Sunday, October 16, 2022

ಭಾವಗ್ರಾಹಿ ಜನಾರ್ದನಃ

ಭಾವೇಷು ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ | ನ ಫಲಂ ಭಾವಹೀನಾನಾಂ ತಸ್ಮಾತ್ ಭಾವೋ ಹಿ ಕಾರಣಮ್ || ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ, ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ. ಮೂರ್ಖೋ ವದತಿ ವಿಷ್ಣಾಯ ಧೀರೋ ವದತಿ ವಿಷ್ಣವೇ | ಉಭಯೋಸ್ತು ಸಮಂ ಪುಣ್ಯಂ ಭಾವಗ್ರಾಹಿ ಜನಾರ್ದನಃ || – ಚೈತನ್ಯಭಾಗವತ, ೧೧. ೧೦೮ ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ. ಭವಾನಿ ಭಾವನಾಗಮ್ಯ

No comments: