Monday, April 29, 2019

ಸಮಯೋಚಿತ ಸುಭಾಷಿತ

ಅಪೂಜ್ಯಾ ಯತ್ರ ಪೂಜ್ಯಂತೇ ಪೂಜ್ಯಾನಾಂ ತು ವಿಮಾನನಾ |
ತ್ರೀಣಿ ತತ್ರ ಪ್ರವರ್ತಂತೇ ದುರ್ಭಿಕ್ಷಂ ಮರಣಂ ಭಯಮ್ ||

ಪೂಜ್ಯರಲ್ಲದವರಿಗೆ ಎಲ್ಲಿ ಪೂಜೆ ಸಲ್ಲುತ್ತದೆಯೋ, ಹಾಗೆಯೇ ಪೂಜ್ಯರಾದವರಿಗೆ ಎಲ್ಲಿ  ಅಪಮಾನವಾಗುತ್ತದೆಯೋ ಅಲ್ಲಿ ದುರ್ಭಿಕ್ಷ, ಸಾವು ಮತ್ತು ಭಯ ಇವು ಮೂರೂ ಉಂಟಾಗುತ್ತವೆ.

#DangerousPrecedent ,

 ಪರೋಪದೇಶೇ ಪಾಂಡಿತ್ಯಂ ಸರ್ವೇಷಾಂ ಸುಕರಂ ನೃಣಾಂ | 
 ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ || 

ಇನ್ನೊಬ್ಬರಿಗೆ ಉಪದೇಶಮಾಡುವಾಗ ಎಲ್ಲರೂ ಪಂಡಿತರೇ! ಎಲ್ಲರಿಗೂ ಅದು ಸುಲಭವೇ. ಆದರೆ, ಧರ್ಮದಲ್ಲಿ ತಾನೇ ಸ್ವಂತವಾಗಿ ತನ್ನ ಉಪದೇಶವನ್ನು ರೂಢಿಸಿಕೊಳ್ಳುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು.

#FreeUpadesha , #UnsolicitedAdvice

No comments: