Thursday, October 30, 2008

ಒಂದು ಹಬ್ಬದ ಸುತ್ತ



ಅಕ್ಟೋಬರ್ ತಿಂಗಳ ಕಡೆಯ ದಿನದಂದು ಹ್ಯಾಲೋವೀನ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸಿತ್ತಾರೆ. ಕೆಲ್ಟಿಕ್ ಜನಾಂಗದ ಸಂಹೇನ್ ಎಂಬ ಸುಗ್ಗಿಯ ಪರ್ವದಿಂದ ರೂಪುಗೊಂಡ ಹ್ಯಾಲೋವೀನ್,ಗ್ರಾಮ್ಯರಿಂದ ಮೊದಲು ಗೊಂಡು ನವನಾಗರೀಕರಿಗೂ ಹರಡಿದೆ. ಶೀತವಲಯದ ದೇಶಗಳಲ್ಲಿ ಚಳಿಗಾಲ ಪ್ರಾರಂಭವಾಗುವ ಮುನ್ನ ಕೃಷಿಕರು ಕೋಯ್ಲು ಮುಗಿಸಿ ಆಚರಿಸುವ ಧಾರ್ಮಿಕ ಪರ್ವವಿದಾಗಿತ್ತು. ಉತ್ತರ ಐರೋಪ್ಯ ಪ್ರಾಂತ್ಯಗಳಲ್ಲಿ ಇದನ್ನು ಹೊಸ ವರ್ಶವಾಗಿಯೂ ಆಚರಿಸುತ್ತಿದ್ದರು.ಗೇಲಿಕ್ ಜನಾಂಗದವರು ಈ ಪರ್ವದ ಸಮಯದಲ್ಲಿ ಪರ ಮತ್ತು ಅಪರ ಪ್ರಪಂಚದ ನಡುವಿನ ಅಂತರ ಮುರಿದುಬಿದ್ದು, ಭೂತ ಪ್ರೇತಗಳು ಧರೆಗೆ ಅವತರಿಸುತ್ತವೆ ಏನ್ನುವ ಪ್ರತೀತಿಯನ್ನು ಹೊಂದಿದ್ದರು.ಆದರಿಂದಲೆ ಉರುವಲ ಸಾಮಗ್ರಿಗಳನ್ನು ಸಂಗ್ರಹಿಸಿ ದಹಿಸುವುದು (bonfires), ಈ ಅತಿಮಾನುಷರನ್ನು ಪ್ರೇತಗಳನ್ನು ಸಂಹರಿಸಿ/ಶಾಂತಿಗೊಳಿಸುವ ಪ್ರತೀಕಗಳು ಈ ಪರ್ವದ ಆಚರಣಾ ವಿಧಾನಗಳಲ್ಲಿ ಒಳಹೊಕ್ಕವು. ಹ್ಯಾಲೋವೀನ್ ಸಂದರ್ಭದಲ್ಲಿ ಧಿಗಿಲೆಬ್ಬಿಸುವ ಮುಖವಾಡ ವಸ್ತ್ರ ವೇಶಭೂಷಣಗಳನ್ನು ಧರಿಸುವುದು ವಾಡಿಕೆಯಾಗಿದೆ.ಈ ದಿನ ಕುಂಬಳಕಾಯಿಯಿ ಒಳ ತಿರುಳನ್ನು ತೆರೆದು,ಒಂದು ಮಡಿಕೆಯೆ ಆಕೃತಿಯಲ್ಲಿ ಕಡಿದು,ಮುಖವಾಡ ಮಾಡಿ,ಮುಖವಾಡದ ಒಳಗೆ ಒಂದು ಮೋಂಭತ್ತಿಯನ್ನು ಹತ್ತಿಸುವುದನ್ನು ಕಾಣಬಹುದು.ಈ ಮುಖವಾಡಕ್ಕೆ ಜ್ಯಾಕ್-ಓ-ಲಾಂಟರ್ನ್ (Jack-O-Lantern)ಎಂದು ಹೆಸರು. ಈಡಿ ಆಚರಣೆಗೆ ಭಯದ ವಾತವರಣದ ಲೇಪವಿದ್ದರೂ,ಕೆಲ ಅಂಶಗಳನ್ನು ಗಮನಿಸಿದರೆ, ಈ ಹ್ಯಾಲೋವೀನ್ ಅನೇಕ ಭಾರತೀಯ ಪರ್ವಗಳ ಒಂದೊಂದು ಅಂಶಗಳನ್ನು ಒಳಗೊಂಡಿದೆ ಅನ್ನಿಸುತ್ತದೆ.

ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಇದನ್ನು ಸಂಕ್ರಾಂತಿ ಎನ್ನೋಣವೇ. ಇಲ್ಲ, ದುಷ್ಟ ದಹನ ಮಾಡುವುದರಿಂದ ಇದನ್ನು ಹೋಳಿಕಾ ದಹನಕ್ಕೆ ಹೋಲಿಸಿ, ಹೋಳಿ ಎನ್ನೋಣವೇ? ಮನೆಗಳ ಮುಂದೆ ಕ್ಯಾಂಡಲ್ಲು ಗಳು ಕಂಗೊಳಿಸುವುದರಿಂದ ದೀಪಾವಳಿಗೆ ಹತ್ತಿರವಾದರೆ, ಚಿಣ್ಣರು ವಿಧ ವಿಧ ವಸ್ತ್ರಗಳನ್ನೊಳಗೊಂಡ ಫಾನ್ಸಿ ಡ್ರೆಸ್ ಧರಿಸುವುದರಿಂದ, ಕೃಷ್ಣಾಷ್ಟಮಿಯಂದು ರಾಧೆ-ಕೃಷ್ಣೆಯರ ಅಲಂಕಾರ ತೊಟ್ಟ ಮಕ್ಕಳಿಗೆ ಹೋಲಿಸ ಬಹುದು. ಯುಗಾದಿಯಂದು ನಾವು ಮಾವು-ಬೇವು ತರುವ ಹಾಗೆ, ಫಾಲ್ Fall( ಶಿಶಿರ?) ಋತುವು ಮುಗಿದ ಈ ಸಮಯದಲ್ಲಿ ಓಕ್ ಎಲೆಗಳನ್ನು ( Oak Leaves) ತಂದು ಸಿಂಗರಿಸುವುದರಿಂದ ಇದನ್ನು ಯುಗಾದಿ ಎನ್ನೋಣವೆ? ಐರೋಪ್ಯ ಪ್ರಾಂತ್ಯ್ದಲ್ಲಿ ನವವರ್ಶವಾಗಿ ಆಚರಿಸುತ್ತಿದ್ದರಿಂದ ಇದನ್ನು ಯೂಗಾದಿ ಎಂದರೆ ತಪ್ಪೇನಿಲ್ಲ ಬಿಡಿ.ಹಬ್ಬಗಳಿಗೂ ಋತುಗಳಿಗೂ ಇರುವ ನಂಟನ್ನು ಗಮನಿಸಿ. 'ವಸಂತ ಬಂದ ಋತುಗಳ ರಾಜ' ಎಂದು, ವಸಂತನ ಆಗಮವನ್ನು ಯುಗಾದಿಯ ಸಮಯ ಮಾವು ತೋರನ ದಿಂದ ಸ್ವಾಗತಿಸಿದರೆ , ಇತ್ತ ಚಳಿಗಾಲದಲ್ಲಿ ವೃಕ್ಷ ತರುಗಳು ಬಟ್ಟೆ ಕಳಚಿ ಹೊರಬಿದ್ದ ಓಕ್ ಎಲೆಗಲಿಂದಲೇ ಅಲಂಕಾರ.

ಅವಿವಾಹಿತ ಕನ್ಯೆಯರು ಹ್ಯಾಲೋವೀನ ರಾತ್ರಿಯಂದು ಕತ್ತಲೆ ಕೊಣೆಯಲ್ಲಿ ಕುಳಿತು ಕನ್ನಡಿಯಲ್ಲಿ ದಿಟ್ಟಿಸಿ ನೋಡಿದರೆ ತಮ್ಮ ಭಾವಿಪತಿಯ ದರ್ಶನ ವಾಗುವುದು ಎಂಬ ನೊಂಬಿಕೆ ಇದ್ದಿತು. ಇದು ಭೀಮನಮಾವಾಸ್ಯೆಯ ನಮ್ಮ ಪತಿಸಂಜೀವನಿ ವ್ರತದಂತೆ ತೋರುವುದಲ್ಲವೆ?

ಅಂತು ಪ್ರಾಚ್ಯ ಪಾಶ್ಚಿಮಾತ್ಯಗಳೆನ್ನದೆ ಹಬ್ಬಗಳ ಆಚರಣೆಗಳಲ್ಲಿ ವೈವಿಧ್ಯತೆ - ಸಾಮ್ಯತೆಗಳು ಕಾಣಬಹುದು.



ಹಾಲೊವೀನ್ ಸಂದರ್ಭದಲ್ಲಿ 'ರೂಪ'ದರ್ಶಿ ಪುಟ್ಟಕುಂಬಳಕಾಯಿ ಕು ||'ಸಾಹಿತ್ಯ' ವೇಷಧರಿಸಿರುವ ಬಗೆ

4 comments:

Manjunatha Kollegala said...

oLLeya lEkhana... vividhateyalli sAmyate, sAmyateyalli vividhate :) chennaagide

L'Étranger said...

ಚೆನ್ನಾಗಿದೆ! ಸೊಗಸಾದ ವಿಶ್ಲೇಷಣೆ. :)

BTW, Celtic ಪದದ ಸರಿಯಾದ ಉಚ್ಛಾರ ’ಕೆಲ್ಟಿಕ್’. ’ಸೆಲ್ಟಿಕ್’ ಅಲ್ಲ. ಸರಿಪಡಿಸದ್ದಕ್ಕೆ ತಪ್ಪು ತಿಳಿಯಬೇಡ. :)

ಇತ್ತೀಚೆಗೆ ಬರೆಯುವದನ್ನು ಕಡಿಮೆ ಮಾಡಿದ್ದೀಯ! ಬರೀತಾ ಇರು....

ರೂpaश्री said...

ಅರೆ ಪುಟ್ಟಿ ಆಗ್ಲೇ "ಟ್ರಿಕ್ ಆರ್ ಟ್ರೀಟ್"ಗೆ ಇಲ್ಲಿ ಬಂದ್ ಬಿಟ್ಟ್ಲಾ :)

ನಿನ್ನೆ-ಮೊನ್ನೆಯಷ್ಟೆ ಆರ್ಕುಟ್ ಕಮ್ಯುನಿಟಿಯೊಂದರಲ್ಲಿ ಈ ಹಬ್ಬವನ್ನು ನಾವು ಭಾರತೀಯರು ಆಚರಿಸಬಾರದು ಅಂತ ಜೋರು ವಾದ ನಡಿತಾ ಇತ್ತು. ಅವರಿಗೆ ನಿಮ್ಮ ಈ ಲೇಖನ ಕಳುಹಿಸಿರುವೆ. ನಿಮ್ಮ ತಾಣದಲ್ಲಿ ಟ್ರ್ಯಾಫಿಕ್ ಜಾಮ್ ಆಗಬಹುದು ;)

Srikanth said...

ಡಾ|| ರೂಪಶ್ರೀ, ಮಂಜು, ಶ್ರೀಕಾಂತ್..ಎಲ್ಲರಿಗೂ ಧನ್ಯವಾದಗಳ.

@ ಶ್ರೀ:
Celtic ಪದದ ಸರಿಯಾದ ಉಚ್ಛಾರ ತಿಳಿಸಿದ್ದಕ್ಕೆ ಧನ್ಯವಾದಗಳು. ಓದಿ ಅರಿತದ್ದು, ಕೇಳಿ ತಿಳಿದ್ದಲ್ಲ, ಆದ್ದರಿಂದ ಉಚ್ಛಾರ ತಿಳಿದಿರಲಿಲ್ಲ.

ಹೌದು ಬರವಣಿಗೆ ಕಡಿಮೆಯಾಗಿದೆ.ಯಾಕೋ ಗೊತ್ತಿಲ್ಲ.

@ ರೂಪ:

ಹೌದು, ಪುಟ್ಟಿ ಡೈರೆಕ್ಟಾಗಿ ಇಲ್ಲಿಯೇ ಅವತರಿಸಿದ್ದಳೆ. :) :)