ಭಾರತೀಯ ಗೋವಿನ ಬೆನ್ನು ಹುರಿಯಲ್ಲಿ "ಸೂರ್ಯ ಕೇತು ನಾಡಿ" ಎಂಬ ದೈವೀಕ ನಾಡಿಯಿದೆ. ಈ ಸೂರ್ಯ ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವಾಗಿಸುತ್ತದೆ. ಆದ್ದರಿಂದಲೇ ಭಾರತೀಯ ಗೋವಿನ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪಗಳಲ್ಲಿ ಬಂಗಾರದ ಕಣಗಳಿದ್ದು ಕಿಂಚಿತ್ ಹಳದೀ ಬಣ್ಣದಲ್ಲಿ ಕಂಗೊಳಿಸುತ್ತವೆ.
ಜಗತ್ತು ಸಂಘರ್ಷಾತ್ಮಕವಲ್ಲ, ಸ್ರುಜನಾತ್ಮಕ. ಬೀಜವು
ವೃಕ್ಷ ರೂಪದಲ್ಲಿ ಹೊರಬರುವುದು ಸಂಘರ್ಷದ ಉದ್ದೇಶದಿಂದಲ್ಲ, ತನ್ನ
ಸ್ವಂತದ ವಿಕಾಸಕ್ಕಾಗಿ, ಸಾಕ್ಷಾತ್ಕಾರಕ್ಕಾಗಿ. ಅದರ ಜೀವನೋದ್ದೇಶವು
ಇನ್ನಾವುದರ ವಿನಾಶವೂ ಅಲ್ಲ. ಆದರೆ, ಇನ್ನೊಂದಕ್ಕಾಗಿ ತನ್ನನ್ನು
ಸಮರ್ಪಿಸಿಕೊಳ್ಳುವುದೇ ಆಗಿದೆ. ಸಂಪೂರ್ಣ ಸೃಷ್ಟಿಯ ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತದೆ.
ಆದರ ಆಧಾರವು ಸಂಘರ್ಷವಲ್ಲ. ಸಹಯೋಗ. ಪಂಚ ಮಹಾಭೂತಗಳು ಜೊತೆಗೂಡುವುದು ಇನ್ನಾವುದರೊಂದಿಗೆ ಸಂಘರ್ಷ
ಮಾಡಲೆಂದಲ್ಲ. ಆದರೆ ತಮ್ಮ ಪ್ರಕೃತಿಗೆ ತಕ್ಕಂತೆ ನಡೆದುಕೊಂಡು ಆ ಮೂಲಕ ಸೃಷ್ಟಿಯ ಸಾರ್ಥಕತೆಯ
ಇಚ್ಚೇಯನ್ನು ಪೂರ್ಣ ಮಾಡಲೆಂದು!
ಇತ್ತೀಚೆಗೆ ಮುದ್ರಣ ತಂತಜ್ಞಾನ ಪ್ರಗತಿ ಹೊಂದಿದಂತೆಲ್ಲಾ ಪುಸ್ತಕಗಳ ಮುಖಪುಟ ವಿನ್ಯಾಸ ಅದೆಷ್ಟು ಅಂದವಾಗಿರುತ್ತದೆಂದರೆ ಮುಖ ಪುಟ ನೋಡುತ್ತಲೇ ಪುಸ್ತಕ ಕೊಳ್ಳಬೇಕೆಂಬ ಮೋಹ ಹುಟ್ಟುತ್ತದೆ. ಕೊಂಡ ಪುಸ್ತಕ ಓದುತ್ತೇವೋ ಇಲ್ಲವೋ ಆ ಸುಂದರ ವಸ್ತುವನ್ನು ನಮ್ಮದಾಗಿಸಿ ಕೊಳ್ಳಬೇಕೆಂಬ ಮಹಾದಾಸೆ ಪುಸ್ತಕವನ್ನು ಕೊಳ್ಳುವಂತೆ ಮಾಡುತ್ತದೆ. ಇದು ಒಂದು ರೀತಿ ಸಾತ್ವಿಕ ಮೋಹ.
ಆಸ್ಟ್ರೇಲಿಯಾದ ಸಿಡ್ನಿ ಡೌನ್ ಟೌನ್ ನ (Downtown) ಪಿಟ್ಟ್ ಸ್ಟ್ರೀಟ್ ನಲ್ಲಿ (Pitt St.) ಎಲಿಜಬೆತ್ ಪುಸ್ತಕದ ಅಂಗಡಿ ಇದೆ. "ಪುಸ್ತಕವನ್ನು ಮುಖಪುಟದಿಂದ ಅಳಿಯಬೇಡಿ" (Do not judge a book by its cover) - ಎಂಬ ಶೀರ್ಷಿಕೆಯ ಬೋರ್ಡ್ ನೊಂದಿಗೆ ಒಂದು ವಿನೂತನ ಪ್ರಯೋಗವನ್ನು ಅಲ್ಲಿ ಕಂಡೆ. ಒಂದು ಪುಸ್ತಕವನ್ನು ಅಂದವಾಗಿ wrap ಮಾಡಿ, cover ನ ಮೇಲೆ ಪುಸ್ತಕವನ್ನು ವಿವರಿಸುವ ಕೆಲವು ಪದಗಳನ್ನು ಬರೆಯಲಾಗಿತ್ತು. ಉದಾಹರಣೆಗೆ -- "ಇತಿಹಾಸ", " ಎರಡನೇ ವಿಶ್ವ ಯುದ್ಧ", "ತಂತ್ರಜ್ಞಾನ", "ಕಾಂಗರೂ" ಇತ್ಯಾದಿ. ಪುಸ್ತಕದ ಹೆಸರಾಗಲಿ, ಲೇಖಕನ ಹೆಸರಾಗಲೀ, ಮುಖಪುಟವಾಗಲಿ ತೋರಿಕೊಳ್ಳುವುದಿಲ್ಲ. ಪುಸ್ತಕದ ಒಳಗಿನ ವಿಷಯದ ಆಧಾರದ ಮೇಲೆ ಖರೀದಿ ನಡೆಯ ಬೇಕು. ಈ ರೀತಿ ಮಾಡುವುದರಿಂದ ಕೊಂಡ ಪುಸ್ತಕ ಯಾವುದಿರ ಬಹುದು ಎಂಬ ಕುತೂಹಲ ಮೂಡುತ್ತದೆ. ಪುಸ್ತಕ ಕೊಳ್ಳುವ ಪ್ರಕ್ರಿಯೆಯಲ್ಲಿ ಅತಿಶಯ ಸಂತೋಷವು ಆಗಿ ಬರುತ್ತದೆ.
ಸೃಷ್ಟಿಯಲ್ಲಿ ಸಂಘರ್ಷ ಸ್ಪರ್ಧೆಗಳು ಇರುವಂತೆ ಸಹಕಾರ ಸಹಯೋಗಗಳೂ ಇವೆ. ಜಗತ್ತಿನ ವಿವಿಧ ಅಂಗಗಳ ಪರಸ್ಪರ ಪೂರಕತೆಯನ್ನು ಮನಗಂಡವರು ಭಾರತೀಯ ದಾರ್ಶನಿಕರು. ವ್ಯಕ್ತಿಯೂ ಸಮಾಜವೂ ವಿವಿಧ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಸರಿಸುವ ಕ್ರಮಗಳು ಘರ್ಷಣೆಗೆ ಎಡೆಗೊಡದಂತೆ ನೋಡಿಕೊಳ್ಳುವ ಸೂತ್ರವೇ ಧರ್ಮ. ವ್ಯಕ್ತಿ ಸ್ವಾರ್ಥಕ್ಕೆ ಪ್ರತಿಯಾದ ಸಮಷ್ಟಿ ದೃಷ್ಟಿಯೇ ಧರ್ಮ -- ಏಕಾತ್ಮಮಾನವತೆ
ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು
ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ ದಶಾಶ್ವಮೇಧಾವ ಭ್ರುತೇನ ತುಲ್ಯಃ । ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣ ಪ್ರಣಾಮಿ ನ ಪುನರ್ಭವಾಯ ।।
ಶ್ರೀ ಕೃಷ್ಣನಿಗೆ ಮಾಡಿದಂತಹ ಒಂದು ಪ್ರನಾಮವು ಹತ್ತು ಅಶ್ವಮೇಧ ಯಾಗಗಳ ಅವಭೃತ ಸ್ನಾನಕ್ಕೆ ಸಮಾನವಾಗಿದೆ. ಆದರೆ ಈ ಅಶ್ವಮೇಧ ಯಾಗದ ಪುಣ್ಯ ಭೊಗಿಸಿದ ನಂತರ ಮತ್ತೆ ಸಂಸಾರ ಬಂಧನಕ್ಕೆ ಬರುತ್ತಾರೆ. ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದವರು ಮತ್ತೆ ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ.
ಮಹಾಲಕ್ಷ್ಮೀ ಅಷ್ಟಕ, ಶ್ರೀ ಗುರು ಅಷ್ಟಕ, ಕಾಲಭೈರವಾಷ್ಟಕ ಇತ್ಯಾದಿ ಹಲವಾರು ಅಷ್ಟಕಗಳನ್ನು ಧಾರ್ಮಿಕ ಸಾಹಿತ್ಯದಲ್ಲಿ ಹೇರಳವಾಗಿವೆಯಷ್ಟೇ. ಅದೇ ರೀತಿ ಚಿರಂತನ, ಪ್ರಾಚೀನ ಹಾಗು ಅನಾದಿಯಾದ ಸನಾತನ ಧರ್ಮದ ಕುರಿತು ಒಂದು ಅಷ್ಟಕವನ್ನು ವೇದಾಂತ ಚಕ್ರವರ್ತಿ. ವಿದ್ವಾನ್ ಕೆ. ಜಿ .ಸುಬ್ರಾಯಶರ್ಮ ಅವರು ರಚಿಸಿರುವ "ಧರ್ಮ- ವೇದ - ಬ್ರಹ್ಮ" ಎಂಬ ಪುಸ್ತಿಕೆಯಲ್ಲಿ ನೋಡಿದೆ. ಬಹಳ ಸ್ವಾರಸ್ಯಕರವಾದ, ಉಪಯುಕ್ತವಾದ ಈ ಅಷ್ಟಕವನ್ನು ಓದುಗರಲ್ಲಿ ಹಂಚಿ ಕೊಳ್ಳುತ್ತಿದ್ದೇನೆ.
ರಾಜಕುಮಾರನ ಪೋಷಾಕು ಧರಿಸಿದ ಪುಟ್ಟ ಕಂದಮ್ಮನಿಗೆ ಕೊರಳ ಸುತ್ತಲೂ ರತ್ನಹಾರದ ಸರಪಳಿ. ಆಡಳದುವೆ ತೊಡರು.ಪ್ರತಿ ಹೆಜ್ಜೆಯನ್ನು ಅಂಕುಷದಲ್ಲಿಡುವ ಆಡಂಬರ . ರಾಜ ಪೋಷಾಕು ಎಲ್ಲಿ ಕೊಳೆಯಾಗುವುದೋ , ಎಲ್ಲಿ ಸುಕ್ಕುಗಟ್ಟುವುದೋ ಎಂಬ ಅಳುಕಿನಲ್ಲಿ ಕದಲಿಕೆಗೆ ಕೂಡ ಭೀತಿ .. ಹೇ ಮಾತೆ, ಭೂಮಿಯ ಪವಿತ್ರ ಧೂಳೀ ಕಣಗಳಿಂದ ದೂರವಿಡುವ ಭವ್ಯ ಬಂಧನದಿಂದ ಏನು ಒಳಿತು. ಜೀವಿತದ ಮಹಾಮೇಳಕ್ಕೆ ಪ್ರವೇಶವನ್ನೇ ಕಸಿದುಕೊಳ್ಳುವ ಸಿರಿವಂತಿಕೆ ಭಾಗ್ಯವಾದೀತೇ?
ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡ. ಅಯೋಧ್ಯೆಯಿಂದ ಅರಣ್ಯದೆಡೆಗೆ ಶ್ರೀ ರಾಮಚಂದ್ರ ತೆರಳುತ್ತಿರುವ ಸಂದರ್ಭ.
ಕೌಸಲ್ಯೆಯು ಶ್ರೀರಾಮನಿಗೆ ಮಂಗಳಾಶೀರ್ವಾದವನ್ನು ಮಾಡುತ್ತ -- "ಯಾವ ಧರ್ಮವನ್ನು ನೀನು ಧೈರ್ಯದಿಂದಲೂ, ನಿಯಮದಿಂದಲೂ ಕಾಪಾಡುತ್ತಿರುವೆಯೊ ಆ ಧರ್ಮವೇ ನಿನ್ನನ್ನು ಕಾಪಾಡಲಿ." ಎಂಬ ಮಾತೃ ವಾಕ್ಯ ಗೋಚರಿಸುತ್ತದೆ.
ಯಂ ಪಾಲಯಸಿ ಧರ್ಮಂ ತ್ವಂ ಧೃತ್ಯಾ ಚ ನಿಯಮೇನ ಚ।
ಸ ವೈ ರಾಘವಶಾರ್ದೂಲ ಧರ್ಮಸ್ತ್ವಾಮಭಿರಕ್ಷತು ॥
ಸಂಸ್ಕೃತ ಭಾಷಾ ಸಾಗರದಲ್ಲಿ ಮಾತನ್ನು ಮಾಣಿಕ್ಯ ಮಾಡುಲು ಸಮರ್ಥವಾದ ಹಲವಾರು "ನ್ಯಾಯ"
ಗಳು ಇವೆ. ಉದಾಹರಣೆಗೆ ಹಂಸಕ್ಷೀರ ನ್ಯಾಯ, ಕಾಕತಾಳೀಯ ನ್ಯಾಯ, ಮಂಡೂಕ ತೋಲನ
ನ್ಯಾಯ ಇತ್ಯಾದಿ. ನಮ್ಮ ಆಡು ಭಾಷೆಯಲ್ಲಿ ಪ್ರಯೋಗಿಸುವ ಈ ನ್ಯಾಯಗಳಿಂದ ಭಾಷೆಗೆ ಒಂದು
ರೀತಿ ಸ್ವಾರಸ್ಯ, ಮೆರುಗು ದೊರೆಯುವುದರಲ್ಲಿ ಸಂಶಯವೇ ಇಲ್ಲ. ಉಪಮೆಗಳ
ಸಮ್ಯಗ್ಪ್ರಯೋಗದಿಂದ ಅರ್ಥ ಸ್ಪಷ್ಟತೆ ಕೂಡ ಉಂಟಾಗುತ್ತದೆ. ಕೆಲವು ನ್ಯಾಯಗಳು ಆಡುಭಾಷೆಯ
ಹಾಸು ಹೊಕ್ಕಾಗಿವೆ.
ಈಗ ಒಂದೆರಡು ನ್ಯಾಯಗಳನ್ನು ಪರಿಶೀಲಿಸೋಣ:
ಪೀಲು
ಪತ್ರ ಫಲ ನ್ಯಾಯ: ಪೀಲು ಎಂಬುದು ಭರತವರ್ಷದಲ್ಲಿ ಕಂಡು ಬರುವ ಒಂದು ಸಸ್ಯ ಜಾತಿಯ
ಪ್ರಬೇಧ. ಪೀಲುವಿನಲ್ಲಿ ಎಲೆಗಳು ಬಹಳ ಕಹಿ. ಆದರೆ ಹಣ್ಣುಗಳು ಮಾತ್ರ ಅಷ್ಟೇ ಸಿಹಿ. ಹೀಗೆ
ಒಂದೇ ತರುವಿನಲ್ಲಿ ಸಿಹಿ ಮತ್ತು ಕಹಿ ಅಡಕವಾಗಿರುವಾಗ ಪೀಲು ಪತ್ರ ಫಲ ನ್ಯಾಯ ವನ್ನು
ಉಲ್ಲೇಖಿಸುತ್ತೆವೆ. ರಾವಣ ವಿಭೀಷಣರು ಒಂದೇ ತಾಯಿ ಮಕ್ಕಳಾಗಿಯೂ ವ್ಯತಿರಿಕ್ತ
ಮನೋಭಾವದವರಾಗಿದ್ದ ಹಾಗೆ.
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಸ್ತೋತ್ರ
ಸಾಹಿತ್ಯದಲ್ಲಿ ಭಕ್ತಿ ಪ್ರಧಾನ ಹಾಗು ವಿಚಾರಪ್ರಧಾನ ಎಂಬ ವಿಂಗಡನೆ ಸಾಧ್ಯ. ವಿಚಾರ
ಸಾಹಿತ್ಯದಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮುಖ್ಯ ಹಾಗು ಅತಿಶ್ರೇಷ್ಟ ಎಂದು
ಪರಿಗಣಿಸಬಹುದು ಇದರಲ್ಲಿ ಕೇವಲ ಹತ್ತು ಶ್ಲೋಕಗಳು ಇದ್ದರೂ ಗಹನ ಅರ್ಥಗರ್ಭಿತವಾಗಿದ್ದು,
ವಿದ್ವಾಂಸರು ಹಲವು ತಿಂಗಳುಗಳ ಕಾಲ ಈ ಸ್ತೋತ್ರದ ಪ್ರವಚನಗಳನ್ನು
ನೀಡಿದ್ದಾರೆ.ಪ್ರಮುಖವಾದ ಹತ್ತು ಉಪನಿಷತ್ತುಗಳ ಸಾರವೇ ಇದರಲ್ಲಿ ಅಡಕವಾಗಿದ್ದು, ಇದು
ವೇದಾಂತ ವಿಷಯದ ಆಗರವಾಗಿದೆ. ಮಾಂಡೂಕ್ಯೋಪನಿಷತ್ತಿನ ಅವಸ್ಥಾತ್ರಯ ಪಕ್ರಿಯೆ,
ಬೃಹದಾರಣ್ಯಕದ ಸರ್ವಾತ್ಮ ಭಾವ, ಛಾಂದೋಗ್ಯದ ಕಾರ್ಯಕಾರಣ ಪಕ್ರಿಯೆ, ತತ್ವಮಸಿ ವಾಕ್ಯಾರ್ಥ
ವಿಚಾರ ಸಾಮಾನ್ಯ ವಿಶೇಷ ಪ್ರಕ್ರಿಯೆ -- ಈ ವಿಚಾರಗಳು ವರ್ಣಿತವಾಗಿವೆ.
ವಿ. ಸೂ : ಮಾರ್ಚ್
೧೭ ರಿಂದ ಮಾರ್ಚ್ ೨೧ ರ ವರೆಗೆ ಸಚ್ಚಿದಾನಂದ ಅದ್ವೈತಾಶ್ರಮದ ಶ್ರೀ ಶ್ರೀ
ಅದ್ವಯಾನಂದೇದ್ರ ಸರಸ್ವತೀ ಸ್ವಾಮಿಗಳು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಯಜ್ಞ
ಪಂಚಾಹ ಕಾರ್ಯಕ್ರಮವನ್ನು ರಸಧ್ವನಿ ಕಲಾ ಕೇಂದ್ರದಲ್ಲಿ ನಡೆಯಿತು
ಒಮ್ಮೆ ಇಂದ್ರನು ಶ್ರೀ ಕೃಷ್ಣನನ್ನು ಕುರಿತು ಒಂದು ವರವನ್ನು ಪ್ರದಾನ ಮಾಡುವುದಾಗಿ ಹೇಳಿದನು.ಏನು ವರವನ್ನೀಯಲಿ ಎಂದು ವಜ್ರಾಯುಧಧರನು ಮುರಾರಿಯನ್ನು ಕೇಳಲಾಗಿ, ಇಂದ್ರನ ಪುತ್ರನಾದ ಅರ್ಜುನನ ಶಾಶ್ವತ ಸಖ್ಯವನ್ನು ಬೇಡಿದನಂತೆ ಮುರವೈರಿ. ಸಕಲ ಚರಾಚರರ ಒಡೆಯ, ಮುನಿಸಂಕುಲವೆಲ್ಲ ಮೂರು ಕಾಲ ಭಜಿಸುವ ಸ್ವಾಮೀ ತಾನು ಅರ್ಜುನನ ಸ್ನೇಹಕ್ಕೆ ಹಾತೊರೆಯುವುದಾದರೆ, ಎನಿತು ಧನ್ಯನೋ ಪಾರ್ಥ!
ಝೆನ್ ಕವಿಗಳು ಚಂದ್ರನನ್ನು ಜಾಗೃತ ಚಿತ್ತಕ್ಕೆ ಪ್ರತಿಮೆಯಾಗಿ ಬಹಳಷ್ಟು ಬಾರಿ ಬಳಸುವುದುಂಟು. ಝೆನ್ ಗುರು ರಯೋಕನ್ ಒಮ್ಮೆ ತನ್ನ ಗುಡಿಸಲಿಗೆ ಬಂದಾಗ ಕಳ್ಳನೊಬ್ಬ ಗುಡಿಸಲಿನಲ್ಲಿ ಇದ್ದ ಎಲ್ಲ ವಸ್ತುಗಳನ್ನು ದೋಚಿ ಓಡಿಹೋಗುತ್ತಿದ್ದ. ಅವಸರದಲ್ಲಿ ಒಂದು ಪೀಠವನ್ನು ಉಳಿಸಿ ಓಡಿದನಂತೆ. ಮನೆಯ ಒಳಗೆ ಬಂದ ಝೆನ್ ಗುರು ಆ ಪೀಠವನ್ನೂ ಹೊತ್ತು, ಕಳ್ಳನನ್ನು ಹಿಂಬಾಲಿಸಿ , ಅವನಿಗೆ ಕೊಟ್ಟು ಬಿಟ್ಟನಂತೆ. ಎಲ್ಲವನ್ನೂ ದೋಚಿದರು ಸಹ ಕಿಟಕಿಯಲ್ಲಿ ಬೋಧಿಯ ಸ್ವರೂಪವಾದ ಚಂದ್ರನನ್ನು ದೊಚಲಾದೀತೇ? ಈ ಸಂದರ್ಭದಲ್ಲಿ ಬರೆದ ಹೈಕು ಇದಾಗಿದೆ.
ಭಾರತದ ಪರಮಾಣು ಪಿತಾಮಹ ರೆಂದು ಖ್ಯಾತರಾಗಿರುವ ಹೋಮಿ ಜೆಹಾಂಗೀರ್ ಭಾಭಾ ಅವರು ದೇಶ ಕಂಡ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು. ವಿಜ್ಞಾನ-ತಂತ್ರಜ್ಞಾನವೇ ಅಲ್ಲದೆ, ಭಾಭಾ ಅವರು ಉತ್ತಮ ಆಡಳಿತಕಾರರಾಗಿ ಸಹ ಭಾರತಕ್ಕೆ ಕೊಡುಗೆ ನೀಡಿದರು.ಭಾಭಾ ಅಣು ಸಂಶೋಧನಾ ಕೇಂದ್ರ,ಟಾಟಾ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮುಂತಾದ ಉನ್ನತ ಮಟ್ಟದ ಸಂಸ್ಥೆಗಳನ್ನೂ ಹುಟ್ಟುಹಾಕಿದರು. ೧೯೬೬ ರಲ್ಲಿ ಭಾಭಾ ಅವರ ಅಕಾಲಿಕ ಮರಣ ಸಂಭವಿಸಿದಾಗ ಕಲಾ ಪೋಷಕರಾದ ವಾನ್ ಲೆಯ್ದೆನ್ ಅವರು -- "ಭಾರತದ ಕಲಾ ಪ್ರಪಂಚ ಅನಾಥ ವಾಯಿತು" ಎಂದು ಉದ್ಗರಿಸಿದರು. ಇದೇನು, ಮೇಲು ದರ್ಜೆಯ ವಿಜ್ಞಾನಿ ಇಲ್ಲವಾದರೆ ಕಲಾ ಸಾಮ್ರಾಜ್ಯ ಹೇಗೆ ಬಡವಾಯಿತು ಎಂದು ಪ್ರಶ್ನಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಭಾಭಾ ಅವರ ಬುದ್ಧಿ - ಜ್ಞಾನಗಳು ವಿಜ್ನಾನಿಯದ್ದಾದರೆ, ಹೃದಯವು ಮಾತ್ರ ಅಪ್ಪಟ ಕಲಾವಿದನದ್ದು, ಸಹೃದಯನದ್ದು. ಸರ್. ಸಿ. ವಿ. ರಾಮನ್ ಅವರು ಭಾಭಾರನ್ನು ಲಿಯೋ ನಾರ್ಡೋ ಡಾ ವಿಂಚಿ ಗೆ ಹೋಲಿಸಿದರು. ಹೋಲಿಕೆ ಅತ್ಯಂತ ಸಮಜಸವಾಗಿದೆ. ಡಾ ವಿಂಚಿ ಯಂತೆ ಭಾಭಾ ಸಹ ಬಹುಮುಖ ಪ್ರತಿಭೆ. ಭಾಭಾ ಅವರು ಫಿಲ್ ಹಾರ್ಮಾನಿಕ್ ಆರ್ಕೆಸ್ತ್ರದಲ್ಲಿ ( ವಾದ್ಯ ಗೋಷ್ಠಿ ಯಲ್ಲಿ ) ವಯೋಲಾ ನುಡಿಸುತ್ತಿದ್ದರು. ಕೇಂಬ್ರಿಡ್ಜ್ ನ ನೌಕಾ ತಂಡದಲ್ಲಿ ( ರೆಗಟ್ಟ) ದಲ್ಲಿ ದೋಣಿ ನಡೆಸುವ ಅಂಬಿಕರಾಗಿದ್ದರು, ಇದಲ್ಲದೆ ಮೊಜಾರ್ಟ್ ನ ' ದಿ ಮ್ಯಾರೇಜ್ ಆಫ್ ಫಿಗಾರೊ' ರೂಪಕಕ್ಕೆ ರಂಗ ಸಜ್ಜಿಕೆ ಮತ್ತು ಕುಂಚ ಹಿಡಿದಿದ್ದರು . ವಿಜ್ಞಾನಿಯಾಗಿ ಪರಮಾಣುಗಳ ಒಳಹೊಕ್ಕು ಬೇಧಿಸಿದ ಭಾಭಾ, ಕಲಾವಿದನಾಗಿ ಆಂತರ್ಯದ
ಹೃದಯದಾಳವನ್ನು ಶೋಧಿಸಿದರು. ಕವಿಹೃದಯಿ ಭಾಭಾ ಒಮ್ಮೆ ಹೀಗೆಂದಿದ್ದರು
ನನ್ನ ಜೀವಿತದ ಅವಧಿಯನ್ನು ಕಾಲ ಪರಿಮಿತಿಯಿಂದ ಹೆಚ್ಚಿಸಿಕೊಳ್ಳಲಾದು, ಆದರೆ ತೀವ್ರತೆಯನ್ನು ವೃದ್ಧಿಸುವುದರಿಂದ ಅದನ್ನು (ಜೀವಿತವನ್ನು) ವೃದ್ದಿ ಸಿ ಕೊಳ್ಳುತ್ತೇನೆ. ಕಲೆ, ಸಂಗೀತ, ಕಾವ್ಯ - ಇವುಗಳ ವ್ಯವಸ್ಥಿತಿಗಳಿಂದ ನನ್ನ ಒಂದೇ ಧ್ಯೇಯವೆಂದರೆ - ಕಲಾವ್ಯವಸ್ಥಿತಿ ಯಿಂದ ಜೀವನ ತೀವ್ರತೆಯ ಅನುಸಂಧಾನ
ಶಿಶುವಿಹಾರದಲ್ಲಿ ಚಿಣ್ಣರೆಲ್ಲರೂ ಬಣ್ಣದ ಬಳಪಗಳನ್ನು ಹಿಡಿದು ಚಿತ್ರ ಬಿಡಿಸುವುದರಲ್ಲಿ ಮಗ್ನರಾಗಿದ್ದರು. ಸವಿತಾ ಟೀಚರ್ ತರಗತಿಯನ್ನು ಸುತ್ತು ಹಾಕುತ್ತ, ಯಾವ ಮಗುವಿನ ಕುಂಚ ಏನನ್ನು ಅವತರಿಸುತ್ತಿದೆ ಎಂದು ನೋಡುತ್ತಿದ್ದರು . ಪುಟ್ಟಿಯ ಪಕ್ಕ ನಿಂತು "ಇದೇನು ಪುಟ್ಟಿ, ಏನು ಬಿಡಿಸುತ್ತಿದೀಯ?" ಎಂದ ಕೇಳಿದರು. "ದೇವರನ್ನು ಬಿದುಸುತ್ತಿದೀನಿ" ಎಂದಳು ಪುಟ್ಟಿ. ಆದರೆ ಯಾರೂ ದೇವರನ್ನು ನೋಡಿಯೇ ಇಲ್ಲವಲ್ಲ ಎಂದರು ಸವಿತಾ ಟೀಚರ್ . "ಶ್ ! .. ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರು ನೋಡುವರು ಎಂದಳು ಮುಗ್ಧ ಪುಟ್ಟಿ.
ಸಕಲ ಜೀವ ರಾಶಿಗಳು ಅನುಗಾಲ ಆರಿಸುವುದು ಆನಂದವನ್ನೇ. ನಮ್ಮ ಬಹುತೇಕ ಎಲ್ಲ ಚಟುವಟಿಕೆಗಳು ಸುಖ ಸಂಪಾದನೆಯ ಸುತ್ತ ಮುತ್ತಲೇ ಇರುತ್ತವೆ. ಎಲ್ಲವನ್ನು ಬಿಟ್ಟು ಸರ್ವಸಂಘ ಪರ್ತ್ಯಾಗಿ ಆಗಬಯಸುವ ಸನ್ಯಾಸಿಯೂ ಸಹ ಸರ್ವ ತ್ಯಾಗದಿಂದ ತನಗೆ ಸಂತೋಷ ನೆಮ್ಮದಿಗಳು ದೊರೆಯುವುದರಿಂದಲೇ ತ್ಯಾಗಾಸಕ್ತನಾಗುವುದು. ಸುಖ ಒಂದೇ ಜೀವನದ ಮೌಲಯ ಎಂದು ಪರಿಗಣಿಸಿ ಅತಿಯಾದ ವಿಷಯಾಸಕ್ತಿಯಲ್ಲಿ ತೊಡಗಿದರೆ ಅದನ್ನು 'ಹೆಡೋನಿಸಂ' (Hedonism) ಎಂದು ಕರೆಸಿಕೊಂಡರೆ, ಧರ್ಮ ವಿರುದ್ಧವಲ್ಲದ ಸರ್ವಭೂತ ಹಿತೋರಥದ ಸಂತೋಷ- ಸುಖದ ಅರಸಿವಿಕೆ ಹಂತ ಹಂತವಾಗಿ ಬ್ರಹ್ಮಾನಂದ ವನ್ನು ಸಹ ದೊರಕಿಸಿ ಕೊಡುತ್ತದೆ. ನಾ ನಾ ವಿಧವಾದ ಆನಂದ ಮೀಮಾಂಸೆ ಸನಾತನ ಧರ್ಮದಲ್ಲಿ ಇದ್ದು ಆನಂದವನ್ನು ಬ್ರಹ್ಮ ವಸ್ತುವಿಗೆ ಹೋಲಿಸಿದ್ದಾರೆ ನಮ್ಮ ಸನಾತನರು. ಪ್ರಚಲಿತ ಮನೋವಿಜ್ಞಾನಿ ಗಳಲ್ಲಿ ಮಾರ್ಟಿನ್ ಸಲಿಗ್ಮನ್ (Martin Seligman) ಅವರು ಆನಂದದ ಮೂಲವನ್ನು ಹುಡುಕಲು ಹೊರಟು 'PERMA' ಎಂಬ ಪಂಚಾಕ್ಷರ ಸೂತ್ರವನ್ನು ಪ್ರತಿಪಾದಿಸಿದರು. ಈ ಐದು ಬಗೆಯ ಸುಖಪ್ರದ ಸಾಧನಗಳಲ್ಲಿ "ವಸ್ತು ಜನ್ಯ ಸುಖ" - Pleasure ಮೊದಲನೆಯದು. ಈ ವಸ್ತು ಜನ್ಯ ಸುಖ, ಪಂಚೆದ್ರಿಯಗಳಿಗೆ ಮುದದಿಂದ ಉಂಟಾಗುತ್ತದೆ. ಇಂಪಾದ ಗಾನ ಲಾಲಿಸುವುದಾಗಲಿ, ಘಮ ಘಮಿಸುವ ಸುಗಂಧ ದ್ರವ್ಯದ ಸುವಾಸನೆಯಾಗಲಿ , ಸುಗ್ರಾಸ ಭೋಜನದಿಂದಾಗಲಿ , ಇವೆ ಮೊದಲಾದ ವಸ್ತುಜನ್ಯ ಸಂತೋಷವು ಇಲ್ಲಿ ಸೇರಿಕೊಳ್ಳುತ್ತವೆ. "ವ್ಯವಸ್ಥಿತಿ" - Enagagement ಇಂದ ದೊರೆಯುವ ಸಂತಸ ಎರಡನೆಯ ಸ್ತರದ್ದಾಗಿರುತ್ತದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ದೆ, ಉತ್ಸಾಹವಿದ್ದು, ಕಾರ್ಯ ತತ್ಪರತೆ ಇಂದ ದೊರೆಯುವ ಸಂತಸ ಇದಾಗಿರುತ್ತದೆ. ಸಂಪೂರ್ಣವಾಗಿ ಮಗ್ನವಾಗಿ ತನು, ಮನ , ಆತ್ಮಗಳನ್ನು ಒಂದು ಮಾಡಿ ಸಂಪೂರ್ಣವಾಗಿ ತೊಡಗಿಸಿ ಕೊಂದ ಮಾಡಿದ ಕೆಲಸದ ಸಂತಸವೇ ಸಂತಸ. ಸರ್ ಎಂ. ವಿಶ್ವೇಶ್ವರಯ್ಯ ನವರು ಹೇಳುತ್ತಿದ್ದಂತೆ " ಕಸ ಗುಡಿಸುವುದು ನಮ್ಮ ಕೆಲಸವಾದರೆ, ನಾವು ಗುಡಿಸಿದ ರಸ್ತೆ ಜಗತ್ತಿನಲ್ಲೇ ಅತ್ಯಂತ ಸ್ವಚ್ಛ ವಾಗಿರುವ ರಸ್ತೆಯಾಗ ಬೇಕು -- ಹಾಗಿರಬೇಕು ನಮ್ಮ ಕಾರ್ಯ ಶ್ರದ್ದೆ. Relationship - "ಸಂಬಂಧ-ಬಾಂಧವ್ಯ" ಗಳಿಂದ ಪ್ರಾಪ್ತಿಯಾಗುವ ಸಂತೋಷ ಮೂರನೆಯದು. ಮಾನವ ಸಮಾಜ ಜೀವಿ. ಯಾರಿಗೆ ಒಳ್ಳೆಯ ಒಡನಾಟ ದೊರೆಯುವುದೋ ಅವರೇ ಪುಣ್ಯವಂತರು. ಸಲಿಗ್ಮನ್ ಗುರುತಿಸುವ ನಾಲ್ಕನೇ ಪಂಕ್ತಿಯ ಸಂತಸ ವೆಂದರೆ "ಅರ್ಥ ಗ್ರಹಣ" - Meaning . ಜೀವನದಲ್ಲಿ ಎಲ್ಲವೂ ಇದ್ದರೂ "ಏನೋ" ಹೇಳಿಕೊಳ್ಳಲಾರದ ತಾಕಲಾಟ. ಉತ್ತರಗಳಿಲ್ಲ ಪ್ರಶ್ನೆಗಳು ಎಲ್ಲರನ್ನು ಒಮ್ಮೆಯಾದರೂ ಕಾದಿರುವುದು ಸಹಜವೇ. ಈ ಮಾಯಮಯವಾದ ಪ್ರಪಂಚದ ಅರ್ಥ ಗ್ರಹಣವೆ ಒಂದು ಸಂತಸ. ಸಂತಸದ ಐದನೆಯ ಮೂಲವೆಂದರೆ Achievement - "ಸಾಧನೆಯ ಸಂತೃಪ್ತಿ". ಎಷ್ಟೇ ಉಟ್ಟರು ಉಂಡರೂ, ಸಂಸಾರದಲ್ಲಿ ಸಾಮರಸ್ಯ ಇದ್ದರೂ, ಸಾಧನೆಯ ಗಂಧ ವಿರದಿದ್ದರೆ ಜೀವನ ನೀರಸವೇ ಸರಿ.
ಆಕಾಶವಾಣಿ ಸುದ್ದಿ ವಿಭಾಗದಿಂದ ಪ್ರತಿ ಮುಂಜಾನೆ ೬:೫೫ ಗೆ ಬಿತ್ತರವಾಗುವ ಸಂಸ್ಕೃತ ವಾರ್ತಾ ಪ್ರಸಾರಕ್ಕಿಂದು ೩೮ ವರ್ಷದ ಸಂಭ್ರಮ. ೧೯೭೪ರಲ್ಲಿ ಇದೇ ಜೂನ್ ೩೦ ರಂದು ಬೆಳಗಿನ ಸಂಸ್ಕೃತ ವಾರ್ತಾ ಪ್ರಸಾರ ಮೊದಲುಗೊಂಡಿತು. "ಬಹುಜನಹಿತಾಯ, ಬಹುಜನಸುಖಾಯ" ಎಂಬ ಆಕಾಶವಾಣಿಯ ಘೋಶವಾಕ್ಯ ಈ ಸಂಸ್ಕೃತ ವಾರ್ತೆಗಳಿಗೆ ಅಕ್ಷರಶಃ ಸರಿಹೊಂದುತ್ತದೆ.
ಮುಂಜಾನೆ ಎದ್ದು ಎಂ.ಎಸ್. ಕಂಠಸಿರಿಯಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಆಲಿಸಿ , ಬಿಸಿ ತಾಜಾ ಫಿಲ್ಟರ್ ಕಾಫಿ ಹೀರುತ್ತ , ಆಕಾಶವಾಣಿಯಲ್ಲಿ " ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶೄಯಂತಾಂ , ಪ್ರವಾಚಕಃ ಬಲದೇವಾನಂದ ಸಾಗರಃ" -- ಈ ಉದ್ಘೋಶ ಕೇಳಿದರೆ ಸಾಕು ಆ ದಿನ ಮಂಗಳಮಯವಾಗಿ ಆರಂಭವಾಗುವ ಅನುಭೂತಿ.
ಸಂಸ್ಕೃತ ವಾರ್ತೆಗಳನ್ನು ಅಂತರ್ಜಾಲದಲ್ಲೂ ಕೇಳಬಹುದು. ಕೊಂಡಿ ಇಲ್ಲಿದೆ.
ತಾತ್ಪರ್ಯ : ಸ್ಪರ್ಶಮಣಿಯಿಂದ ಸ್ಪರ್ಶಿಸಿದರೆ ಕಬ್ಬಿಣವು ಬಂಗಾರವಾಗುವುದು; ದಾರಿಯ ಮಗ್ಗಲಿನ ಕೊಳಚೆ ನೀರು ಗಂಗೆಯನ್ನು ಸೇರಿದರೆ ಶುದ್ಧವಾಗುವುದು. ಇದರಂತೆ, ಹೇ ಭವಾನಿ, ನನ್ನ ಹೃದಯವು ಅನೇಕ ಪಾಪಗಳಿಂದ ಅತಿ ಮಲಿನವಾಗಿದ್ದರೂ ಕೂಡ, ನಿನ್ನಲ್ಲಿ ಪ್ರೇಮಸ್ವರೂಪದ ಭಕ್ತಿಯನ್ನು ಪಡೆಯಿತೆಂದರೆ, ಹೇಗೆ ತಾನೇ ನಿರ್ಮಲವಾಗುವುದಿಲ್ಲ?