Tuesday, January 15, 2008

ಕ್ಷಣಗಣನೆ



===========
ಇಡೀ ದಿನ,
'ಈ ದಿನ ಕಳೆಯಲಿ ; ಈ ದಿನ ಕಳೆಯಲಿ',
ಎಂಬ ತೊಳಲಾಟದಲ್ಲೆ
ದಿನ ಕಳೆದು ಬಿಟ್ಟೆ.
ದಿನ ಕಳೆಯಿತು.
ಮತ್ತೆಂದೂ ಈ ದಿನ ಬಾರದೇನೋ?
ಮತ್ತೆಂದೂ ಈ ದಿನ ಬಾರದು!
ನಾ ನಾಳೆಯ ಮುಟ್ಟಿದರೂ,
ನಾಳೆ ನನ್ನನ್ನು ಮುಟ್ಟೀತೆ?
ನೆನ್ನೆಯ ದಿನ ಇಂದು ಬಂದ ಹಾಗೆ
ಇಂದಿನ ದಿನ ನಾಳೆ ಬರದಿರಲಿ.
ನಾನು ನಾಳೆಯನ್ನು ಮುಟ್ಟಿದ್ದೇನೆ,
ನನ್ನ ನಾಳೆ ನನದಾಗಲಿ!
==========
Miami Lakes, FL 8:24 PM Jan 15 2008 (Edited)
- Footnotes

೧. ಇಂದು - Today
೨. ನಾಳೆ - Tommorrow
೩. ಕಳೆಯಿತು - itz gone!

3 comments:

bhadra said...

ಈ ಕ್ಷಣ, ಕ್ಷಣ ಕಾಣುವುದಿಲ್ಲ
ಮರು ಕ್ಷಣ ಅದಕಾಗಿ
ಹಪಹಪಿಸುವುದು ಸಲ್ಲ
ದುಃಖವೋ ಸುಖವೋ,
ಆ ಕ್ಷಣ ಅನುಭವಿಸುವಾ
ಮೆಲುಕಿಗೆ ಸರಕು ತುಂಬುವಾ

ಉತ್ತಮ ಚಿಂತನೆ - ಮತ್ತೊಂದು ಕವನದ ರೂಪದಲ್ಲಿ ಬ್ಲಾಗೇರಿದೆ :)

ಗುರುದೇವ ದಯಾ ಕರೊ ದೀನ ಜನೆ

Manjunatha Kollegala said...

"ನಾ ನಾಳೆಯ ಮುಟ್ಟಿದರೂ,
ನಾಳೆ ನನ್ನನ್ನು ಮುಟ್ಟೀತೆ?"

good expression. ಸೊಗಸಾದ ಕವನ

Manjunatha Kollegala said...

Foot noteನ ಅಗತ್ಯವಿರಲಿಲ್ಲವೆನಿಸುತ್ತದೆ
ಓದುಗರನ್ನೂ ಸ್ವಲ್ಪ ನಂಬಿ ಸ್ವಾಮೀ ;)