Wednesday, September 14, 2022
ಚತ್ವಾರಿ ಶೃಂಗಾ
Wednesday, August 31, 2022
ಗೃಹಸ್ಥಃ ಪಂಚ ಪೂಜಯೇತ್
Wednesday, August 24, 2022
ಅರುಣಾಚಲೇಶ್ವರನ ಪ್ರತಿಜ್ಞೆ
Sunday, August 14, 2022
ಯಥಾ ಕಾಷ್ಠಗತಾ ವಹ್ನಿಃ
Friday, July 29, 2022
ಅಗ್ನಿಂ ದೂತಂ ವೃಣೀಮಹೇ
Sunday, July 24, 2022
Tuesday, June 07, 2022
ಶನ್ನೋ ದೇವೀ ರಭಿಷ್ಟಯ
Thursday, June 02, 2022
ಗಾಯತ್ರೀ ವೇದಜನನೀ
Wednesday, May 18, 2022
ಅಷ್ಟ ದಿಕ್ಪಾಲಕ ಮಂತ್ರಗಳು.
Friday, April 15, 2022
ಧರ್ಮ ನಿರ್ವಚನ
Friday, April 08, 2022
ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾಃ
Friday, March 18, 2022
ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ
ಅಶ್ವಕ್ರಾಂತೇ ರಥಕ್ರಾಂತೇ ವಿಷ್ಣುಕ್ರಾಂತೇ ವಸುಂಧರಾ ।
ಶಿರಸಾ ಧಾರಯಿಷ್ಯಾಮಿ ರಕ್ಷಸ್ವ ಮಾಂ ಪದೇ ಪದೇ ।।
ಯಜ್ಞ ಯಾಗಾದಿಗಳಲ್ಲಿ ಅಗ್ನಿಯನ್ನು ಚಾಯ್ನ ಮಾಡಲು ಯೋಗ್ಯವಾದ ಸ್ಥಳವೆಂದರೆ ಅಶ್ವಗಳು ಓಡಾಡಿದ ಸ್ಥಳ. ಅದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ರಥಗಳು ಓಡಾಡಿದ ಸ್ಥಳವೂ ಪವಿತ್ರವೇ. ಮಿಗಿಲಾಗಿ ವಾಮಾನನಾಗಿ ಬಂದು ಶ್ರೀ ಮಹಾ ವಿಷ್ಣುವು ತ್ರಿವಿಕ್ರಮನಾದ ಸ್ಥಳವು ಭೂಮಿಯೇ. ಇಂತಹ ಪರಮ ಪವಿತ್ರವಾದ ಭೂಮಿಯು ನಮ್ಮನ್ನು ರಕ್ಷಿಸಲಿ
Monday, March 07, 2022
ಮೃತ್ತಿಕೇ ಹನಮೇ ಪಾಪಂ
ಮೃತ್ತಿಕೇ ಹನಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ ।
ಮೃತ್ತಿಕೆ ಬ್ರಹ್ಮದತ್ತಾಸಿ ಕಾಶ್ಯಪೇನಾಭಿ ಮಂತ್ರಿತಾ ।।
ಮೃತ್ತಿಕೇ ದೇಹಿ ಮೇ ಪುಶ್ಟಿಮ್ ತ್ವಿಯಿ ಸರ್ವಂ ಪ್ರತಿಷ್ಠಿತಮ್ ।
ಮೃತ್ತಿಕೇ ಪ್ರತಿಷ್ಠಿತೇ ಸರ್ವಂ ನಿರ್ಣುದ ಮೃತ್ತಿಕೆ ॥
ತಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತಿಮ್ ॥
ದೂರ್ವಾ ದೇವತೆ
ಏವಾನೋ ದೂರ್ವೆ ಪ್ರತನು ಸಹಸ್ರೇಣ ಶತೇ ನ ಚ ।।
(ಯಜುರ್ವೇದ ೧೩/೨೦)
ಹೇ ದೂರ್ವಾ ದೇವತೆಯೇ , ನೀನು ನಿಧಾನವಾಗಿ ಸಹಸ್ರಾರು ಪರ್ವಗಳಲ್ಲಿ ಚಿಗುರುತ್ತಾ ಎಲ್ಲ ಕಡೆಯೂ ಅಭಿವೃದ್ಧಿಯಾಗುವಂತೆ, ನಮ್ಮ ವಂಶವೂ ಬೆಳೆಯುತ್ತಾ ಇರುವಂತೆ ಶಕ್ತಿಯನ್ನು ಕರುಣಿಸು. ನಮ್ಮವರು ಧನ, ಕನಕ, ವಸ್ತು, ವಾಹನ, ಅಧಿಕಾರ, ಕೀರ್ತಿ, ಶ್ರೇಯಸ್ಸು ಪಡೆದು ಉದ್ಧಾರವಾಗುವಂತೆ ಅನುಗ್ರಹ ಮಾಡು ತಾಯಿ.
Monday, February 07, 2022
ರಥಸಪ್ತಮಿ
::: ರಥಸಪ್ತಮಿ ಸೂರ್ಯ ಅರ್ಘ್ಯ ಮಂತ್ರಃ :::
ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಃ ।
ಪ್ರೇರಯೇತ್ ತಸ್ಯ ಯತ್ ಭರ್ಗಃ ತತ್ ವರೇಣ್ಯಂ ಉಪಾಸ್ಮಹೇ ॥
Wednesday, February 02, 2022
ಸಂಸಾರಂ ಕ್ಷಣಭಂಗುರಂ
ಮೃಗತೃಷ್ಣಾ ಸಮಂ ವೀಕ್ಷ್ಯ ಸಂಸಾರಂ ಕ್ಷಣಭಂಗುರಂ |
ಸಜ್ಜನೈಃ ಸಂಗತಿಂ ಕುರ್ಯಾತ್ ಧರ್ಮಾಯ ಚ ಸುಖಾಯ ಚ ||
ಕ್ಷಣಭಂಗುರವಾದ ಈ ಸಂಸಾರವನ್ನು ತಿಳಿದು, ಶಾಸ್ವತ ಸುಖಕ್ಕಾಗಿ ಸಜ್ಜರನ ಸಹವಾಸ ಮತ್ತು ಧರ್ಮ ಸಂಗ್ರಹವನ್ನು ನಂಬಿಕೋ. ನಿಜಕ್ಕೂ ಈ ಸಂಸಾರವು ಮರೀಚಿಕೆಯೇ ಸರಿ.
Saturday, January 15, 2022
ತಂ ನೃಸಿಂಹ ಗುರುಂ ಭಜೇ
ಪ್ರಹ್ಲಾದ ವರದೋ ದೇವೋ ಯೋ ನೃಸಿಂಹಃ ಪರೋ ಹರಿಃ ।
ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ ॥
ಶ್ರೀ ಶ್ರೀ ವೃದ್ಧನೃಸಿಂಹ ಭಾರತಿಗಳು ನಿದ್ರಾಹಾರಗಳನ್ನು ಗೆದ್ದ ಮಹನೀಯರು. ಈ ಸಾಧನೆಗಳನ್ನು ಅತ್ಯುನ್ನತ ಯೋಗ ಸಾಧಕರು ಮಾಡುತ್ತಾರೆ. ಪ್ರಾಣಾಯಾಮ ಇತ್ಯಾದಿ ಅಷ್ಟಾಂಗಯೋಗ ಅಂಗಗಳ ಸಮ್ಯಗ್ ವ್ಯವಸ್ಥೆ ಇಂದ ಇದನ್ನು ಸಾಧಿಸುವುದು. ಯತಿಗಳು ತಮ್ಮ ಬಾಲ್ಯಾವಸ್ಥೆಯಲ್ಲೆ ಕಾಲ್ನಡಿಗೆಯಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನ ಮಾಡಿದವರು.
Friday, December 17, 2021
ಶ್ರೀ ದತ್ತಾತ್ರೇಯ ಸ್ತೋತ್ರ
ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳೀ
ಓಂಶ್ರೀದತ್ತಾಯ ನಮಃ |
ಓಂ ದೇವದತ್ತಾಯ ನಮಃ |
ಓಂ ಬ್ರಹ್ಮದತ್ತಾಯ ನಮಃ |
ಓಂ ವಿಷ್ಣುದತ್ತಾಯ ನಮಃ |
ಓಂ ಶಿವದತ್ತಾಯ ನಮಃ |
ಓಂ ಅತ್ರಿದತ್ತಾಯ ನಮಃ |
ಓಂ ಆತ್ರೇಯಾಯ ನಮಃ |
ಓಂ ಅತ್ರಿವರದಾಯ ನಮಃ |
ಓಂ ಅನಸೂಯಾಯ ನಮಃ | ೯
ಓಂ ಅನಸೂಯಾಸೂನವೇ ನಮಃ |
ಓಂ ಅವಧೂತಾಯ ನಮಃ |
ಓಂ ಧರ್ಮಾಯ ನಮಃ |
ಓಂ ಧರ್ಮಪರಾಯಣಾಯ ನಮಃ |
ಓಂ ಧರ್ಮಪತಯೇ ನಮಃ |
ಓಂ ಸಿದ್ಧಾಯ ನಮಃ |
ಓಂ ಸಿದ್ಧಿದಾಯ ನಮಃ |
ಓಂ ಸಿದ್ಧಿಪತಯೇ ನಮಃ |
ಓಂ ಸಿದ್ಧಸೇವಿತಾಯ ನಮಃ | ೧೮
ಓಂ ಗುರವೇ ನಮಃ |
ಓಂ ಗುರುಗಮ್ಯಾಯ ನಮಃ |
ಓಂ ಗುರೋರ್ಗುರುತರಾಯ ನಮಃ |
ಓಂ ಗರಿಷ್ಠಾಯ ನಮಃ |
ಓಂ ವರಿಷ್ಠಾಯ ನಮಃ |
ಓಂ ಮಹಿಷ್ಠಾಯ ನಮಃ |
ಓಂ ಮಹಾತ್ಮನೇ ನಮಃ |
ಓಂ ಯೋಗಾಯ ನಮಃ |
ಓಂ ಯೋಗಗಮ್ಯಾಯ ನಮಃ | ೨೭
ಓಂ ಯೋಗಾದೇಶಕರಾಯ ನಮಃ |
ಓಂ ಯೋಗಪತಯೇ ನಮಃ |
ಓಂ ಯೋಗೀಶಾಯ ನಮಃ |
ಓಂ ಯೋಗಾಧೀಶಾಯ ನಮಃ |
ಓಂ ಯೋಗಪರಾಯಣಾಯ ನಮಃ |
ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ |
ಓಂ ದಿಗಂಬರಾಯ ನಮಃ |
ಓಂ ದಿವ್ಯಾಂಬರಾಯ ನಮಃ |
ಓಂ ಪೀತಾಂಬರಾಯ ನಮಃ | ೩೬
ಓಂ ಶ್ವೇತಾಂಬರಾಯ ನಮಃ |
ಓಂ ಚಿತ್ರಾಂಬರಾಯ ನಮಃ |
ಓಂ ಬಾಲಾಯ ನಮಃ |
ಓಂ ಬಾಲವೀರ್ಯಾಯ ನಮಃ |
ಓಂ ಕುಮಾರಾಯ ನಮಃ |
ಓಂ ಕಿಶೋರಾಯ ನಮಃ |
ಓಂ ಕಂದರ್ಪಮೋಹನಾಯ ನಮಃ |
ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ |
ಓಂ ಸುರಾಗಾಯ ನಮಃ | ೪೫
ಓಂ ವಿರಾಗಾಯ ನಮಃ |
ಓಂ ವೀತರಾಗಾಯ ನಮಃ |
ಓಂ ಅಮೃತವರ್ಷಿಣೇ ನಮಃ |
ಓಂ ಉಗ್ರಾಯ ನಮಃ |
ಓಂ ಅನುಗ್ರರೂಪಾಯ ನಮಃ |
ಓಂ ಸ್ಥವಿರಾಯ ನಮಃ |
ಓಂ ಸ್ಥವೀಯಸೇ ನಮಃ |
ಓಂ ಶಾಂತಾಯ ನಮಃ |
ಓಂ ಅಘೋರಾಯ ನಮಃ | ೫೪
ಓಂ ಗೂಢಾಯ ನಮಃ |
ಓಂ ಊರ್ಧ್ವರೇತಸೇ ನಮಃ |
ಓಂ ಏಕವಕ್ತ್ರಾಯ ನಮಃ |
ಓಂ ಅನೇಕವಕ್ತ್ರಾಯ ನಮಃ |
ಓಂ ದ್ವಿನೇತ್ರಾಯ ನಮಃ |
ಓಂ ತ್ರಿನೇತ್ರಾಯ ನಮಃ |
ಓಂ ದ್ವಿಭುಜಾಯ ನಮಃ |
ಓಂ ಷಡ್ಭುಜಾಯ ನಮಃ |
ಓಂ ಅಕ್ಷಮಾಲಿನೇ ನಮಃ | ೬೩
ಓಂ ಕಮಂಡಲಧಾರಿಣೇ ನಮಃ |
ಓಂ ಶೂಲಿನೇ ನಮಃ |
ಓಂ ಡಮರುಧಾರಿಣೇ ನಮಃ |
ಓಂ ಶಂಖಿನೇ ನಮಃ |
ಓಂ ಗದಿನೇ ನಮಃ |
ಓಂ ಮುನಯೇ ನಮಃ |
ಓಂ ಮೌನಿನೇ ನಮಃ |
ಓಂ ಶ್ರೀವಿರೂಪಾಯ ನಮಃ |
ಓಂ ಸರ್ವರೂಪಾಯ ನಮಃ | ೭೨
ಓಂ ಸಹಸ್ರಶಿರಸೇ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಬಾಹವೇ ನಮಃ |
ಓಂ ಸಹಸ್ರಾಯುಧಾಯ ನಮಃ |
ಓಂ ಸಹಸ್ರಪಾದಾಯ ನಮಃ |
ಓಂ ಸಹಸ್ರಪದ್ಮಾರ್ಚಿತಾಯ ನಮಃ |
ಓಂ ಪದ್ಮಹಸ್ತಾಯ ನಮಃ |
ಓಂ ಪದ್ಮಪಾದಾಯ ನಮಃ |
ಓಂ ಪದ್ಮನಾಭಾಯ ನಮಃ | ೮೧
ಓಂ ಪದ್ಮಮಾಲಿನೇ ನಮಃ |
ಓಂ ಪದ್ಮಗರ್ಭಾರುಣಾಕ್ಷಾಯ ನಮಃ |
ಓಂ ಪದ್ಮಕಿಂಜಲ್ಕವರ್ಚಸೇ ನಮಃ |
ಓಂ ಜ್ಞಾನಿನೇ ನಮಃ |
ಓಂ ಜ್ಞಾನಗಮ್ಯಾಯ ನಮಃ |
ಓಂ ಜ್ಞಾನವಿಜ್ಞಾನಮೂರ್ತಯೇ ನಮಃ |
ಓಂ ಧ್ಯಾನಿನೇ ನಮಃ |
ಓಂ ಧ್ಯಾನನಿಷ್ಠಾಯ ನಮಃ |
ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ | ೯೦
ಓಂ ಧೂಲಿಧೂಸರಿತಾಂಗಾಯ ನಮಃ |
ಓಂ ಚಂದನಲಿಪ್ತಮೂರ್ತಯೇ ನಮಃ |
ಓಂ ಭಸ್ಮೋದ್ಧೂಲಿತದೇಹಾಯ ನಮಃ |
ಓಂ ದಿವ್ಯಗಂಧಾನುಲೇಪಿನೇ ನಮಃ |
ಓಂ ಪ್ರಸನ್ನಾಯ ನಮಃ |
ಓಂ ಪ್ರಮತ್ತಾಯ ನಮಃ |
ಓಂ ಪ್ರಕೃಷ್ಟಾರ್ಥಪ್ರದಾಯ ನಮಃ |
ಓಂ ಅಷ್ಟೈಶ್ವರ್ಯಪ್ರದಾಯ ನಮಃ |
ಓಂ ವರದಾಯ ನಮಃ | ೯೯
ಓಂ ವರೀಯಸೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಬ್ರಹ್ಮರೂಪಾಯ ನಮಃ |
ಓಂ ವಿಷ್ಣವೇ ನಮಃ |
ಓಂ ವಿಶ್ವರೂಪಿಣೇ ನಮಃ |
ಓಂ ಶಂಕರಾಯ ನಮಃ |
ಓಂ ಆತ್ಮನೇ ನಮಃ |
ಓಂ ಅಂತರಾತ್ಮನೇ ನಮಃ |
ಓಂ ಪರಮಾತ್ಮನೇ ನಮಃ | ೧೦೮ ಶ್ರೀ ದತ್ತಾತ್ರೇಯ ಸ್ತೋತ್ರಂ
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||
ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ನಾರದಋಷಿಃ | ಅನುಷ್ಟುಪ್ ಛಂದಃ | ಶ್ರೀದತ್ತಃ ಪರಮಾತ್ಮಾ ದೇವತಾ | ಶ್ರೀದತ್ತಾತ್ರೇಯ ಪ್ರೀತ್ಯರ್ಥೇ ಜಪೇ ವಿನಿಯೋಗಃ ||
ನಾರದ ಉವಾಚ |
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತು ತೇ || ೧ ||
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರ ದಯಾಮೂರ್ತೇ ದತ್ತಾತ್ರೇಯ ನಮೋಽಸ್ತು ತೇ || ೨ ||
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೩ ||
ಹ್ರಸ್ವದೀರ್ಘಕೃಶಸ್ಥೂಲನಾಮಗೋತ್ರವಿವರ್ಜಿತ |
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತು ತೇ || ೪ ||
ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತು ತೇ || ೫ ||
ಆದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವಸ್ಸದಾಶಿವಃ |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೬ ||
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |
ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೭ ||
ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತು ತೇ || ೮ ||
ಜಂಬೂದ್ವೀಪೇ ಮಹಾಕ್ಷೇತ್ರೇ ಮಾತಾಪುರನಿವಾಸಿನೇ |
ಜಯಮಾನ ಸತಾಂ ದೇವ ದತ್ತಾತ್ರೇಯ ನಮೋಽಸ್ತು ತೇ || ೯ ||
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತು ತೇ || ೧೦ ||
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತು ತೇ || ೧೧ ||
ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ |
ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೨ ||
ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ |
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತು ತೇ || ೧೩ ||
ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಽಸ್ತು ತೇ || ೧೪ ||
ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತು ತೇ || ೧೫ ||
ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೬ ||
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತು ತೇ || ೧೭ ||
ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ || ೧೮ ||
ಇತಿ ಶ್ರೀನಾರದಪುರಾಣೇ ನಾರದವಿರಚಿತಂ ಶ್ರೀ ದತ್ತಾತ್ರೇಯ ಸ್ತೋತ್ರಮ್ |
Tuesday, December 07, 2021
ಮಮಕಾರಃ
ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ |
Thursday, November 11, 2021
ಚಮಕ ಪ್ರಶ್ನೆ
ವಿದ್ವಾನ್ ಶೇಷಾಚಲ ಶರ್ಮಾರವರ ಗ್ರಂಥದಲ್ಲಿ ಕಂಡುಬಂದುದು:
(ಚಮಕಾಧ್ಯಾಯದ ಕೊನೆಯಲ್ಲಿ ಪಠಿಸಬೇಕಾದ ಮಂತ್ರದ ಅರ್ಥ) :
ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ, ಬೃಹಸ್ಪತಿಯು ಶಸ್ತ್ರ-ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವೇದೇವರು ಸೂಕ್ತವಾಚಕರಾಗಿರುತ್ತಾರೆ. (ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ.) ಆದುದರಿಂದ ಓ ಪೃಥಿವಿಯೇ! ತಾಯಿಯೇ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ. ಚಿಂತಿಸುತ್ತೇನೆ. ಮಧುರವಾದುದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ (ದೇವತೆಗಳಿಗೆ) ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭಾದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ, ಪಿತೃದೇವತೆಗಳೂ ಕೂಡ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.
(ಬ್ರಹ್ಮವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ) :
ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ಯೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವೇದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ, ತಾಯಿಯೇ! ಪೃಥ್ವಿದೇವಿಯೇ! ನನ್ನನ್ನು ಹಿಂಸಿಸಬೇಡ. ನಾನು (ನಿಮ್ಮ) ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ (ನಿಮ್ಮ) ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ, ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ, ತ್ರಿವಿಧಶಾಂತಿಯು ಉಂಟಾಗಲಿ.
ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಕ್ತಿಯ, ಆಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು.