Wednesday, September 14, 2022

ಚತ್ವಾರಿ ಶೃಂಗಾ

ಅಗ್ನಿಮುಖ ಪ್ರಯೋಗದಲ್ಲಿ ಅಗ್ನಿಮೂರ್ತಿಂ ಧ್ಯಾಯಾಮಿ ಎಂಬಲ್ಲಿ ವೇದೋಕ್ತ ಈ ಧ್ಯಾನವನ್ನು ಮಾಡಬೇಕು. ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಯೋ ಅಸ್ಯ । ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾ ಆವಿವೇಶ ।। ಚತ್ವಾರಿ ಶೃಂಗಾ = ಅಧ್ವರ್ಯು, ಹೋತೃ, ಉದ್ಗಾತೃ ಮತ್ತು ಬ್ರಹ್ಮ ಇವರೇ ನಾಲ್ಕು ಕೊಂಬುಗಳು ತ್ರಯೋ ಅಸ್ಯ ಪಾದಾ = ಪ್ರಾತಃಸವನ, ಮಾಧ್ಯಂದಿನಸವನ, ಸಾಯಂಸವನಗಳೇ ಮೂರು ಕಾಲುಗಳು. ದ್ವೇ ಶೀರ್ಷೇ = ಯಜಮಾನ ಮತ್ತು ಅವನ ಪತ್ನಿಯೇ ಎರಡು ಶಿರಸ್ಸುಗಳು ಸಪ್ತ ಹಸ್ತಯೋ ಅಸ್ಯ = ಏಳು ಛಂದಸ್ಸುಗಳೇ ಇವನ ಕೈಗಳು (ಗಾಯತ್ರೀ, ಉಷ್ಣೀಃ, ಅನುಷ್ಟುಪ್, ಬೃಹತೀ, ಪಂಕ್ತೀ, ತ್ರಿಷ್ಟುಪ್ ಮತ್ತು ಜಗತೀ) ತ್ರಿಧಾ ಬದ್ಧೋ = ಋಗ್ಯಜುಸ್ಸಾಮ ವೇದಗಳೇ ಮೂರು ಬಂಧಗಳು ವೃಷಭ = ಇಷ್ಟಾರ್ಥಗಳನ್ನು ಮಳೆಗರೆಯುವ ರೋರವೀತಿ = ಶ್ಲೋಕ ಅಸ್ತ್ರ ರೂಪದ ಮಂತ್ರಗಳನ್ನು ಸದಾ ಪಠಿಸುತ್ತಿರುವ ಮಹೋ ದೇವೋ = ಯಜ್ಞರೂಪ ದೇವತೆ ಮರ್ತ್ಯಾ ಆವಿವೇಶ = ಮನುಷ್ಯರನ್ನು ಪ್ರವೇಶಿಸಿತು, ಯಜ್ಞ ಮಾಡುವ ಅಧಿಕಾರ ಮನುಷ್ಯರಿಗೆ ಇದೆ.

No comments: