Sunday, July 25, 2021

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್

ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿಃ |

ಅಫಾಲಲೋಚನಃ ಶಂಭುಃ ಭಗವಾನ್ ಬಾದರಾಯಣಃ ||

ಭಗವಾನ ವೇದವ್ಯಾಸರು ನಾಲ್ಕು ಮುಖಗಳಿಲ್ಲದಿರುವಾಗಲೂ ಬ್ರಹ್ಮದೇವರ ಸ್ವರೂಪವಾಗಿದ್ದಾರೆ. ಎರಡು ಕೈಗಳನ್ನು ಹೊಂದಿದ್ದರೂ ಮತ್ತೊಬ್ಬ ಭಗವಾನ್ ವಿಷ್ಣುವಾಗಿದ್ದಾರೆ ಮತ್ತು ಹಣೆಯಲ್ಲಿ ಮೂರನೇ ಕಣ್ಣು ಇಲ್ಲದಿರುವಾಗಲೂ ಶಿವಸ್ವರೂಪರಾಗಿದ್ದಾರೆ.

***

ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ |

ಈ ಜಗತ್ತಿನ ಸರ್ವಗ್ರಂಥಗಳ ವಿಷಯವಸ್ತುಗಳೂ ವ್ಯಾಸರ ಉಚ್ಛಿಷ್ಟ /ಎಂಜಲು / ವ್ಯಾಸರು ತಿಂದು ಬಿಟ್ಟದ್ದೇ ಆಗಿದೆ. ಅರ್ಥಾತ್ — ವ್ಯಾಸರು ಹೇಳದ ವಿಷಯವಿಲ್ಲ.

***

ಮುನಿಂ ಸ್ನಿಗ್ಧಾಂಬುಜಾಭಾಸಂ ವೇದವ್ಯಾಸಮಕಲ್ಮಷಮ್ |

ವೇದವ್ಯಾಸಂ ಸರಸ್ವತ್ಯಾ-ವಾಸಂ ವ್ಯಾಸಂ ನಮಾಮ್ಯಹಮ್ || 

ಕಣ್ಣುಗಳನ್ನು ತಣಿಸುವ ಸುಂದರವಾದ ಕಮಲದ ರೀತಿಯಲ್ಲಿ ಕಳಂಕರಹಿತ ಸರಸ್ವತಿಯ ತವರುಮನೆಯಾಗಿರುವ ಭಗವಾನ್ ವೇದವ್ಯಾಸರಿಗೆ ನಾನು ನಮಸ್ಕರಿಸುತ್ತೇನೆ.

***

ವೇದವ್ಯಾಸಂ ಸ್ವಾತ್ಮರೂಪಂ ಸತ್ಯಸಂಧಂ ಪರಾಯಣಂ ।

ಶಾಂತಂ ಜಿತೇಂದ್ರಿಯಕ್ರೋಧಂ ಸಶಿಷ್ಯಂ ಪ್ರಣಮಾಮ್ಯಹಂ ॥

No comments: