Sunday, September 25, 2022

ತರ್ಪಣ.

ಆದೌಪಿತಾ ತಥಾಮಾತಾ ಸಾಪತ್ನೀ ಜನನೀ ತಥಾ ಮಾತಾಮಹಾ ಸಪತ್ನೀಕಾಃ ಆತ್ಮಪತ್ನಿಸ್ಥಥೈವಚ ಸುತಃಭ್ರಾತೃ ಪಿತೃವ್ಯಾಶ್ಚ ಮಾತುಲ ಸ್ಸಹಭಾರ್ಯಕಾಃ ದುಹಿತಾ ಭಗಿನೀಚೈವ ದೌಹಿತ್ರೋ ಭಾಗಿನೇಯಕಃ ಪಿತೃಶ್ವಸ ಮಾತೃಶ್ವಸ ಜಾಮಾತಾ ಭಾವುಕಸ್ನುಶಾ ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ರಿಕ್ತ ಭಾಗಿನಃ ಆದೌಪಿತಾ = ತಂದೆ, ತಾತ, ಮುತ್ತಾತ. ತಥಾಮಾತಾ = ತಾಯಿ ಅವರತ್ತೆ, ಅವರತ್ತೆ. ಸಾಪತ್ನೀ ಜನನೀ = ತಂದೆಯ ಎರಡನೇ ಹೆಂಡತಿ, ತದನಂತರ ಪತ್ನಿ (ಎಷ್ಟುಜನ ಇದ್ದರೆ ಅಷ್ಟೂಜನ) ಮಾತಾಮಹಾ ಸಪತ್ನೀಕಾಃ = ತಾಯಿಯ ತಂದೆ, ಅವರ ತಂದೆ, ಅವರ ತಂದೆ. ಅವರವರ ಹೆಂಡತಿಯರು. ಆತ್ಮಪತ್ನಿ = ತನ್ನ ಹೆಂಡತಿ ಸುತಃ = ಮಗ ತತ್ಪತ್ನೀಂ = ಮಗನ ಹೆಂಡತಿ ಭ್ರಾತೃ = ಸಹೋದರರು. ತತ್ಪತ್ನೀಂ = ಅವರ ಹೆಂಡತಿಯರು ಪಿತೃವ್ಯಾಶ್ಚ = ಚಿಕ್ಕಪ್ಪ ದೊಡ್ಡಪ್ಪನವರು ತತ್ಪತ್ನೀಂ = ಅವರ ಹೆಂಡತಿಯರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತುಲ ಸಹಭಾರ್ಯಕಾಃ = ಸೋದರಮಾವ, ಅವರ ಹೆಂಡತಿ, ಅವರ ಗಂಡುಮಕ್ಕಳು. ದುಹಿತ = ಮಗಳು ಭಗಿನೀ = ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ದೌಹಿತ್ರೋ = ಮಗಳ ಮಗ ಭಾಗಿನೇಯಕಃ = ಸೋದರಳಿಯಂದಿರು. ಪಿತೃಶ್ವಸ = ಸೋದರತ್ತೆಂದಿರು ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಮಾತೃಶ್ವಸ = ತಾಯಿಯ ಸಹೋದರಿಯರು. ತತ್ ಭರ್ತೃ = ಅವರ ಗಂಡಂದಿರು ತತ್ ಪುತ್ರ = ಅವರ ಗಂಡುಮಕ್ಕಳು. ಜಾಮಾತಾ = ಮಗಳ ಗಂಡ. ಭಾವುಕ = ಬಾವಮೈದುನರು. (ಮೊದಲೇ ಬಂದಿದೆ ) ಸ್ನುಶಾ = ಮಗನ ಹೆಂಡತಿ. (ಮೊದಲೇ ಬಂದಿದೆ ) ಶ್ವಶುರ = ಮಗಳನ್ನು ಕೊಟ್ಟ ಮಾವ ತತ್ ಪತ್ನೀ = ಮಗಳನ್ನು ಕೊಟ್ಟ ಅತ್ತೆ ಶ್ಶಾ ಲಕ = ಮಗಳನ್ನು ಕೊಟ್ಟ ಅತ್ತೆಮಾವನವರ ಗಂಡುಮಕ್ಕಳು. ಸ್ವಾಮಿನೋ ರಿಕ್ತ ಭಾಗಿನಃ = ಸ್ವಾಮಿ ಗುರು, ಆಚಾರ್ಯ, ಸಖ = ತಂದೆ ಮತ್ತು ಸೂಕ್ತವ್ಯಕ್ತಿಗಳು ಏಕೇಚ ಅಸ್ಮತ್ ಕುಲೇಜಾತ ಅಪುತ್ರಾ ಗೋತ್ರಿಣಾ ಮೃತಾಃ, ತೇಗೃಹ್ಣಂತು ಮಯಾದತ್ತಂ ಮಾತೃ ನಿಷ್ಪೀಡನೋದಕಂ ಉಳಿದಿರುವ ಅಲ್ಲ ಎಳ್ಳನ್ನು ಕೈಗೆ ಹಾಕಿಕೊಂಡು, ಎಲ್ಲ ನೀರನ್ನು ಬಿಟ್ಟು ಬಿಡುವುದು. ತಾಯಿ ಬದುಕಿದ್ದು ತಂದೆ ಮರಣಹೊಂದಿದ್ದವರು ಮಾತ್ರ ತರ್ಪಣ ಬಿಡಬೇಕು. ತಾಯಿ ತೀರಿಕೊಂಡು, ತಂದೆ ಬದುಕಿದ್ದ ಮಕ್ಕಳು ತರ್ಪಣ ಬಿಡುವ ಹಾಗಿಲ್ಲ. ಮರಣ ಹೊಂದಿ ಜೈಜೈ ರಘುವೀರ ಸಮರ್ಥ

No comments: