗ್ಯ ಬೇಗ ದೊರಕಲಿ ||೮||
ರಾಮಾ ಸತತ ನಿನ್ನ ನಾಮ ಕೊಂಡಾಡುವ ನೇಮವಿತ್ತು ಸಲಹೋ || ಪ ||
            || ಜೈ ಶ್ರೀ ರಾಮ ||

Wednesday, March 30, 2016

ತ್ರಿಫಲಾ ಎಂಬ ಅಮೃತಬಿಂದು

ತ್ರಿಫಲಾ : ನೆಲ್ಲಿ ಕಾಯಿ ( ಆಮ್ಲಕ - Embilica Officinalis) , ಅಳಲೇಕಾಯಿ (  ಹರೀತಕ - Terminalia chebula )  ಮತ್ತು ತಾರೇಕಾಯಿ ( ವಿಭೀಡಕ - Terminalia Bellirica)- ಇವುಗಳ ಮಿಶ್ರಣವನ್ನು ತ್ರಿಫಲಾ ಎಂದು ಕರೆಯಲಾಗುತ್ತದೆ. ಚರಕ ಸಂಹಿತೆ ಮತ್ತು ಸುಶ್ರುತ  ಸಂಹಿತೆಯಲ್ಲಿ ಇದರ ಉಲ್ಲೇಖವಿದೆ . ತ್ರಿಫಲಾ ಚೂರ್ಣವನ್ನು  'ಜೀವನದ ಅಮೃತ' ಎಂದೇ ಬಣ್ಣಿಸಲಾಗುತ್ತದೆ. ಇದು ನಿಜಕ್ಕೂ ಜೀವ ಚೈತನ್ಯ ತಂದುಕೊಡುವ ಅಮೃತ ವರ್ಷಿಣಿಯೇ. ನೆಲ್ಲಿಕಾಯಿಯನ್ನು ವೈದ್ಯ ಗ್ರಂಥಗಳಲ್ಲಿ "ಜಗದ್ದಾತ್ರೀ, ತ್ರಿದೋಷ ಶಮನೀ, ವೃಷ್ಯಾ ವಯಃ ಸ್ಥಾಪಿನಿ" ಎಂದು ಕೊಂಡಾಡಿದ್ದಾರೆ . ಅಳಲೇ ಕಾಯನ್ನು "ಅಭಯಾ" ಎಂದು ಕರೆದಿದ್ದಾರೆ. ಇದೊಂದು ಸರ್ವೋತ್ತಮ ರಸಾಯನವಾಗಿದೆ.

ಅದೃಷ್ಟ ವಶಾತ್  ಈಗ ನಮ್ಮ ಧರ್ಮಗುರುಗಳ ಕೃಪೆಯಿಂದ ಆಯುರ್ವೇದದ ಪುನರುತ್ಥಾನವಾಗಿ ಜನಸಾಮಾನ್ಯರಿಗೆ ಇಂತಹ ಅಮೃತೋಪಮವಾದ ಗಿಡಮೂಲಿಕೆಗಳು ಸುಲಭವಾಗಿ ಜನಸಾಮಾನ್ಯರಿಗೆ ದೊರೆಯುವಂತೆ ಆಗಿವೆ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಆಗಲಿ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ "ಶ್ರೀ ಶ್ರೀ ಆಯುರ್ವೇದ"ದಿಂದಾಗಲಿ ಇಂತಹ ಅಮೃತ ಸಮಾನ ಆಯುರ್ವೇದ ಉತ್ಪನ್ನಗಳು ಜನಮಾನಸದಲ್ಲಿ ಉಳಿಯುವ ಹಾಗೆ ಆಗಿದೆ. 

Saturday, February 27, 2016

ತೃಷ್ಣಾಕ್ಷಯಸುಖ

ಯಚ್ಚ ಕಾಮಸುಖಂ ಲೋಕೆ ಯಚ್ಚ ದಿವ್ಯಂ ಮಹತ್ಸುಖಂ |
ತೃಷ್ಣಾಕ್ಷಯಸುಖಸ್ಯೈತೆ ನಾರ್ಹತಃ ಷೋಡಶೀಂ ಕಲಾಂ ||

ಈ ಭೂಲೋಕದಲ್ಲಿ ಪ್ರಸಿದ್ಧವಾದ ವೈಷಯಿಕ ಸುಖವೂ ಹಾಗು ಪರಲೋಕದಲ್ಲಿ ಲಭಿಸುವ ಅಲೌಕಿಕ ಸ್ವರ್ಗ ಸುಖವು ಇವೆರಡೂ "ಆಸೆಯ ತ್ಯಾಗದಿಂದ" ಲಭಿಸುವ ನೆಮ್ಮದಿಯ ಹದಿನಾರನೇ ಒಂದು ಭಾಗಕ್ಕೂ ಸಮನಾಗುವುದಿಲ್ಲ.

Monday, January 25, 2016

ರಾಷ್ಟ್ರದೇವೋಭವ

ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ
ಧ್ರುವಂ ತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂ ಧಾರಯತಾಂ ಧ್ರುವಂ ( ಋ ೧೦-೧೭೩-೫)

ಎಲೈ ರಾಜನೇ, ನಿನ್ನ ರಾಷ್ಟ್ರವನ್ನು ಈ ದೇವತೆಗಳು ಭದ್ರವಾಗಿ, ಶಾಶ್ವತವಾಗಿ ಧರಿಸಲಿ. ಸಾಮ್ರಾಟನಾದ ವರುಣ, ಜ್ನಾನದಾಯಕ ಬೃಹಸ್ಪತಿ, ಕ್ಷಾತ್ರಗುಣ ಸಂಪನ್ನ ಇಂದ್ರ, ಬ್ರಹ್ಮತತ್ವದ ಸಾಕಾರಮೂರ್ತಿ ಅಗ್ನಿ -- ಇವರ ಆಶೀರ್ವಾದ ನಿನಗೆ ಸದಾ ಇರಲಿ. ಇವರು ನಿನ್ನನ್ನು ರಕ್ಷಿಸಿ, ರಾಷ್ಟ್ರವನ್ನು ಎತ್ತಿ ಹಿಡಿದು ಉನ್ನತಿಗೆ ನಡೆಸಲಿ.

ಗಣರಾಜ್ಯೋತ್ಸವದ ಶುಭಾಶಯಗಳು

Wednesday, December 30, 2015

ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ

उष्ट्राणां च विवाहेषु गीतं गायन्ति गर्दभा: | परस्परं प्रशंसन्ति अहो रुपमहो ध्वनि: || ಒಂಟೆಗಳ ಮದುವೆಯಲ್ಲಿ ಕತ್ತೆಗಳ ಗಾಯನ ಏರ್ಪಾಡಾಗಿತ್ತು. ಆಹಾ! ಎಂತಹ ರೂಪ! ಓಹೋ! ಎಂತಹ ಗಾಯನ! ಎಂದು ತಮ್ಮನು ತಾವೇ ಪರಸ್ಪರ ಪ್ರಸಂಸೆಯಲ್ಲಿ ತೊಡಗಿದರು. ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಇದ್ದಂತೆ!

Sunday, November 29, 2015

ಧರ್ಮ ನಿರ್ವಚನ

ಧಾರಣಾತ್ ಧರ್ಮಮಿತ್ಯಾಹುಃ ಧರ್ಮೋ ಧಾರಯತೇ ಪ್ರಜಾಃ |
ಯತ್ ಸ್ಯಾತ್ ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ ||

ಮಹಾಭಾರತ
ಧಾರಣ ಮಾಡುವುದೇ ಧರ್ಮ. ಧರ್ಮವೇ ಸಮಸ್ತರನ್ನು ಧರಿಸಿ ನಿಲ್ಲುತ್ತದೆ. ಧರ್ಮದಿಂದಲೇ ಸರ್ವರೂ ಕಟ್ಟಲ್ಪಟ್ಟಿದ್ದಾರೆ. (ಅಂಕಿತದಲ್ಲಿ ಇರಿಸಲ್ಪಟ್ಟಿದ್ದಾರೆ) ಯಾವುದರಿಂದ ಸಕಲ ಪ್ರಾಣಿ ಸಮೂಹದ ಧಾರಣವಾಗುತ್ತದೋ ಅದೇ ಧರ್ಮ.

Friday, October 23, 2015

ಶಮೀ ಶಮಯತೇ ಪಾಪಂ

ಶಮೀ ಶಮಯತೇ ಪಾಪಂ ಶಮೀ ಶತ್ರು ನಿವಾರಣಂ |
 ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಮ್ ||

ಶಮೀ ಪತ್ರ ನಮ್ಮ ಪಾಪಗಳನ್ನು ಶಮನ ಮಾಡುತ್ತದೆ. ಪವಿತ್ರ ಶಮೀ ವೃಕ್ಷ ಶತೃ ನಾಶಕವಾಗಿದೆ. ಹನ್ನೇರಡು ವರ್ಷ ಪಾಂಡವರು ಅಙ್ನಾತವಾಸದ ಸಂದರ್ಭ ಅರ್ಜುನನ ಗಾಂಢೀವ ಮುಂತಾದ ದಿವ್ಯ ಅಸ್ತ್ರಗಳನ್ನು ಈ ಶಮೀ ವೃಕ್ಷವೇ ಕಾಪಾಡಿತು. ಶ್ರೀರಾಮಚಂದ್ರನಿಗೆ ಅತ್ಯಂತ ಪ್ರಿಯವಾದ ಶಮೀಪತ್ರವನ್ನು ನಾವು ಪೂಜಿಸೋಣ.

ವಿಜಯದಶಮಿಯಂದು ಶಮೀಪತ್ರವನ್ನು ವಿನಿಮಯ ಮಾಡಿಕೊಳ್ಳುವುದು ಪ್ರತೀತಿ. ವಿನಿಮಯದ ಸಂದರ್ಭ ಈ ಶ್ಲೋಕ ಹೇಳುವುದು ವಾಡಿಕೆ.

Taxonomical Reference: Prosopis spicigera Linn


.
Prosopis spicigera Linn

Wednesday, October 07, 2015

ವಿಲೋಮಾಕ್ಷರರಾಮಕೃಷ್ಣಕಾವ್ಯಂ

॥ ಶ್ರೀರಾಮಕೃಷ್ಣ ವಿಲೋಮ ಕಾವ್ಯಂ (ಕವಿ ಸೂರ್ಯ) ॥
ತಂ ಭೂಸುತಾಮುಕ್ತಿಮುದಾರಹಾಸಂ
ವಂದೇ ಯತೋ ಭವ್ಯಭವಂ ದಯಾಶ್ರೀಃ ।
ಶ್ರೀಯಾದವಂ ಭವ್ಯಭತೋಯದೇವಂ
ಸಂಹಾರದಾಮುಕ್ತಿಮುತಾಸುಭೂತಮ್ ॥ 1॥
ಚಿರಂ ವಿರಂಚಿರ್ನ ಚಿರಂ ವಿರಂಚಿಃ
ಸಾಕಾರತಾ ಸತ್ಯಸತಾರಕಾ ಸಾ ।
ಸಾಕಾರತಾ ಸತ್ಯಸತಾರಕಾ ಸಾ
ಚಿರಂ ವಿರಂಚಿರ್ನ ಚಿರಂ ವಿರಂಚಿಃ ॥ 2॥
ತಾಮಸೀತ್ಯಸತಿ ಸತ್ಯಸೀಮತಾ
ಮಾಯಯಾಕ್ಷಮಸಮಕ್ಷಯಾಯಮಾ ।
ಮಾಯಯಾಕ್ಷಸಮಕ್ಷಯಾಯಮಾ
ತಾಮಸೀತ್ಯಸತಿ ಸತ್ಯಸೀಮತಾ ॥ 3॥
ಕಾ ತಾಪಘ್ನೀ ತಾರಕಾದ್ಯಾ ವಿಪಾಪಾ
ತ್ರೇಧಾ ವಿದ್ಯಾ ನೋಷ್ಣಕೃತ್ಯಂ ನಿವಾಸೇ ।
ಸೇವಾ ನಿತ್ಯಂ ಕೃಷ್ಣನೋದ್ಯಾ ವಿಧಾತ್ರೇ
ಪಾಪಾವಿದ್ಯಾಕಾರತಾಘ್ನೀ ಪತಾಕಾ ॥ 4॥
ಶ್ರೀರಾಮತೋ ಮಧ್ಯಮತೋದಿ ಯೇನ
ಧೀರೋಽನಿಶಂ ವಶ್ಯವತೀವರಾದ್ವಾ
ದ್ವಾರಾವತೀವಶ್ಯವಶಂ ನಿರೋಧೀ
ನಯೇದಿತೋ ಮಧ್ಯಮತೋಽಮರಾ ಶ್ರೀಃ ॥ 5॥
ಕೌಶಿಕೇ ತ್ರಿತಪಸಿ ಕ್ಷರವ್ರತೀ
ಯೋಽದದಾದ್ಽದ್ವಿತನಯಸ್ವಮಾತುರಮ್ ।
ರಂತುಮಾಸ್ವಯನ ತದ್ವಿದಾದಯೋಽ
ತೀವ್ರರಕ್ಷಸಿ ಪತತ್ರಿಕೇಶಿಕೌ ॥ 6॥
ಲಂಬಾಧರೋರು ತ್ರಯಲಂಬನಾಸೇ
ತ್ವಂ ಯಾಹಿ ಯಾಹಿ ಕ್ಷರಮಾಗತಾಜ್ಞಾ ।
ಜ್ಞಾತಾಗಮಾ ರಕ್ಷ ಹಿ ಯಾಹಿ ಯಾ ತ್ವಂ
ಸೇನಾ ಬಲಂ ಯತ್ರ ರುರೋಧ ಬಾಲಮ್ ॥ 7॥
ಲಂಕಾಯನಾ ನಿತ್ಯಗಮಾ ಧವಾಶಾ
ಸಾಕಂ ತಯಾನುನ್ನಯಮಾನುಕಾರಾ ।
ರಾಕಾನುಮಾ ಯನ್ನನು ಯಾತಕಂಸಾ
ಶಾವಾಧಮಾಗತ್ಯ ನಿನಾಯ ಕಾಲಮ್ ॥ 8॥
ಗಾಧಿಜಾಧ್ವರವೈರಾ ಯೇ
ತೇಽತೀತಾ ರಕ್ಷಸಾ ಮತಾಃ ।
ತಾಮಸಾಕ್ಷರತಾತೀತೇ
ಯೇ ರಾವೈರಧ್ವಜಾಧಿಗಾಃ ॥ 9॥
ತಾವದೇವ ದಯಾ ದೇವೇ
ಯಾಗೇ ಯಾವದವಾಸನಾ ।
ನಾಸವಾದವಯಾ ಗೇಯಾ
ವೇದೇ ಯಾದವದೇವತಾ ॥ 10॥
ಸಭಾಸ್ವಯೇ ಭಗ್ನಮನೇನ ಚಾಪಂ
ಕೀನಾಶತಾನದ್ಧರುಷಾ ಶಿಲಾಶೈಃ ।
ಶೈಲಾಶಿಷಾರುದ್ಧನತಾಶನಾಕೀ
ಪಂಚಾನನೇ ಮಗ್ನಭಯೇ ಸ್ವಭಾಸಃ ॥ 11॥
ನ ವೇದ ಯಾಮಕ್ಷರಭಾಮಸೀತಾಂ
ಕಾ ತಾರಕಾ ವಿಷ್ಣುಜಿತೇಽವಿವಾದೇ ।
ದೇವಾವಿತೇ ಜಿಷ್ಣುವಿಕಾರತಾ ಕಾ
ತಾಂ ಸೀಮಭಾರಕ್ಷಮಯಾದವೇನ ॥ 12॥
ತೀವ್ರಗೋರನ್ವಯತ್ರಾರ್ಯೋ
ವೈದೇಹೀಮನಸೋ ಮತಃ ।
ತಮಸೋ ನ ಮಹೀದೇವೈ-
ರ್ಯಾತ್ರಾಯನ್ವರಗೋವ್ರತೀ ॥ 13॥
ವೇದ ಯಾ ಪದ್ಮಸದನಂ
ಸಾಧಾರಾವತತಾರ ಮಾ ।
ಮಾರತಾ ತವ ರಾಧಾ ಸಾ
ನಂದ ಸದ್ಮಪ ಯಾದವೇ ॥ 14॥
ಶೈವತೋ ಹನನೇಽರೋಧೀ
ಯೋ ದೇವೇಷು ನೃಪೋತ್ಸವಃ ।
ವತ್ಸಪೋ ನೃಷು ವೇದೇ ಯೋ
ಧೀರೋಽನೇನ ಹತೋಽವಶೈಃ ॥ 15॥
ನಾಗೋಪಗೋಽಸಿ ಕ್ಷರ ಮೇ ಪಿನಾಕೇಽ
ನಾಯೋಽಜನೇ ಧರ್ಮಧನೇನ ದಾನಮ್ ।
ನಂದಾನನೇ ಧರ್ಮಧನೇ ಜಯೋ ನಾ
ಕೇನಾಪಿ ಮೇ ರಕ್ಷಸಿ ಗೋಪಗೋ ನಃ ॥ 16॥
ತತಾನ ದಾಮ ಪ್ರಮದಾ ಪದಾಯ
ನೇಮೇ ರುಚಾಮಸ್ವನಸುಂದರಾಕ್ಷೀ ।
ಕ್ಷೀರಾದಸುಂ ನ ಸ್ವಮಚಾರು ಮೇನೇ
ಯದಾಪ ದಾಮ ಪ್ರಮದಾ ನತಾತಃ ॥ 17॥
ತಾಮಿತೋ ಮತ್ತಸೂತ್ರಾಮಾ
ಶಾಪಾದೇಷ ವಿಗಾನತಾಮ್ ।
ತಾಂ ನಗಾವಿಷದೇಽಪಾಶಾ
ಮಾತ್ರಾಸೂತ್ತಮತೋ ಮಿತಾ ॥ 18॥
ನಾಸಾವದ್ಯಾಪತ್ರಪಾಜ್ಞಾವಿನೋದೀ
ಧೀರೋಽನುತ್ಯಾ ಸಸ್ಮಿತೋಽದ್ಯಾವಿಗೀತ್ಯಾ ।
ತ್ಯಾಗೀ ವಿದ್ಯಾತೋಽಸ್ಮಿ ಸತ್ತ್ಯಾನುರೋಧೀ
ದೀನೋಽವಿಜ್ಞಾ ಪಾತ್ರಪದ್ಯಾವಸಾನಾ ॥ 19॥
ಸಂಭಾವಿತಂ ಭಿಕ್ಷುರಗಾದಗಾರಂ
ಯಾತಾಧಿರಾಪ ಸ್ವನಘಾಜವಂಶಃ ।
ಶವಂ ಜಘಾನ ಸ್ವಪರಾಧಿತಾಯಾ
ರಂಗಾದಗಾರಕ್ಷುಭಿತಂ ವಿಭಾಸಮ್ ॥ 20॥
ತಯಾತಿತಾರಸ್ವನಯಾಗತಂ ಮಾ
ಲೋಕಾಪವಾದದ್ವಿತಯಂ ಪಿನಾಕೇ ।
ಕೇನಾಪಿ ಯಂ ತದ್ವಿದವಾಪ ಕಾಲೋ
ಮಾತಂಗಯಾನಸ್ವರತಾತಿಯಾತಃ ॥ 21॥
ಶವೇಽವಿದಾ ಚಿತ್ರಕುರಂಗಮಾಲಾ
ಪಂಚಾವಟೀನರ್ಮ ನ ರೋಚತೇ ವಾ ।
ವಾತೇಽಚರೋ ನರ್ಮನಟೀವ ಚಾಪಂ
ಲಾಮಾಗರಂ ಕುತ್ರಚಿದಾವಿವೇಶ ॥ 22॥
ನೇಹ ವಾ ಕ್ಷಿಪಸಿ ಪಕ್ಷಿಕಂಧರಾ
ಮಾಲಿನೀ ಸ್ವಮತಮತ್ತ ದೂಯತೇ ।
ತೇ ಯದೂತ್ತಮತಮ ಸ್ವನೀಲಮಾ-
ರಾಧಕಂ ಕ್ಷಿಪಸಿ ಪಕ್ಷಿವಾಹನೇ ॥ 23॥
ವನಾಂತಯಾನಸ್ವಣುವೇದನಾಸು
ಯೋಷಾಮೃತೇಽರಣ್ಯಗತಾವಿರೋಧೀ ।
ಧೀರೋಽವಿತಾಗಣ್ಯರತೇ ಮೃಷಾ ಯೋ
ಸುನಾದವೇಣುಸ್ವನಯಾತನಾಂ ವಃ ॥ 24॥
ಕಿಂ ನು ತೋಯರಸಾ ಪಂಪಾ
ನ ಸೇವಾ ನಿಯತೇನ ವೈ ।
ವೈನತೇಯನಿವಾಸೇನ
ಪಾಪಂ ಸಾರಯತೋ ನು ಕಿಮ್ ॥ 25॥
ಸ ನತಾತಪಹಾ ತೇನ
ಸ್ವಂ ಶೇನಾವಿಹಿತಾಗಸಮ್ ।
ಸಂಗತಾಹಿವಿನಾಶೇ ಸ್ವಂ
ನೇತೇಹಾಪ ತತಾನ ಸಃ ॥ 26॥
ಕಪಿತಾಲವಿಭಾಗೇನ
ಯೋಷಾದೋಽನುನಯೇನ ಸಃ ।
ಸ ನಯೇ ನನು ದೋಷಾಯೋ
ನಗೇ ಭಾವಿಲತಾಪಿಕಃ ॥ 27॥
ತೇ ಸಭಾ ಪ್ರಕಪಿವರ್ಣಮಾಲಿಕಾ
ನಾಲ್ಪಕಪ್ರಸರಮಭ್ರಕಲ್ಪಿತಾ ।
ತಾಲ್ಪಿಕಭ್ರಮರಸಪ್ರಕಲ್ಪನಾ
ಕಾಲಿಮರ್ಣವ ಪಿಕ ಪ್ರಭಾಸತೇ ॥ 28॥
ರಾವಣೇಽಕ್ಷಿಪತನತ್ರಪಾನತೇ
ನಾಲ್ಪಕಭ್ರಮಣಮಕ್ರಮಾತುರಮ್ ।
ರಂತುಮಾಕ್ರಮಣಮಭ್ರಕಲ್ಪನಾ
ತೇನ ಪಾತ್ರನತಪಕ್ಷಿಣೇ ವರಾ ॥ 29॥
ದೈವೇ ಯೋಗೇ ಸೇವಾದಾನಂ
ಶಂಕಾ ನಾಯೇ ಲಂಕಾಯಾನೇ ।
ನೇಯಾಕಾಲಂ ಯೇನಾಕಾಶಂ
ನಂದಾವಾಸೇ ಗೇಯೋ ವೇದೈಃ ॥ 30॥
ಶಂಕಾವಜ್ಞಾನುತ್ವನುಜ್ಞಾವಕಾಶಂ
ಯಾನೇ ನದ್ಯಾಮುಗ್ರಮುದ್ಯಾನನೇಯಾ ।
ಯಾನೇ ನದ್ಯಾಮುಗ್ರಮುದ್ಯಾನನೇಯಾ
ಶಂಕಾವಜ್ಞಾನುತ್ವನುಜ್ಞಾವಕಾಶಮ್ ॥ 31॥
ವಾ ದಿದೇಶ ದ್ವಿಸೀತಾಯಾಂ
ಯಂ ಪಾಥೋಯನಸೇತವೇ ।
ವೈತಸೇನ ಯಥೋಪಾಯಂ
ಯಂತಾಸೀದ್ಽವಿಶದೇ ದಿವಾ ॥ 32॥
ವಾಯುಜೋಽನುಮತೋ ನೇಮೇ
ಸಂಗ್ರಾಮೇಽರವಿತೋಽಹ್ನಿ ವಃ ।
ವಹ್ನಿತೋ ವಿರಮೇ ಗ್ರಾಸಂ
ಮೇನೇಽತೋಽಮನುಜೋ ಯುವಾ ॥ 33॥
ಕ್ಷತಾಯ ಮಾ ಯತ್ರ ರಘೋರಿತಾಯು-
ರಂಕಾನುಗಾನನ್ಯವಯೋಽಯನಾನಿ ।
ನಿನಾಯ ಯೋ ವನ್ಯನಗಾನುಕಾರಂ
ಯುತಾರಿಘೋರತ್ರಯಮಾಯತಾಕ್ಷಃ ॥ 34॥
ತಾರಕೇ ರಿಪುರಾಪ ಶ್ರೀ-
ರುಚಾ ದಾಸಸುತಾನ್ವಿತಃ ।
ತನ್ವಿತಾಸು ಸದಾಚಾರು
ಶ್ರೀಪುರಾ ಪುರಿ ಕೇ ರತಾ ॥ 35॥
ಲಂಕಾ ರಂಕಾಂಗರಾಧ್ಯಾಸಂ
ಯಾನೇ ಮೇಯಾ ಕಾರಾವ್ಯಾಸೇ ।
ಸೇವ್ಯಾ ರಾಕಾ ಯಾಮೇ ನೇಯಾ
ಸಂಧ್ಯಾರಾಗಾಕಾರಂ ಕಾಲಮ್ ॥ 36॥
॥ ಇತಿ ಶ್ರೀದೈವಜ್ಞಪಂಡಿತ ಸೂರ್ಯಕವಿ ವಿರಚಿತಂ
ವಿಲೋಮಾಕ್ಷರರಾಮಕೃಷ್ಣಕಾವ್ಯಂ ಸಮಾಪ್ತಮ್ ॥

Sunday, September 27, 2015

ಸಿರಿಧಾನ್ಯಗಳು

ಈ ದಿನ ನಮ್ಮನ್ನು ಕಾಡಿ ತಿನ್ನುತ್ತಿರುವ ಬಹಳಷ್ಟು ಖಾಯಿಲೆಗಳಿಗೆ ನಾವು ತಿನ್ನುವ ರಾಸಾಯನಿಕ ಮಿಶ್ರಿತ ಆಹಾರವೇ ಮುಖ್ಯ ಕಾರಣ. ಮಧುಮೇಹ,ರಕ್ತದ ಒತ್ತಡ ಇತ್ಯಾದಿ ಸರ್ವೇ ಸಾಮಾನ್ಯವಾಗಿರುವ  ಖಾಯಿಲೆಗಳನ್ನು ತಡೆಗಟ್ಟಬೇಕಾದರೇ ನಾವು ಸೇವಿಸುವ ಆಹಾರದ ಕಡೆ ಹೆಚ್ಚು ಗಮನ ಹರಿಸ ಬೇಕು. ಪೌಷ್ಟಿಕ ಮತ್ತು ವೈವಿಧ್ಯಮಯ ಅಹಾರದ ಮೂಲ "ಸಿರಿಧಾನ್ಯಗಳು".  ಸಿರಿಧಾನ್ಯಗಳು ಎಂದರೆ ಪವಾಡ ಸದೃಶ ಧಾನ್ಯಗಳು. ಸಜ್ಜೆ, ನವಣೆ, ಸಾಮೆ, ಆರ್ಕ, ರಾಗಿ, ಊದಲು, ಬರಗು, ಜವೆ, ಕೊರಲೆ -- ಇವಗಳನ್ನು ಸಿರಿಧಾನ್ಯಗಳು ಎಂದು ಕರೆಯಲಾಗುತ್ತದೆ. ಇವುಗಳು ದೇಹಕ್ಕೆ ಬೇಕಾದ ನಾರು, ಪಿಷ್ಟ, ಪದಾರ್ಥ,ಕ್ಯಾಲ್ಸಿಯಂ ಮತ್ತು ಇತರ ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ. ಇಂತಹ ಶ್ರೇಷ್ಠ ಧಾನ್ಯಗಳು ಭಾರೆತೀಯ ವೈವಿಧ್ಯಮಯ ಆಹಾರ ಸಂಸ್ಕೃತಿಯ ಕೈಗನ್ನಡಿ. ಸಿರಿಧಾನ್ಯಗಳು ನಾರಿನ ಗಣಿಗಳು. ವಿವಿಧ ಸಿರಿಧಾನ್ಯಗಳಲ್ಲಿ ನಾರಿನ ಅಂಶ ಹೀಗಿವೆ: ಸಜ್ಜೆ - ೨.೭% ನಾರು, ಬಿಳಿ ಜೋಳ = ೧.೭%, ರಾಗಿ = ೩.೬%, ಆರ್ಕ = ೯%, ನವಣೆ = ೮%, ಸಾಮೆ = ೧೦%, ಕೋರಲೆ = ೧೩ ರಿಂದ ೧೪%.

ಮಧುಮೇಹ, ರಕ್ತದ ಒತ್ತಡ, ಅಪೌಷ್ಠಿಕತೆ ಇತ್ಯಾದಿಗಳಿಂದ ಪಾರಾಗಬೇಕಾದರೆ ಬಿಳಿ ಅಕ್ಕಿ ಮತ್ತು ಗೋಧಿ ಸೇವನೆಯನ್ನು ಸೀಮಿತ ಗೊಳಿಸಿ, ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಸೇವಿಸಬೇಕು. ಈ ಎಲ್ಲ  ಪೌಷ್ಟಿಕಾಂಶಗಳ ವಿಷಯಗಳನ್ನು "ತಿಳಿದು ತಿನ್ನಿರಿ"  ಮೂಲಕ ತಿಳಿಸಿ ಕೊಟ್ಟ ಡಾ || ಖಾದರ್ ಅವರಿಗೆ ಅನಂತ ಕೋಟಿ ನಮನಗಳು.

Tuesday, September 22, 2015

ಪ್ರಾರ್ಥನೆ

ಅನಿರ್ವೇದಮಸಿದ್ಧೇಷು ಸಾಧಿತೇಷ್ವನಹಂಕೃತಿಂ |
ಅನಾಲಸ್ಯಂ ಚ ಸಾಧ್ಯೇಷು ಕೃತ್ಯೇಷ್ವನುಗೃಹಾಣ ನಃ ||
                                                                        -- ಡಾ|| ರಾಳ್ಳಪಲ್ಲೀ ಅನಂತಕೃಷ್ಣಶರ್ಮಾ

ಸಾಧಿಸಲಾಗದುದಕ್ಕೆ ಬೇಸರ್ವಿರದಂತೆಯೂ, ಸಾಧಿಸಿರುವುದರ ಬಗ್ಗೆ ಅಹಂಕಾರವಿರದಂತೆಯೂ, ಹಾಗೂ ಸಾಧಿಸುತ್ತಿರುವುದರ ಕುರಿತು ಆಲಸ್ಯವಿರದಂತೆಯೂ ನಮ್ಮನು ಅನುಗ್ರಹಿಸು.

Sunday, August 30, 2015

ಶಶಾಂಕಾರ್ಧಮೌಲೇ

 ಸಂಸ್ಕೃತ ಭಾಷೆಯಲ್ಲಿ ಒಂದು ಅನುಸ್ವರ - ವಿಸರ್ಗ ಲೋಪ ಮಾತ್ರದಿಂದ ಅರ್ಥ ವ್ಯತ್ಯಯವಾಗ ಬಹುದು. ’ವೇದಸಾರ ಶಿವ ಸ್ತುತಿ’ ಪ್ರವಚನದಲ್ಲಿ ಅಂತದ್ದೊಂದು ಸ್ವಾರಸ್ಯ ಕಂಡು ಬಂತು. ಈ ಸ್ತವದಲ್ಲಿ "ಶಶಾಂಕಾರ್ಧಮೌಲೇ" ಎಂಬ ಒಂದು ಪ್ರಯೋಗವಿದೆ. ಇದರಲ್ಲಿ ಗಮನಿಸ ಬೇಕಾದ ವಿಷಯವೆಂದರೆ "ಅರ್ಧ:" ಎಂಬ ಪುಲ್ಲಿಂಗ ಪದದ ಪ್ರಯೋಗ ಮಾಡಿದರೆ, "ಚೂರು" ಎಂಬ ಅರ್ಥವನ್ನು ನೀಡುತ್ತದೆ. ಅದೇ, "ಅರ್ಧಂ" ಎಂಬ ನಪುಂಸಕ ಪದ ಪ್ರಯೋಗ ಮಾಡಿದರೆ , "ಅರ್ಧ ಭಾಗ" ಎಂಬ ಅರ್ಥ ನೀಡುತ್ತದೆ. ಹೀಗೆ, ಅರ್ಧಃ ಮತ್ತು ಅರ್ಧಂ ಎಂಬ ಕಿಂಚಿತ್ ಪ್ರಯೋಗಾಂತರದಿಂದ ಸಹ ಬೀರೆ ಅರ್ಥ ಸ್ಫುರಿಸ ಬಹುದು.

Thursday, July 30, 2015

ಗುರು ಪೂರ್ಣಿಮಗುರುರ್ಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ |
ಗುರುದೇವ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಚಿನ್ಮಯಂ ವ್ಯಾಪಿತಂ ಸರ್ವಂ ತ್ರೈಲೋಕ್ಯಂ ಸಚರಾಚರಂ ||
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ |
ಅನೇಕ ಜನ್ಮ ಸಂಪ್ರಾಪ್ತ ಕರ್ಮಬಂಧ ವಿಧಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||
ಮನ್ನಾಥಃ ಶ್ರೀ ಜಗನ್ನಾಥೋ ಮದ್ಗುರುಃ ಶ್ರೀ ಜಗದ್ಗುರುಃ |
ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||
ಬ್ರಹ್ಮಾನಂದಂ ಪರಮಸುಖದಂ ಕೇವಲ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿ ಲಕ್ಷ್ಯಂ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀ ಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಂ |
ನಿತ್ಯಬೊಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಂ ||

Tuesday, June 30, 2015

ಶ್ರೀತತ್ವನಿಧಿ

ಮುಮ್ಮಡಿ ಕೃಷ್ಣರಾಜ ಒಡೆಯರ ರಚಿಸಿದ ಶ್ರೀತತ್ವನಿಧಿ. ಇಂದು ಜೂನ್ ಮೂವತ್ತನೆ ದಿನ ಮುಮ್ಮಡಿಯವರು ಮೈಸೂರು ಸಾಮ್ರಾಜ್ಯ ಪೀಠಾರೋಹಣ ಮಾಡಿದ ದಿನ.

Sunday, May 24, 2015

ಶ್ರೀ ವೇದಸಾರಶಿವಸ್ತವ:

ಪಶೂನಾಂ ಪತಿಂ ಪಾಪನಾಶಂ ಪರೇಶಂ |
ಗಜೇಂದ್ರಸ್ಯ ಕೃತ್ತಿಂ ವಸಾನಂ ವರೇಣ್ಯಂ ||
ಜಟಾಜೂಟ ಮಧ್ಯೇ ಸ್ಫುರದ್ಗಾಂಗವಾರಿಂ |
ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್ ||೧||

ಮಹೇಶಂ ಸುರೇಶಂ ಸುರಾರಾರ್ತಿನಾಶಂ |
ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಂ ||
ವಿರೂಪಾಕ್ಷಮಿಂದ್ವರ್ಕವಹ್ನಿತ್ರಿನೇತ್ರಂ |
ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್ ||೨||

ಗಿರೀಶಂ ಗಣೇಶಂ ಗಲೇ ನೀಲವರ್ಣಂ |
ಗವೇಂದ್ರಾಧಿರೂಢಂ ಗುಣಾತೀತರೂಪಮ್ ||
ಭವಂ ಭಾಸ್ಕರಂ ಭಸ್ಮನಾ ಭೂಷಿತಾಂಗಂ |
ಭವಾನೀ ಕಲತ್ರಂ ಭಜೇ ಪಂಚವಕ್ತ್ರಮ್ ||೩||

ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ |
ಮಹೇಶಾನ ಶೂಲಿನ್ ಜಟಾಜೂಟಧಾರಿನ್ ||
ತ್ವಮೇಕೋ ಜಗದ್ವಾಪಿಕೋ ವಿಶ್ವರೂಪ: |
ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ  ||೪||

ಪರಾತ್ಮಾನಮೇಕಂ ಜಗದ್ಬೀಜಮಾದ್ಯಂ |
ನಿರೀಹಂ ನಿರಾಕಾರಮೋಂಕಾರವೇದ್ಯಮ್ ||
ಯತೋಜಾಯತೇ ಪಾಲ್ಯತೇ ಯೇನ ವಿಶ್ವಂ |
ತಮೀಶಂ ಭಜೇ ಲೀಯತೇ ಯತ್ರ ವಿಶ್ವಮ್  ||೫||

ನ ಭೂಮಿರ್ನ ಚಾಪೋ ನ ವಹ್ನಿರ್ನವಾಯು |
ರ್ನ ಚಾಕಾಶಮಾಸ್ತೇ ನ ತಂದ್ರಾ ನ ನಿದ್ರಾ ||
ನ ಗ್ರೀಷ್ಮೋ ನ ಶೀತಂ ನ ದೇಶೋ ನವೇಶೋ |
ನ ಯಸ್ಯಾಸ್ತಿ ಮೂರ್ತಿಸ್ತ್ರಿಮೂರ್ತಿಂ ತ ಮೀಡೇ ||೬||

ಅಜಂಶಾಶ್ವತಂ ಕಾರಣಂ ಕಾರಣಾನಾಂ  |
ಶಿವಂ ಕೇವಲಂ ಭಾಸಕಂ ಭಾಸಕಾನಾಮ್ ||
ತುರೀಯಂ ತಮ:ಪಾರಮಾದ್ಯಂತಹೀನಂ |
ಪ್ರಪದ್ಯೇ ಪರಂ ಪಾವನಂ ದ್ವೈತಹೀನಮ್ ||೭||

ನಮಸ್ತೇ ನಮಸ್ತೇ ವಿಭೋ ವಿಶ್ವಮೂರ್ತೇ |
ನಮಸ್ತೇ ನಮಸ್ತೇ ಚಿದಾನಂದಮೂರ್ತೇ ||
ನಮಸ್ತೇ ನಮಸ್ತೇ ತಪೋಯೋಗಗಮ್ಯ |
ನಮಸ್ತೇ ನಮಸ್ತೇ ಶ್ರುತಿಜ್ಞಾನಗಮ್ಯ ||೮||

ಪ್ರಭೋ ಶೂಲಪಾಣೇ ವಿಭೋ ವಿಶ್ವನಾಥ |
ಮಹಾದೇವ ಶಂಭೋ ಮಹೇಶ ತ್ರಿನೇತ್ರ ||
ಶಿವಾಕಾಂತ ಶಾಂತ ಸ್ಮರಾರೇ ಪುರಾರೇ |
ತ್ವದನ್ಯೋ ವರೇಣ್ಯೋ ನ ಮಾನ್ಯೋ ನ ಗಣ್ಯ: ||೯||

ಶಂಭೋ ಮಹೇಶ ಕರುಣಾಮಯ ಶೂಲಪಾಣೇ |
ಗೌರೀಪತೇ ಪಶುಪತೇ ಪಶುಪಾಶನಾಶಿನ್ ||
ಕಾಶೀಪತೇ ಕರುಣಯಾ ಜಗದೇತದೇಕ- |
ಸ್ತ್ವಂ ಹಂಸಿ ಪಾಸಿ ವಿದಧಾಸಿ ಮಹೇಶ್ವರೋsಸಿ ||೧೦||

ತ್ವತ್ತೋ ಜಗದ್ಭವತಿ ದೇವ ಭವ ಸ್ಮರಾರೇ |
ತ್ವಯ್ಯೇವ ತಿಷ್ಟತಿ ಜಗನ್ಮೃಡ ವಿಶ್ವನಾಥ ||
ತ್ವಯ್ಯೇವ ಗಚ್ಚತಿ ಲಯಂ ಜಗದೇಶದೀಶ |
ಲಿಂಗಾತ್ಮಕೇ ಹರ ಚರಾಚರವಿಶ್ವರೂಪಿನ್ ||೧೧||

  || ಇತಿ ಶ್ರೀ ಶಂಕರಾಚಾರ್ಯ ವಿರಚಿತ ವೇದಸಾರ ಶಿವಸ್ತೋತ್ರಮ್ ||

Sunday, April 26, 2015

ಸಾಧನ ಸೋಪಾನ ಪಂಚಕಂ
 ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನ್ಠುಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

Monday, March 30, 2015

ಸುಂದರ ಕಾಂಡ

ಸುಂದರೇ ಸುಂದರೋ ರಾಮಃ ಸುಂದರೇ ಸುಂದರೀ ಕಥಾ ।
ಸುಂದರೇ ಸುಂದರೀ ಸೀತಾ ಸುಂದರೇ ಸುಂದರಂ ವನಂ ।।
ಸುಂದರೇ ಸುಂದರಂ ಕಾವ್ಯಂ ಸುಂದರೇ ಸುಂದರಃ ಕಪಿಃ ।
ಸುಂದರೇ ಸುಂದರಂ ಮಂತ್ರಂ ಸುಂದರೇ ಕಿಂ ನ ಸುಂದರಂ ।।

Saturday, February 28, 2015

ಶ್ರೀ ರಾಘವ ಸ್ತುತಿರಾಘವಂ ರಾಮಚಂದ್ರಂ ಚ ರಾವಣಾರಿಂ ರಮಾಪತಿಂ
ರಾಜೀವಲೋಚನಂ ರಾಮಂ ತಂ ವಂದೇ ರಘುನಂದನಂ

Friday, January 30, 2015

ಜಾನಕೀ ಜಾನೇ ರಾಮಾಜಾನಕೀ ಜಾನೇ ರಾಮಾ, ಜಾನಕೀ ಜಾನೆ |
ಕದನ ವಿಧಾನಂ ನ ಹಂ ಜಾನೆ|
ಮೋಕ್ಷಕವಾಟಂ ನ ಹಂ ಜಾನೆ, ಜಾನಕೀ ಜಾನೇ ||

ವಿಷಾದ ಕಾಲೇ ಸಖಾ ತ್ವಮೇವ
ಭಯಾಂಧಕಾರೇ ಪ್ರಭಾ ತ್ವಮೇವ
ಭವಾಬ್ಧಿ ನೌಕಾ ತ್ವಮೇವ ದೇವ
ಭಜೇ ಭವಂತಂ ರಾಮಾಭಿ ರಾಮಾ ||

ದಯಾಸಮೇತ ಸುಧಾನಿಕೇತ,
ಚಿನ್ಮಕರಂದ ನತಮುನಿವೃಂದ
ಆಗಮಸಾರ, ಜಿತಸಂಸಾರ
ಭಜೇ ಭವಂತಂ ರಾಮಾಭಿ ರಾಮಾ ||

ಯೂಸುಫ್ ಅಲಿ ಕೇಚೇರಿ ಅವರ ರಚನೆಯನ್ನು ಸ್ವರಬದ್ಧ ಮಾಡಿ ಸಂಗೀತ ನೀಡಿದವರು ನೌಷದ್ ಅಲಿ ಖಾನ್. ಹಾಡಿದವರು ಗಾನಗಂಧರ್ವ ಪದ್ಮಶ್ರೀ ಕೆ.ಜೆ. ಏಸುದಾಸ್.  ಮುಂಜಾನೆಯ ವೇಳೆ  ಕಲ್ಯಾಣಿ ರಾಗ ಆಧಾರಿತ ಈ ಕೃತಿ ಇಂದಲೇ ಬೆಳಗಾಗುವುದು.  ಶ್ರೀ ರಾಮನ ಭಜನೆ ಬರೆದವರು ಯೂಸುಫ್ ಅಲಿ, ಸಂಗೀತ ನೌಷದ್ ಅಲಿ ಹಾಗೂ ಗಾಯನ ಯೇಸುವಿನ ದಾಸನಿಂದ. ಇದುವೇ  ಅಲ್ಲವೇ ಭಾರತದ ನಿಜವಾದ ನೈಜ ಐಕ್ಯತೆ?  ಜಾತ್ಯತೀತತೆ, ಧರ್ಮನಿರಪೇಕ್ಷತೇ ಎಂದೆಲ್ಲಾ ಅರ್ಥವಿಲ್ಲದೆ ಬೊಬ್ಬೆ ಹೊಡೆಯುವ ಸೆಕ್ಯುಲರ್ ವಾದಿಗಳಿಗೆ ಭಾರತದ ಈ ನೈಜ ಭಾವನೆಗಳು ತಿಳಿಯುವುದೆಂದು?

Wednesday, December 31, 2014

ಪತಂಜಲಿ

ಯೋಗೇನ ಚಿತ್ತಸ್ಯ ಪದೇನ ವಾಚಂ ಮಲಂ ಶರೀರಸ್ಯ ಚ ವೈದಿಕೇನ ।
ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿರಾನತೋಸ್ಮಿ ।।

ಯೋಗದಿಂದ  ಚಿತ್ತ ಶುದ್ಧಿಯನ್ನು, ವ್ಯಾಕರಣದಿಂದ ಭಾಷೆಯನ್ನು ಹಾಗು ಆಯುರ್ವೇದದಿಂದ ಶರೀರದ ಕಷ್ಮಲವನ್ನು ನಿವಾರಿಸುವ ಪತಂಜಲಿ ಮಹರ್ಷಿಗಳಿಗೆ ನನ್ನ ಪ್ರಾಂಜಲ ವಂದನೆಗಳು.

Sunday, December 28, 2014

ಗೋಮಯದಲ್ಲಿ ಲಕ್ಷ್ಮೀಲಕ್ಷ್ಮೀಶ್ಚ ಗೋಮಯೇ ನಿತ್ಯಂ ಪವಿತ್ರಾ ಸರ್ವಮಂಗಲಾ|
ಗೋಮಯಾಲೇಪನಂ ತಸ್ಮಾತ್ಕರ್ತವ್ಯಂ ಪಾಂಡುನಂದನ ||

ಪವಿತ್ರಳೂ, ಸರ್ವಮಂಗಳಪ್ರದಳೂ ಆದ ಲಕ್ಷ್ಮಿಯು ಗೋಮಯದಲ್ಲಿ ಯಾವಾಗಲೂ ನೆಲೆಸಿರುವಳು. ಆದರಿಂದ ಎಲೈ ಪಾಂಡುಪುತ್ರನೇ, ಗೋಮಯದಿಂದ ಆಲೇಪವನ್ನು ಅಂದರೆ ಸಾರಣೆಯನ್ನು ಮಾಡಬೇಕು.

Saturday, November 29, 2014

ಸಂಸ್ಕೃತ ಗ್ರಾಮ


ಭಾರತದ ಐದು ಹಳ್ಳಿಗಳಲ್ಲಿ ಸಂಸ್ಕೃತವನ್ನು ನಿತ್ಯ ವ್ಯವಹಾರದಲ್ಲಿ ಬಳಸಲಾಗುತ್ತಿದೆ.
ಕರ್ನಾಟಕದ ಮತ್ತೂರು ಮತ್ತು  ಹೊಸಹಳ್ಳಿ  ಹಾಗು  ಮಧ್ಯಪ್ರದೇಶದ ಝಿರೀ , ಮೊಹದ್ ಮತ್ತು  ಬಘುವಾರ್ .

Sunday, October 26, 2014

ಗಾವೋ ವಿಶ್ವಸ್ಯ ಮಾತರಃ

ಭುಕ್ತ್ವಾ  ತೃಣಾನಿ ಶುಷ್ಕಾನಿ ಪೀತ್ವಾ ತೋಯಂ ಜಲಾಶಯಾತ್ |
ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||

ಗಾವೋ ಮಮಾಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||

ಸುರಭಿಸ್ತ್ವಂ ಜಗನ್ಮಾತಃ ನಿತ್ಯಂ ವಿಷ್ಣುಪದೇ ಸ್ಥಿತಾ |
ಮಾತರ್ಮಯಾಭಿಲಷಿತಂ ಸಫಲಂ ಕುರು ನಂದಿನಿ ||

ಗೋಗ್ರಾಸ ಕೊಡುವಾಗ
ಸುರಭಿರ್ವೈಷ್ಣವೀಮಾತಃ ಸುರಲೋಕೇ ಮಹೀಯಸೇ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಮ್ ||

ಪಂಚಗವ್ಯ ಸ್ವೀಕರಿಸುವಾಗಿನ ಮಂತ್ರ
ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರ‍ಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||

*** ಸೂರ್ಯ ಕೇತು ನಾಡಿ ***

ಭಾರತೀಯ ಗೋವಿನ ಬೆನ್ನು ಹುರಿಯಲ್ಲಿ  "ಸೂರ್ಯ ಕೇತು ನಾಡಿ" ಎಂಬ ದೈವೀಕ ನಾಡಿಯಿದೆ. ಈ ಸೂರ್ಯ ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ  ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವಾಗಿಸುತ್ತದೆ.  ಆದ್ದರಿಂದಲೇ ಭಾರತೀಯ ಗೋವಿನ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪಗಳಲ್ಲಿ ಬಂಗಾರದ ಕಣಗಳಿದ್ದು ಕಿಂಚಿತ್ ಹಳದೀ ಬಣ್ಣದಲ್ಲಿ ಕಂಗೊಳಿಸುತ್ತವೆ. 

Monday, September 29, 2014

ಅಮೃತವಚನ
ಪಂಡಿತ್ ಜಿ ಹೇಳಿದ ಅಮೃತವಚನ

ಜಗತ್ತು ಸಂಘರ್ಷಾತ್ಮಕವಲ್ಲ, ಸ್ರುಜನಾತ್ಮಕ. ಬೀಜವು ವೃಕ್ಷ ರೂಪದಲ್ಲಿ ಹೊರಬರುವುದು ಸಂಘರ್ಷದ ಉದ್ದೇಶದಿಂದಲ್ಲ, ತನ್ನ ಸ್ವಂತದ ವಿಕಾಸಕ್ಕಾಗಿ, ಸಾಕ್ಷಾತ್ಕಾರಕ್ಕಾಗಿ. ಅದರ ಜೀವನೋದ್ದೇಶವು ಇನ್ನಾವುದರ ವಿನಾಶವೂ ಅಲ್ಲ. ಆದರೆ, ಇನ್ನೊಂದಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವುದೇ ಆಗಿದೆ. ಸಂಪೂರ್ಣ ಸೃಷ್ಟಿಯ ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತದೆ. ಆದರ ಆಧಾರವು ಸಂಘರ್ಷವಲ್ಲ. ಸಹಯೋಗ. ಪಂಚ ಮಹಾಭೂತಗಳು ಜೊತೆಗೂಡುವುದು ಇನ್ನಾವುದರೊಂದಿಗೆ ಸಂಘರ್ಷ ಮಾಡಲೆಂದಲ್ಲ. ಆದರೆ ತಮ್ಮ ಪ್ರಕೃತಿಗೆ ತಕ್ಕಂತೆ ನಡೆದುಕೊಂಡು ಆ ಮೂಲಕ ಸೃಷ್ಟಿಯ ಸಾರ್ಥಕತೆಯ ಇಚ್ಚೇಯನ್ನು ಪೂರ್ಣ ಮಾಡಲೆಂದು!

Sunday, July 27, 2014

ಮುಖ ನೋಡಿ ಮಣೆ ಹಾಕು

ಇತ್ತೀಚೆಗೆ  ಮುದ್ರಣ ತಂತಜ್ಞಾನ ಪ್ರಗತಿ ಹೊಂದಿದಂತೆಲ್ಲಾ ಪುಸ್ತಕಗಳ ಮುಖಪುಟ ವಿನ್ಯಾಸ ಅದೆಷ್ಟು ಅಂದವಾಗಿರುತ್ತದೆಂದರೆ ಮುಖ ಪುಟ ನೋಡುತ್ತಲೇ ಪುಸ್ತಕ ಕೊಳ್ಳಬೇಕೆಂಬ ಮೋಹ ಹುಟ್ಟುತ್ತದೆ. ಕೊಂಡ ಪುಸ್ತಕ ಓದುತ್ತೇವೋ ಇಲ್ಲವೋ ಆ ಸುಂದರ ವಸ್ತುವನ್ನು ನಮ್ಮದಾಗಿಸಿ ಕೊಳ್ಳಬೇಕೆಂಬ ಮಹಾದಾಸೆ ಪುಸ್ತಕವನ್ನು ಕೊಳ್ಳುವಂತೆ ಮಾಡುತ್ತದೆ. ಇದು ಒಂದು ರೀತಿ ಸಾತ್ವಿಕ ಮೋಹ.

ಆಸ್ಟ್ರೇಲಿಯಾದ ಸಿಡ್ನಿ ಡೌನ್ ಟೌನ್ ನ (Downtown) ಪಿಟ್ಟ್ ಸ್ಟ್ರೀಟ್ ನಲ್ಲಿ (Pitt St.) ಎಲಿಜಬೆತ್ ಪುಸ್ತಕದ ಅಂಗಡಿ  ಇದೆ.  "ಪುಸ್ತಕವನ್ನು ಮುಖಪುಟದಿಂದ ಅಳಿಯಬೇಡಿ"  (Do not judge a book by its cover) - ಎಂಬ ಶೀರ್ಷಿಕೆಯ ಬೋರ್ಡ್ ನೊಂದಿಗೆ ಒಂದು ವಿನೂತನ ಪ್ರಯೋಗವನ್ನು ಅಲ್ಲಿ ಕಂಡೆ.  ಒಂದು ಪುಸ್ತಕವನ್ನು ಅಂದವಾಗಿ  wrap ಮಾಡಿ, cover ನ ಮೇಲೆ ಪುಸ್ತಕವನ್ನು ವಿವರಿಸುವ ಕೆಲವು ಪದಗಳನ್ನು ಬರೆಯಲಾಗಿತ್ತು. ಉದಾಹರಣೆಗೆ -- "ಇತಿಹಾಸ", " ಎರಡನೇ ವಿಶ್ವ ಯುದ್ಧ", "ತಂತ್ರಜ್ಞಾನ", "ಕಾಂಗರೂ" ಇತ್ಯಾದಿ. ಪುಸ್ತಕದ ಹೆಸರಾಗಲಿ, ಲೇಖಕನ ಹೆಸರಾಗಲೀ, ಮುಖಪುಟವಾಗಲಿ ತೋರಿಕೊಳ್ಳುವುದಿಲ್ಲ. ಪುಸ್ತಕದ ಒಳಗಿನ ವಿಷಯದ ಆಧಾರದ ಮೇಲೆ ಖರೀದಿ ನಡೆಯ ಬೇಕು. ಈ ರೀತಿ ಮಾಡುವುದರಿಂದ ಕೊಂಡ ಪುಸ್ತಕ ಯಾವುದಿರ ಬಹುದು ಎಂಬ ಕುತೂಹಲ ಮೂಡುತ್ತದೆ. ಪುಸ್ತಕ ಕೊಳ್ಳುವ ಪ್ರಕ್ರಿಯೆಯಲ್ಲಿ ಅತಿಶಯ ಸಂತೋಷವು ಆಗಿ ಬರುತ್ತದೆ. 

Thursday, June 26, 2014

ಏಕಾತ್ಮಮಾನವತೆ

ಸೃಷ್ಟಿಯಲ್ಲಿ ಸಂಘರ್ಷ  ಸ್ಪರ್ಧೆಗಳು ಇರುವಂತೆ ಸಹಕಾರ ಸಹಯೋಗಗಳೂ ಇವೆ. ಜಗತ್ತಿನ ವಿವಿಧ ಅಂಗಗಳ ಪರಸ್ಪರ ಪೂರಕತೆಯನ್ನು ಮನಗಂಡವರು ಭಾರತೀಯ ದಾರ್ಶನಿಕರು. ವ್ಯಕ್ತಿಯೂ ಸಮಾಜವೂ ವಿವಿಧ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಸರಿಸುವ ಕ್ರಮಗಳು ಘರ್ಷಣೆಗೆ ಎಡೆಗೊಡದಂತೆ ನೋಡಿಕೊಳ್ಳುವ ಸೂತ್ರವೇ ಧರ್ಮ. ವ್ಯಕ್ತಿ ಸ್ವಾರ್ಥಕ್ಕೆ ಪ್ರತಿಯಾದ ಸಮಷ್ಟಿ ದೃಷ್ಟಿಯೇ ಧರ್ಮ -- ಏಕಾತ್ಮಮಾನವತೆ

Wednesday, April 30, 2014

ಸಂಗೀತ ಜ್ಞಾನ

ತ್ರಿವರ್ಗ ಫಲದಾಃ ಸರ್ವೇ ದಾನಯಜ್ಞ ಜಪಾದಯಃ ।
ಏಕಂ ಸಂಗೀತ ವಿಜ್ಞಾನಂ ಚತುರ್ವರ್ಗ ಫಲಪ್ರದಂ ।।

ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು 

Sunday, March 30, 2014

ಕಾಯೋ ಶ್ರೀ ಗೌರಿ ಕರುಣಾಲಹರಿಕಾಯೋ ಶ್ರೀ ಗೌರಿ ಕರುಣಾಲಹರಿ
ತೊಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ ಕೊಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ .. ||||
ಶುಂಬಾದಿಮ ದಾಮ್ಬೋನಿಧಿ ಕುಮ್ಬಜ ನಿಭ ದೇವಿ
ಜಮ್ಭಾಹಿತ ಸಂಭಾವಿತೆ ಶಾಂಭವಿ ಶುಭವೀ ||||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ ||||

Thursday, January 30, 2014

ಶ್ರೀ ಕೃಷ್ಣ ಸ್ತುತಿಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ ದಶಾಶ್ವಮೇಧಾವ ಭ್ರುತೇನ ತುಲ್ಯಃ ।
ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣ  ಪ್ರಣಾಮಿ ನ ಪುನರ್ಭವಾಯ ।।

 ಶ್ರೀ ಕೃಷ್ಣನಿಗೆ ಮಾಡಿದಂತಹ ಒಂದು ಪ್ರನಾಮವು ಹತ್ತು ಅಶ್ವಮೇಧ ಯಾಗಗಳ ಅವಭೃತ ಸ್ನಾನಕ್ಕೆ ಸಮಾನವಾಗಿದೆ. ಆದರೆ  ಈ ಅಶ್ವಮೇಧ ಯಾಗದ ಪುಣ್ಯ ಭೊಗಿಸಿದ ನಂತರ ಮತ್ತೆ ಸಂಸಾರ ಬಂಧನಕ್ಕೆ  ಬರುತ್ತಾರೆ. ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದವರು ಮತ್ತೆ ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ.

Friday, November 29, 2013

ಸನಾತನ ಧರ್ಮ

 ಮಹಾಲಕ್ಷ್ಮೀ ಅಷ್ಟಕ, ಶ್ರೀ ಗುರು ಅಷ್ಟಕ, ಕಾಲಭೈರವಾಷ್ಟಕ ಇತ್ಯಾದಿ ಹಲವಾರು ಅಷ್ಟಕಗಳನ್ನು ಧಾರ್ಮಿಕ ಸಾಹಿತ್ಯದಲ್ಲಿ ಹೇರಳವಾಗಿವೆಯಷ್ಟೇ. ಅದೇ ರೀತಿ ಚಿರಂತನ, ಪ್ರಾಚೀನ ಹಾಗು ಅನಾದಿಯಾದ ಸನಾತನ ಧರ್ಮದ ಕುರಿತು ಒಂದು ಅಷ್ಟಕವನ್ನು ವೇದಾಂತ ಚಕ್ರವರ್ತಿ. ವಿದ್ವಾನ್ ಕೆ. ಜಿ .ಸುಬ್ರಾಯಶರ್ಮ ಅವರು ರಚಿಸಿರುವ  "ಧರ್ಮ- ವೇದ - ಬ್ರಹ್ಮ" ಎಂಬ ಪುಸ್ತಿಕೆಯಲ್ಲಿ ನೋಡಿದೆ. ಬಹಳ ಸ್ವಾರಸ್ಯಕರವಾದ, ಉಪಯುಕ್ತವಾದ ಈ ಅಷ್ಟಕವನ್ನು ಓದುಗರಲ್ಲಿ ಹಂಚಿ ಕೊಳ್ಳುತ್ತಿದ್ದೇನೆ.

ಅನಾದಿನಿಧನಂ  ಶಾಂತಂ ಸರ್ವಪ್ರಾಣಿ ಶುಭಂಕರಂ
ಋಷಿ ಸಂಪೂಜಿತಂ ದಿವ್ಯಂ ಭಜೇ ವೇದಂ ಸನಾತನಂ ॥೧॥

ಸರ್ವಜ್ಞಂ ಸರ್ವವರದಂ ಸರ್ವಶಾಂತಿಕರಂ ಪ್ರಭುಂ ।
ಸರ್ವಶಾಸ್ತ್ರಸದಾಧಾರಂ ಭಜೇ ವೇದಂ ಸನಾತನಂ ॥೨॥

ಪ್ರವೃತ್ತಿ ಧರ್ಮವಕ್ತಾರಂ ತಥಾ ಭ್ಯುದಯದಾಯಕಂ
ಸರ್ವಸಂತ್ಪ್ರದಂ ಕಾಂತಂ ಭಜೇ ವೇದಂ ಸನಾತನಂ ॥೩॥

ನಿವ್ರುತ್ತಿಮಾರ್ಗವಕ್ತಾರಂ ನಿತ್ಯಾನಂದಪ್ರದಾಯಕಂ ।
ಸರ್ವ ಸಂನ್ಯಾಸಿ ಸಂಪೂಜ್ಯಂ ಭಜೇ ವೇದಂ ಸನಾತನಂ ॥೪॥

ವಿಶ್ವಾಧಾರಾಂ ಧರ್ಮಧರಂ ಧರ್ಮಬ್ರಹ್ಮ ಪ್ರಭೊಧಕಂ
ಹಿರಣ್ಯಗರ್ಭ ಗರ್ಭಸ್ಥಂ ಭಜೇ ವೇದಂ ಸನಾತನಂ ॥೫ ॥

ನಿರ್ದೋಷಂ ಸಗುಣಂ ನಿತ್ಯಂ ಸರ್ವಪಾಪಹರಂ ಶುಭಂ
ಶ್ರುತ್ಯಾಮ್ನಾಯಾದಿನಾಮಾನಂ ಭಜೇ ವೇದಂ ಸನಾತನಂ ॥೬ ॥

ಪರಬ್ರಹ್ಮ ಸ್ವರೂಪಂ ತಂ ಸರ್ವವೇದಾಂತ ವಂದಿತಂ
ಅಪೌರುಷೇಯಂ ಸರ್ವಜ್ಞಂ ಭಜೇ ವೇದಂ ಸನಾತನಂ ॥೭॥

ನಿತ್ಯಶುದ್ಧಂ ನಿತ್ಯಬುದ್ಧಂ ನಿತ್ಯಸತ್ಯಸ್ವಾರೂಪಿಣಂ
ನಿತ್ಯಾನಂದ ಪ್ರದಾತಾರಂ ಭಜೇ ವೇದಂ ಸನಾತನಂ ॥೮॥

Tuesday, October 29, 2013

ಗೀತಾಂಜಲಿ

ರಾಜಕುಮಾರನ ಪೋಷಾಕು ಧರಿಸಿದ ಪುಟ್ಟ ಕಂದಮ್ಮನಿಗೆ ಕೊರಳ ಸುತ್ತಲೂ ರತ್ನಹಾರದ ಸರಪಳಿ. ಆಡಳದುವೆ ತೊಡರು.ಪ್ರತಿ ಹೆಜ್ಜೆಯನ್ನು ಅಂಕುಷದಲ್ಲಿಡುವ ಆಡಂಬರ .   ರಾಜ ಪೋಷಾಕು ಎಲ್ಲಿ ಕೊಳೆಯಾಗುವುದೋ , ಎಲ್ಲಿ ಸುಕ್ಕುಗಟ್ಟುವುದೋ ಎಂಬ ಅಳುಕಿನಲ್ಲಿ ಕದಲಿಕೆಗೆ ಕೂಡ ಭೀತಿ .. ಹೇ ಮಾತೆ, ಭೂಮಿಯ ಪವಿತ್ರ ಧೂಳೀ ಕಣಗಳಿಂದ ದೂರವಿಡುವ ಭವ್ಯ ಬಂಧನದಿಂದ ಏನು ಒಳಿತು. ಜೀವಿತದ ಮಹಾಮೇಳಕ್ಕೆ ಪ್ರವೇಶವನ್ನೇ ಕಸಿದುಕೊಳ್ಳುವ ಸಿರಿವಂತಿಕೆ ಭಾಗ್ಯವಾದೀತೇ?