Thursday, January 04, 2007

ಹಂಗು

ಹಂಗಿಲ್ಲದಾ ಬಾಳು ಹ್ಯಾಂಗ , ತಂಗ್ಯವ್ವ
ಹಂಗಿಲ್ಲದಾ ಬಾಳು ಹ್ಯಾಂಗ

ಭುವಿಗೆ ಭವಕಾರಕನ ಹಂಗು
ತೃಷೆಗೆ ಪಾವಕನ ಹಂಗು
ಸುಧೆಗೆ ಭೃಂಗದ ಹಂಗು
ಬೆದೆಗೆ ಕಾಮನ ಹಂಗು
ಋತುವಿಗೆ ಕಾಲನ ಹಂಗು
ಜೀವಿತಕೆ ಇರುವಿಕೆಯ ಹಂಗು

ಹಂಗಿಲ್ಲದಾ ಬಾಳು ಹ್ಯಾಂಗ , ತಂಗ್ಯವ್ವ
ಹಂಗಿಲ್ಲದಾ ಬಾಳು ಹ್ಯಾಂಗ


- ಶ್ರೀ ಸಾಮಾನ್ಯ

2 comments:

bhadra said...

ಬಹಳ ಸೊಗಸಾಗಿದೆ

ಹಂಗಿಲ್ಲದ ಬಾಳು ಯಾರಿಗಿದೆ, ಎಲ್ಲಿದೆ. ಮಗುವಾಗಿರುವಾಗ ತಂದೆ ತಾಯಿಯರ ಹಂಗು, ಬೆಳೆಯುವಾಗ ಪಾಲಕರ ಹಂಗು,
ಬೆಳೆದ ಮೇಲೆ ಅನ್ನದಾತನ ಹಂಗು, ಬೀಳುವ ಮೊದಲು ಮಕ್ಕಳ ಹಂಗು. ಇವೆಲ್ಲದಕ್ಕಿಂತ ಮಿಗಿಲಾಗಿ ಜೀವಿಸಿರಲು ಸರ್ವಶಕ್ತನ ಹಂಗು.
ಇದು ಮಾನವನ ಹಂಗಿನ ಕಥೆಯಾದರೆ, ಇನ್ನಿತರ ವಸ್ತುಗಳದ್ದೂ ಇದೇ ಕಥೆ. ಸರ್ವಶಕ್ತನೊಬ್ಬನಿಗೆ ಯಾರ ಹಂಗೂ ಇಲ್ಲ. ಆದರೆ
ಆತ ಯಾರೆಂದು ಯಾರಿಗೂ ಗೊತ್ತಿಲ್ಲ.

ಮತ್ತೊಂದು ಷಟ್ಕಾರ. ಮೂರು ಚೆಂಡುಗಳಿಗೆ ೧೮ ಹುದ್ದರಿಗಳು.

Srikanth said...

ತವಿಶ್ರೀ ( ಗುರುಗಳೇ)

ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶನಕ್ಕೆ ನಾನು ಚಿರಋಣಿ.

~ ಶ್ರೀಕಾಂತ್