Saturday, December 20, 2008

ಕತ್ತಲೆ ಬೆಳಕುಮೇಲಿನ ಚಿತ್ರ ಬೆಳಕು ಕತ್ತಲೆಯ ಆಟವನ್ನು ಸೋಗಸಾಗಿ ಚಿತ್ರಿಸಿದೆ ಅಲ್ಲವೆ ಮಿತ್ರರೆ? ಆಳವಾಗಿ ಗಮನಿಸಿದರೆ ಈ ಚಿತ್ರವು ಇನ್ನೂ ಬಹಳಷ್ಟು ಹೇಳುತ್ತಿದೆ. ಕಾಲಸರ್ಪದ ಶೀರ್ಷೋತಳಾದಿಯಾಗಿ ರಾಹು-ಕೇತುಗಳನ್ನು ಚಿತ್ರಿಸಲಾಗಿದೆ. ರುಂಡ-ಮುಂಡಗಳಿಲ್ಲದ ಛಾಯಾಗ್ರಹಗಳಾದ ರಾಹು-ಕೇತುಗಳು ಜಾತಕನ ಭಾವಗಳ ಮೇಲೆ ಬೀರುಬಹುದಾದ ಪರಿಣಾಮವನ್ನು ಸಾರಿ ಹೇಳುತ್ತಿದೆ ಈ ಚಿತ್ರ. ನೈಸರ್ಗಿಕವಾಗಿ ಕೄರಗ್ರಹವಾದ ರಾಹುವು ಅನುಗ್ರಹವನ್ನೀಯ್ದರೆ ಆಗುವ ಅಧ್ಯಾತ್ಮಿಕ ಏಳಿಗೆ ಮತ್ತು ಕೇತುವಿನ ಧೂಮಸಮಾನ ಚೇಷ್ಟೆಯನ್ನು ವ್ಯಾಗ್ರದ ಮುಖಭಾಗದಲ್ಲಿನ ಬೆಳಕು ಕತ್ತಲೆಗಳು ಸೂಚಿಸುತ್ತವೆ.

ಸಮುದ್ರ ಮಥನದ ಸಮಯದಲ್ಲಿ ಅಸುರನಾದ ರಾಹುವು ಅಮೃತವನ್ನು ಸೇವಿಸಿದನಂತೆ.ಆದರೆ ಅಮೃತವು ಇನ್ನೂ ಕಂಠದಿಂದ ಕೆಳಗಿಳಿಯುವ ಮೊದಲೇ ಮೋಹಿನೀ ರೂಪತಳೆದ್ದಿದ್ದ ಮಹಾವಿಷ್ಣುವು ರಕ್ಕಸನ ಶಿರಶ್ಛೇದನ ಮಾಡುತ್ತಾನೆ. ಆದರೆ ಅಮೃತದ ಪ್ರಭಾವದಿಂದ ಅಸುರನ ಶಿರೋಭಾಗ ಅಮೃತತ್ತ್ವವನ್ನು ಪಡೆಯಿತು. ಜ್ಯೋತಿಷ್ಯದಲ್ಲಿ ರಾಹುವು ಯಾವ ಭಾವವನ್ನು ನಿಯಂತ್ರಿಸುತ್ತಾನೆಯೋ ಅಲ್ಲಿ ಹಾನಿ,ಖೇದ ಇತ್ಯಾದಿಗಳನ್ನು ಉಂಟುಮಾಡಬಲ್ಲವನಾಗಿರುತ್ತಾನೆ. ವಿಶಯಾಸಕ್ತಿ, ಲೋಭ ಪ್ರವೃತ್ತಿ, ಅನಿಷ್ಚಿತ ವಾತವಾರಣ ಇವೆಲ್ಲವನ್ನೂ ದಯ ಪಾಲಿಸುತ್ತಾನೆ.ರಾಹುವಿನ ಕುದೃಷ್ಟಿಗೆ ಸಮಾಧಾನವೆಂದರೆ ಶ್ರೀಆದಿಶಂಕರ ಕೃತ ಕಾಲಭೈರವ ಅಷ್ಟಕ.


ದೇವರಾಜ ಸೇವ್ಯಮಾನ ಪವನನ್ಘ್ರಿಪಂಕಜಂ
ವ್ಯಾಲಯಗ್ಯಸೂತ್ರಮಿಂದು ಶೇಖರಂ ಕೃಪಾಕರಂ
ನಾರದಾದಿಯೋಗಿ ವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೧||

ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂಪರಂ
ನೀಳಕಂಠ ಮೀಪ್ಸಿತಾರ್ಥದಾಯಕಂ ತ್ರಿಲೋಚನಂ
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೨||

ಶೂಲತನ್ಕಪಾಶದನ್ದಪಾನಿಮಾದಿಕಾರನಮ
ಶ್ಯಾಮಕಾಯಮಾದಿದೆವಮಕ್ಷರಂ ನಿರಾಮಯಂ
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೩||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂಸ್ಥಿರಂ ಸಮಸ್ತಲೋಕವಿಗ್ರಹಂ
ನಿಕ್ವಣನ್ಮನೊಗ್ಯಹೆಮಕಿನ್ಕಿನೀಲಸತ್ಕಠಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೪||

ಧರ್ಮಸೆತುಪಾಲಕಂ ಸ್ವಧರ್ಮಮಾರ್ಗನಾಶನಂ
ಕರ್ಮಪಾಶಮೊಚಕಂ ಸುಶರ್ಮಧಾಯಕಂ ವಿಭುಂ
ಸ್ವರ್ಣವರ್ಣಕೇಶಪಾಶಶೊಭಿತಾಂಗನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೫||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ
ಮ್ರುತ್ಯುದರ್ಪನಾಶನಂ ಕರಾಳದಂಷ್ಟ್ರಭೂಶಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೬||

ಅಟ್ಟಹಾಸಭಿನ್ನಪದ್ಮಜಾಂಡಕೊಶಸಂತತಿಂ
ದ್ರುಷ್ತಿಪಾತ್ತನಷ್ತಪಾಪಜಾಲಮುಗ್ರಶಾಸನಮ್
ಅಷ್ಟಸಿದ್ಧಿದಾಯಕಂ ಕಪಾಳಮಾಲಿಕಾಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೭||

ಭೂತಸಂಘನಾಯಕಂ ವಿಶಾಳಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಂ
ನೀತಿಮಾರ್ಗಕೊವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೮||

|| ಫಲಶೃತಿ ||
ಕಾಲಭೈರವಾಷ್ಟಕಂ ಪಠಂತಿ ಏ ಮನೋಹರಂ
ಗ್ಯಾನಮುಕ್ತಿಸಾಧನಂ ವಿಚಿತ್ರಪುನ್ಯವರ್ಧನಂ
ಶೋಕಮೊಹದೈನ್ಯಲೋಭಕೊಪತಾಪನಾಶನಂ
ತೇ ಪ್ರಯಾಂತಿ ಕಾಲಭೈರವಾಮ್ಘ್ರಿಸಂನಿಧಿಂ ಧ್ರುವಂ

No comments: