Saturday, January 12, 2008

ವ್ಯಾಪ್ತಿ


===

ಚಂದಿರನು ಬೆಳೆಯುತ್ತಿದ್ದಾನೆ.
ಹುಣ್ಣಿಮೆ ಕಳೆದು ಕಡೆ ಪಕ್ಷ ಮೂರ್ಪಕ್ಷ ಮುಗಿದರೂ,
ಶುಕ್ಲ-ಕೃಷ್ಣಗಳ ಲೆಕ್ಕಿಸದೆ
ಕ್ಷಯಿಸುವ ಗೊಜಿಗೇ ಹೋಗಿಲ್ಲ:
'ಪಕ್ಷ'-ಪಾತಿ!

ಪಾಲ್ಗಡಲ ಅಂತರ್ಪ್ರವಾಹದಂತೆ
ಆಗಸವನಾವರಿಸಿ ಬೆಳೆದಿ-ದ್ದಾನೆ
ಆನೆಯಂತೆ ಗಜಗಾತ್ರ.
ದಶರಾತ್ರ ಮಾತ್ರದಲಿ
ಆದಿತ್ಯನಿಗಿಲ್ಲದ ಆಧಿಪತ್ಯ ಸಾಧಿಸುವನೆನೋ!
ಸಾಧು ಸಾಧು!

ಶುಕ್ರನಾಗ್ರಹವ ಗ್ರಹಿಸಿ,
ಗ್ರಹಗಳೆಲ್ಲ ಸಭೆ ಸೇರಿವೆಯಂತೆ.
ಆಯ(ತ)ನದಲ್ಲೇ ಕಾಣದ ತುರ್ತು ಪಂಚಾಯತಿ.
ಋತವ ರಕ್ಷಿಸಲು ಅಷ್ಟಗ್ರಹಗಳೆಸಗಿದ
ಮಹಾರ್ಗಳ ಬಂಧ!

ಮಣಿದು ಮರುಕಳಿಸಿ ಪುನರವತರಿಸಿ
ಶಶಿಯಾಗಿ ವ್ಯಾಸಕ್ಷೀಣ ಗಾತ್ರಾಪಸವ್ಯ
ರುಚವ ಸಾರುತಿಹನು: ಪ್ರಾಪ್ತವಿದ್ದರೂ
ನಾವಾಗಬಾರದೆಂದು
-ವ್ಯಾಪ್ತ ಗಮ್ಯ!

===================================================

* Footnotes:

ಆಯನ : ಉತ್ತರಾಯಣ - ದಕ್ಷಿಣಾಯನ ಎಂಬ ಆರು ಮಾಸಗಳ ಕಾಲ ಪರಿಮಿತಿ.

ಋತಂ : order or course of things. [http://en.wikipedia.org/wiki/Rta]

ಅರ್ಗಳ : a latch, a bar, or a bolt used for fastening a door or the cover of a vessel. Figuratively, it refers to some-thing intervening as an obstruction. In Jaimini astrology, it is used to describe the obstructing effect of an intervening planet. It assumes that planets and signs of the zodiac affect other planets and signs by their aspects. These influences can be nullified by the presence of certain planets at certain places relative to these planets and signs. Such obstructing planets are known as Argalas.

ಮಹಾರ್ಗಳ: A Grand Trap/ Obstruction set up by other 8 planets.

ವ್ಯಾಸಕ್ಷೀಣ : receeding in diameter.

ಅಪಸವ್ಯ : Orderly; right [ಸವ್ಯ - left ]; ಗಾತ್ರಾಪಸವ್ಯ : Got back to original dimensions.

ರುಚಂ (ರಿಚ) : ವೇದದಲ್ಲಿ ಕಂಡು ಬರುವ ೨ ಅಥವ ೪ ಸಾಲುಗಳ ಶ್ಲೋಕ,ಮಂತ್ರ. [http://en.wikipedia.org/wiki/Richa]

ವ್ಯಾಪ್ತ ಗಮ್ಯ : ವ್ಯಾಪ್ತಿಯನ್ನು ಮೀರಿ ಗಮಿಸುವ.

Miami Lakes,FL Jan 12 2008 1:25PM to 8:27PM.

2 comments:

Prashanth Kota said...

ಅಡ್ಡ ಬಿದ್ದೆ ಗುರುಗಳಿಗೆ,

"ಪ್ರಾಪ್ತವಿದ್ದರೂ ನಾವಾಗಬಾರದೆಂದು - ವ್ಯಾಪ್ತ ಗಮ್ಯ"
ತಿರುತಿರುಗಿ ಓದಿದರೂ... ಮತ್ತೆ ಓದಬೇಕೆನಿಸುತ್ತಿದೆ.

ತಾತ್ವಿಕವಾಗಿಯೂ, ಭೌತಿಕವಾಗಿಯೂ ಇದು ಪ್ರಸ್ತುತವೇ ಸರಿ...

ನಿಮ್ಮವ,
ಪ್ರಶಾಂತ

Manjunatha Kollegala said...

Let me tell you, I am impressed by your vocabulary, the depth and breadth of your reading... and feel slightly envious ;)

Coming to the poetics of it, ಕವನದಲ್ಲಿ "ಶಬ್ದ" ತುಸು ಅತಿಯಾಯಿತೇನೋ ಅನ್ನಿಸುತ್ತದೆ.

ಕವಿ ಮನಸ್ಸು ತುಂಬಾ ಸೂಕ್ಷ್ಮವಾದ್ದು. ನಿಮ್ಮ creativity ಹಾಗೂ ಪಾಂಡಿತ್ಯ, ನಿಮ್ಮಲ್ಲಿನ ಕವಿಯನ್ನು ಹತ್ತಿಕ್ಕದಂತೆ ನೋಡಿಕೊಂಡರೆ ಚನ್ನ :)