Friday, April 15, 2016

ಶ್ರೀ ಶಂಕರರಾಮ ಸರ್ವಾಂಗ ರಕ್ಷಾ ಸ್ತುತಿ

|| ಶ್ರೀ ಶಂಕರರಾಮ ಸರ್ವಾಂಗ ರಕ್ಷಾ ಸ್ತುತಿ ||

ರಾಮಾ ಸತತ ನಿನ್ನ ನಾಮ ಕೊಂಡಾಡುವ ನೇಮವಿತ್ತು ಸಲಹೋ || ಪ ||
ಕಾಮಿತಾರ್ಥಗಳ ಕರುಣಿಸೋ ರಘುಪತಿ ಶ್ಯಾಮ ಮನೋಹರ ಹೃದಯದಿ ನೆಲೆಸೋ ||

ಶಿರವೆರಗಲಿ ತವ ಪದಾಂಬುರುಹಕೆ, ಕರಗಳರ್ಚಿಸಲಿ ತವ ಪಾದುಕೆಯಾ || ೧ ||
ಕರ್ಣಂಗಳು ನಿನ್ನ ಕೀರ್ತನೆ ಕೇಳಲಿ, ಜಿಹ್ವೆ ಪೇಳಲಿ ನಿನ್ನ ಭಜನೆಯ ರಾಘವ || ೨ ||
ಕಂಗಳು ಮಂಗಳ ಮೂರ್ತಿಯ ಕಾಣಲಿ, ಭಂಗವಾಗಲಿ ಎನ್ನ ಗರ್ವಾಂಧಕಾರ ||೩||
ಹಿಂಗದೆ ಕುಣಿಯಲಿ ಕಾಲ್ಗಳು ಯಾತ್ರೇಯೋಳ್, ಸಂಘವಿರಲಿ ನಿನ್ನ ದಾಸರಂದೆನೆಗೆ ||೪||
ಕರಗಳು ಬರೆಯಲಿ ರಾಮ ನಮವನು, ಶಿರಧರಿಸಲಿ ನಿನಗೆ ಮುಡಿದಿಹ ಹೂವ ||೫||
ಸುರಿಯಲಿ ಹರ್ಷಾಶೃ ಕಂಗಳೆರಡರಲಿ, ಮರೆಯಲಿ ದೇಹವು ತವ ಕೀರ್ತನೆಯೋಳ್ ||೬||
ನಾಸಿಕವಾಘ್ರಾಣಿಸಲಿ ತುಳಸಿಯನು,ಅಶಾಪಾಶಾಗಳು ಸುಟ್ಟು ಹೋಗಲಿ ||೭||
ಕೇಶವದಾಸನು ತನೆತವದಾಸರ ,ದಾಸನಾಗುವ ಭಾಗ್ಯ ಬೇಗ ದೊರಕಲಿ ||೮||
ರಾಮಾ ಸತತ ನಿನ್ನ ನಾಮ ಕೊಂಡಾಡುವ ನೇಮವಿತ್ತು ಸಲಹೋ || ಪ ||
            || ಜೈ ಶ್ರೀ ರಾಮ ||