Tuesday, January 08, 2008

ಕಾಮನೆಗಳು - ಸ್ವಗತ



=======
ನಾ ಬಯಸಿದ,ಬಯಸದಿದ್ದ, ನನ್ನ ಬಯಕೆಗೆ ಮೀರಿದ,
ಭಯದಿಂದ ಬಯಸದೆ ಬದಿಗಿಟ್ಟಿದ್ದ
ಕಾ -
ಮನೆಗಳು, ಮನೆ
ಮುಂದೆ ಮೆರವಣಿಗೆ ಬಂದು ನಿಂದು
ಜಗುಲಿಯಮೇಲೆ ಜಾವದ ಸಮಯದಿಂದಲೆ
ಜಾತಕ ಪಕ್ಷಿಗಳಂತೆ ಡೇರೆಬಿಟ್ಟು ಕುಳಿತಿವೆ.
ಆರುಣಿಯಸುತನು ಜವರಾಯನ ಕದ ಕಾಯ್ದಂತೆ.
(ಇನ್ನಾವ ನಚಿಕೇತಾಗ್ನಿಯ ನನ್ನಲ್ಲಿ ಕೇಳಲೀಕ್ಕೋ?)
ನಚಿಕೇತನಿರಲಿ; ಓತಿಕೇತಗಳಂತೆ ಬಣ್ಣ ಬದಲಿಸುತ್ತಿವೆ.
ಮುಂಡೇವು.
ಸಹಸ್ರವರ್ಣ ಕಾಮನ ಬಿಲ್ಲಿನಂತೆ ಕಾಮನೆಗಳು
ಹತ್ತು ಚಿತ್ತರವ ಬಿತ್ತಲು ಮನದ ಕದವ ದಬ ದಬ ಬಡಿಯುತಿವೆ.
ಆಸನಾರ್ಘ್ಯಗಳನ್ನಿತ್ತು ಹಸ್ತಲಾಘವಕ್ಕೆ ಅನುವು ಮಾಡಿಕೊಳ್ಳೋಣವೆಂದ್ದಿದ್ದೆ.
ತೆರೆದ ಮನೆ ಮನದೊಳಗೆ, 'ಓ, ಬಾ ಅತಿಥಿ' ಎಂದು
ಕರೆದು ತೂಗುಯ್ಯಾಲೆಯಮ ೇಲೆ ಕುಳ್ಳರಿಸಿ ವಿಹರಿಸ ಬಹುದಿತ್ತು.
ಕುಣಿಯ ಬಹುದಿತ್ತು. ತಣಿಯ ಬಹುದಿತ್ತು. ಬಹುದಿತ್ತು. ...ಬಹುದಿತ್ತು.....
ಆದರೆ ಸಣ್ಣಗೆ ಆಕಳಿಸಿ, ತಣ್ಣಗೆ ಈ ಪಕ್ಕೆಗೆ ತಿರುಗಿ ನಿದ್ರಿಸಿದೆ.
ಎಂದಿನಂತೆ ಜೀವಿತವ ಮುಂದೂಡುತ.
ಕಾ
ಮನೆಗಳು, ಮನದ ಮನೆಯ ಕದವ ಕಾಯ್ದು ಕಾಲ್ಚಾಚಿ ಕುಳಿತಿವೆ.
ಓತಿಕೇತಗಳಂತೆ ಬಣ್ಣ ಬದಲಿಸುತ.
ಮುಂಡೇವು.

Miami Lakes,FL. Jan 08 2008. 5:00 AM thru first half of the day.

===
---

Get this widget | Track details | eSnips Social DNA





Image/Picture Courtesy:

Top:
Self made jpeg using MSPaint.

Below:
Inka Essenhigh: Her works shows every day life in surrealistic ways, most are an amalgam of 19th century caricatures, oriental art and contemprory comics. There is a tangebility of form in porcelain delicacy, it has a fabric flow of pattern thats textured rather than calligraphied.
---

2 comments:

L'Étranger said...

ಕಾಮನೆಗಳೊಂದಿಗೆ ಮನದ ತೊಳಲಾಟ-ಸೆಣೆಸಾಟ ಚೆನ್ನಾಗಿ ವ್ಯಕ್ತವಾಗಿದೆ. ಮನೆಯ ಮುಂದೆ ಕಾಯಿಸುತ್ತಲೇ ಇರದೆ ಮನದೊಳಗೆ ಕೆಲವನ್ನಾದರೂ ಬರಮಾಡಿಕೋ! ಬದುಕಿನ ಆಸರೆ ಬದುಕುವ ಕಾಮನೆಯಷ್ಟೇ ಅಲ್ಲವೇ?

ಮನದ ಕಾಮಿನಿ ಮನೆಯೊಳಗೆ ಬೇಗ ಬರಲಿ. ಸ್ವಾತಿ ಮಳೆ ಸುರಿದು ಚಾತಕದ ಭರವಸೆ ಗೆಲ್ಲಲಿ! :)

Manjunatha Kollegala said...

good effort, Srikanth. ಅಲ್ಲಲ್ಲಿ ಅಭಿವ್ಯಕ್ತಿ ಸ್ವಲ್ಪ redundant ಅನ್ನಿಸಿದರೂ, ಇದು ಉತ್ತಮ ಪ್ರಯತ್ನ. ಚಿತ್ರ, ಕವನದ ಆಶಯವನ್ನು ಮತ್ತಷ್ಟು ಸೊಗಸಾಗಿ ವ್ಯಕ್ತಪಡಿಸುತ್ತದೆ. Kudos to that creative You.