ಗುನುಗು - ೧
---
ಪ್ರಿಯೆ ನನ್ನ ಪ್ರೇಮದ ರಂಗು ಸ್ವರ್ಣ ಸಿಂಧೂರ
ಎದೆಯೊಳಗೆ ಗುನುಗಿದ ಗುಂಗು ಗಹನ ಗಾಂಧಾರ
ಮಿನುಗುತಿಹ ಕಂಗಳ ಮಿಂಚು ಮೇಘ ಮಂದಾರ
ಮೌನದಲೆ ಸೆಳೆಯುವ ಸಂಚು ಮದನ ಶೃಂಗಾರ
---
ಚುಟುಕ - ೧
ದೂರವಿರಿಸಲು ನಮ್ಮನು ಸೆಣೆಸುತಿವೆ ಕೇತು ಮತ್ತು ರಾಹು
ಚಿಂತಿಸದಿರು ನಲ್ಲೆ, ನಮ್ಮಲ್ಲಿದೆ ಜೀಟಾಕು ಜೋತೆಗೆ ಯಾಹೂ
---
ಚುಟುಕ - ೨
ಮಿಡಿವ ಹೃದಯಗಳಿಗೆಲ್ಲಿದೆ ಮುಖಾಮುಖಿ ಸಂಧಿಸುವ ಹಂಗು
ನಾ ಮುಗುಳು ನಗಲು ಸಾಲದೆ ಪ್ರಿಯೇ, ನಿನ ಚ್ಯಾಟಿನಾ ಪಿಂಗು
---
1 comment:
ಇವನ್ನೆಲ್ಲಾ ಎಲ್ಲೋ ನೋಡಿದ ನೆನಪು! ಎಲ್ಲಿರಬಹುದು? :P :D
Post a Comment