Friday, April 08, 2022

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ

ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ ಯೋ ಹ್ಯೇಕಭಕ್ತಃ ಸ ನರೋ ಜಘನ್ಯಃ | ತಯೋಸ್ತು ದಾಕ್ಷ್ಯಂ ಪ್ರವದಂತಿ ಮಧ್ಯಂ ಸ ಉತ್ತಮೋ ಯೋಽಭಿರತಸ್ತ್ರಿವರ್ಗೇ || (ಮಹಾಭಾರತ) ಧರ್ಮ, ಅರ್ಥ, ಕಾಮ-ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಅವುಗಳಲ್ಲಿ ಒಂದಕ್ಕೆ ಮಾತ್ರ ಅಂಟಿಕೊಂಡವನು ಅಧಮನು; ಯಾವುದಾದರೂ ಎರಡರಲ್ಲಿ ಸಮರ್ಥನಾದವನು ಮಧ್ಯಮನು; ಯಾರು ಆ ಮೂರರಲ್ಲಿಯೂ ನಿರತನೋ ಅವನೇ ಉತ್ತಮನು.

No comments: